Covid Vaccine: ದಾಖಲೆ ಬರೆದ ಲಸಿಕೆ ವಿತರಣೆ: ಭಾರತದಲ್ಲಿ 80.96 ಲಕ್ಷ, ಕರ್ನಾಟಕದಲ್ಲಿ 10.36 ಲಕ್ಷ ಮಂದಿಗೆ ಲಸಿಕೆ
ದೆಹಲಿ: ದೇಶದಲ್ಲಿ ಇಂದು ಸಂಜೆ 6 ಗಂಟೆ ವೇಳೆಗೆ ದೇಶದಲ್ಲಿ 80 .96ಲಕ್ಷ ಡೋಸ್ ಕೊರೊನಾ ಲಸಿಕೆ ವಿತರಿಸಲಾಗಿದೆ.. ಕರ್ನಾಟಕದಲ್ಲಿ ಇಂದು 7 ಲಕ್ಷ ಡೋಸ್ ಲಸಿಕೆ ನೀಡುವ ಗುರಿ ಇತ್ತು. ಆದರೆ ಈ ಗುರಿಯನ್ನು ಮೀರಿ ರಾಜ್ಯದಲ್ಲಿ10.36 ಲಕ್ಷ ಡೋಸ್ ಲಸಿಕೆ ವಿತರಿಸಲಾಗಿದೆ. ಮಧ್ಯಪ್ರದೇಶದಲ್ಲಿ ಇಂದು 12 ಲಕ್ಷ ಡೋಸ್ ಲಸಿಕೆ ವಿತರಿಸಲಾಗಿದ್ದು, ಉತ್ತರ ಪ್ರದೇಶದಲ್ಲಿಂದು 6.31 ಲಕ್ಷ ಡೋಸ್ ಲಸಿಕೆ ವಿತರಿಸಲಾಗಿದೆ. ಕರ್ನಾಟಕದಲ್ಲಿ ಇಂದು ವಿತರಿಸಿರುವ ಕೊವಿಡ್ ಲಸಿಕೆಯ ಅಂಕಿ ಅಂಶಗಳ ಪ್ರಕಾರ ಕರ್ನಾಟಕ […]
ದೆಹಲಿ: ದೇಶದಲ್ಲಿ ಇಂದು ಸಂಜೆ 6 ಗಂಟೆ ವೇಳೆಗೆ ದೇಶದಲ್ಲಿ 80 .96ಲಕ್ಷ ಡೋಸ್ ಕೊರೊನಾ ಲಸಿಕೆ ವಿತರಿಸಲಾಗಿದೆ.. ಕರ್ನಾಟಕದಲ್ಲಿ ಇಂದು 7 ಲಕ್ಷ ಡೋಸ್ ಲಸಿಕೆ ನೀಡುವ ಗುರಿ ಇತ್ತು. ಆದರೆ ಈ ಗುರಿಯನ್ನು ಮೀರಿ ರಾಜ್ಯದಲ್ಲಿ10.36 ಲಕ್ಷ ಡೋಸ್ ಲಸಿಕೆ ವಿತರಿಸಲಾಗಿದೆ. ಮಧ್ಯಪ್ರದೇಶದಲ್ಲಿ ಇಂದು 12 ಲಕ್ಷ ಡೋಸ್ ಲಸಿಕೆ ವಿತರಿಸಲಾಗಿದ್ದು, ಉತ್ತರ ಪ್ರದೇಶದಲ್ಲಿಂದು 6.31 ಲಕ್ಷ ಡೋಸ್ ಲಸಿಕೆ ವಿತರಿಸಲಾಗಿದೆ.
ಕರ್ನಾಟಕದಲ್ಲಿ ಇಂದು ವಿತರಿಸಿರುವ ಕೊವಿಡ್ ಲಸಿಕೆಯ ಅಂಕಿ ಅಂಶಗಳ ಪ್ರಕಾರ ಕರ್ನಾಟಕ ದೇಶದಲ್ಲಿ 2ನೇ ಸ್ಥಾನ ಪಡೆದಿದೆ.
ದೇಶದಲ್ಲಿ ಇಂದು ಒಂದೇ ದಿನ 50 ಲಕ್ಷ ಡೋಸ್ ಲಸಿಕೆ ನೀಡಿಕೆಯ ಗುರಿ ಇತ್ತು. ಆದರೆ ಸಂಜೆ 5 ರವರೆಗೆ 69.25 ಲಕ್ಷ ಡೋಸ್ ಲಸಿಕೆ ನೀಡಿಕೆ ಹೊಸ ದಾಖಲೆ ಬರೆಯಲಾಗಿದೆ. ಏಪ್ರಿಲ್ ಪ್ರಾರಂಭದಲ್ಲಿ ಒಂದೇ ದಿನ 43 ಲಕ್ಷ ಡೋಸ್ ಲಸಿಕೆ ನೀಡಿದ್ದು ಇದುವರೆಗಿನ ಗರಿಷ್ಠ ದಾಖಲೆ ಆಗಿತ್ತು. ಆದರೆ ಇಂದು ಒಂದೇ ದಿನ 70 ಲಕ್ಷ ಡೋಸ್ ವರೆಗೂ ಲಸಿಕೆ ವಿರಿಸಲಾಗಿದೆ. ಕೇಂದ್ರ ಆರೋಗ್ಯ ಇಲಾಖೆ ಆಗಸ್ಟ್ ತಿಂಗಳಿನಿಂದ ನಿತ್ಯ ಒಂದು ಕೋಟಿ ಡೋಸ್ ಲಸಿಕೆ ನೀಡಿಕೆ ಗುರಿ ಹಾಕಿಕೊಂಡಿದೆ.
