ಹಲಾಲ್ ವಿವಾದ ಬೆನ್ನಲ್ಲೆ ಹಿಂದೂಪರ ಸಂಘಟನೆಗಳಿಂದ ಮತ್ತೊಂದು ಪ್ಲಾನ್; ಕಾನೂನು ಸಮರಕ್ಕೆ ರೂಪುರೇಷೆ ಸಿದ್ಧ

ಹಲಾಲ್ ವಿವಾದ ಬೆನ್ನಲ್ಲೆ ಹಿಂದೂಪರ ಸಂಘಟನೆಗಳಿಂದ ಮತ್ತೊಂದು ಪ್ಲಾನ್; ಕಾನೂನು ಸಮರಕ್ಕೆ ರೂಪುರೇಷೆ ಸಿದ್ಧ
ಹಲಾಲ್ ವಿವಾದ

ಹಿಂದೂಪರ ಸಂಘಟನೆಗಳು ಹಲಾಲ್ ಸ್ಟಿಕ್ಕರ್ ಇರೋ ವಸ್ತುಗಳ ಲಿಸ್ಟ್ ರೆಡಿ ಮಾಡಿಕೊಂಡಿದ್ದಾರೆ. ಹೈ ಕೋರ್ಟ್ ನಲ್ಲಿ ಇದನ್ನು ಪ್ರಶ್ನೆ ಮಾಡಲು ನುರಿತ ಅಡ್ವೋಕೇಟ್ಗಳ ಮೊರೆ ಹೋಗಿದ್ದಾರೆ. ಆಹಾರದ ಗುಣಮುಟ್ಟಕ್ಕೆ ಹಲಾಲ್ ಸರ್ಟಿಫಿಕೇಟ್ ಕಡ್ಡಾಯವಲ್ಲ.

TV9kannada Web Team

| Edited By: Ayesha Banu

Apr 07, 2022 | 7:17 AM


ಬೆಂಗಳೂರು: ರಾಜ್ಯದಲ್ಲಿ ಹಲಾಲ್(Halal Cut) ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾದ ಹಿಂದೂಪರ ಸಂಘಟನೆಗಳು(Hindu Activists) ಹಲಾಲ್ ಮೀಟ್ ವಿರುದ್ಧವಾಗಿ ಸಿಡಿದೆದ್ದು ಭರ್ಜರಿ ಯಶಸ್ಸು ಪಡೆದಿದ್ದಾರೆ. ಈ ಹಿನ್ನಲೆಯಲ್ಲಿ ಇದೀಗ ದಿನನಿತ್ಯ ಬಳಸುವ ವಸ್ತುಗಳಿಗೆ ಹಲಾಲ್ ಕಡ್ಡಾಯದ ವಿರುದ್ಧ ಕಾನೂನು ಹೋರಾಟಕ್ಕೆ ಹಿಂದೂಪರ ಸಂಘಟನೆಗಳು ಮುಂದಾಗಿದ್ದು ಫುಲ್ ಡ್ರಾಫ್ಟ್ ರೆಡಿ ಮಾಡಿಕೊಂಡಿದ್ದಾರೆ.

ಹಿಂದೂಪರ ಸಂಘಟನೆಗಳು ಹಲಾಲ್ ಸ್ಟಿಕ್ಕರ್ ಇರೋ ವಸ್ತುಗಳ ಲಿಸ್ಟ್ ರೆಡಿ ಮಾಡಿಕೊಂಡಿದ್ದಾರೆ. ಹೈ ಕೋರ್ಟ್ ನಲ್ಲಿ ಇದನ್ನು ಪ್ರಶ್ನೆ ಮಾಡಲು ನುರಿತ ಅಡ್ವೋಕೇಟ್ಗಳ ಮೊರೆ ಹೋಗಿದ್ದಾರೆ. ಆಹಾರದ ಗುಣಮುಟ್ಟಕ್ಕೆ ಹಲಾಲ್ ಸರ್ಟಿಫಿಕೇಟ್ ಕಡ್ಡಾಯವಲ್ಲ. ಕೇಂದ್ರ ಸರ್ಕಾರ ನೀಡುತ್ತಿರುವ FASSI ಸರ್ಟಿಫಿಕೇಟ್ ಮಾತ್ರವೇ ಕಡ್ಡಾಯ. ಹಲಾಲ್ ಬಲವಂತದ ಹೇರಿಕೆ ವಿರುದ್ಧ ಕಾನೂನು ಹೋರಾಟ ನಡೆಸಲು ಹಿಂದೂಪರ ಸಂಘಟನೆಗಳು ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಿದ್ದಾರೆ.

