AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shivamogga Airport: ಕಮಲದ ವಿನ್ಯಾಸದಲ್ಲಿರುವ ಶಿವಮೊಗ್ಗ ವಿಮಾನ ನಿಲ್ದಾಣದ ಡಿಸೈನ್ ಬದಲಿಸಿ: ಕಾಂಗ್ರೆಸ್ ಆಗ್ರಹ

ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿಪಕ್ಷವು ಪಕ್ಷದ ಚಿಹ್ನೆ ಆನೆ ಆಕಾರದಲ್ಲಿ ಹಲವು ಪ್ರತಿಮೆ ನಿರ್ಮಾಣ ಮಾಡಿದ್ದಾಗ, ರಾಜಕೀಯ ಪಕ್ಷದ ಚಿಹ್ನೆ ಪ್ರಚಾರಕ್ಕೆ ತೆರಿಗೆದಾರರ ಹಣವನ್ನು ಬಳಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪನ್ನು ಬಿಜೆಪಿ ಎಚ್ಚರಿಕೆಯ ಸೂಚನೆಯಾಗಿ ಪರಿಗಣಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

Shivamogga Airport: ಕಮಲದ ವಿನ್ಯಾಸದಲ್ಲಿರುವ ಶಿವಮೊಗ್ಗ ವಿಮಾನ ನಿಲ್ದಾಣದ ಡಿಸೈನ್ ಬದಲಿಸಿ: ಕಾಂಗ್ರೆಸ್ ಆಗ್ರಹ
ಕಲಾವಿದರ ಕಲ್ಪನೆಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದ ವಿನ್ಯಾಸ
TV9 Web
| Updated By: Skanda|

Updated on: Jun 22, 2021 | 7:17 AM

Share

ಬೆಂಗಳೂರು: ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದ್ದು, ಇದರ ವಿನ್ಯಾಸ ಕಮಲದ ಆಕಾರದಲ್ಲಿದೆ. ಕಮಲ ಯಾವ ಪಕ್ಷದ ಚಿಹ್ನೆ ಎಂದು ಎಲ್ಲರಿಗೂ ಗೊತ್ತಿದೆ. ಪಕ್ಷದ ಚಿಹ್ನೆಗೆ ಪ್ರಚಾರ ನೀಡಲು ಸರ್ಕಾರದ ಹಣ ಬಳಕೆ ಮಾಡುವುದು ಸರಿಯಲ್ಲ ಎಂದು ಕಾಂಗ್ರೆಸ್ ಆಗ್ರಹಿಸಿದೆ. ರಾಜಕೀಯ ಪಕ್ಷದ ಚಿಹ್ನೆಯ ಪ್ರಚಾರಕ್ಕೆ ಸಾರ್ವಜನಿಕ ಹಣ ಮತ್ತು ಜಾಗ ಬಳಕೆ ಮಾಡುವುದು ಸರಿಯಲ್ಲ. ಈ ಹಿಂದಿನ ಪ್ರಕರಣಗಳಲ್ಲಿ ಹೈಕೋರ್ಟ್ ಹಾಗೂ ಚುನಾವಣಾ ಆಯೋಗ ಇದನ್ನು ವಿರೋಧಿಸಿವೆ. ಹೀಗಾಗಿ ಸರ್ಕಾರ ಶಿವಮೊಗ್ಗ ವಿಮಾನ ನಿಲ್ದಾಣದ ವಿನ್ಯಾಸವನ್ನು ಬದಲಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಸೋಮವಾರ ಬೆಂಗಳೂರಿನ ಕ್ವೀನ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಶಾಸಕ ಎನ್.ಎ ಹ್ಯಾರಿಸ್ ಹಾಗೂ ಎಐಸಿಸಿ ವಕ್ತಾರ ಬ್ರಿಜೆಶ್ ಕಾಳಪ್ಪ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಈ ವಿಚಾರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು. ಈ ವೇಳೆ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಸಂಯೋಜಕ ಎಂ. ರಾಮಚಂದ್ರಪ್ಪ ಹಾಗೂ ಎಂ.ಎ ಸಲೀಂ ಉಪಸ್ಥಿತರಿದ್ದರು.

