ಸಿಎಎ ವಿರೋಧಿ ನಾಟಕ ಪ್ರದರ್ಶನ: ಬೀದರ್ ಶಾಲೆಯ ವಿರುದ್ಧದ ದೇಶದ್ರೋಹ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

|

Updated on: Jun 14, 2023 | 7:21 PM

ಸಿಎಎ, ಎನ್‌ಆರ್‌ಸಿ ಕಾಯ್ದೆ ವಿರೋಧಿಸಿ ನಾಟಕ‌ ಪ್ರದರ್ಶನ‌ ಆರೋಪಕ್ಕೆ ಸಂಬಂಧಿಸಿದಂತೆ ಬೀದರ್ ಶಾಹೀನ್ ಶಾಲೆಯ ಆಡಳಿತ ಮಂಡಳಿಯ ನಾಲ್ವರ ವಿರುದ್ಧದ ರಾಷ್ಟ್ರದ್ರೋಹ ಕೇಸ್​​ನ್ನು ಹೈಕೋರ್ಟ್ ರದ್ದುಪಡಿಸಿದೆ.

ಸಿಎಎ ವಿರೋಧಿ ನಾಟಕ ಪ್ರದರ್ಶನ: ಬೀದರ್ ಶಾಲೆಯ ವಿರುದ್ಧದ ದೇಶದ್ರೋಹ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್
ಹೈಕೋರ್ಟ್ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಸಿಎಎ(CAA), ಎನ್‌ಆರ್‌ಸಿ (NRC) ಕಾಯ್ದೆ ವಿರೋಧಿಸಿ ನಾಟಕ‌ ಪ್ರದರ್ಶನ‌ ಆರೋಪಕ್ಕೆ ಸಂಬಂಧಿಸಿದಂತೆ ಬೀದರ್ ಶಾಹೀನ್ ಶಾಲೆಯ ಆಡಳಿತ ಮಂಡಳಿಯ ನಾಲ್ವರ ವಿರುದ್ಧದ ರಾಷ್ಟ್ರದ್ರೋಹ ಕೇಸ್​​ನ್ನು ಹೈಕೋರ್ಟ್ ರದ್ದುಪಡಿಸಿದೆ. ಈ ಕುರಿತಾಗಿ ಹೈಕೋರ್ಟ್​​​ನ ಕಲಬುರಗಿ ಪೀಠದ ನ್ಯಾ.ಹೇಮಂತ್ ಚಂದನಗೌಡರ್​ ಆದೇಶ ಹೊರಡಿಸಿದ್ದಾರೆ. 2020ರಲ್ಲಿ ಸಿಎಎ, ಎನ್​​ಆರ್​​ಸಿ ಕಾಯ್ದೆ ವಿರೋಧಿಸಿ ಶಾಹೀನ್ ಶಾಲೆಯ 4, 5, 6ನೇ ತರಗತಿ ವಿದ್ಯಾರ್ಥಿಗಳಿಂದ ನಾಟಕ ಪ್ರದರ್ಶನ ಮಾಡಲಾಗಿತ್ತು. ಶಾಲೆಯ ಆಡಳಿತ ಮಂಡಳಿ ವಿರುದ್ಧ ಕೇಸ್ ದಾಖಲಾಗಿತ್ತು. ಪ್ರಕರಣ ರದ್ದು ಕೋರಿ ಅಲ್ಲಾವುದ್ದೀನ್​ ಮತ್ತು ಇತರರು ಅರ್ಜಿ ಸಲ್ಲಿಸಿದ್ದರು.

ಪ್ರಕರಣವೇನು?

ನೀಲೇಶ್‌ ಎಂಬ ವ್ಯಕ್ತಿ ಜ. 21 ರಂದು ಬೀದರ್‌ ನ್ಯೂಟೌನ್‌ ಪೊಲೀಸ್‌ ಠಾಣೆಗೆ ದೂರು ನೀಡಿ, ‘ಶಾಹಿನ್‌ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಹಾಗೂ ಆಡಳಿತ ಮಂಡಳಿಯವರು ಶಾಲಾ ಮಕ್ಕಳನ್ನು ಬಳಸಿಕೊಂಡು ದೇಶದ ಮೇಲೆ ದ್ವೇಷ ಭಾವನೆ ಬರುವಂತಹ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಚಪ್ಪಲಿಯಿಂದ ಹೊಡೆಯುವ ಮತ್ತು ಅವಾಚ್ಯ ಮಾತುಗಳನ್ನು ಮಕ್ಕಳಿಂದ ಆಡಿಸಿದ್ದಾರೆ.

ಇದನ್ನೂ ಓದಿ: ಆದಾಯ ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಸರ್ಕಾರ: ವಿದ್ಯುತ್‌, ಮದ್ಯ ಆಯ್ತು ಈಗ ಮತ್ತೊಂದು ದುಬಾರಿ?

ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಕೆಲಸ

ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್‌ ಕಾನೂನು ಜಾರಿಗೆ ತಂದರೆ, ಮುಸಲ್ಮಾನರು ದೇಶಬಿಟ್ಟು ಹೋಗಬೇಕಾಗುತ್ತದೆ ಎಂಬ ಸುಳ್ಳು ವಿಚಾರಗಳ ಬಗ್ಗೆ ಮಕ್ಕಳಿಂದ ನಾಟಕದ ರೂಪದಲ್ಲಿ ಶಾಲೆಯಲ್ಲಿ ಪ್ರದರ್ಶನ ಮಾಡಿದ್ದಾರೆ’ ಎಂದು ಆರೋಪಿಸಿದ್ದರು.

ಅಲ್ಲದೆ, ಈ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು, ‘ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ’ ಎಂದು ದೂರಿದ್ದರು.

ಇದನ್ನೂ ಓದಿ: ಚಿಂತಿಸಬೇಡಿ ಬಿಜೆಪಿ ಮಾಡಿದ ಲೂಟಿಗಳನ್ನು ವಾಪಸ್ ಕಕ್ಕಿಸುತ್ತೇವೆ: ಪ್ರತಾಪ್ ಸಿಂಹಗೆ ಭರವಸೆ ನೀಡಿದ ಕಾಂಗ್ರೆಸ್​

ಎಫ್‌ಐಆರ್‌ ದಾಖಲು

ದೂರು ಆಧರಿಸಿ ಐಪಿಸಿ 504, 505(2), 124(ಎ) ಹಾಗೂ 153(ಎ) ಸೆಕ್ಷನ್‌ಗಳ ಅಡಿಯಲ್ಲಿ ದೇಶದ್ರೋಹ, ಜನಾಂಗೀಯ ದ್ವೇಷ, ಶಾಂತಿ ಭಂಗ, ಕಿಡಿಗೇಡಿತನ ಹಾಗೂ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪಗಳ ಅಡಿಯಲ್ಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:19 pm, Wed, 14 June 23