ಶುಲ್ಕ ಹೆಚ್ಚಳದ ಬಗ್ಗೆ ಮಾತನಾಡದ ಸಚಿವರು, ಕೇವಲ ಪೋಷಕರ ಪ್ರತಿಭಟನೆ ವಿರುದ್ಧ ಮಾತನಾಡಿದರು! ಇದರ ಸಂದೇಶ ಏನು?

s sureshkumar: ಖಾಸಗಿ ಶಾಲೆಗಳ ಮುಂದೆ ಪದೇಪದೆ ಪ್ರತಿಭಟನೆ ಸರಿಯಲ್ಲ ಎಂದು ಪಾಲಕರಿಗೆ ಬುದ್ಧಿಮಾತು ಹೇಳಿದ್ದಾರೆ. ಇನ್ನು, ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳದ ಬಗ್ಗೆಯಂತೂ ಸಚಿವರು ತುಟಿಬಿಚ್ಚಿಲ್ಲ. ಇದುವರೆಗೂ ಖಾಸಗಿ ಶಾಲೆಗಳು ಅಧಿಕ ಶುಲ್ಕ ಪಡೆಯುವುದು ತರವಲ್ಲ ಅನ್ನುತ್ತಿದ್ದ ಸುರೇಶ್ ಕುಮಾರ್ ಅವರು ಈಗ ಶುಲ್ಕ ವಿಚಾರದಲ್ಲಿ ಉಲ್ಟಾ ಹೊಡದ್ರಾ ಅನ್ನಿಸುತ್ತಿದೆ.

ಶುಲ್ಕ ಹೆಚ್ಚಳದ ಬಗ್ಗೆ ಮಾತನಾಡದ ಸಚಿವರು, ಕೇವಲ ಪೋಷಕರ ಪ್ರತಿಭಟನೆ ವಿರುದ್ಧ ಮಾತನಾಡಿದರು! ಇದರ ಸಂದೇಶ ಏನು?
ಖಾಸಗಿ ಶಾಲೆಗಳ ಪರ ಬ್ಯಾಟಿಂಗ್ ಮಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಶಾಲೆಗಳ ಮುಂದೆ ಪೋಷಕರ ಪ್ರತಿಭಟನೆ ಸರಿಯಲ್ಲ ಅಂದುಬಿಟ್ರು!
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jun 25, 2021 | 3:54 PM

ಬೆಂಗಳೂರು: ಕೊರೊನಾ ಮಹಾಮಾರಿ ಕಾಲಿಟ್ಟಿದ್ದೇ ಕಳೆದ ಒಂದೂವರೆ ವರ್ಷದಿಂದ ಶಿಕ್ಷಣ ರಂಗದಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಮಕ್ಕಳಿಗೆ ಶಿಕ್ಷಣ/ವ್ಯಾಸಂಗ ದುರ್ಲಭವಾಗಿದೆ. ಅಷ್ಟೋ ಇಷ್ಟೋ ಆನ್​ಲೈನ್​ ಮೂಲಕ ವಿದ್ಯೆ ಕಲಿಯುತ್ತಿದ್ದಾರೆ ಮಕ್ಕಳು. ಆದರೆ ಅದಕ್ಕೆ ದುಬಾರಿ ಶುಲ್ಕ ಕೀಳುತ್ತಿವೆ ಖಾಸಗಿ ಶಾಲೆಗಳು ಎಂಬುದು ಪೋಷಕರ ಅಳಲು, ಅಹವಾಲು. ಆದರೆ ಈ ಅಹವಾಲನ್ನು ಕೇಳಿ, ಸಂತೈಸಬೇಕಿದ್ದ ಶಿಕ್ಷಣ ಮಂತ್ರಿ ಸುರೇಶ್​​ ಕುಮಾರ್​ ಅವರು ಖಾಸಗಿ ಶಾಲೆಗಳ ಪರ ಬ್ಯಾಟಿಂಗ್ ಮಾಡುವ ಹುಮ್ಮಸ್ಸಿನಲ್ಲಿ ಖಾಸಗಿ ಶಾಲೆಗಳ ಮುಂದೆ ಪೋಷಕರ ಪ್ರತಿಭಟನೆ ಸರಿಯಲ್ಲ ಎಂದು ಷರಾ ಬರೆದಿದ್ದಾರೆ.