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉತ್ತರ ಪ್ರದೇಶದ ಬಿಎಸ್​ಪಿ ಪಕ್ಷದ ಹೆಸರು ಪ್ರಸ್ತಾಪವೇಕೆ? ‘ಕಾಮನ್ ಕಾಸ್ ವರ್ಸಸ್ ಬಿಎಸ್ ಪಿ ನಡುವಣ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ 7-7-2016ರಂದು ಒಂದು ತೀರ್ಪು ಕೊಟ್ಟಿದೆ. ಬಿಎಸ್ ಪಿಯು ತಮ್ಮ ಪಕ್ಷದ ಚಿಹ್ನೆ ಆನೆ ಆಕಾರದಲ್ಲಿ ಹಲವು ಪ್ರತಿಮೆ ನಿರ್ಮಾಣ ಮಾಡಿದ್ದಾಗ, ರಾಜಕೀಯ ಪಕ್ಷದ ಚಿಹ್ನೆ ಪ್ರಚಾರಕ್ಕೆ ತೆರಿಗೆದಾರರ ಹಣವನ್ನು ಬಳಸುವಂತಿಲ್ಲ ಎಂದು ತೀರ್ಪು ನೀಡಿತ್ತು. ಇನ್ನು ಚುನಾವಣಾ ಆಯೋಗವು, 8-10 2016ರಂದು ಈ ವಿಚಾರವಾಗಿ ಒಂದು ನಿರ್ಣಯಕೈಗೊಳ್ಳುತ್ತದೆ. ಅದೇನೆಂದರೆ, ಸಾರ್ವಜನಿಕ ಹಣ ಮತ್ತು ಜಾಗವನ್ನು ಬಳಸಿಕೊಂಡು ರಾಜಕೀಯ ಪಕ್ಷ ಅಥವಾ ಅದರ ಚಿಹ್ನೆಗೆ ಪ್ರಚಾರ ನೀಡಿದರೆ, ಅದು ಪಾರದರ್ಶಕ ಚುನಾವಣೆಗೆ ವಿರುದ್ಧವಾದುದ್ದು. 1968ರ ಚುನಾವಣಾ ಚಿಹ್ನೆ ಆದೇಶದ ಪ್ಯಾರಾ 16ರ ನಿಯಮಾವಳಿ ಉಲ್ಲಂಘನೆ ಮಾಡಿದರೆ ಆ ಪಕ್ಷ ತನ್ನ ಚುನಾವಣೆ ಚಿಹ್ನೆಯನ್ನೆ ಕಳೆದುಕೊಳ್ಳಲಿದೆ. ಹೀಗಾಗಿ ಬಿಜೆಪಿ ಕೂಡಲೇ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಕಮಲದ ವಿನ್ಯಾಸದಲ್ಲಿ ನಿರ್ಮಾಣ ಮಾಡುವುದನ್ನು ನಿಲ್ಲಿಸಬೇಕು. ಒಂದುವೇಳೆ ಇದನ್ನು ಮುಂದುವರಿಸಿದರೆ ನೀವು ನಿಮ್ಮ ಚಿಹ್ನೆ ಕಳೆದುಕೊಳ್ಳಬೇಕಾಗುತ್ತದೆ ಎಂದು ಈ ಮೂಲಕ ಭಾರತೀಯ ಜನತಾ ಪಕ್ಷಕ್ಕೆ ಎಚ್ಚರಿಕೆ ನೀಡುತ್ತೇವೆ’ ಎಂದು ಕಾಂಗ್ರೆಸ್ ಶಾಸಕ ಎನ್.ಎ ಹ್ಯಾರಿಸ್ ಹಾಗೂ ಎಐಸಿಸಿ ವಕ್ತಾರ ಬ್ರಿಜೆಶ್ ಕಾಳಪ್ಪ ಜಂಟಿ ಪತ್ರಿಕಾಗೋಷ್ಠಿ ಎಚ್ಚರಿಕೆ ನೀಡಿದರು.

