ಬಿಎಂಟಿಸಿ ಪ್ರಯಾಣಿಕರ ಗಮನಕ್ಕೆ.. 2021ರ ಏಪ್ರಿಲ್ ಪಾಸ್ ಅವಧಿ ವಿಸ್ತರಣೆ
ಬಿಎಂಟಿಸಿ ಏಪ್ರಿಲ್ 2021ರ ಸಾಮಾನ್ಯ ಮಾಸಿಕ ಪಾಸ್ಗಳ ಅವಧಿಯನ್ನು ಜುಲೈ 8ರ ವರೆಗೆ ವಿಸ್ತರಿಸಲಿದೆ. ಪಾಸ್ ಅವಧಿ ಮುಗಿದಿದೆ ಹೊಸ ಪಾಸ್ ತೆಗೆದುಕೊಳ್ಳಬೇಕು ಎಂಬುವವರು ಹಳೇ ಪಾಸ್ ತೋರಿಸಿ ಜುಲೈ 8ರ ವರೆಗೆ ಪ್ರಯಾಣಿಸಬಹುದು...
ಬೆಂಗಳೂರು: ಮಹಾಮಾರಿ ಕೊರೊನಾದಿಂದಾಗಿ ಇಡೀ ಬೆಂಗಳೂರು ಲಾಕ್ ಆಗಿತ್ತು. ಸದ್ಯ ಈಗ ಎರಡು ತಿಂಗಳ ಬಳಿಕ ಅನ್ಲಾಕ್ 2.0 ಘೋಷಣೆಯಾಗಿದ್ದು ಬಸ್ ಸೇವೆಗೆ ಅವಕಾಶ ನೀಡಲಾಗಿದೆ. ಬಿಎಂಟಿಸಿ ಬಸ್ಗಳು ಸೇವೆ ನೀಡಲು ಸಿದ್ಧವಾಗಿದೆ. ಆದರೆ ಪಾಸ್ ಮಾಡಿಸಿಕೊಂಡವರು ಲಾಕ್ಡೌನ್ನಿಂದ ಎರಡು ತಿಂಗಳ ಪಾಸ್ ವೇಸ್ಟ್ ಆಯ್ತು 2021ರ ಏಪ್ರಿಲ್ಗೆಯೇ ಪಾಸ್ ಅವಧಿ ಮುಗಿಯಿತು ಎಂದು ಕೊಂಡವರಿಗೆ ಸಿಹಿ ಸುದ್ದಿ ಸಿಕ್ಕಿದೆ.
ಬಿಎಂಟಿಸಿ ಏಪ್ರಿಲ್ 2021ರ ಸಾಮಾನ್ಯ ಮಾಸಿಕ ಪಾಸ್ಗಳ ಅವಧಿಯನ್ನು ಜುಲೈ 8ರ ವರೆಗೆ ವಿಸ್ತರಿಸಲಿದೆ. ಪಾಸ್ ಅವಧಿ ಮುಗಿದಿದೆ ಹೊಸ ಪಾಸ್ ತೆಗೆದುಕೊಳ್ಳಬೇಕು ಎಂಬುವವರು ಹಳೇ ಪಾಸ್ ತೋರಿಸಿ ಜುಲೈ 8ರ ವರೆಗೆ ಪ್ರಯಾಣಿಸಬಹುದು. ಸಾರಿಗೆ ನೌಕರರು ಏಪ್ರಿಲ್ 7ರಿಂದ 21ರವರೆಗೆ ಅನಿರ್ದಿಷ್ಟ ಮುಷ್ಕರ ನಡೆಸಿದ್ದರು. ಬಳಿಕ ಕೊವಿಡ್ ಕಾರಣದಿಂದಾಗಿ ರಾಜ್ಯ ಸರ್ಕಾರ ಏಪ್ರಿಲ್ 27ರಿಂದ ಲಾಕ್ಡೌನ್ ಘೋಷಣೆ ಮಾಡಿತ್ತು. ಇಷ್ಟೆಲ್ಲಾ ಆದ ಬಳಿಕ ಕೊರೊನಾದಿಂದ ನಷ್ಟವಾಗಿದೆ. ಪಾಸ್ ಇದ್ದರೂ ಸಾರಿಗೆ ಮುಷ್ಕರದಿಂದಾಗಿ ನಾವು ಬೇರೆ ಬೇರೆ ವಾಹನಗಳಲ್ಲಿ ಪ್ರಯಾಣಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಸಮಯದಲ್ಲಿ ಮತ್ತೆ ಪಾಸ್ ಖರೀದಿಸಲು ಆಗುವುದಿಲ್ಲ. ಹೀಗಾಗಿ ಪಾಸ್ ಅವಧಿಯನ್ನು ವಿಸ್ತರಿಸಿ ಎಂದು ಬಿಎಂಟಿಸಿ ಮಾಸಿಕ ಪಾಸ್ ಹೊಂದಿದವರು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದ್ದರು.
ಸದ್ಯ ಮುಷ್ಕರ, ಲಾಕ್ಡೌನ್ನಿಂದ ಪಾಸ್ ಬಳಕೆಯಾಗದಿದ್ದರೂ ಮತ್ತೆ ಪಾಸ್ ಖರೀದಿಸಬೇಕಾ ಎಂಬ ಚಿಂತೆಯಲ್ಲಿದ್ದವರಿಗೆ ಬಿಎಂಟಿಸಿ ಸಿಹಿ ಸುದ್ದಿ ನೀಡಿದೆ. ಹಳೇ ಪಾಸ್ ಬಳಸಿ ಜುಲೈ 8ರ ವರೆಗೆ ಪ್ರಯಾಣಿಸಲು ಅವಕಾಶ ನೀಡಿದೆ.