Today’s record-breaking vaccination numbers are gladdening. The vaccine remains our strongest weapon to fight COVID-19. Congratulations to those who got vaccinated and kudos to all the front-line warriors working hard to ensure so many citizens got the vaccine.
Well done India!
— Narendra Modi (@narendramodi) June 21, 2021
ಕರ್ನಾಟಕದಲ್ಲಿ ಇಂದಿನ ಕೊವಿಡ್ ಸೋಂಕಿತರೆಷ್ಟು? ಕರ್ನಾಟಕದಲ್ಲಿ ಸೋಮವಾರ 4867 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 142 ಜನರು ಮೃತಪಟ್ಟಿದ್ದಾರೆ. ಕರ್ನಾಟಕದಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ 3.25ಕ್ಕೆ ಇಳಿದಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆಯು 5 ಸಾವಿರಕ್ಕಿಂತಲೂ ಕಡಿಮೆಯಾಗಿರುವುದು ಮತ್ತು ಪಾಸಿಟಿವಿಟಿ ದರ ಶೇ 5ಕ್ಕೂ ಕಡಿಮೆಯಾಗಿರುವುದು ಇಂದಿನ ಗಮನಾರ್ಹ ಬೆಳವಣಿಗೆ ಎನಿಸಿದೆ.
ಬೆಂಗಳೂರಲ್ಲಿ 1034 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 28 ಜನರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 28,11,320ಕ್ಕೆ ಏರಿಕೆಯಾಗಿದೆ. ಈವರೆಗೆ 26,54,139 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 34,025 ಜನರು ಸಾವನ್ನಪ್ಪಿದ್ದಾರೆ. 1,23,134 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು? ರಾಜ್ಯದಲ್ಲಿ ಹೊಸದಾಗಿ 4867 ಜನರಿಗೆ ಕೊರೊನಾ ದೃಢಪಟ್ಟಿದೆ. ಈ ಪೈಕಿ ಬೆಂಗಳೂರು ನಗರದಲ್ಲಿ ಅತಿಹೆಚ್ಚು, ಅಂದರೆ 1034 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಉಳಿದಂತೆ ಬಾಗಲಕೋಟೆ 23, ಬಳ್ಳಾರಿ 106, ಬೆಳಗಾವಿ 93, ಬೆಂಗಳೂರು ಗ್ರಾಮಾಂತರ 134, ಬೀದರ್ 12, ಚಾಮರಾಜನಗರ 109, ಚಿಕ್ಕಬಳ್ಳಾಪುರ 128, ಚಿಕ್ಕಮಗಳೂರು 152, ಚಿತ್ರದುರ್ಗ 138, ದಕ್ಷಿಣ ಕನ್ನಡ 542, ದಾವಣಗೆರೆ 176, ಧಾರವಾಡ 55, ಗದಗ 17, ಹಾಸನ 364, ಹಾವೇರಿ 18, ಕಲಬುರಗಿ 26, ಕೊಡಗು 206, ಕೋಲಾರ 90, ಕೊಪ್ಪಳ 26, ಮಂಡ್ಯ 154, ಮೈಸೂರು 546, ರಾಯಚೂರು 20, ರಾಮನಗರ 21, ಶಿವಮೊಗ್ಗ 217, ತುಮಕೂರು 182, ಉಡುಪಿ 117, ಉತ್ತರ ಕನ್ನಡ 119, ವಿಜಯಪುರ 34, ಯಾದಗಿರಿ 8 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಸಾವು? ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 142 ಜನರ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಅತಿಹೆಚ್ಚು, ಅಂದರೆ 28 ಜನರು ಸಾವನ್ನಪ್ಪಿದ್ದಾರೆ. ಮೈಸೂರು 22, ದಕ್ಷಿಣ ಕನ್ನಡ 14, ಬಳ್ಳಾರಿ 12, ಧಾರವಾಡ 8, ಹಾವೇರಿ, ಶಿವಮೊಗ್ಗ, ಉತ್ತರ ಕನ್ನಡ ತಲಾ ಐವರು ಮೃತಪಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರ, ಕೋಲಾರ 4, ಚಿಕ್ಕಮಗಳೂರು, ಹಾಸನ, ತುಮಕೂರು 3, ಕೊಡಗು, ರಾಯಚೂರು, ಮಂಡ್ಯ ತಲಾ 2, ವಿಜಯಪುರ, ಉಡುಪಿ, ಗದಗ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೀದರ್, ಬೆಳಗಾವಿ ಜಿಲ್ಲೆಗಳಲ್ಲಿ ತಲಾ ಒಬ್ಬರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 34,025 ಜನರು ಮೃತಪಟ್ಟಿದ್ದಾರೆ.
Chandana: 1ರಿಂದ 10ನೆ ತರಗತಿ ವಿದ್ಯಾರ್ಥಿಗಳಿಗೆ ಬಹುಮುಖ್ಯ ಮಾಹಿತಿ: ಚಂದನದಲ್ಲಿ ಪ್ರತಿದಿನ ವಿಡಿಯೋ ಪಾಠಗಳ ಪ್ರಸಾರ
(Covid Vaccine distribution highest today 75 lakh in India 7 lakh in Karnataka)
Published On - 8:27 pm, Mon, 21 June 21