AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KSRTC ಕೇರಳದಲ್ಲಿ ಎಲ್ಎನ್​ಜಿ ಇಂಧನವಾಗಿ ಬಳಸುವ ಬಸ್ ಸೇವೆಗೆ ಚಾಲನೆ

LNG Bus: ದಶಕಗಳಿಂದ ನಷ್ಟದಲ್ಲಿ ಸಾಗುತ್ತಿರುವ ಬಸ್ ಕಂಪನಿ, ಪೆಟ್ರೋನೆಟ್ ಎಲ್‌ಎನ್‌ಜಿಯಿಂದ ಎರಡು ಎಲ್‌ಎನ್‌ಜಿ ಚಾಲಿತ ಬಸ್‌ಗಳನ್ನು ಮೂರು ತಿಂಗಳ ಕಾಲ ಗುತ್ತಿಗೆಗೆ ನೀಡಿದೆ. ಅಂತಹ ಬಸ್‌ಗಳನ್ನು ದೀರ್ಘ, ನಗರಗಳೊಳಗೆ ವಾಣಿಜ್ಯಿಕವಾಗಿ ಚಾಲನೆ ಮಾಡುವ ಆರ್ಥಿಕ ಮತ್ತು ತಾಂತ್ರಿಕ ಕಾರ್ಯಸಾಧ್ಯತೆಯನ್ನು ಪರೀಕ್ಷಿಸಲು ಅಧ್ಯಯನಗಳನ್ನು ನಡೆಸುವ ಉದ್ದೇಶದಿಂದ ರಸ್ತೆಗಿಳಿಸಲಾಗಿದೆ.

KSRTC ಕೇರಳದಲ್ಲಿ ಎಲ್ಎನ್​ಜಿ ಇಂಧನವಾಗಿ ಬಳಸುವ ಬಸ್ ಸೇವೆಗೆ ಚಾಲನೆ
ಎಲ್​ಎನ್​ಜಿ ಬಸ್ (ಕೃಪೆ:ಕೆಎಸ್​ಆರ್​ಟಿಸಿ ನೆಡುಮಂಗಾಡ್ ಫೇಸ್​ಬುಕ್ ಪುಟ)
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jun 21, 2021 | 6:49 PM

ತಿರುವನಂತಪುರಂ: ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಪ್ರಮುಖ ಹೆಜ್ಜೆಯಲ್ಲಿ ಕೇರಳ ಸೋಮವಾರ ದ್ರವೀಕೃತ ನೈಸರ್ಗಿಕ ಅನಿಲದಿಂದ (liquefied natural gas-LNG) ಚಲಿಸುವ ಮೊದಲ ಸಾರ್ವಜನಿಕ ಬಸ್ ಸೇವೆಗೆ ಚಾಲನೆ ನೀಡಿದೆ. ಸಾರಿಗೆ ಸಚಿವ ಆಂಟನಿ ರಾಜು ಅವರು ತಿರುವನಂತಪುರಂ ಸೆಂಟ್ರಲ್ ಬಸ್ ನಿಲ್ದಾಣದಿಂದ ಹಸಿರು ಬಸ್ ಸೇವೆಗೆ ಹಸಿರು ನಿಶಾನೆ ತೋರಿಸಿದ್ದಾರೆ. ಈ ಬಸ್ ತಿರುವನಂತಪುರಂ-ಎರ್ನಾಕುಲಂ ಮತ್ತು ಎರ್ನಾಕುಲಂ-ಕೋಯಿಕೋಡ್ ಮಾರ್ಗಗಳಲ್ಲಿ ಚಲಿಸಲಿದೆ.

ಹಣದ ಕೊರತೆಯಿರುವ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಎರಡು ಉದ್ದೇಶಗಳಿಂದ ಈ ಬಸ್ ಗಳಿಗೆ ಚಾಲನೆ ನೀಡಿದೆ. ಅದೇನೆಂದರೆ ಅಗ್ಗದ ಇಂಧನಕ್ಕೆ ಬದಲಾಗುವುದರ ಮೂಲಕ ಹೆಚ್ಚುತ್ತಿರುವ ಕಾರ್ಯಾಚರಣೆಯ ನಷ್ಟವನ್ನು ಕಡಿತಗೊಳಿಸುವುದು ಮತ್ತು ಪರಿಸರಕ್ಕೆ ಹಾನಿಕಾರಕವೆಂದು ಪರಿಗಣಿಸಲಾದ ಇಂಧನ ಮೂಲವನ್ನು ಉತ್ತೇಜಿಸುವುದು ಆಗಿದೆ.

