ಅನಂತರಾಜು ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್​​​​: ಡೆತ್​ನೋಟ್ ಇಟ್ಟುಕೊಂಡು ರೇಖಾಗೆ ಧಮ್ಕಿ ಹಾಕಿದರಾ ಸುಮಾ? ಮತ್ತೊಂದು ಆಡಿಯೋ ಲಭ್ಯ

| Updated By: ಗಂಗಾಧರ​ ಬ. ಸಾಬೋಜಿ

Updated on: Jun 01, 2022 | 8:51 AM

ಬೆಂಗಳೂರಲ್ಲಿ ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಕೇಸ್​ಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಸುಮಾ-ರೇಖಾ ಮಾತುಕತೆಯ ಮತ್ತೊಂದು ಆಡಿಯೋ ಲಭ್ಯವಾಗಿದೆ. ಆದರೆ ಆಡಿಯೋ ಎಡಿಟ್ ಮಾಡಿ ರೇಖಾ ಅಂಡ್ ಟೀಂ ಹರಿ ಬಿಡುತ್ತಿದ್ದಾರಾ ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಅನಂತರಾಜು ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್​​​​: ಡೆತ್​ನೋಟ್ ಇಟ್ಟುಕೊಂಡು ರೇಖಾಗೆ ಧಮ್ಕಿ ಹಾಕಿದರಾ ಸುಮಾ? ಮತ್ತೊಂದು ಆಡಿಯೋ ಲಭ್ಯ
ಬಿಜೆಪಿ ಮುಖಂಡ ಅನಂತರಾಜು
Follow us on

ಬೆಂಗಳೂರು: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಕೇಸ್ ಪ್ರಕರಣ ಈಗ ಮತ್ತೊಂದು ತಿರುವು ಪಡೆದುಕೊಂಡಿದ್ದು, ಸುಮಾ-ರೇಖಾ ಮಾತುಕತೆಯ ಮತ್ತೊಂದು ಆಡಿಯೋ ಲಭ್ಯವಾಗಿದೆ. ಡೆತ್​ನೋಟ್ ಇಟ್ಟುಕೊಂಡು ರೇಖಾಗೆ ಸುಮಾ ಧಮ್ಕಿ ಹಾಕಿದ್ದು, ಮನೆಯಲ್ಲಿ‌ ನಿನ್ನ ಕುರಿತು ಬರೆದಿರುವ ಡೆತ್​ನೋಟ್ ಇದೆ. ಯಾವಾಗಲಾದರೂ ಕೇಸ್ ಮಾಡಬಹುದು ಎಂದು ಮೃತ ಅನಂತರಾಜು ಪತ್ನಿ ಸುಮಾಳಿಂದ ರೇಖಾಗೆ ಧಮ್ಕಿ ಹಾಕಿದ್ದು, ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಂತಾಗಿದೆ.

ಆಡಿಯೊ ಎಡಿಟ್ ಮಾಡಿ ಹರಿ ಬಿಡ್ತಿದ್ದಾರಾ ರೇಖಾ ಅಂಡ್ ಟೀಂ?

ಆಡಿಯೋ ಎಡಿಟ್ ಮಾಡಿ ರೇಖಾ ಅಂಡ್ ಟೀಂ ಹರಿ ಬಿಡುತ್ತಿದ್ದಾರಾ ಎನ್ನುವ ಹಲವು ಅನುಮಾನಗಳು ಸಹ ಹುಟ್ಟಿಕೊಂಡಿದ್ದು, ಕೇಸ್​ನಲ್ಲಿ ಸುಮಾ ಸಿಕ್ಕಿಹಾಸಲು ಸಂಚು ರೂಪಿಸಲಾಗುತ್ತಿದ್ಯಾ ಎನ್ನುವ ಪ್ರಶ್ನೆ ಉಂಟಾಗಿದೆ. ಸದ್ಯ ಲಭ್ಯವಾಗಿರೊ ಆಡಿಯೋ ಎಡಿಟ್ ಆಗಿರೋದು ಎನ್ನಲಾಗುತ್ತಿದ್ದು, ಕೇವಲ ಸುಮಾ ಮಾತಾಡಿರೊ ವರ್ಷನ್ ಮಾತ್ರ ಹೆಚ್ಚಿದ್ದು, ರೇಖಾ ಮಾತಾಡಿರೋದನ್ನ ಎಡಿಟ್ ಮಾಡಲಾಗಿದೆ. ಎಡಿಟ್ ಆಡಿಯೋ ಮೂಲಕ ಪ್ರಕರಣದಿಂದ ತಪ್ಪಿಸಿಕೊಳ್ಳೊ ಯತ್ನ ನಡಿತಿದ್ಯಾ ಎನ್ನುವ ಶಂಕೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: LPG Price: ವಾಣಿಜ್ಯ ಸಿಲಿಂಡರ್ ಬೆಲೆ 135 ರೂಪಾಯಿ ಇಳಿಕೆ

ಈ ಹಿಂದೆ ವೈರಲ್ ಆದ ಆಡಿಯೋ ಬಗ್ಗೆ ಬಾಯಿಬಿಟ್ಟ ಸುಮಾ:

