ವೀಕೆಂಡ್ ಕರ್ಫ್ಯೂನಲ್ಲೂ ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ಸಂಚಾರ; ಜನರ ಅನುಕೂಲಕ್ಕಾಗಿ ಕ್ರಮ
ಬಿಎಂಟಿಸಿ ಕಡೆಯಿಂದ ಪ್ರಯಾಣಿಕರಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಜನರು ಕಂಪೆನಿ, ಕಚೇರಿ ಕೆಲಸದ ಮೇಲೆ ಓಡಾಟ ಮಾಡಬೇಕಾಗಿ ಬರಬಹುದು. ಹಾಗಾಗಿ, ನಾವು ನಿರ್ಬಂಧ ಹೇರಲು ಸಾಧ್ಯವಿಲ್ಲ. ಜನ ಅವರ ಅಗತ್ಯತೆ ಮೇರೆಗೆ ಓಡಾಟ ನಡೆಸಬೇಕು ಎಂದು ತಿಳಿಸಲಾಗಿದೆ.
ಬೆಂಗಳೂರು: ವಾರಾಂತ್ಯ ಕರ್ಫ್ಯೂ ಸಂದರ್ಭದಲ್ಲೂ ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಬಸ್ ಸಂಚಾರ ನಡೆಸಲಾಗುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಮೊದಲು, ವೀಕೆಂಡ್ ಕರ್ಫ್ಯೂನಲ್ಲಿ ಬಸ್ ಓಡಾಟವಿಲ್ಲ ಎಂದು ಬಿಎಂಟಿಸಿ ಹೇಳಿತ್ತು. ಆದರೆ, ನಾಳೆಯಿಂದ ವೀಕೆಂಡ್ ಕರ್ಫ್ಯೂನಲ್ಲೂ ಬಸ್ ಸಂಚಾರ ನಡೆಯಲಿದೆ. ಜನರ ಅನುಕೂಲಕ್ಕಾಗಿ ನಾಳೆಯೂ ಬಿಎಂಟಿಸಿ ಬಸ್ ಓಡಾಟ ನಡೆಸಲಾಗುತ್ತದೆ. ವಾರಾಂತ್ಯದ ಕರ್ಫ್ಯೂನಲ್ಲಿ ಬೆಳಗ್ಗೆ 6 ರಿಂದ ಸಂಜೆ 7 ಗಂಟೆವರೆಗೆ ಬಸ್ ಓಡಾಟ ಇರಲಿದೆ ಎಂದು ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ರಾಜೇಶ್ ಮಾಹಿತಿ ನೀಡಿದ್ದಾರೆ.
ಕೆಎಸ್ಆರ್ಟಿಸಿ ಈಗಾಗಲೇ ದಿನದ 24 ಗಂಟೆಯೂ ಬಸ್ ಕಾರ್ಯಚರಣೆ ನಡೆಸುತ್ತಿದೆ. ಈಗಾಗಲೇ ವಾರದ 5 ದಿನಗಳು 4 ಸಾವಿರ ಬಸ್ ಕಾರ್ಯಚರಣೆ ಮಾಡಲಾಗುತ್ತಿದೆ. ಇದೀಗ, ವಾರಾಂತ್ಯ ಕರ್ಫ್ಯೂ ವೇಳೆಯಲ್ಲೂ ಬಸ್ ಓಡಾಟ ನಡೆಸಲಾಗುವ ಬಗ್ಗೆ ತಿಳಿದುಬಂದಿದೆ. ಕರ್ಫ್ಯೂ ವೇಳೆಯಲ್ಲಿ ಅಗತ್ಯ ವಸ್ತುಗಳನ್ನ ಹೊರತು ಪಡಿಸಿ ಎಲ್ಲವೂ ಕ್ಲೋಸ್ ಆಗಿರುತ್ತದೆ. ಈ ಹಿನ್ನಲೆಯಲ್ಲಿ ಕಾರ್ಯಚರಣೆ ನಡೆಸುವ ಬಿಎಂಟಿಸಿ ಬಸ್ಗಳ ಸಂಖ್ಯೆ ಎಂದಿಗಿಂತ ಕಡಿಮೆ ಇರಲಿದೆ. ನಾಳೆ 1200 ಬಸ್ ಗಳನ್ನ ರಸ್ತೆಗಿಳಿಸಲು ತೀರ್ಮಾನಿಸಲಾಗಿದೆ.