ಇದು ಕೆಎಸ್‌ಆರ್‌ಟಿಸಿಯು ತನ್ನ ಸಂಪೂರ್ಣ ಫ್ಲೀಟ್ ಅನ್ನು ಕೂಲಂಕಷವಾಗಿ ಪರಿಶೀಲಿಸುವ, ಪ್ರಸ್ತುತ ಡೀಸೆಲ್‌ನಲ್ಲಿ ಚಾಲನೆಯಲ್ಲಿರುವ ಮತ್ತು ಅವುಗಳನ್ನು ಎಲ್‌ಎನ್‌ಜಿ ಮತ್ತು ಕಂಪ್ರೆಸ್ಡ್ ನೈಸರ್ಗಿಕ ಅನಿಲಕ್ಕೆ (ಸಿಎನ್‌ಜಿ) ಬದಲಾಯಿಸುವ ಯೋಜನೆಗಳ ಒಂದು ಭಾಗವಾಗಿದೆ. ತನ್ನ ಹಳೆಯ ಡೀಸೆಲ್ ಚಾಲಿತ 400 ಬಸ್‌ಗಳನ್ನು ಎಲ್‌ಎನ್‌ಜಿಗೆ ಪರಿವರ್ತಿಸುವ ಯೋಜನೆಯನ್ನು ಕೆಎಸ್‌ಆರ್‌ಟಿಸಿ ಈಗಾಗಲೇ ಪ್ರಕಟಿಸಿದೆ. ದಶಕಗಳಿಂದ ನಷ್ಟದಲ್ಲಿ ಸಾಗುತ್ತಿರುವ ಬಸ್ ಕಂಪನಿ, ಪೆಟ್ರೋನೆಟ್ ಎಲ್‌ಎನ್‌ಜಿಯಿಂದ ಎರಡು ಎಲ್‌ಎನ್‌ಜಿ ಚಾಲಿತ ಬಸ್‌ಗಳನ್ನು ಮೂರು ತಿಂಗಳ ಕಾಲ ಗುತ್ತಿಗೆಗೆ ನೀಡಿದೆ. ಅಂತಹ ಬಸ್‌ಗಳನ್ನು ದೀರ್ಘ, ನಗರಗಳೊಳಗೆ ವಾಣಿಜ್ಯಿಕವಾಗಿ ಚಾಲನೆ ಮಾಡುವ ಆರ್ಥಿಕ ಮತ್ತು ತಾಂತ್ರಿಕ ಕಾರ್ಯಸಾಧ್ಯತೆಯನ್ನು ಪರೀಕ್ಷಿಸಲು ಅಧ್ಯಯನಗಳನ್ನು ನಡೆಸುವ ಉದ್ದೇಶದಿಂದ ರಸ್ತೆಗಿಳಿಸಲಾಗಿದೆ.

ಹೊಸ ಎಲ್‌ಎನ್‌ಜಿ ಬಸ್ ಸೇವೆಯನ್ನು ಮೊದಲ ಹಂತದಲ್ಲಿ ಪ್ರಮುಖ ನಗರಗಳ ನಡುವೆ ನಡೆಸಲಾಗುವುದು. ಆನಂತರ ಅದರ ಕಾರ್ಯಾಚರಣೆಯ ದಕ್ಷತೆಯನ್ನು ಅಳೆಯಲು ಮುನ್ನಾರ್‌ನಂತಹ ಉನ್ನತ-ಶ್ರೇಣಿಯ ಪ್ರದೇಶಗಳಿಗೆ ಕರೆದೊಯ್ಯಲಾಗುವುದು ಎಂದು ಸಾರಿಗೆ ಸಚಿವರು ಹೇಳಿದರು.

ಇದನ್ನೂ ಓದಿ: Lakshadweep ಲಕ್ಷದ್ವೀಪ ಹೈಕೋರ್ಟ್ ಕಾನೂನು ವ್ಯಾಪ್ತಿಯನ್ನು ಕೇರಳದಿಂದ ಕರ್ನಾಟಕಕ್ಕೆ ವರ್ಗಾಯಿಸಲು ಪ್ರಸ್ತಾಪ ಮುಂದಿಟ್ಟ ಪ್ರಫುಲ್ ಪಟೇಲ್

ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