ಇತ್ತೀಚಿಗಷ್ಟೇ ಸಿಎಂ ಯಡಿಯೂರಪ್ಪ ನೀಡಿದ್ದರು ಭರವಸೆ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ​ ಆಗುವುದರಿಂದ ಕೈಗಾರಿಕೆಗಳ  ಅಭಿವೃದ್ಧಿ ಆಗಲಿದೆ. 384 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣದ​ ಕಾಮಗಾರಿ ನಡೆಯುತ್ತಿದೆ. ಕೈಗಾರಿಕಾ ಕ್ಷೇತ್ರ ಬೆಳೆದರೆ ಯುವಕರಿಗೆ ಉದ್ಯೋಗ ಸಿಗಲಿದೆ. ಮಧ್ಯ ಕರ್ನಾಟಕ ಭಾಗದ ಜನರಿಗೆ ಅನುಕೂಲವಾಗಲಿದೆ. 2022ರ ಜೂನ್​ ಅಂತ್ಯದಲ್ಲಿ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ. ನಮಗೂ ಆದಷ್ಟು ಬೇಗ ವಿಮಾನಯಾನ ಆರಂಭಿಸಬೇಕೆಂಬ ಅಪೇಕ್ಷೆಯಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇತ್ತೀಚಿಗಷ್ಟೇ ತಿಳಿಸಿದ್ದರು.

ಶಿವಮೊಗ್ಗದ ಸೋಗಾನೆಯಲ್ಲಿ ವಿಮಾನ ನಿಲ್ದಾಣದ ಕಾಮಗಾರಿ ವೀಕ್ಷಿಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಅವರು, ಶೀಘ್ರದಲ್ಲೇ ಹಾಸನ ಏರ್​ಪೋರ್ಟ್​ ಕಾಮಗಾರಿಯೂ ಆರಂಭವಾಗಲಿದೆ. ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ನಿಗದಿತ ಅವಧಿಗೆ ಮುಂಚಿತವಾಗಿ ಕಾಮಗಾರಿ ಮುಗಿಯಬೇಕು. ಉತ್ತಮ ದರ್ಜೆಯ ಕಾಮಗಾರಿ ಆಗಬೇಕು ಎಂದಿದ್ದರು. ಸಿಎಂ ಯಡಿಯೂರಪ್ಪಗೆ ಸಂಸದ ಬಿ.ವೈ.ರಾಘವೇಂದ್ರ, ಸಚಿವ ಭೈರತಿ ಬಸವರಾಜ್ ಸೇರಿದಂತೆ ಅಧಿಕಾರಿಗಳು ಸಾಥ್ ನೀಡಿದ್ದರು.

ಇದನ್ನೂ ಓದಿ: Nikhil Kumarswamy: ಕುಮಾರಸ್ವಾಮಿ ಕುಟುಂಬದಿಂದ ಸಿಹಿ ಸುದ್ದಿ; ಶೀಘ್ರವೇ ತಂದೆ ಆಗಲಿದ್ದಾರೆ ನಿಖಿಲ್

ಮಾನನಷ್ಟ ಮೊಕದ್ದಮೆಯಲ್ಲಿ ದೇವೇಗೌಡರಿಗೆ ಹಿನ್ನಡೆ: 2 ಕೋಟಿ ಪರಿಹಾರ ಕಟ್ಟಿಕೊಡಲು ಕೋರ್ಟ್ ಆದೇಶ

(Congress urges change Shivamogga airport design because its have lotus design like BJP symbol)

