ಉರ್ದು ಮಾತಾಡದ್ದಕ್ಕೆ ಕೊಲೆ ಎಂಬ ಹೇಳಿಕೆ ತಪ್ಪಾಗಿದೆ; ಇದೀಗ ಪೊಲೀಸರು ವಿಸ್ತೃತ ವರದಿ ನೀಡಿದ್ದಾರೆ ಎಂದ ಆರಗ ಜ್ಞಾನೇಂದ್ರ

| Updated By: ganapathi bhat

Updated on: Apr 06, 2022 | 3:34 PM

ಮೂಲಗಳ ಮಾಹಿತಿ ಆಧಾರವಾಗಿ ನಾನು ಹೇಳಿಕೆ ನೀಡಿದ್ದೆ. ನಾನು ಈ ಹಿಂದೆ ಹೇಳಿದಂತೆ ಯಾವುದೇ ಘಟನೆ ನಡೆದಿಲ್ಲ. ಉರ್ದು ಮಾತನಾಡದಿದ್ದಕ್ಕೆ ಹತ್ಯೆ ಮಾಡಿದ್ದಾರೆ ಎಂದು ಹೇಳಿದ್ದೆ. ನನ್ನ ಹೇಳಿಕೆ ತಪ್ಪಾಗಿದೆ ಎಂದು ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಉರ್ದು ಮಾತಾಡದ್ದಕ್ಕೆ ಕೊಲೆ ಎಂಬ ಹೇಳಿಕೆ ತಪ್ಪಾಗಿದೆ; ಇದೀಗ ಪೊಲೀಸರು ವಿಸ್ತೃತ ವರದಿ ನೀಡಿದ್ದಾರೆ ಎಂದ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ
Follow us on

ಬೆಂಗಳೂರು: ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತಕ್ಷಣದ ಮಾಹಿತಿ ಆಧರಿಸಿ ನಾನು ಹೇಳಿಕೆ ನೀಡಿದ್ದೆ. ನಾನು ನೀಡಿರುವ ಹೇಳಿಕೆ ತಪ್ಪಾಗಿದೆ. ಇದೀಗ ಪೊಲೀಸರು ವಿಸ್ತೃತವಾದ ಮಾಹಿತಿ ನೀಡಿದ್ದಾರೆ. ಬೈಕ್ ಡಿಕ್ಕಿಯಾಗಿ ಗಲಾಟೆಯಾಗಿ ಚಂದ್ರುಗೆ ಚೂರಿ ಇರಿತ ಆಗಿದೆ. ಆಸ್ಪತ್ರೆಗೆ ಹೋಗುವಷ್ಟರಲ್ಲಿ ರಕ್ತಸ್ರಾವವಾಗಿ ಚಂದ್ರು ಸಾವನ್ನಪ್ಪಿದ್ದಾರೆ. ಈ ಹಿಂದೆ ನಾನು ನೀಡಿದ್ದ ಹೇಳಿಕೆ ತಪ್ಪಾಗಿದೆ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ಮೂಲಗಳ ಮಾಹಿತಿ ಆಧಾರವಾಗಿ ನಾನು ಹೇಳಿಕೆ ನೀಡಿದ್ದೆ. ನಾನು ಈ ಹಿಂದೆ ಹೇಳಿದಂತೆ ಯಾವುದೇ ಘಟನೆ ನಡೆದಿಲ್ಲ. ಉರ್ದು ಮಾತನಾಡದಿದ್ದಕ್ಕೆ ಹತ್ಯೆ ಮಾಡಿದ್ದಾರೆ ಎಂದು ಹೇಳಿದ್ದೆ. ನನ್ನ ಹೇಳಿಕೆ ತಪ್ಪಾಗಿದೆ ಎಂದು ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಚಂದ್ರು ಹತ್ಯೆ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟನೆ ನೀಡಿದ್ದಾರೆ. ಪ್ರಾಥಮಿಕ ಹಂತದ ತನಿಖೆಯಲ್ಲಿ ಆ ರೀತಿ ಇತ್ತು. ಅದಕ್ಕಾಗಿ ನಾನು ಆಗಲೇ ಆ ರೀತಿ ಹೇಳಿದ್ದೆ. ಈಗ ತನಿಖೆಯ ಸಂಪೂರ್ಣ ವರದಿ ಬಂದಿದೆ. ಆ ವರದಿಯಲ್ಲಿ ಅಪಘಾತದಲ್ಲಿ ವಿಷಯವಾಗಿ ಕೊಲೆಯಾಗಿದೆ ಎಂಬುದು ಗೊತ್ತಾಗಿದೆ. ಹೀಗಾಗಿ ಇದನ್ನು ಬಿಟ್ಟು ಬೇರೆ ಯಾವ ವಿಷಯಕ್ಕೂ ಆತನ ಕೊಲೆ‌ಯಾಗಿಲ್ಲ. ಗೃಹ ಸಚಿವನಾಗಿ ನಾನು ಸರಿಯಾಗಿ ಹೇಳಬೇಕಾಗುತ್ತದೆ. ಈಗ ಲೇಟೆಸ್ಟ್ ರಿಪೋರ್ಟ್ ಬಂದಿರುವ ಕಾರಣ, ಅದರಲ್ಲಿ ಅಪಘಾತಕ್ಕೆ ಕೊಲೆಯಾಗಿದೆ ಎಂಬುದು ಗೊತ್ತಾಗಿದೆ ಎಂದು ತಿಳಿಸಿದ್ದಾರೆ.

