ದಿನಾಂಕ ನಿಗದಿ ಮಾಡಿ ಮತ್ತೊಂದು ದಿನ ಪರೀಕ್ಷೆ! ಬೆಂಗಳೂರು ವಿವಿಯಿಂದ ಮಹಾ ಎಡವಟ್ಟು
ಏಪ್ರಿಲ್ 5 ರಂದು ಅಡ್ವಾನ್ಸ್ ಅಕೌಂಟಿಂಗ್ ಪರೀಕ್ಷೆಗೆ ಟೈಂ ಟೇಬಲ್ ನೀಡಲಾಗಿತ್ತು. ಆದರೆ ಈ ಪರೀಕ್ಷೆ ಏಪ್ರಿಲ್ 1 ರಂದೇ ನಡೆಸಿರುವ ಆರೋಪ ಕೇಳಿಬಂದಿದೆ. ನಮ್ಮ ಬದುಕಿನ ಜೊತೆ ಏಕೆ ಚೆಲ್ಲಾಟವಾಡ್ತೀರಿ. ಮತ್ತೊಮ್ಮೆ ಪರೀಕ್ಷೆ ನಡೆಸಿ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ಬೆಂಗಳೂರು: ಇಲ್ಲಿನ ಬೆಂಗಳೂರು ವಿಶ್ವವಿದ್ಯಾಲಯದಿಂದ ಮಹಾ ಎಡವಟ್ಟು ಉಂಟಾಗಿದೆ. ಪರೀಕ್ಷೆ ದಿನಾಂಕ ನಿಗದಿ ಮಾಡಿ ಮತ್ತೊಂದು ದಿನ ಪರೀಕ್ಷೆ ಮಾಡಲಾಗಿದೆ. ಬಿಕಾಂ 5ನೇ ಸೆಮಿಸ್ಟರ್ ಅಡ್ವಾನ್ಸ್ ಅಕೌಂಟಿಂಗ್ ಪರೀಕ್ಷೆ ಒಂದು ದಿನಾಂಕ ನಿಗದಿಪಡಿಸಿ ಮತ್ತೊಂದು ದಿನ ಮಾಡಲಾಗಿದೆ. ಬೆಂಗಳೂರು ವಿವಿ ವಿರುದ್ಧ ವಿದ್ಯಾರ್ಥಿಗಳ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪರೀಕ್ಷಾ ಕೇಂದ್ರದಲ್ಲಿ 80 ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲ. 2,000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದೆ ಸಂಕಷ್ಟ ಎದುರಾಗಿದೆ. ಏಪ್ರಿಲ್ 5 ರಂದು ಅಡ್ವಾನ್ಸ್ ಅಕೌಂಟಿಂಗ್ ಪರೀಕ್ಷೆಗೆ ಟೈಂ ಟೇಬಲ್ ನೀಡಲಾಗಿತ್ತು. ಆದರೆ ಈ ಪರೀಕ್ಷೆ ಏಪ್ರಿಲ್ 1 ರಂದೇ ನಡೆಸಿರುವ ಆರೋಪ ಕೇಳಿಬಂದಿದೆ. ನಮ್ಮ ಬದುಕಿನ ಜೊತೆ ಏಕೆ ಚೆಲ್ಲಾಟವಾಡ್ತೀರಿ. ಮತ್ತೊಮ್ಮೆ ಪರೀಕ್ಷೆ ನಡೆಸಿ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ಇತ್ತ ರಾಯಚೂರು ನಗರದ ಆಶಾಪುರ ರಸ್ತೆಯ ಮೊರಾರ್ಜಿ ವಸತಿ ಶಾಲೆಯ SSLC ರಿಪೀಟರ್ಸ್ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಂದ ರಾಜಾರೋಷವಾಗಿ ನಕಲು ಮಾಡಲಾಗಿದೆ. ಹೊರಗಿನಿಂದ ನಕಲು ಮಾಡಿ, ಒಳಗಡೆ ಹೋಗಿ ಪೋಷಕರು ಚೀಟಿ ಕೊಡುತ್ತಿರುವ ದೃಶ್ಯ ಟಿವಿ9ಗೆ ಲಭ್ಯವಾಗಿದೆ. ಅಲ್ಲದೆ, ಎಸ್ಎಸ್ಎಲ್ಸಿ ಸಮಾಜ ವಿಜ್ಞಾನ ಪ್ರಶ್ನೆಪತ್ರಿಕೆ ಸೋರಿಕೆ ಆಗಿದೆ. ಲಿಂಗಸಗೂರು ತಾಲೂಕಿನ ಮುದಗಲ್ನಲ್ಲಿ ಪರೀಕ್ಷೆ ಆರಂಭವಾದ ಒಂದು ಗಂಟೆಯೊಳಗೆ ಪ್ರಶ್ನೆಪತ್ರಿಕೆ ವೈರಲ್ ಆಗಿದೆ. ಮೊಬೈಲ್, ವಾಟ್ಸಾಪ್ಗಳಲ್ಲಿ ಪ್ರಶ್ನೆ ಪತ್ರಿಕೆ ಹರಿದಾಡುತ್ತಿದೆ.
