ಬಿಬಿಎಂಪಿ ವ್ಯಾಪ್ತಿಯ ಐದು ಲೋಕಸಭಾ ಕ್ಷೇತ್ರಗಳಿಗೆ ನೋಡಲ್ ಅಧಿಕಾರಿಗಳ ನೇಮಕ

| Updated By: Rakesh Nayak Manchi

Updated on: Mar 07, 2024 | 6:43 AM

ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಹಿನ್ನಲೆ ಬಿಬಿಎಂಪಿ ವ್ಯಾಪ್ತಿಯ ಐದು ಲೋಕಸಭಾ ಕ್ಷೇತ್ರಗಳಿಗೆ ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ. ಪೊಲೀಸ್ ಇಲಾಖೆ, ಬಿಬಿಎಂಪಿ, ಆದಾಯ ತೆರಿಗೆ, ವಾಣಿಜ್ಯ ತೆರಿಗೆ, ಅರಣ್ಯ ಇಲಾಖೆ, ಅಬಕಾರಿ ಇಲಾಖೆ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಕ ಮಾಡಲಾಗಿದೆ.

ಬಿಬಿಎಂಪಿ ವ್ಯಾಪ್ತಿಯ ಐದು ಲೋಕಸಭಾ ಕ್ಷೇತ್ರಗಳಿಗೆ ನೋಡಲ್ ಅಧಿಕಾರಿಗಳ ನೇಮಕ
ಬಿಬಿಎಂಪಿ ವ್ಯಾಪ್ತಿಯ ಐದು ಲೋಕಸಭಾ ಕ್ಷೇತ್ರಗಳಿಗೆ ನೋಡಲ್ ಅಧಿಕಾರಿಗಳ ನೇಮಕ ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಆದೇಶ
Follow us on

ಬೆಂಗಳೂರು, ಮಾ.7: ಸಾರ್ವತ್ರಿಕ ಲೋಕಸಭಾ ಚುನಾವಣೆಗೆ (Lok Sabha Elections) ಕೆಲವೇ ದಿನಗಳು ಬಾಕಿ ಹಿನ್ನಲೆ ಬಿಬಿಎಂಪಿ (BBMP) ವ್ಯಾಪ್ತಿಯ ಐದು ಲೋಕಸಭಾ ಕ್ಷೇತ್ರಗಳಿಗೆ ನೋಡಲ್ ಅಧಿಕಾರಿಗಳ (Nodal Officers) ನೇಮಕ ಮಾಡಲಾಗಿದೆ. ಪೊಲೀಸ್ ಇಲಾಖೆ, ಬಿಬಿಎಂಪಿ, ಆದಾಯ ತೆರಿಗೆ, ವಾಣಿಜ್ಯ ತೆರಿಗೆ, ಅರಣ್ಯ ಇಲಾಖೆ, ಅಬಕಾರಿ ಇಲಾಖೆ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಕ ಮಾಡಿ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಆದೇಶ ಹೊರಡಿಸಿದ್ದಾರೆ.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ

ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸರ್ವಜ್ಞ ನಗರ ವ್ಯಾಪ್ತಿಗೆ ಬಾಣಸವಾಡಿ ಎಸಿಪಿ ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದ್ದು, ಸಿವಿ ರಾಮನ್ ನಗರಕ್ಕೆ ಹಲಸೂರು ಎಸಿಪಿ, ಶಿವಾಜಿನಗರ ಪುಲಕೇಶಿನಗರ ಎಸಿಪಿ, ಶಾಂತಿನಗರ ಕಬ್ಬನ್ ಪಾರ್ಕ್ ಎಸಿಪಿ, ಗಾಂಧಿನಗರ ಚಿಕ್ಕಪೇಟೆ ಎಸಿಪಿ, ರಾಜಾಜಿನಗರ ಕೆಂಗೇರಿ ಗೇಟ್ ಎಸಿಪಿ, ಚಾಮರಾಜಪೇಟೆ ಪಶ್ಚಿಮ ಸಂಚಾರ ಎಸಿಪಿ, ಮಹದೇವಪುರ ಮಾರತ್ತಹಳ್ಳಿ ಎಸಿಪಿ ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ

