ಭದ್ರತಾ ಲೋಪ: ಶಾಸಕರು, ಸಚಿವರಿಂದ ಪೋನ್​ ಮಾಡಿಸಿ ವಿಧಾನಸೌಧದ ಒಳಗೆ ಹೋಗುತ್ತಾರೆ; ಭದ್ರತಾ ಸಿಬ್ಬಂದಿ ಅಸಮಾಧಾನ

Vidhana Soudha Security Breach: ವಿಧಾನಸೌಧ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆ ದಿನ ಭದ್ರತಾಲೋಪ ಕೂಡ ಉಂಟಾಗಿತ್ತು ಎಂಬುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್​ ಅಧಿಕಾರಿಗಳು ಭದ್ರತಾ ಸಿಬ್ಬಂದಿಯ ತನಿಖೆ ನಡೆಸಿದ್ದಾರೆ.

ಭದ್ರತಾ ಲೋಪ: ಶಾಸಕರು, ಸಚಿವರಿಂದ ಪೋನ್​ ಮಾಡಿಸಿ ವಿಧಾನಸೌಧದ ಒಳಗೆ ಹೋಗುತ್ತಾರೆ; ಭದ್ರತಾ ಸಿಬ್ಬಂದಿ ಅಸಮಾಧಾನ
ಸಾಂದರ್ಭಿಕ ಚಿತ್ರ
Follow us
| Updated By: ವಿವೇಕ ಬಿರಾದಾರ

Updated on:Mar 07, 2024 | 10:09 AM

ಬೆಂಗಳೂರು, ಮಾರ್ಚ್​ 07: ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ (Vidhan Soudha Pro Pakistan Slogan)​ ಅಂತ ಘೋಷಣೆ ಕೂಗಿರುವುದು ರಾಷ್ಟ್ರಾದ್ಯಂತ ಸುದ್ದಿಯಾಗಿದೆ. ರಾಜ್ಯಸಭೆ ಚುನಾವಣೆಯಲ್ಲಿ (Rajya Sabha Election) ಕಾಂಗ್ರೆಸ್​ (Congress) ಅಭ್ಯರ್ಥಿ ಸಯ್ಯದ್ ನಾಸೀರ್ ಹುಸೇನ್​ (Syed Nasir Hussain) ಗೆಲುವಿನ ಸಂಭ್ರಮಾಚರಣೆಗೆ ಕಾರ್ಯಕರ್ತರು ಮತ್ತು ಬೆಂಬಲಿಗರು ವಿಧಾನಸೌಧದಲ್ಲಿ ಜಮಾಯಿಸಿದ್ದರು. ಸಂಭ್ರಮಾಚರಣೆ ವೇಳೆ ನಾಸೀರ್​ ಸಾಬ್​ ಜಿಂದಾಬಾದ್​ ಜೊತೆಗೆ ಪಾಕಿಸ್ತಾನ್​ ಜಿಂಬಾದ್​​ ಎಂದು ಘೋಷಣೆ ಕೂಗಲಾಗಿತ್ತು. ಪಾಕ್​ ಪರ ಘೋಷಣೆ ಕೂಗಿದ ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಕರಣ ತನಿಖೆಯಲ್ಲಿ. ಇನ್ನು ಪಾಕ್​ ಪರ ಘೋಷಣೆ ಕೂಗಿದ ದಿನ ವಿಧಾನಸೌಧದಲ್ಲಿ ಭದ್ರತಾ ಲೋಪ ಆಗಿದ್ದು, ಪಾಸ್​ ಇಲ್ಲದವರೂ ಪ್ರವೇಶ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳು ಅಂದು ಭದ್ರತೆಗೆ ಇದ್ದವರನ್ನು ವಿಚಾರಣೆ ನಡೆಸಿದ್ದು, ಭದ್ರತಾ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದ್ದಾರೆ.