ಜೆಜೆ ನಗರ ಚಂದ್ರು ಕೊಲೆ ಪ್ರಕರಣದಲ್ಲಿ ಕನ್ನಡ ಮಾತಾಡಿದ ಕಾರಣಕ್ಕೆ ಕೊಲೆ ಎಂಬ ಗೃಹಸಚಿವರ ಹೇಳಿಕೆ ವಿಚಾರವಾಗಿ ಹಿರಿಯ ಪೊಲೀಸ್ ಅಧಿಕಾರಿಗಳಲ್ಲಿ ಆಂತರಿಕ ಅಸಮಾಧಾನ ಉಂಟಾಗಿದೆ ಎಂದು ತಿಳಿದುಬಂದಿದೆ. ಹೇಳಿಕೆಯಿಂದಾಗುವ ಪರಿಣಾಮಗಳ ಬಗ್ಗೆ ಅಧಿಕಾರಿಗಳು ಗೃಹ ಸಚಿವರ ಗಮನಕ್ಕೆ ತಂದಿದ್ದಾರೆ. ನಂತರ ಎಚ್ಚೆತ್ತುಕೊಂಡು ಗೃಹ ಸಚಿವ ಡ್ಯಾಮೇಜ್ ಕಂಟ್ರೋಲ್ ಮಾಡಿದ್ದಾರೆ.

ಗೃಹ ಸಚಿವರಿಗೆ ಬೆಳಿಗ್ಗೆ ಪೊಲೀಸರು ಚಂದ್ರು ಕೊಲೆ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ. ಆರೋಪಿಗಳ ಬಂಧನ ಬಗ್ಗೆಯು ಮಾಹಿತಿ ನೀಡಿದ್ದಾರೆ. ಆದರೆ, ಗೃಹ ಸಚಿವರಿಗೆ ಅಧಿಕಾರಿಗಳು ಈ ರೀತಿಯ ಮಾಹಿಯನ್ನೇ ನೀಡಿಲ್ಲ ಎಂದು ತಿಳಿದುಬಂದಿದೆ. ಗೃಹ ಸಚಿವರ ಇವತ್ತಿನ ಹೇಳಿಕೆಯಿಂದ ಅಧಿಕಾರಿಗಳಲ್ಲೆ ಗೊಂದಲ ಉಂಟಾಗಿದೆ. ಪೊಲೀಸರ ಅಧಿಕಾರಿಗಳಲ್ಲಿಯೇ ಗೊಂದಲ ಸೃಷ್ಟಿಯಾಗಿದೆ. ಅಪಘಾತದ ಬಗ್ಗೆ ಗೃಹ ಸಚಿವರಿಗೆ ಮಾಹಿತಿ ನೀಡಿದ್ದ ಅಧಿಕಾರಿಗಳು, ಘಟನೆ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡಿದ್ದರು. ಪ್ರಕರಣ ಸಂಬಂಧ ಮೂವರನ್ನ ಬಂಧಿಸಿರುವುದಾಗಿ ಮಾಹಿತಿ ನೀಡಿದ್ರು. ಆದ್ರೆ ಆರಗ ಜ್ಞಾನೇಂದ್ರ ನೀಡಿರುವ ಮಾಹಿತಿ ಬಗ್ಗೆ ಪೊಲೀಸರಿಗೆ ಗೋತ್ತಿಲ್ಲ ಎಂಬುದು ತಿಳಿದುಬಂದಿದೆ.