ಹೋರಾಟದ ರೂಪುರೇಷೆ
1. ಆನ್ ಲೈನ್, ಆಫ್ ಲೈನ್ ನಲ್ಲಿ ಹಲಾಲ್ ಫುಡ್ ಪ್ರಾಡಕ್ಟ್ ಗೆ ವಿರೋಧ
2. ಫುಡ್ ಅಂಡ್ ಸೇಫ್ಟಿ ಬಗ್ಗೆ ಜನಜಾಗೃತಿ ಕರಪತ್ರ ಆಂದೋಲನ
3. ಹಲಾಲ್ ಹೆಸರಿನಲ್ಲಿ ವಾಮಮಾರ್ಗದಲ್ಲಿ ಮಾಡಲಾಗಿರುವ ಹಣದ ಬಗ್ಗೆ ತನಿಖೆಗೆ ಆಗ್ರಹ
4. ಈ ಬಗ್ಗೆ ಪಿಎಂ, ಸಿಎಂ, ಆಹಾರ ಸಚಿವ, ಫುಡ್ ಕಮಿಷನರ್, ಬಿಬಿಎಂಪಿ ಆಯುಕ್ತರಿಗೆ ದೂರು
5. ಹಿಂದು ಮಳಿಗೆದಾರರಿಗೆ ಒಂದು ಒರಿಯೆಂಟೇಚನ್ ಕ್ಲಾಸ್
6. ನ್ಯಾಯಾಲಯದಲ್ಲಿ ಹಲಾಲ್ ಹೇರಿಕೆ ವಿರುದ್ಧ ಪ್ರಶ್ನೆ, ಕಾನೂನು ಹೋರಾಟ ಆರಂಭಿಸೋದು

ಹೊಸತೊಡಕು ದಿನ ಬೆಂಗಳೂರಿನ ಮುಸ್ಲಿಂ ಮಾಂಸದಂಗಡಿಗಳಲ್ಲಿ ವ್ಯಾಪಾರ ಅರ್ಧದಷ್ಟು ಕುಸಿದಿತ್ತು!
ಬೆಂಗಳೂರು: ರವಿವಾರ ಇಡೀ ರಾಜ್ಯದಲ್ಲಿ ಹಿಂದೂ ಸಮುದಾಯದ (Hindu community) ಜನ ಹೊಸತೊಡಕು (Hosathadku) ಆಚರಿಸಿದರು. ಬೆಂಗಳೂರು ನಗರದಲ್ಲೂ ಆಚರಣೆ ಭರ್ಜರಿಯಾಗಿತ್ತು. ಅದರೆ ಹಲಾಲ್ ಕಟ್ (Halal Cut) ಮತ್ತು ಜಟ್ಕಾ ಕಟ್ (Jhatka Cut) ಮಾಂಸದ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯ ಚಿಕನ್ ಮತ್ತು ಮಟನ್ ವ್ಯಾಪಾರಸ್ಥರ ಮೇಲೆ ವಿವಾದ ಪ್ರಭಾವ ಜೋರಾಗೇ ಉಂಟಾಗಿತ್ತು. ಟಿವಿ9 ಕನ್ನಡ ವಾಹಿನಿಯ ಬೆಂಗಳೂರು ವರದಿಗಾರ ಒಬ್ಬ ಮುಸ್ಲಿಂ ವ್ಯಾಪಾರಸ್ಥನನ್ನು ಮಾತಾಡಿಸಿದ್ದಾರೆ. ವ್ಯಾಪಾರಿಯೇ ಹೇಳುವ ಹಾಗೆ ಹೊಸತೊಡಕು ದಿನ ಅವರ ವ್ಯಾಪಾರದ ಮೇಲೆ ಹೊಡೆತ ಬಿದ್ದಿದೆ. ಹಲಾಲ್ ಕಟ್ ಮಾಂಸದ ವಿರುದ್ಧ ನಡೆಯುತ್ತಿರುವ ಅಭಿಯಾನ ಸರಿಯಲ್ಲ. ಏನೇನಾಗುತ್ತಿದೆ ಅಂತ ನಮಗೆ ಚೆನ್ನಾಗಿ ಗೊತ್ತಿದೆ, ನಾವೇನೂ ಕಣ್ಣು ಮುಚ್ಚಿಕೊಂಡು ಕೂತಿಲ್ಲ. ಶತಮಾನಗಳಿಂದ ನಾವು ಹಿಂದೂಗಳ ಜೊತೆ ಅಣ್ಣತಮ್ಮಂದಿರ ಹಾಗೆ ಸಹಾಬಾಳ್ವೆ ನಡೆಸಿಕೊಂಡು ಬಂದಿದ್ದೇವೆ, ಆದರೆ ಈಗ ಉಂಟಾಗಿರುವ ಸ್ಥಿತಿ ಹೇವರಿಕೆ ಹುಟ್ಟಿಸುತ್ತಿದೆ. ಎಷ್ಟು ದಿನಾಂತ ನಾವು ಇದನ್ನೆಲ್ಲ ಸಹಿಸುವುದು ಅಂತ ಅವರು ಕೇಳುತ್ತಾರೆ.