ಎಂಟು ವಿಧಾನಸಭಾ ಕ್ಷೇತ್ರಗಳನ್ನ ಒಳಗೊಂಡಿರುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕೆ.ಆರ್ ಪುರ ವೈಟ್ ಫೀಲ್ಡ್ ಎಸಿಪಿ ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದ್ದು, ಬ್ಯಾಟರಾಯನಪುರ ಸಂಪಿಗೆಹಳ್ಳಿ ಎಸಿಪಿ, ಯಶವಂತಪುರ, ಯಶವಂತಪುರ ಎಸಿಪಿ, ದಾಸರಹಳ್ಳಿ ಪೀಣ್ಯ ಎಸಿಪಿ, ಮಹಾಲಕ್ಷ್ಮಿ ಲೇಔಟ್ ಮಲ್ಲೇಶ್ವರಂ ಎಸಿಪಿ, ಮಲ್ಲೇಶ್ವರಂ ಶೇಷಾದ್ರಿಪುರಂ ಎಸಿಪಿ, ಹೆಬ್ಬಾಳ ಜೆಸಿನಗರ ಎಸಿಪಿ, ಪುಲಕೇಶಿನಗರ ಕೆಜಿಹಳ್ಳಿ ಎಸಿಪಿ‌ ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.

ಇದನ್ನೂ ಓದಿ: Mera Pehla Vote Desh Ke Liye: ನನ್ನ ಮೊದಲ ಮತ ದೇಶಕ್ಕಾಗಿ: ಲೋಕಸಭಾ ಚುನಾವಣೆ ಹಿನ್ನೆಲೆ ಅಭಿಯಾನ ಆರಂಭಿಸಿದ ಚುನಾವಣಾ ಆಯೋಗ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ

08 ವಿಧಾನಸಭಾ ಕ್ಷೇತ್ರಗಳನ್ನ ಒಳಗೊಂಡಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಗೋವಿಂದರಾಜನಗರ ವಿಜಯನಗರ ಎಸಿಪಿ ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದ್ದು, ವಿಜಯನಗರ ಸಂಚಾರ ಎಸಿಪಿ, ಚಿಕ್ಕಪೇಟೆ ಹಲಸೂರು ಗೇಟ್ ಎಸಿಪಿ, ಬಸವನಗುಡಿ ವಿವಿಪುರಂ ಎಸಿಪಿ, ಪದ್ಮನಾಭನಗರ ಜಯನಗರ ಎಸಿಪಿ, ಬಿಟಿಎಂ ಲೇಔಟ್ ಮಡಿವಾಳ ಎಸಿಪಿ, ಜಯನಗರ ಮೈಕೋಲೇಔಟ್ ಎಸಿಪಿ, ಬೊಮ್ಮನಹಳ್ಳಿ ಎಲೆಕ್ಟ್ರಾನಿಕ್ ಸಿಟಿ ಎಸಿಪಿ ಅವರನ್ನು ನೇಮಿಸಲಾಗಿದೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ

ಬಿಬಿಎಂಪಿ ವ್ಯಾಪ್ತಿಯಲ್ಲಿ ಎರಡು ವಿಧಾನಸಭಾ ಕ್ಷೇತ್ರ ಹೊಂದಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಯಲಹಂಕ ವ್ಯಾಪ್ತಿಗೆ ಯಲಹಂಕ ಎಸಿಪಿ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದ್ದು, ದೇವನಹಳ್ಳಿಗೆ ದೇವನಹಳ್ಳಿ ಎಸಿಪಿ ಅವರನ್ನು ನೇಮಕ ಮಾಡಲಾಗಿದೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ

ಬಿಬಿಎಂಪಿ ವ್ಯಾಪ್ತಿಯ ಮೂರು ವಿಧಾನಸಭಾ ಕ್ಷೇತ್ರ ಒಳಗೊಂಡಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಆರ್.ಆರ್.ನಗರ ಎಸಿಪಿ ಕೆಂಗೇರಿ ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಅದೇ ರೀತಿ, ಬೆಂಗಳೂರು ದಕ್ಷಿಣಕ್ಕೆ ಸುಬ್ರಹ್ಮಣ್ಯಪುರ ಎಸಿಪಿ, ಆನೇಕಲ್​ಗೆ ಆನೇಕಲ್ ಡಿವೈಎಸ್ಪಿ ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