ಮಾನನಷ್ಟ ಮೊಕದ್ದಮೆಯಲ್ಲಿ ದೇವೇಗೌಡರಿಗೆ ಹಿನ್ನಡೆ: 2 ಕೋಟಿ ಪರಿಹಾರ ಕಟ್ಟಿಕೊಡಲು ಕೋರ್ಟ್ ಆದೇಶ

ಖಾಸಗಿ ವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ದೇವೇಗೌಡರು ನೈಸ್ ಸಂಸ್ಥೆಯ ಗೌರವಕ್ಕೆ ಧಕ್ಕೆ ಬರುವಂತೆ ಹೇಳಿಕೆ ನೀಡಿದ್ದರು ಕಂಪನಿಯು ಆರೋಪಿಸಿ ಮೊಕದ್ದಮೆ ಹೂಡಿತ್ತು.

  • Publish Date - 10:08 pm, Mon, 21 June 21 Edited By: Ghanashyam D M | ಡಿ.ಎಂ.ಘನಶ್ಯಾಮ
ಮಾನನಷ್ಟ ಮೊಕದ್ದಮೆಯಲ್ಲಿ ದೇವೇಗೌಡರಿಗೆ ಹಿನ್ನಡೆ: 2 ಕೋಟಿ ಪರಿಹಾರ ಕಟ್ಟಿಕೊಡಲು ಕೋರ್ಟ್ ಆದೇಶ
ಎಚ್.ಡಿ.ದೇವೇಗೌಡ

ಬೆಂಗಳೂರು: ನಂದಿ ಇನ್​ಫ್ರಾ ಸ್ಟ್ರಕ್ಚರ್ ಕಾರಿಡಾರ್ (Nandi Infrastructure Corridor Enterprises – NICE) ಕಂಪನಿಯ ವಿರುದ್ಧ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಮಾಡಿದ್ದ ಆರೋಪವನ್ನು ಸಾಬೀತುಪಡಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ನೈಸ್ ಕಂಪನಿಗೆ ₹ 2 ಕೋಟಿ ಪರಿಹಾರ ಕಟ್ಟಿಕೊಡಬೇಕು ಎಂದು ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಆದೇಶ ಮಾಡಿದೆ.

ದೇವೇಗೌಡರ ವಿರುದ್ಧ ನೈಸ್ ಕಂಪನಿಯು ಮಾನನಷ್ಟ ದಾವೆ ಹೂಡಿತ್ತು. ಖಾಸಗಿ ವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ದೇವೇಗೌಡರು ನೈಸ್ ಸಂಸ್ಥೆಯ ಗೌರವಕ್ಕೆ ಧಕ್ಕೆ ಬರುವಂತೆ ಹೇಳಿಕೆ ನೀಡಿದ್ದರು ಕಂಪನಿಯು ಆರೋಪಿಸಿ, ₹ 10 ಕೋಟಿ ಮಾನನಷ್ಟ ಪರಿಹಾರ ಕೋರಿ ಅರ್ಜಿ ಸಲ್ಲಿಸಿತ್ತು.

ಕಂಪನಿಯ ಮೇಲೆ ಮಾಡಿದ್ದ ಆರೋಪವು ಸತ್ಯವೆಂದು ದೇವೇಗೌಡರು ಸಾಬೀತುಪಡಿಸಿಲ್ಲ. ಹೀಗಾಗಿ $ 2 ಕೋಟಿ ನಷ್ಟಪರಿಹಾರ ನೀಡಬೇಕೆಂದು ತೀರ್ಪು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶರಾದ ಮಲ್ಲನಗೌಡ ತೀರ್ಪು ನೀಡಿದರು. ಸಿವಿಲ್ ಮಾನನಷ್ಟ ದಾವೆಯು 2012ರಲ್ಲಿ ದಾಖಲಾಗಿತ್ತು.

(Defamation Case Against Devegowda by NICE City Civil Court Orders 2 Crore Compensation)

ಇದನ್ನೂ ಓದಿ: ಕರ್ನಾಟಕದಲ್ಲಿ ಕಾಂಗ್ರೆಸ್ ಮೂಲೆಗುಂಪಾಗುವಂಥ ತಂತ್ರ ಹೆಣಿ: ಕುಮಾರಸ್ವಾಮಿಗೆ ದೇವೇಗೌಡರ ಕಿವಿಮಾತು

ಇದನ್ನೂ ಓದಿ: Former PM HD Deve Gowda:ಎಚ್.ಡಿ.ದೇವೇಗೌಡ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವ ಹಿಂದಿನ ದಿನ ಅವರ ಜತೆಗೇ ಇದ್ದರು ಎಸ್.ಎಂ ಕೃಷ್ಣ!