ಎಲ್ಲಾ ಬಸ್ಗಳಲ್ಲಿ ಕ್ಯೂಆರ್ಕೋಡ್ ಆಧರಿತ ಡಿಜಿಟಲ್ ಟಿಕೆಟಿಂಗ್ ನೀಡಲಾಗುವುದು ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರದಿಂದ (ಜೂನ್ 21) ಸಾರಿಗೆ ಸೇವೆ ಶುರುವಾಗಿದ್ದು ಮೊದಲ ದಿನ 2000 ಸಾವಿರ ಬಸ್ಗಳನ್ನು ಬಿಡುವುದಾಗಿ ಬಿಎಂಟಿಸಿ ತಿಳಿಸಿತ್ತು. ಆದರೆ ಬೆಳಗ್ಗೆ ಬೆರಳೆಣಿಕೆಯಷ್ಟು ಬಸ್ಗಳು ಮಾತ್ರ ಸಂಚರಿಸಿದ್ದು ಪ್ರಯಾಣಿಕರು ಬಸ್ಗಾಗಿ ಕಾದು ಕಾದು ಹೈರಾಣಾಗುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಸ್ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕರೂ ಬಸ್ಗಳಿಲ್ಲದೆ ಜನ ಆಟೋ, ಟ್ಯಾಕ್ಸಿ ಮೊರೆ ಹೋದರು. ಬಳಿಕ ಪರಿಸ್ಥಿತಿ ತಿಳಿದು ಮಧ್ಯಾಹ್ನದ ಬಳಿಕ ಹೆಚ್ಚಿನ ಬಸ್ಗಳನ್ನು ಬಿಡಲಾಯಿತು.
ಇನ್ನು ಬಸ್ ಸಂಚಾರಕ್ಕೆ ಸರ್ಕಾರ ಕೆಲವು ಕಂಡಿಷನ್ಗಳನ್ನ ಹಾಕಿದೆ. ಮೊದಲ ಹಂತದಲ್ಲಿ ಒಂದೂವರೆ ಸಾವಿರದಿಂದ 2 ಸಾವಿರ ಬಸ್‌ಗಳನ್ನ ಓಡಿಸಲಾಗುತ್ತಿದೆ ಎಂದು ಹೇಳಲಾಗಿತ್ತು ಆದರೆ ಬೆರಳೆಣಿಕೆಯಷ್ಟು ಬಸ್ಗಳು ಮಾತ್ರ ಸಂಚಾರ ಮಾಡುತ್ತಿದೆ. ಹೀಗಾಗಲು ಕಾರಣ ಬಿಎಂಟಿಸಿ ಬಸ್ ಚಾಲಕ ಮತ್ತು ನಿರ್ವಾಹಕರಿಗೆ ವ್ಯಾಕ್ಸಿನ್ ಕಡ್ಡಾಯ ಮಾಡಿದ್ದು, ಎರಡು ಡೋಸ್ ವ್ಯಾಕ್ಸಿನ್ ಪಡೆದವರಿಗೆ ಮಾತ್ರ ಡ್ಯೂಟಿಗೆ ಅವಕಾಶ ನೀಡಲಾಗಿದೆ. ಇನ್ನೂ ಬಿಎಂಟಿಸಿ ಎಸಿ ವೋಲ್ವೋ ಬಸ್ ಸ್ಟಾರ್ಟ್ ಮಾಡದಿರಲು ನಿರ್ಧರಿಸಿರುವ ಬಿಎಂಟಿಸಿ, ಕೊರೊನಾ ಹರಡದಂತೆ ತಡೆಯಲು ಗೂಗಲ್ ಪೇ, ಫೋನ್ ಪೇ ಮೂಲಕ ಟಿಕೆಟ್ ನೀಡೋ ವ್ಯವಸ್ಥೆ ಮಾಡ್ತಿದೆ. ವ್ಯಾಕ್ಸಿನ್ ಹಾಕಿಸಿಕೊಳ್ಳದವರು ಕೆಲಸಕ್ಕೆ ಹಾಜರಾಗಲು ಆಗುತ್ತಿಲ್ಲ. ಕೆಲವು ಸಿಬ್ಬಂದಿ ಒಂದು ವಾರ ಹಾಗೂ 15 ದಿನಗಳ ಹಿಂದೆಯೇ ಟೆಸ್ಟ್ ಮಾಡಿಸಿ ರಿಪೋರ್ಟ್ ತರುತ್ತಿದ್ದಾರೆ. ಹಾಗಾಗಿ ಮತ್ತೆ ಆರ್ಟಿಪಿಸಿಆರ್ ಟೆಸ್ಟ್ ಮಾಡಿಸಿ ರಿಪೋರ್ಟ್ ತರುವಂತೆ ಡಿಪೋ ಮ್ಯಾನೇಜರ್ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಅನ್‌ಲಾಕ್ 2.Oನಲ್ಲಿ ಕೊರೊನಾ ರೂಲ್ಸ್ ಕಂಪ್ಲೀಟ್ ಬ್ರೇಕ್.. ಕೊರೊನಾ ಮರೆತು ನಿರ್ಲಕ್ಷ್ಯದಲ್ಲಿರುವ ಜನ