ಆರ್ಕಿಟೆಕ್ಟ್ ವಿರುದ್ಧ ಚಾರ್ಜ್‌ಶೀಟ್‌ ಹಾಕಿದ್ದ ಪೊಲೀಸರು: ಕಾರ್ಮಿಕನ ಆಕಸ್ಮಿಕ ಸಾವಿಗೆ ಆರ್ಕಿಟೆಕ್ಟ್ ಹೊಣೆಯಲ್ಲ‌ ಎಂದ ಹೈಕೋರ್ಟ್

| Updated By: ಸಾಧು ಶ್ರೀನಾಥ್​

Updated on: Jun 21, 2022 | 2:59 PM

Karnataka High Court: ಆರ್ಕಿಟೆಕ್ಟ್ ಕೊಟ್ಟಿದ್ದ ನೀಲನಕ್ಷೆಯಲ್ಲಿನ ಲೋಪದಿಂದಾಗಿ ಕಟ್ಟಡ ಕಾರ್ಮಿಕ ಮುಕೇಶ್ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿ ನಂದಿನಿ ಲೇಔಟ್ ಪೊಲೀಸರು ಆರ್ಕಿಟೆಕ್ಟ್ ವಿರುದ್ಧ ಐಪಿಸಿ ಸೆಕ್ಷನ್‌ 304ಎ ಅಡಿಯಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಿದ್ದರು.

ಆರ್ಕಿಟೆಕ್ಟ್ ವಿರುದ್ಧ ಚಾರ್ಜ್‌ಶೀಟ್‌ ಹಾಕಿದ್ದ ಪೊಲೀಸರು: ಕಾರ್ಮಿಕನ ಆಕಸ್ಮಿಕ ಸಾವಿಗೆ ಆರ್ಕಿಟೆಕ್ಟ್ ಹೊಣೆಯಲ್ಲ‌ ಎಂದ ಹೈಕೋರ್ಟ್
ಕರ್ನಾಟಕ ಹೈಕೋರ್ಟ್
Follow us on

ಬೆಂಗಳೂರು: ಕಟ್ಟಡ ಕಾರ್ಮಿಕನ ಆಕಸ್ಮಿಕ ಸಾವಿಗೆ ಆರ್ಕಿಟೆಕ್ಟ್ ಹೊಣೆಯಲ್ಲ‌ ಎಂದು ಸಾರಿರುವ ಹೈಕೋರ್ಟ್ ಆರ್ಕಿಟೆಕ್ಟ್ ವಿರುದ್ಧದ ಪ್ರಕರಣವನ್ನು ರದ್ದುಪಡಿಸಿದೆ. 2020ರ ಅಕ್ಟೋಬರ್ 10ರಂದು ವಿದ್ಯುತ್ ಅವಘಡದಿಂದ ಮುಕೇಶ್ ಎಂಬ ಕಟ್ಟಡ ಕಾರ್ಮಿಕ (Construction Labourer) ಸಾವಿಗೀಡಾಗಿದ್ದ. ಆರ್ಕಿಟೆಕ್ಟ್ (Architect) ವಿಶ್ವಾಸ್ ಎಂಬುವವರು ಕಟ್ಟಡದ ನೀಲನಕ್ಷೆ ತಯಾರಿಸಿ ನೀಡಿದ್ದರು. ಆರ್ಕಿಟೆಕ್ಟ್ ಕೊಟ್ಟಿದ್ದ ನೀಲನಕ್ಷೆಯಲ್ಲಿನ ಲೋಪದಿಂದಾಗಿ ಕಟ್ಟಡ ಕಾರ್ಮಿಕ ಮುಕೇಶ್ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿ ನಂದಿನಿ ಲೇಔಟ್ ಪೊಲೀಸರು ಆರ್ಕಿಟೆಕ್ಟ್ ವಿರುದ್ಧ ಐಪಿಸಿ ಸೆಕ್ಷನ್‌ 304ಎ ಅಡಿಯಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಿದ್ದರು. ಆದರೆ ಹೈ ಕೋರ್ಟ್ (Karnataka High Court )​, ಕಟ್ಟಡ ನಕ್ಷೆ ರೂಪಿಸುವುದು ನಿರ್ಲಕ್ಷ್ಯವಾಗುವುದಿಲ್ಲ. ನಿರ್ಲಕ್ಷ್ಯದಿಂದಾದ ಸಾವಿಗೆ ಆರ್ಕಿಟೆಕ್ ಹೊಣೆಯಲ್ಲ ಎಂದು ಆದೇಶಿಸಿ, ಪೊಲೀಸರು ಸಲ್ಲಿಸಿದ್ದ ಆರೋಪಪಟ್ಟಿಯನ್ನು ರದ್ದುಪಡಿಸಿದೆ.

ಇದನ್ನೂ ಓದಿ: ಚಲಿಸುತ್ತಿದ್ದ ಬೈಕ್ ಮೇಲೆ ಉರುಳಿ ಬಿದ್ದ ವಿದ್ಯುತ್ ಕಂಬ; ಕೂದಲೆಳೆ ಅಂತರದಲ್ಲಿ ಸವಾರ ಬಚಾವ್, ಅಧಿಕಾರಿಗಳ ವಿರುದ್ಧ ಆಕ್ರೋಶ

 

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 2:59 pm, Tue, 21 June 22