ಬೆಂಗಳೂರಿನಲ್ಲಿದೆ ‘ಬ್ರಾಹ್ಮಣ ಪ್ರಸಾದಮ್’ ಹೋಟೆಲ್; ಪುಳಿಯೋಗರೆ, ಬಿಸಿ ಬೇಳೆ ಬಾತ್ ಸಖತ್ ಟೇಸ್ಟಿ, ವಿಶೇಷತೆ ಏನು ಗೊತ್ತಾ?
ಬೆಂಗಳೂರಿನ ಬನಶಂಕರಿಯಲ್ಲಿರುವ ಬ್ರಾಹ್ಮಣ ಶೈಲಿಯ ಖಾದ್ಯಗಳನ್ನು ನೀಡುವ 'ಬ್ರಾಹ್ಮಣ ಪ್ರಸಾದ' ಹೋಟೆಲ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇಲ್ಲಿನ ಭಕ್ಷ್ಯಗಳು ವಿವಿಧ ದೇವಾಲಯಗಳಲ್ಲಿ ಭಕ್ತಾದಿಗಳಿಗೆ ನೀಡುವ ಆಹಾರವನ್ನು ಹೋಲುತ್ತದೆ.
Updated on:Jun 14, 2023 | 6:03 PM

ಬ್ರಾಹ್ಮಣ ಶೈಲಿಯ ಖಾದ್ಯಗಳನ್ನು ನೀಡುವ 'ಬ್ರಾಹ್ಮಣ ಪ್ರಸಾದಮ್' ಹೋಟೆಲ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ದೇವಾಲಯದ ಶೈಲಿಯಲ್ಲಿ ಇರುವ ಈ ಹೊಟೇಲ್ ಇರುವುದು ಬೆಂಗಳೂರು ನಗರದ ಬನಶಂಕರಿಯಲ್ಲಿ. ಇಲ್ಲಿ ಲಭ್ಯವಾಗುವ ಭಕ್ಷ್ಯಗಳು ವಿವಿಧ ದೇವಾಲಯಗಳಲ್ಲಿ ಭಕ್ತಾದಿಗಳಿಗೆ ನೀಡುವ ಆಹಾರವನ್ನು ಹೋಲುತ್ತದೆ. ಪುಳಿಯೋಗರೆ, ಬಿಸಿಬೇಳೆಬಾತ್ ಗ್ರಾಹಕರಿಗೆ ಅಚ್ಚುಮೆಚ್ಚು.

ಹೋಟೆಲ್‌ಗೆ ಭೇಟಿ ನೀಡುವ ಗ್ರಾಹಕರಿಗೆ ಬಾಳೆ ಎಲೆ ಮತ್ತು ಎಲೆಗಳನ್ನು ಬಳಸಿ ಮಾಡಿದ ತಟ್ಟೆ, ಹಾಳೆಯಲ್ಲಿ ಮಾಡಿದ ತಟ್ಟೆಯಲ್ಲಿ ಆಹಾರವನ್ನು ನೀಡಲಾಗುತ್ತದೆ. ಪುಳಿಯೋಗರೆ, ಬಿಸಿಬೇಳೆಬಾತ್, ಪೊಂಗಲ್, ಮೈಸೂರು ಪಾಕ್, ಹೋಳಿಗೆ ಇತರ ಭಕ್ಷ್ಯಗಳು ಬೆಳಗಿನ ಉಪಾಹಾರ ಮತ್ತು ಊಟದ ಸಮಯದಲ್ಲಿ ಲಭ್ಯವಿದೆ. (Photo: ಟ್ವಿಟರ್/ಸನತ್ ಕುಮಾರ್)

ಹೋಟೆಲ್ ಕೂಡ ದೇವಸ್ಥಾನವನ್ನು ಹೋಲುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು ಗ್ರಾಹಕರು ಕುರ್ಚಿಗಳ ಮೇಲೆ ಕುಳಿತುಕೊಂಡು ಅಥವಾ ನೆಲದ ಮೇಲೆ ಕುಳಿತುಕೊಂಡು ಆಹಾರವನ್ನು ಸವಿಯಬಹುದು. ಆಯ್ಕೆ ಗ್ರಾಹಕರದ್ದು. (Photo: ಟ್ವಿಟರ್/ಸನತ್ ಕುಮಾರ್)

ಹೋಟೆಲ್‌ನಲ್ಲಿ ಭಕ್ತಿ ಸಂಗೀತವನ್ನು ಹಾಕಲಾಗುತ್ತದೆ. ಇದು ಹೋಟೆಲ್ನ ಇನ್ನೊಂದು ವಿಶೇಷತೆಯಾಗಿದೆ. (Photo: ಟ್ವಿಟರ್/ಸನತ್ ಕುಮಾರ್)

ದೇವಸ್ಥಾನದ ಪ್ರಸಾದವನ್ನು ಇಷ್ಟಪಡುವ ಜನರು ಖಂಡಿತವಾಗಿಯೂ ಈ ಸ್ಥಳವನ್ನು ಇಷ್ಟಪಡುತ್ತಾರೆ. ಪುಳಿಯೋಗರೆ ಮತ್ತು ಬಿಸಿ ಬೇಳೆಬಾತ್ ಇಲ್ಲಿ ಒಮ್ಮೆ ಸವಿಯಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. (Photo: ಟ್ವಿಟರ್/ಸನತ್ ಕುಮಾರ್)
Published On - 5:23 pm, Wed, 14 June 23



