ವಿಷ್ಣುವರ್ಧನ್​​ಗೆ ಕರ್ನಾಟಕ ರತ್ನ ನೀಡುವ ಬಗ್ಗೆ ಸಿಎಂ ಸಕಾರಾತ್ಮಕ ಸ್ಪಂದನೆ
ವಿಷ್ಣುವರ್ಧನ್​​ಗೆ ಕರ್ನಾಟಕ ರತ್ನ ನೀಡುವ ಬಗ್ಗೆ ಸಿಎಂ ಸಕಾರಾತ್ಮಕ ಸ್ಪಂದನೆ
ಸಿನಿಮಾ ಸಾಹಸಕ್ಕೆ ಕೈ ಹಾಕಿದ ‘ಅಮೃತಾಂಜನ್’ ಕಿರುಚಿತ್ರದ ಹುಡುಗರು
ಸಿನಿಮಾ ಸಾಹಸಕ್ಕೆ ಕೈ ಹಾಕಿದ ‘ಅಮೃತಾಂಜನ್’ ಕಿರುಚಿತ್ರದ ಹುಡುಗರು
ಅಪಾಯದ ಮಟ್ಟ ಮೀರಿದ ಜಮ್ಮು-ಕಾಶ್ಮೀರದ ಝೀಲಂ ನದಿ, ಪ್ರವಾಹದ ಎಚ್ಚರಿಕೆ
ಅಪಾಯದ ಮಟ್ಟ ಮೀರಿದ ಜಮ್ಮು-ಕಾಶ್ಮೀರದ ಝೀಲಂ ನದಿ, ಪ್ರವಾಹದ ಎಚ್ಚರಿಕೆ
ಬಾನು ಮುಸ್ತಾಕ್ ಮನೆಯಲ್ಲಿ ಕುರಾನ್ ಜತೆ ಭಗವದ್ಗೀತೆ
ಬಾನು ಮುಸ್ತಾಕ್ ಮನೆಯಲ್ಲಿ ಕುರಾನ್ ಜತೆ ಭಗವದ್ಗೀತೆ
ದರ್ಶನ್ ನೋವು ನೋಡಿ ಖುಷಿಪಡುವ ಕೆಲವರು ಇದ್ದಾರೆ: ನಿರ್ದೇಶಕ ಪ್ರೇಮ್
ದರ್ಶನ್ ನೋವು ನೋಡಿ ಖುಷಿಪಡುವ ಕೆಲವರು ಇದ್ದಾರೆ: ನಿರ್ದೇಶಕ ಪ್ರೇಮ್
ಮೈಸೂರು ದಸರಾ ಉದ್ಘಾಟನೆ: ಫಲತಾಂಬೂಲ ನೀಡಿ ಬಾನು ಮುಸ್ತಾಕ್​ಗೆ ಆಹ್ವಾನ
ಮೈಸೂರು ದಸರಾ ಉದ್ಘಾಟನೆ: ಫಲತಾಂಬೂಲ ನೀಡಿ ಬಾನು ಮುಸ್ತಾಕ್​ಗೆ ಆಹ್ವಾನ
ದರ್ಶನ್ ಅವರನ್ನು ಭೇಟಿ ಮಾಡಿದ್ದೆ, ನೋವಿನಿಂದ ನುಡಿದ ಪ್ರೇಮ್
ದರ್ಶನ್ ಅವರನ್ನು ಭೇಟಿ ಮಾಡಿದ್ದೆ, ನೋವಿನಿಂದ ನುಡಿದ ಪ್ರೇಮ್
ಕೇದಾರನಾಥ- ಸೋನ್‌ಪ್ರಯಾಗ ಮಾರ್ಗದಲ್ಲಿ ಭೂಕುಸಿತ; ಹಲವಾರು ವಾಹನಗಳಿಗೆ ಹಾನಿ
ಕೇದಾರನಾಥ- ಸೋನ್‌ಪ್ರಯಾಗ ಮಾರ್ಗದಲ್ಲಿ ಭೂಕುಸಿತ; ಹಲವಾರು ವಾಹನಗಳಿಗೆ ಹಾನಿ
ರಾಧಿಕಾ ಕುಮಾರಸ್ವಾಮಿ ಜತೆಗಿನ ಹಣಕಾಸಿನ ವ್ಯವಹಾರ ಬಗ್ಗೆ ಜಮೀರ್ ಸ್ಪಷ್ಟನೆ
ರಾಧಿಕಾ ಕುಮಾರಸ್ವಾಮಿ ಜತೆಗಿನ ಹಣಕಾಸಿನ ವ್ಯವಹಾರ ಬಗ್ಗೆ ಜಮೀರ್ ಸ್ಪಷ್ಟನೆ
ಜಮೀರ್ ಅಹಮ್ಮದ್​​ ಜೊತೆಗಿನ ಹಣಕಾಸಿನ ವ್ಯವಹಾರ ಬಿಚ್ಚಿಟ್ಟ ಕೆಜಿಎಫ್ ಬಾಬು
ಜಮೀರ್ ಅಹಮ್ಮದ್​​ ಜೊತೆಗಿನ ಹಣಕಾಸಿನ ವ್ಯವಹಾರ ಬಿಚ್ಚಿಟ್ಟ ಕೆಜಿಎಫ್ ಬಾಬು