ಬಿಎಂಟಿಸಿ ಕಡೆಯಿಂದ ಪ್ರಯಾಣಿಕರಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಜನರು ಕಂಪೆನಿ, ಕಚೇರಿ ಕೆಲಸದ ಮೇಲೆ ಓಡಾಟ ಮಾಡಬೇಕಾಗಿ ಬರಬಹುದು. ಹಾಗಾಗಿ, ನಾವು ನಿರ್ಬಂಧ ಹೇರಲು ಸಾಧ್ಯವಿಲ್ಲ. ಜನ ಅವರ ಅಗತ್ಯತೆ ಮೇರೆಗೆ ಓಡಾಟ ನಡೆಸಬೇಕು ಎಂದು ತಿಳಿಸಲಾಗಿದೆ. ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಿಎಂಟಿಸಿಗೆ ನಿನ್ನೆ 1 ಕೋಟಿ 7 ಲಕ್ಷ ಆದಾಯ ಬಂದಿದೆ. 9 ಲಕ್ಷ 31 ಸಾವಿರ ಪ್ರಯಾಣಿಕರು ಸಂಚಾರ ಮಾಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ವಾರಾಂತ್ಯದ ಅವಧಿಯಲ್ಲೂ ಬಸ್ ಸಂಚಾರ ನಡೆಸಲಾಗುವ ಬಗ್ಗೆ ತಿಳಿಸಲಾಗಿದೆ.
ಆದ್ಯ ಗಮನಕ್ಕೆ:
ನಾಳೆ ಮತ್ತು ನಾಡಿದ್ದು ವಾರಾಂತ್ಯ ಕರ್ಫ್ಯೂ ಇದ್ದಾಗ್ಯೂ ಸಹ ಕೆ ಎಸ್ ಆರ್ ಟಿ ಸಿ ಬಸ್ಸುಗಳ ಕಾರ್ಯಾಚರಣೆಯು ಇರಲಿದೆ. ಕರ್ಫ್ಯೂ ಸಮಯದಲ್ಲಿ ಬಹಳಷ್ಟು ಚಟುವಟಿಕೆಗಳು ನಿಷೇದಿಸಿರುವುದರಿಂದ ಅವಶ್ಯಕತೆಗೆ ತಕ್ಕಂತೆ ಮಾತ್ರ ಬಸ್ ಗಳು ಸಂಚರಿಸಲಿವೆ.
— KSRTC (@KSRTC_Journeys) June 25, 2021
ನಾಳೆ ಮತ್ತು ನಾಡಿದ್ದು ವೀಕೆಂಡ್ ಕರ್ಫ್ಯೂ ಇರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟನೆಗೆ ಅನುಗುಣವಾಗಿ ಬಸ್ಸುಗಳ ಕಾರ್ಯಾಚರಣೆ ಮಾಡಲಾಗುತ್ತದೆ ಎಂದು ಕೆಎಸ್ಆರ್ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಪ್ರಭಾಕರ್ ರೆಡ್ಡಿ ಮಾಹಿತಿ ಹಂಚಿಕೊಂಡಿದ್ದಾರೆ. 500 ರಿಂದ 1000 ಬಸ್ಸುಗಳ ಕಾರ್ಯಾಚರಣೆ ಮಾಡಲಾಗುತ್ತದೆ. ಎಂದಿನಂತೆ ಬೆಳಿಗ್ಗೆ ಹಾಗೂ ರಾತ್ರಿ ಬಸ್ಸುಗಳ ಕಾರ್ಯಚರಣೆ ಇರುತ್ತದೆ. ಸದ್ಯ ದಿನಕ್ಕೆ 2 ಸಾವಿರಕ್ಕೂ ಹೆಚ್ಚು ಬಸ್ಸುಗಳ ಕಾರ್ಯಾಚರಣೆ ನಡೆಸಲಾಗುತ್ತಿದೆ. ವೀಕೆಂಡ್ ಕರ್ಫ್ಯೂ ಹಿನ್ನೆಲೆ ಪ್ರಯಾಣಿಕರ ಸಂಖ್ಯೆ ವಿರಳವಾಗಿರಬಹುದು. ಹಾಗಾಗಿ ಬಸ್ಸುಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಬಿಎಂಟಿಸಿ ಪ್ರಯಾಣಿಕರ ಗಮನಕ್ಕೆ.. 2021ರ ಏಪ್ರಿಲ್ ಪಾಸ್ ಅವಧಿ ವಿಸ್ತರಣೆ
KSRTC ಕೇರಳದಲ್ಲಿ ಎಲ್ಎನ್ಜಿ ಇಂಧನವಾಗಿ ಬಳಸುವ ಬಸ್ ಸೇವೆಗೆ ಚಾಲನೆ
Published On - 3:37 pm, Fri, 25 June 21