ಈ ಹಿಂದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಪೊಲೀಸರು ಪತ್ನಿ ಸುಮಾಳನ್ನು ಕರೆಸಿ ವಿಚಾರಣೆ ಮಾಡಿದ್ದರು. ಈ ಹಿಂದೆ ಲೀಕ್ ಆದ ಆಡಿಯೋ ಬಗೆಗಿನ ವಿಚಾರಣೆ ವೇಳೆ ಸುಮಾ ಸ್ಪೋಟಕ ಮಾಹಿತಿ ನೀಡಿದ್ದು, ಆ ಆಡಿಯೋ ನನ್ನದೆ ಎಂದಿದ್ದಳು. ಆಡಿಯೋ ಹಾಗೂ ಅದರಲ್ಲಿನ ಅಂಶಗಳ ಬಗ್ಗೆ ಸುಮಾ ಸ್ಪಷ್ಟನೆ ನೀಡಿದ್ದು, ನನ್ನ ಸಂಸಾರವನ್ನ ಉಳಿಸಿಕೊಳ್ಳುವುದು ನನ್ನ ಜವಾಬ್ದಾರಿ. ಅದಕ್ಕಾಗಿ ನಾನು ರೇಖಾ ಜೊತೆ ಮಾತನಾಡಿದ್ದೆ. ಆದರೆ ನನ್ನ ಗಂಡನನ್ನ ನಾನು ಹೊಡೆದಿಲ್ಲ. ಬೈದು ಬುದ್ದಿ ಹೇಳಿದ್ದೆ ಅಷ್ಟೇ. ಆದರೆ ಆಡಿಯೋ ಈ ರೀತಿ ವೈರಲ್ ಆಗಿದೆ. ನಾನು ರೇಖಾಗೆ ಭಯ ಹುಟ್ಟಿಸಲು ಆ ರೀತಿ ಮಾತನಾಡಿದ್ದೆ ಎಂದು ವಿಚಾರಣೆ ವೇಳೆ ಹೇಳಿದ್ದರು.

ಗಂಡನಿಗೆ ಬುದ್ಧಿ ಹೇಳಿದ ಸುಮಾ:

ಗಂಡನ ಮೇಲಿನ ಪ್ರೀತಿಗೆ ನಾನು ನನ್ನ ಪತಿ ಜತೆ ಗಲಾಟೆ ಮಾಡಿಕೊಂಡೆ. ರೇಖಾ ಸಹವಾಸ ಬೇಡ. ಮಕ್ಕಳ ಜತೆ ಒಟ್ಟಿಗೆ ಎಲ್ಲಾ ಆಗಿದ್ದನ್ನ ಮರೆತು ಜೀವನ ನಡೆಸೋಣ ಎಂದು ಹೇಳಿದ್ದಳು. ಗಂಡನ ಮೇಲಿನ ಪ್ರೀತಿಗೆ ನಾನು ನನ್ನ ಗಂಡನಿಗೆ ಬುದ್ದಿವಾದ ಹೇಳಿದ್ದಾಳೆ. ಬಳಿಕ ಅವರು ಬದಲಾಗಿ ನನ್ನ ಜೊತೆ ಚೆನ್ನಾಗೆ ಇದ್ದರು. ಫೋನ್ ಸಂಭಾಷಣೆ ಬಳಿಕದ ದಿನದಲ್ಲಿ ಹೆಚ್ಚು ಪತಿ ಸಮಯ ನನ್ನೊಂದಿಗೆ ಕಳೆದಿದ್ದಾರೆ. ನಾನು ಪತಿ ಹಲವು ಕಡೆ ಸುತ್ತಾಡಿದ್ದೇವೆ. ಅದಕ್ಕೆ ಸಂಬಂಧಿಸಿದ ಫೋಟಗಳನ್ನು ಸಹ ಪತ್ನಿ ಸುಮಾ ಪೊಲೀಸರ ಮುಂದೆ ಇಟ್ಟಿದ್ದಳೆ. ಫೋನ್ ಮಾತು ಕತೆ ಬಳಿಕ ಪತಿ ನನ್ನೊಂದಿಗೆ ಚೆನ್ನಾಗೆ ಇದ್ದರು. ಆದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅಂತ ಅಂದುಕೊಂಡಿರಲಿಲ್ಲ. ರೇಖಾ ಹಣಕ್ಕಾಗಿ ನನ್ನ ಗಂಡನಿಗೆ ಬ್ಲಾಕ್ ಮೇಲ್ ಮಾಡಿದ್ದಾಳೆ. ಪತಿ ನೆನೆದು ಠಾಣೆಯಲ್ಲಿ ಸುಮಾ ಭಾವುಕರಾಗಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ ನೋಟ್ ಬರೆದಿದ್ದಾರೆ. ಅದು ನನ್ನ ಗಂಡ ಬರೆದಿರುವುದು ಎಂದು ಬ್ಯಾಡರಹಳ್ಳಿ ಪೊಲೀಸರ ಮುಂದೆ ಸುಮಾ ಹೇಳಿಕೆ ಕೂಡ ನೀಡಿದ್ದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.