ಕಾಲೇಜು ಶಿಕ್ಷಣ ಇಲಾಖೆಯ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗಾವಣೆ ಕೌನ್ಸೆಲಿಂಗ್ ಆದೇಶ ಪ್ರಕಟ
ಕರ್ನಾಟಕ ಸರ್ಕಾರದಿಂದ ಕಾಲೇಜು ಶಿಕ್ಷಣ (Karnataka College Education) ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳ ವರ್ಗಾವಣೆ ಕೌನ್ಸಿಲಿಂಗ್ ಆದೇಶವನ್ನು ಹೊರಡಿಸಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ನೀಡಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ (Minister Ashwath Narayan) ವರ್ಗಾವಣೆ ವೇಳಾಪಟ್ಟಿಯನ್ನು ಹಂಚಿಕೊಂಡಿದ್ದಾರೆ. ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗಾವಣೆಗೆ ಕಾಲೇಜು ಶಿಕ್ಷಣ ಇಲಾಖೆಯಿಂದ ಕೌನ್ಸೆಲಿಂಗ್ ಆದೇಶ ಹೊರಡಿಸಲಾಗಿದೆ.
ಕರ್ನಾಟಕದ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೋಧಕರ (ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ಗ್ರಂಥಪಾಲಕರು, ಕ್ರೀಡಾ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರು) ವರ್ಗಾವಣೆಗೆ ಆದೇಶ ಹೊರಡಿಸಲಾಗಿದೆ. ಮಂಜೂರಾದ ಬೋಧಕರ ಹುದ್ದೆಗಳ ಶೇ. 9ರಷ್ಟು ಸಾರ್ವಜನಿಕ ಹಿತಾಸಕ್ತಿಯ ವರ್ಗಾವಣೆಗಳು ಹಾಗೂ ಶೇ. 6ರಷ್ಟು ವಿಶೇಷ ಪ್ರಕರಣಗಳ ಕೋರಿಕೆ ವರ್ಗಾವಣೆ ನಡೆಸಲು ಅವಕಾಶವಿದೆ.
ವರ್ಗಾವಣೆ ನಿಯಮಗಳಂತೆ ವಿಶೇಷ ಪ್ರಕರಣಗಳಿಗೆ ಅನ್ವಯಿಸುವ ಬೋಧಕರು ಅಗತ್ಯ ದಾಖಲೆಗಳೊಂದಿಗೆ ಕಡ್ಡಾಯವಾಗಿ ಕಾಲೇಜು ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಆನ್‌ಲೈನ್ ನಮೂನೆಯಲ್ಲಿ ನಿಗದಿತ ದಿನಾಂಕದ ಒಳಗೆ ವರ್ಗಾವಣೆ ಅರ್ಜಿ ಸಲ್ಲಿಸಬೇಕು.
ಇದನ್ನೂ ಓದಿ: ತಂದೆ ಸಾವಿನ ನೋವಲ್ಲೂ SSLC ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿನಿ; ಪರೀಕ್ಷೆ ನಂತರ ತಂದೆಯ ಅಂತ್ಯಕ್ರಿಯೆ
ಇದನ್ನೂ ಓದಿ: KSRTC ಬಸ್ ಪಾಸ್ ಅವಧಿ ಮುಕ್ತಾಯವಾಗಿದ್ದ ಹಿನ್ನೆಲೆ; ಪರೀಕ್ಷೆಗೆ ಹೊರಟಿದ್ದ ವಿದ್ಯಾರ್ಥಿಗಳನ್ನು ನಡುದಾರಿಯಲ್ಲಿ ಬಿಟ್ಟ ಸಿಬ್ಬಂದಿ
Published On - 3:16 pm, Wed, 6 April 22