AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tummoc ಆ್ಯಪ್ ಮೂಲಕ ಡಿಜಿಟಲ್ ಪಾಸ್ ಪರಿಚಯ ಮಾಡಿದ ಬಿಎಂಟಿಸಿ; ಆದ್ರೆ ಕಂಡಕ್ಟರ್ಸ್ ಕೆಲಸ ಕಳೆದುಕೊಳ್ಳಲಿದ್ದಾರೆ.. ಹೇಗೆ?

ಪ್ರಯಾಣಿಕರು ಈ ಆ್ಯಪ್ ಮೂಲಕ ದೈನಿಕ, ವಾರ, ಮಾಸಿಕ ಪಾಸ್ ಖರೀದಿ ಮಾಡಬಹುದು. ಪ್ರತಿ ಪಾಸ್ಗೆ unique ID ಹಾಗೂ Dynamic QR ಕೋಡ್ ಇರಲಿದೆ. ಮೊಬೈಲ್ ಮೂಲಕ ಪ್ರಯಾಣಿಕರು ಪಾಸ್ ತೋರಿಸಬಹುದು.

Tummoc ಆ್ಯಪ್ ಮೂಲಕ ಡಿಜಿಟಲ್ ಪಾಸ್ ಪರಿಚಯ ಮಾಡಿದ ಬಿಎಂಟಿಸಿ; ಆದ್ರೆ ಕಂಡಕ್ಟರ್ಸ್ ಕೆಲಸ ಕಳೆದುಕೊಳ್ಳಲಿದ್ದಾರೆ.. ಹೇಗೆ?
ಬಿಎಂಟಿಸಿ ( ಸಾಂದರ್ಭಿಕ ಚಿತ್ರ)
TV9 Web
| Updated By: ಆಯೇಷಾ ಬಾನು|

Updated on: Apr 06, 2022 | 12:38 PM

Share

ಬೆಂಗಳೂರು: ಶಾಂತಿನಗರದ BMTC ಮುಖ್ಯ ಕಚೇರಿಯಲ್ಲಿ ಬಿಎಂಟಿಸಿಯಿಂದ ನೂತನ‌ ಆ್ಯಪ್ ಬಿಡುಗಡೆ ಮಾಡಲಾಗಿದೆ. Tummoc ಆ್ಯಪ್ ಮೂಲಕ ಡಿಜಿಟಲ್ ಪಾಸ್ ಪರಿಚಯ ಮಾಡಲಾಗಿದೆ. ಪ್ರಯಾಣಿಕರು ಆ್ಯಪ್ ಮೂಲಕ ಪಾಸ್ ಖರೀದಿಸಬಹುದು. ಪ್ಲೇ ಸ್ಟೋರ್ನಿಂದ Tummoc ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬಹುದು.

ಪ್ರಯಾಣಿಕರು ಈ ಆ್ಯಪ್ ಮೂಲಕ ದೈನಿಕ, ವಾರ, ಮಾಸಿಕ ಪಾಸ್ ಖರೀದಿ ಮಾಡಬಹುದು. ಪ್ರತಿ ಪಾಸ್ಗೆ unique ID ಹಾಗೂ Dynamic QR ಕೋಡ್ ಇರಲಿದೆ. ಮೊಬೈಲ್ ಮೂಲಕ ಪ್ರಯಾಣಿಕರು ಪಾಸ್ ತೋರಿಸಬಹುದು. ಭದ್ರತಾ ವೈಶಿಷ್ಟ್ಯಗಳನ್ನು ಬಳಸಿಕೊಂಡು ಡಿಜಿಟಲ್ ಪಾಸ್ ಅಭಿವೃದ್ಧಿ ಮಾಡಲಾಗಿದೆ.

ಬಿಎಂಟಿಸಿ ಕಂಡಕ್ಟರ್ಸ್ ಕೆಲಸ ಕಳೆದುಕೊಳ್ಳುವ ಸುಳಿವು ಪ್ರಯಾಣಿಕರಿಗೆ ಅನುಕೂಲವಾಗಲೆಂದು ಇಂದು Tummoc ಆ್ಯಪ್‌ ಬಿಡುಗಡೆ ಮಾಡಲಾಗಿದೆ. ಈ ಆ್ಯಪ್‌ ಮೂಲಕವೇ ಪ್ರಯಾಣಿಕರು ಆನ್ ಲೈನ್ ಮೂಲಕ ಪಾಸ್ ಪಡೆಯಬಹುದು. ಆದರೆ Tummoc ಆ್ಯಪ್‌ನಿಂದ ಬಿಎಂಟಿಸಿ ನಿರ್ವಾಹಕರ ಕೆಲಸಕ್ಕೆ ಕುತ್ತು ಎದುರಾಗಿದೆ. ಬಿಎಂಟಿಸಿ ಕಂಡಕ್ಟರ್ಸ್ ಕೆಲಸ ಕಳೆದುಕೊಳ್ಳುವ ಸುಳಿವು ಸುಳಿದಾಡುತ್ತಿದೆ. ಈ ಬಗ್ಗೆ BMTC ಎಂಡಿ ಅನ್ಬುಕುಮಾರ್ ಸುಳಿವು ನೀಡಿದ್ದಾರೆ. ಈ ಆ್ಯಪ್‌ನಿಂದ ನಿರ್ವಾಹಕ ರಹಿತ ಬಸ್ ಸಂಚಾರವಿರಲಿದೆ. ಪ್ರಯಾಣಿಕರು ಕ್ಯೂ ನಿಂತು ಪಾಸ್ ಪಡೆಯಬೇಕಾಗಿರಲ್ಲ. ನಷ್ಟದಲ್ಲಿರುವ ಬಿಎಂಟಿಸಿಗೆ ಈ ಆ್ಯಪ್ ಸಹಕಾರಿಯಾಗಲಿದೆ ಎಂದು ಬೆಂಗಳೂರಿನಲ್ಲಿ ಬಿಎಂಟಿಸಿ ಎಂಡಿ ಅನ್ಬುಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: ಮಾಧುರಿ ದೀಕ್ಷಿತ್​ಗೂ ಹತ್ತಿದೆ ‘ಕಚ್ಚಾ ಬಾದಾಮ್​’ ಗುಂಗು; ರಿತೇಶ್​​ ಜತೆ ಮಸ್ತ್​ ಡ್ಯಾನ್ಸ್​; ಇಲ್ಲಿದೆ ವಿಡಿಯೋ

ಡಿಮ್ಹಾನ್ಸ್ನಲ್ಲಿ MRI ಅಳವಡಿಸುವವರೆಗೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯ ವೇತನ ತಡೆಹಿಡಿಯುವಂತೆ ಹೈಕೋರ್ಟ್ ಆದೇಶ