ಕಾರ್ಯಕರ್ತರು ಶಾಸಕರು ಹಾಗೂ ಸಚಿವರ ಹೆಸರು ಹೇಳಿಕೊಂಡು ಅಂದು ವಿಧಾನಸೌಧಕ್ಕೆ ಬಂದಿದ್ದರು. ಪ್ರಶ್ನಿಸಿದರೇ ಶಾಸಕರಿಂದಲೇ ಫೋನ್ ಮಾಡಿಸಿ ಒಳಗೆ ಹೋಗುತ್ತಾರೆ. ಫಲಿತಾಂಶದ ದಿನ ಬಹುತೇಕರು ಶಾಸಕರ ಹಾಗೂ ಅಭ್ಯರ್ಥಿಗಳ ಕಾರುಗಳಲ್ಲಿ ಬಂದರು. ಒಬ್ಬಂಟಿಯಾಗಿ ಬರುವವರ ಬಳಿ ಪಾಸ್ ಇಲ್ಲದಿದ್ದರೆ ತಡೆಯುತ್ತೇವೆ. ಆದರೆ ಅವರು ಶಾಸಕರು ಹಾಗೂ ಸಚಿವರ ಹೆಸರು ಹೇಳಿಕೊಂಡು ಒಳಗೆ ಹೋಗಲು ಮುಂದಾಗುತ್ತಾರೆ. ಆದರೂ ಬಿಡದೆ ಹೋದರೆ ಅವರಿಂದಲೇ ಕರೆ ಮಾಡಿಸಿಕೊಂಡು ಒಳ ಹೋಗುತ್ತಾರೆ. ಇಂತಹ ಸಂದರ್ಭಗಳಲ್ಲಿ ನಾವು ಅಸಹಾಯಕರಾಗುತ್ತೇವೆ ಎಂದು ಭದ್ರತಾ ಸಿಬ್ಬಂದಿಗಳು ಹಿರಿಯ ಪೊಲೀಸ್ ಅಧಿಕಾರಿಗಳ ಬಳಿ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪಾಕ್ ಪರ ಘೋಷಣೆ ಮಾತ್ರವಲ್ಲ, ವಿಧಾನಸೌಧದಲ್ಲಿ ಆಗಿತ್ತು ಭದ್ರತಾ ಲೋಪ: ತನಿಖೆ ವೇಳೆ ಬಯಲಿಗೆ

ಚುನಾವಣೆ ದಿನ ವಿಧಾನಸೌಧಕ್ಕೆ ಪಾಸ್ ಇದ್ದವರು, ಸರ್ಕಾರಿ ನೌಕರರು ಮತ್ತು ಪತ್ರಕರ್ತರು ಮಾತ್ರ ಪ್ರವೇಶಿಸಲು ಅರ್ಹರಾಗಿದ್ದರು. ಆದರೆ, ಈ ಮೂರು ಮಾದರಿಯನ್ನು ಹೊರತುಪಡಿಸಿ ಪಾಕ್ ಪರ ಘೋಷಣೆ ಆರೋಪದಲ್ಲಿ ಬಂಧನಕ್ಕೊಳಗಾದವರು ಮತ್ತು ಇತರ ಹಲವಾರು ಜನರು ವಿಧಾನಸೌಧಕ್ಕೆ ಪ್ರವೇಶ ಪಡೆದಿದ್ದರು. ಕೆಲವರು ಪಾಸ್ ಇಲ್ಲದೇ ವಿಧಾನಸೌಧ ಪ್ರವೇಶಿಸಿರುವುದು ವಿಚಾರಣೆ ವೇಳೆ ಗೊತ್ತಾಗಿದೆ. ಇವರೆಲ್ಲ ವಿಧಾನಸೌಧಕ್ಕೆ ಹೇಗೆ ಬಂದಿದ್ದರು, ಯಾರು ಮೂಲಕ ಬಂದಿದ್ದರು ಎಂಬುದು ಪರಿಶೀಲನೆ ನಡೆಯುತ್ತಿದೆ. ಯಾವುದೇ ಆಧಾರ ಇಲ್ಲದೆ ಬಂದ ವ್ಯಕ್ತಿಗಳು ಏನು ಬೇಕಾದರೂ ಮಾಡಬಹುದಿತ್ತು. ಬಹುತೇಕರನ್ನು ಕರೆತಂದಿರುವುದು ರಾಜ್ಯಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದವರೇ ಎಂಬುದು ಬೆಳಕಿಗೆ ಬಂದಿದೆ.