ಇತ್ತೀಚೆಗೆ ಬೆಂಗಳೂರು ಸೇರದಂತೆ ಅನೇಕ ಕಡೆ ಆನ್​ಲೈನ್ ಶಿಕ್ಷಣ ನೀಡುತ್ತಿದ್ದೇವೆ ಎಂದು ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ದುಬಾರಿಯಾಗಿ ಶುಲ್ಕ ಪಡೆಯುತ್ತಿವೆ ಎಂದು ಪೋಷಕರು ಶಾಲೆಗಳ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ನಿನ್ನೆಯಂತೂ ರಾಜಧಾನಿಯ ಲಗ್ಗೆರೆಯಲ್ಲಿ ನಾರಾಯಣ ಶಿಕ್ಷಣ ಸಂಸ್ಥೆಯ ಎದುರು ಪಾಲಕರು ಭಾರೀ ಪ್ರತಿಭಟನೆ ನಡೆಸುತ್ತಾ… ಶಿಕ್ಷಣ ಸಚಿವರನ್ನೂ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದರು.

ಪೋಷಕರ ರೋಷಾಗ್ನಿ: ನೀವೇನು ಗೆಣಸು ತೆರೆಯೋಕೆ ಇದ್ದೀರಾ..? ಶಿಕ್ಷಣ ಸಚಿವ ಸುರೇಶ್​​ ಕುಮಾರ್​ಗೆ ಪೋಷಕರ ನೇರ ಪ್ರಶ್ನೆ

ಖಾಸಗಿ ಶಾಲೆಗಳ ಪರ ಬ್ಯಾಟಿಂಗ್ ಮಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಶಾಲೆಗಳ ಮುಂದೆ ಪೋಷಕರ ಪ್ರತಿಭಟನೆ ಸರಿಯಲ್ಲ ಅಂದುಬಿಟ್ರು:  ಈ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಸುರೇಶ್‌ ಕುಮಾರ್ ಇಂದು ಬೆಂಗಳೂರಿನಲ್ಲಿ ಮಾತನಾಡಿದ್ದಾರೆ. ಆದರೆ ಆ ಮಾತುಗಳು ಖಾಸಗಿ ಶಾಲೆಗಳ ಪರ ಇದ್ದು, ಪೋಷಕರನ್ನೇ ತರಾಟೆಗೆ ತೆಗೆದುಕೊಂಡಂತಿದೆ. ಪೋಷಕರು ಪ್ರತಿಭಟನೆಯಲ್ಲಿ ತೊಡಗಿದರೆ ಅದರಿಂದ ವಿದ್ಯಾರ್ಥಿಗಳಿಗೇ ತೊಂದರೆಯಾಗುತ್ತದೆ. ಕೊನೆಗೆ ಇದರಿಂದ ಸಂಕಷ್ಟಕ್ಕೆ ಈಡಾಗೋದು ಮಕ್ಕಳು. ಹಾಗಾಗಿ ಖಾಸಗಿ ಶಾಲೆಗಳ ಮುಂದೆ ಪದೇಪದೆ ಪ್ರತಿಭಟನೆ ಸರಿಯಲ್ಲ ಎಂದು ಪಾಲಕರಿಗೆ ಬುದ್ಧಿಮಾತು ಹೇಳಿದ್ದಾರೆ. ಇನ್ನು, ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳದ ಬಗ್ಗೆಯಂತೂ ಸಚಿವರು ತುಟಿಬಿಚ್ಚಿಲ್ಲ. ಇದುವರೆಗೂ ಖಾಸಗಿ ಶಾಲೆಗಳು ಅಧಿಕ ಶುಲ್ಕ ಪಡೆಯುವುದು ತರವಲ್ಲ ಅನ್ನುತ್ತಿದ್ದ ಸುರೇಶ್ ಕುಮಾರ್ ಅವರು ಈಗ ಶುಲ್ಕ ವಿಚಾರದಲ್ಲಿ ಉಲ್ಟಾ ಹೊಡದ್ರಾ ಅನ್ನಿಸುತ್ತಿದೆ.

ಖಾಸಗಿ ಶಾಲೆಗಳ ಫೀಸ್ ಹೈಕ್ ಬಗ್ಗೆ ತುಟಿ ಬಿಚ್ಚದ ಸಚಿವರು, ಕೇವಲ ಪೋಷಕರ ಪ್ರತಿಭಟನೆ ಬಗ್ಗೆ ಯಾಕೆ ಮಾತನಾಡಿದರು? ಇದರಿಂದ ಅವರು ನೀಡಿರುವ ಸಂದೇಶ ಏನು ಎಂಬುದು ತಿಳಿಯದಾಗಿದೆ.

(Education minister s sureshkumar advises parents not to indulge in protest against private schools)

Published On - 3:51 pm, Fri, 25 June 21

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