ಹೊಸತೊಡಕು ದಿನ ಅವರ ಅಂಗಡಿಯಲ್ಲಿ ಕನಿಷ್ಟ 1,000 ಕೆಜಿ ಕೋಳಿ ಮಾಂಸ ಮಾರಾಟವಾಗುತ್ತಿತ್ತಂತೆ. ಆದರೆ ಸೋಮವಾರ ಅದರ ಅರ್ಧದಷ್ಟು ಮಾತ್ರ ವ್ಯಾಪಾರವಾಗಿದೆ. ವ್ಯಾಪಾರದ ಬಗ್ಗೆ ಅವರು ಹೆಚ್ಚು ಆತಂಕಿತರಾಗಿಲ್ಲ, ಆದರೆ, ತಲೆದೋರಿರುವ ಪರಿಸ್ಥಿತಿ ಬಹಳ ಕೆಟ್ಟದ್ದಾಗಿದೆ ಎಂದು ಅವರು ಹೇಳಿದರು.

ನಿನ್ನೆ ಆಗಿರುವ ನಷ್ಟದ ಬಗ್ಗೆ ಹೇಳಿಕೊಳ್ಳಲು ನಮಗೆ ನಾಚಿಕೆಯಾಗುತ್ತದೆ ಎಂದು ಈ ಹಿರಿಯ ವ್ಯಕ್ತಿ ಹೇಳುತ್ತಾರೆ. ಅಂದಹಾಗೆ, ಹಲಾಲ್ ಕಟ್ ಮತ್ತು ಜಟ್ಕಾ ಕಟ್ ವಿವಾದ ಕೇವಲ ಹೊಸತೊಡಕು ದಿನಕ್ಕೆ ಮಾತ್ರ ಸೀಮಿತವಾಗಿಲ್ಲ. ಸೋಮವಾರವೂ ಅದು ಮುಂದುವರಿದಿತ್ತು. ಯಾವಾಗ ಕೊನೆಗೊಂಡೀತು ಅಂತ ಮುಸಲ್ಮಾನರು ಕಾಯುತ್ತಿದ್ದಾರೆ.

ಇದನ್ನೂ ಓದಿ: Karnataka Rain: ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಏ. 9ರವರೆಗೂ ಗುಡುಗು ಸಹಿತ ಮಳೆ

Indian Railway Recruitment 2022: ರೈಲ್ವೆ ಇಲಾಖೆಯ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ


Follow us on

Related Stories

Most Read Stories

Click on your DTH Provider to Add TV9 Kannada