ಈ ಬಗ್ಗೆ ದೆಹಲಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಚಂದ್ರು ಎಂಬ ಯುವಕನ ಸಾವಿನ ಪ್ರಕರಣದ ಬಗ್ಗೆ, ಗೃಹಸಚಿವರ ಎಡವಟ್ಟು ಹೇಳಿಕೆ ವಿಚಾರದ ಕುರಿತು ನನಗೆ ಗೊತ್ತಿಲ್ಲ. ಆ ಬಗ್ಗೆ ಮಾಹಿತಿ ಪಡೆದುಕೊಂಡು ಮಾತನಾಡುತ್ತೇನೆ. ಗೃಹ ಸಚಿವರು ಏನು ಹೇಳಿದ್ದಾರೆ ಆ ಬಗ್ಗೆ ನನಗೆ ಗೊತ್ತಿಲ್ಲ. ಮಾಹಿತಿ ತರೆಸಿಕೊಂಡು ಮಾತನಾಡುತ್ತೆನೆ ಎಂದು ತಿಳಿಸಿದ್ದಾರೆ.

ಚಂದ್ರು ಜತೆಗಿದ್ದ ಸ್ನೇಹಿತ ಸೈಮನ್ ರಾಜ್​ ದೂರಿನ ಮೇರೆಗೆ FIR

ಬೆಂಗಳೂರಿನ ಜೆ.ಜೆ.ನಗರದಲ್ಲಿ ಯುವಕ ಚಂದ್ರು ಕೊಲೆ ಪ್ರಕರಣವು ಚಂದ್ರು ಜತೆಗಿದ್ದ ಸ್ನೇಹಿತ ಸೈಮನ್ ರಾಜ್​ ದೂರಿನ ಮೇರೆಗೆ FIR ದಾಖಲು ಮಾಡಲಾಗಿದೆ. ಜಗಜೀವನರಾಮ್​ ನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಚಂದ್ರು ಸ್ನೇಹಿತ ಸೈಮನ್ ರಾಜ್​ ದೂರಿನ ಪ್ರಮುಖ ಅಂಶಗಳು ಹೀಗಿದೆ. ಏಪ್ರಿಲ್ 4 ರಂದು ಸ್ನೇಹಿತರು ಸೈಮನ್ ರಾಜ್ ಬರ್ತ್​ಡೇ ಆಚರಿಸಿದ್ದರು. ರಾತ್ರಿ 12 ರ ಸುಮಾರಿಗೆ ಮನೆ ಮುಂದೆ ಕೇಕ್​ ಕತ್ತರಿಸಿ ಆಚರಣೆ ಮಾಡಲಾಗಿತ್ತು. ಚಿಕನ್​ ರೋಲ್​ ಕೊಡಿಸುವಂತೆ ಚಂದ್ರು ಸೈಮನ್​ ರಾಜ್​ಗೆ ಕೇಳಿದ್ದ. ಚಿಕನ್ ರೋಲ್ ತರಲೆಂದು ಹೋಂಡಾ ಆಕ್ಟಿವಾದಲ್ಲಿ ಅವರು ತೆರಳಿದ್ದರು.

ಚಾಮರಾಜಪೇಟೆ ಸುತ್ತಮುತ್ತ ಸೈಮನ್ ರಾಜ್​, ಚಂದ್ರು ಸುತ್ತಾಡಿದ್ದರು. ರಂಜಾನ್​ ಹಿನ್ನೆಲೆ ಗೋರಿಪಾಳ್ಯದಲ್ಲಿ ಸಿಗುತ್ತೆ ಎಂದು ಬಂದಿದ್ದರು. ರಾತ್ರಿ 2.15 ರ ಸುಮಾರಿಗೆ ಹಳೇಗುಡ್ಡದಹಳ್ಳಿಗೆ ಬಂದಿದ್ದರು. ಈ ವೇಳೆ 9ನೇ ಮುಖ್ಯರಸ್ತೆಯಲ್ಲಿ ಬೈಕ್​ಗೆ ಇನ್ನೊಂದು ಬೈಕ್ ಡಿಕ್ಕಿಯಾಗಿತ್ತು. ಬೈಕ್ ಡಿಕ್ಕಿ ಹೊಡೆದಿದ್ದಕ್ಕೆ ನಾವು ಏರುಧ್ವನಿಯಲ್ಲಿ ಪ್ರಶ್ನೆ ಮಾಡಿದ್ದೆವು. ಕೇಳಲು ನೀವ್ಯಾರು ಎಂದು ಅವಾಚ್ಯಶಬ್ದಗಳಿಂದ ಶಾಹಿದ್​ ನಿಂದಿಸಿದ್ದಾರೆ. ನಾನು ಇದೇ ಏರಿಯಾದವನು, ನೀನು ಏನ್ ಮಾಡಿಕೊಳ್ಳುತ್ತೀಯಾ? ಎಂದು ಜನರನ್ನು ಸೇರಿಸಿ ಗಲಾಟೆ ಮಾಡಿದ ಶಾಹಿದ್​ ತಳ್ಳಾಡಿದ್ದ. ಏಕಾಏಕಿ ಮಾರಕಾಸ್ತ್ರದಿಂದ ಶಾಹಿದ್, ಇತರರು ಹಲ್ಲೆ ನಡೆಸಿದ್ದರು.