ಮೂವರು ಆರೋಪಿಗಳ ತೀವ್ರ ವಿಚಾರಣೆ

ವಿಧಾನಸೌಧ ಇನ್ಸ್​​​ಪೆಕ್ಟರ್ ಕುಮಾರಸ್ವಾಮಿ, ಕಬ್ಬನ್ ಪಾರ್ಕ್ ಎಸಿಪಿ ಬಾಲಕೃಷ್ಣರಿಂದ ಮೂವರು ಆರೋಪಿಗಳಾದ ಮಹಮ್ಮದ್ ಶಫಿ ನಾಶಿಪುಡಿ, ಮುನ್ನಾವರ್ ಅಹಮದ್, ಹಾಗೂ ಮಹಮ್ಮದ್ ಇಲ್ತಾಜ್ ಅನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಬಂಧಿತ ಮೂವರ ಪೈಕಿ ಬ್ಯಾಡಗಿಯ ಶಫಿ ನಾಶಿಪುಡಿ ಹಾಗೂ ಆರ್.ಟಿ.ನಗರದ ಮುನಾವರ್ ಅಹಮದ್ ಕೆಲ ವರ್ಷಗಳ ಸ್ನೇಹಿತರು. ದೆಹಲಿ ಮೂಲದ ಮಹಮ್ಮದ್ ಇಲ್ತಾಜ್​​ಗೂ ಉಳಿದ ಇಬ್ಬರು ಆರೋಪಿಗಳಿಗೂ ಯಾವುದೇ ಪರಿಚಯವಿಲ್ಲ ಎನ್ನಲಾಗಿದೆ.

ಘೋಷಣೆ ಕೂಗಿಲ್ಲ ಅನ್ನುತ್ತಿರುವ ನಾಶಿಪುಡಿ

ಫುಲ್ ಜೋಶ್​​ನಲ್ಲಿ ಜಿಂದಾಬಾದ್ ಅಂದಿದ್ದು ನಿಜ. ಜಿಂದಾಬಾದ್ ಜಿಂದಾಬಾದ್ ಅಂತ ಜೈಕಾರ ಹಾಕಿದ್ವಿ. ಪಾಕಿಸ್ತಾನ​ ಪರ ಘೋಷಣೆ ಕೂಗಿಲ್ಲ. ಯಾಕಾದರೂ ಸನ್ಮಾನಿಸಲು ಬಂದ್ವೋ? ಸನ್ಮಾನ ಮಾಡಲು ಬಂದು ಜೈಲು ಸೇರುವ ಸ್ಥಿತಿ ಬಂತು ಎಂದು ಆರೋಪಿ ನಾಶಿಪುಡಿ ಅಧಿಕಾರಿಗಳ ಬಳಿ ಹೇಳಿಕೊಂಡಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:06 am, Thu, 7 March 24

