ಚಲಿಸುತ್ತಿದ್ದ ಬೈಕ್ ಮೇಲೆ ಉರುಳಿ ಬಿದ್ದ ವಿದ್ಯುತ್ ಕಂಬ; ಕೂದಲೆಳೆ ಅಂತರದಲ್ಲಿ ಸವಾರ ಬಚಾವ್, ಅಧಿಕಾರಿಗಳ ವಿರುದ್ಧ ಆಕ್ರೋಶ
ಮಧ್ಯಾಹ್ನ 1.15ರ ಹೊತ್ತಲ್ಲಿ, ಶ್ರೀನಗರದ ಸೋಮಶೇಖರ್ ವಿಕ್ಟೋರಿಯಾ ಆಸ್ಪತ್ರೆ ಬಳಿಯ ರಸ್ತೆ ಮೂಲಕ ಅವಿನ್ಯೋ ರೋಡ್‌ನತ್ತ ಬೈಕ್‌ನಲ್ಲಿ ಹೋಗ್ತಿದ್ರು. ಆಗ ತುಕ್ಕು ಹಿಡಿದಿದ್ದ ಸ್ಟ್ರೀಟ್ ಲೈಟ್ ಕಂಬವೊಂದು ಕಟ್ ಆಗಿ ಬೈಕ್ ಮೇಲೆ ಉರುಳಿ ಬಿದ್ದಿದೆ.
ಬೆಂಗಳೂರು: ಮಟ ಮಟ ಮಧ್ಯಾಹ್ನ. ಆಸ್ಪತ್ರೆಗೆ ಬರೋರು.. ಮಾರ್ಕೆಟ್‌ಗೆ ಹೋಗೋರು.. ದೂರದ ಊರಿಗೆ ತೆರಳೋ ಪ್ರತಿಯೊಬ್ರು ಇದೇ ರಸ್ತೆಯಲ್ಲಿ ಓಡಾಡ್ತಿದ್ರು. ಎಲ್ಲಿ ನೋಡಿದ್ರೂ ಜನ. ವಾಹನಗಳ ಸದ್ದೇ ಇತ್ತು. ಇಂತಹ ಸಮಯದಲ್ಲೇ ಇದಕ್ಕಿದ್ದಂತೆ ಸ್ಟ್ರೀಟ್ ಲೈಟ್ ಕಂಬವೊಂದು ಬೈಕ್ ಮೇಲೆ ಬಿದ್ದಿದೆ.(Street Light Pole Fall on Moving Bike) ತನ್ನ ಪಾಡಿಗೆ ತಾನು ಹೋಗ್ತಿದ್ದ ಬೈಕ್ ಸವಾರ ಜಸ್ಟ್ ಮಿಸ್ ಆಗಿದ್ದ. ಸದ್ಯ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಚಲಿಸುತ್ತಿದ್ದ ಬೈಕ್ ಮೇಲೆ ಉರುಳಿ ಬಿದ್ದ ವಿದ್ಯುತ್ ಕಂಬ ಕಳೆದ ಸೋಮವಾರ, ಮಧ್ಯಾಹ್ನ 1.15ರ ಹೊತ್ತಲ್ಲಿ, ಶ್ರೀನಗರದ ಸೋಮಶೇಖರ್ ವಿಕ್ಟೋರಿಯಾ ಆಸ್ಪತ್ರೆ ಬಳಿಯ ರಸ್ತೆ ಮೂಲಕ ಅವಿನ್ಯೋ ರೋಡ್‌ನತ್ತ ಬೈಕ್‌ನಲ್ಲಿ ಹೋಗ್ತಿದ್ರು. ಆಗ ತುಕ್ಕು ಹಿಡಿದಿದ್ದ ಸ್ಟ್ರೀಟ್ ಲೈಟ್ ಕಂಬವೊಂದು ಕಟ್ ಆಗಿ ಬೈಕ್ ಮೇಲೆ ಉರುಳಿ ಬಿದ್ದಿದೆ. ಏನಾಗ್ತಿದೆ ಅಂತಾ ಗೊತ್ತಾಗುವಷ್ಟರಲ್ಲಿ ಸೋಮಶೇಖರ್ ಕೆಳಗೆ ಬಿದ್ದಿದ್ರು. ಪೋಲ್ ಬಿದ್ದ ರಭಸಕ್ಕೆ ಬೈಕ್ ನಜ್ಜುಗುಜ್ಜಾಗಿತ್ತು. ಅಲ್ಲೇ ತಿರುಗಾಡುತ್ತಿದ್ದ ಜನ ಕ್ಷಣಾರ್ಧದಲ್ಲಿ ನಡೆದ ಘಟನೆ ಕಂಡು ಬೆಚ್ಚಿಬಿದ್ದಿದ್ರು. ಇನ್ನು ಸೋಮಶೇಖರ್ ಅವ್ರಂತೂ ಪುನರ್ಜನ್ಮ ಪಡೆದಂತೆ ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ: Karnataka Rain: ಕರ್ನಾಟಕದ ಉತ್ತರ ಒಳನಾಡಿನಲ್ಲಿ ಇಂದು ಗುಡುಗು ಸಹಿತ ಚದುರಿದ ಮಳೆ; ಅಸ್ಸಾಂನಲ್ಲಿ ರೆಡ್ ಅಲರ್ಟ್ ಘೋಷಣೆ
ಈ ರೀತಿ ತುಕ್ಕು ಹಿಡಿದಿರೋ ಹಳೇಯ ಕಂಬಗಳು ರಸ್ತೆಯುದ್ದಕ್ಕೂ ಇವೆ. ಸರಿಯಾದ ನಿರ್ವಹಣೆ ಕೂಡ ಮಾಡ್ತಿಲ್ಲ. ಅಷ್ಟೇ ಅಲ್ಲ ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ಕಚೇರಿ ಕೂಡ ಪಕ್ಕದಲ್ಲೇ ಇದೆ. ಇಲ್ಲೇ ಹೀಗಾದ್ರೆ ಇನ್ನು ಬೇರೆ ಕಡೆಯ ಕಥೆ ಏನು ಎಂದು ಜನರು ಬೇಸರ ಹೊರಹಾಕಿದ್ರು. ಈ ಬಗ್ಗೆ ಬೆಸ್ಕಾಂ ಅಧಿಕಾರಿಗಳಿಗೆ ಹೇಳಿದ್ರೆ, ಬಿಬಿಎಂಪಿ ವ್ಯಾಪ್ತಿಗೆ ಬರುತ್ತೆ ಅಂತಾರೆ. ಬಿಬಿಎಂಪಿ ಅವ್ರನ್ನ ಕೇಳಿದ್ರೆ ಕೆಇಬಿ ಕಡೆ ಬೊಟ್ಟು ಮಾಡಿ ಜಾರಿಕೊಳ್ತಿದ್ದಾರಂತೆ.
ಈ ರೀತಿ ತುಕ್ಕು ಹಿಡಿದಿರುವ ಕಂಬಗಳು ಕೆ.ರ್.ಮಾರ್ಕೆಟ್‌ಗೆ ಸಾಗುವ ರಸ್ತೆಯಲ್ಲಿ ಮಾತ್ರವಲ್ಲ, ಬೆಂಗಳೂರಿನಾದ್ಯಂತ ಇವೆ. ಅವೆಲ್ಲವನ್ನು ಗುರುತಿಸಿ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಅಮಾಯಕ ಜೀವಗಳು ಬಲಿಯಾಗೋದು ಗ್ಯಾರಂಟಿ.
ವರದಿ: ಬಾಲಾಜಿ ಜೊತೆ ರಾಚಪ್ಪಾಜಿ ನಾಯಕ್ ಟಿವಿ9, ಬೆಂಗಳೂರು
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 6:53 am, Thu, 16 June 22