ಸೈಮನ್ ತಪ್ಪಿಸಿಕೊಂಡಿದ್ದ, ಚಂದ್ರು ತೊಡೆಗೆ ಇರಿದಿದ್ದ ಶಾಹಿದ್​, ಬಳಿಕ ತೀವ್ರ ರಕ್ತಸ್ರಾವ ಆಗೋದನ್ನು ನೋಡಿ ಶಾಹಿದ್ ಗ್ಯಾಂಗ್​ ಪರಾರಿ ಆಗಿತ್ತು. ಬಳಿಕ ಚಂದ್ರುವನ್ನು ಸೈಮನ್​ ಆಟೋದಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದರು. ಮುಂಜಾನೆ 4 ಗಂಟೆ ಸುಮಾರಿಗೆ ಚಿಕಿತ್ಸೆ ಫಲಿಸದೆ ಚಂದ್ರು ಸಾವನ್ನಪ್ಪಿದ್ದಾರೆ. ಚಂದ್ರು ಮೃತಪಟ್ಟ ಬಗ್ಗೆ ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಚಂದ್ರುಗೆ ಇರಿದು ಕೊಂದ ಶಾಹಿದ್, ಮತ್ತಿತರರ ವಿರುದ್ಧ ದೂರು ದಾಖಲು ಮಾಡಲಾಗಿದೆ. ಕಾನೂನು ರೀತಿ ಕ್ರಮಕೈಗೊಳ್ಳುವಂತೆ ಸೈಮನ್​ ರಾಜ್ ದೂರು ನೀಡಿದ್ದಾರೆ. FIR ದಾಖಲಿಸಿ ಜೆ.ಜೆ.ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಘಟನೆ ಸಂಬಂಧ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾಹಿತಿ

ಈ ಗಲಾಟೆಗೆ ಇತರರು ಸೇರಿಕೊಂಡಿರುತ್ತಾರೆ. ಗಲಾಟೆಯ ಸಂದರ್ಭದಲ್ಲಿ ಶಾಹಿದ್ ಚಂದ್ರುವಿನ ಬಲ ತೊಡೆಗೆ ಇರಿದು ಘಟನಾ ಸ್ಥಳದಿಂದ ಪರಾರಿಯಾಗಿರುತ್ತಾರೆ. ಗಾಯಾಳುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿ ತೀವ್ರ ರಕ್ತ ಸ್ರಾವದಿಂದ ಸಾವನ್ನಪ್ಪಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಜನ ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ತನಿಖೆ ಮುಂದುವರೆದಿದೆ ಎಂದು ಬೆಂಗಳೂರು ಕಮಲ್ ಪಂತ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಉರ್ದು ಮಾತಾಡಲು ನಿರಾಕರಿಸಿದ್ದಕ್ಕೆ ಕೊಲೆ ಮಾಡಲಾಗಿದೆ: ಮತೀಯ ತಿರುವು ಪಡೆದುಕೊಂಡ ಚಂದ್ರು ಹತ್ಯೆ ಪ್ರಕರಣ

ಇದನ್ನೂ ಓದಿ: ಅಧಿಕಾರಿಗಳು ಗೃಹ ಸಚಿವರಿಗೆ ಹೀಗೆ ಮಾಹಿತಿಯನ್ನೇ ನೀಡಿಲ್ಲ; ಚಂದ್ರು ಕೊಲೆ ಪ್ರಕರಣದಲ್ಲಿ ಆರಗ ಜ್ಞಾನೇಂದ್ರ ಯುಟರ್ನ್!

Published On - 12:49 pm, Wed, 6 April 22