ತಾಜಾ ಸುದ್ದಿ
ಬಿಜೆಪಿ ಕೋಮುವಾದಿ ಅಲ್ಲವೆಂದು ದೇವೇಗೌಡರಿಗೆ ತಡವಾಗಿ ಗೊತ್ತಾಯಿತು: ಆರ್ ಅಶೋಕ
ಬಿಜೆಪಿ ಕೋಮುವಾದಿ ಅಲ್ಲವೆಂದು ದೇವೇಗೌಡರಿಗೆ ತಡವಾಗಿ ಗೊತ್ತಾಯಿತು: ಆರ್ ಅಶೋಕ
ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿ; ಮರಿ ಆನೆ ತುಂಟಾಟ ನೋಡಿ
ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿ; ಮರಿ ಆನೆ ತುಂಟಾಟ ನೋಡಿ
ಅಬ್ಬಬ್ಬಾ.. 25 ದಿನಕ್ಕೆ ದರ್ಶನ್ ಕಳೆದುಕೊಂಡ ತೂಕ ಇಷ್ಟೊಂದಾ?
ಅಬ್ಬಬ್ಬಾ.. 25 ದಿನಕ್ಕೆ ದರ್ಶನ್ ಕಳೆದುಕೊಂಡ ತೂಕ ಇಷ್ಟೊಂದಾ?
ಮನೆಯಲ್ಲಿ ಹನುಮನ ಫೋಟೋ ಇರಲೇಬೇಕು ಯಾಕೆ ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ಹನುಮನ ಫೋಟೋ ಇರಲೇಬೇಕು ಯಾಕೆ ಗೊತ್ತಾ? ವಿಡಿಯೋ ನೋಡಿ
ಈ ರಾಶಿಯ ರಾಜಕಾರಣಿಗಳು ಬಹಳ ಜಾಗರೂಕತೆಯಿಂದ ಜವಾಬ್ದಾರಿಯನ್ನು ನಿರ್ವಹಿಸಿ
ಈ ರಾಶಿಯ ರಾಜಕಾರಣಿಗಳು ಬಹಳ ಜಾಗರೂಕತೆಯಿಂದ ಜವಾಬ್ದಾರಿಯನ್ನು ನಿರ್ವಹಿಸಿ
‘ಪ್ರಕೃತಿ ವಿಕೋಪದಲ್ಲಿ ನೂರಾರು ಜನ ಸಾಯ್ತಾರೆ, ಯಾರಿಗೆ ಶಿಕ್ಷೆ ಸಿಗುತ್ತೆ?’
‘ಪ್ರಕೃತಿ ವಿಕೋಪದಲ್ಲಿ ನೂರಾರು ಜನ ಸಾಯ್ತಾರೆ, ಯಾರಿಗೆ ಶಿಕ್ಷೆ ಸಿಗುತ್ತೆ?’
ಡ್ರೋನ್​ ಕಣ್ಣಲ್ಲಿ ವಿಶ್ವದ ಅತಿ ದೊಡ್ಡ ಪುರಿ ಜಗನ್ನಾಥ ರಥಯಾತ್ರೆ: ವಿಡಿಯೋ
ಡ್ರೋನ್​ ಕಣ್ಣಲ್ಲಿ ವಿಶ್ವದ ಅತಿ ದೊಡ್ಡ ಪುರಿ ಜಗನ್ನಾಥ ರಥಯಾತ್ರೆ: ವಿಡಿಯೋ
ಮುಂಗಾರು ಮಳೆಗೆ ಚಾರ್ಮಾಡಿ ಘಾಟ್​ನಲ್ಲಿ ಜಲವೈಭವ; ನೂರಾರು ಜಲಪಾತಗಳ ಸೃಷ್ಟಿ
ಮುಂಗಾರು ಮಳೆಗೆ ಚಾರ್ಮಾಡಿ ಘಾಟ್​ನಲ್ಲಿ ಜಲವೈಭವ; ನೂರಾರು ಜಲಪಾತಗಳ ಸೃಷ್ಟಿ
ಸತತ ಮಳೆ; ಜಿಗಣೆ ಕಾಟಕ್ಕೆ ಹೈರಾಣಾದ ಪ್ರವಾಹ ತಂಡದ ಅಧಿಕಾರಿಗಳು
ಸತತ ಮಳೆ; ಜಿಗಣೆ ಕಾಟಕ್ಕೆ ಹೈರಾಣಾದ ಪ್ರವಾಹ ತಂಡದ ಅಧಿಕಾರಿಗಳು
ಸುಧಾಕರ್ ಅಭಿನಂದನಾ ಕಾರ್ಯಕ್ರಮದಲ್ಲಿ ಬಾಡೂಟ: ಡ್ರಿಂಕ್ಸ್​​ಗೆ ಮುಗಿಬಿದ್ದ ಜನ
ಸುಧಾಕರ್ ಅಭಿನಂದನಾ ಕಾರ್ಯಕ್ರಮದಲ್ಲಿ ಬಾಡೂಟ: ಡ್ರಿಂಕ್ಸ್​​ಗೆ ಮುಗಿಬಿದ್ದ ಜನ