ಇಬ್ಬರು ಶಂಕಿತ ಉಗ್ರರ ಬಂಧನ ಪ್ರಕರಣ: ಶಂಕಿತ ಉಗ್ರ ಜುಬಾ ಜತೆ ಸಂಪರ್ಕದಲ್ಲಿದ್ದ ಮತ್ತೋರ್ವ ವಶಕ್ಕೆ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 04, 2022 | 12:02 PM

ಕೇಸ್ ಸಂಬಂಧ ಪಶ್ಚಿಮ ಬಂಗಾಳದ ಕಲ್ಕತ್ತಾದಲ್ಲಿ ಸಿಸಿಬಿ ಪೊಲೀಸರು ಸತತ ನಾಲ್ಕು ದಿನ ಕಾರ್ಯಚರಣೆ ನಡೆಸಿ ಕೋಲ್ಕತ್ತಾದ ಅಬು ಸೈಯದ್​ನನ್ನು ಬಂಧಿಸಲಾಗಿದೆ.

ಇಬ್ಬರು ಶಂಕಿತ ಉಗ್ರರ ಬಂಧನ ಪ್ರಕರಣ: ಶಂಕಿತ ಉಗ್ರ ಜುಬಾ ಜತೆ ಸಂಪರ್ಕದಲ್ಲಿದ್ದ ಮತ್ತೋರ್ವ ವಶಕ್ಕೆ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಸಿಸಿಬಿಯಿಂದ ಇಬ್ಬರು ಶಂಕಿತ ಉಗ್ರರ (Terrorist) ಬಂಧನ ಪ್ರಕರಣ ಸಂಬಂಧ ಶಂಕಿತ ಉಗ್ರ ಜುಬಾ ಜತೆ ಸಂಪರ್ಕದಲ್ಲಿದ್ದ ಮತ್ತೋರ್ವನನ್ನು ಸಿಸಿಬಿ ವಶಕ್ಕೆ ಪಡೆದಿದೆ. ಕೋಲ್ಕತ್ತಾದ ಅಬು ಸೈಯದ್​ ಬಂಧಿತ ಆರೋಪಿ. ಕೇಸ್ ಸಂಬಂಧ ಪಶ್ಚಿಮ ಬಂಗಾಳದ ಕಲ್ಕತ್ತಾದಲ್ಲಿ ಸಿಸಿಬಿ ಪೊಲೀಸರು ಸತತ ನಾಲ್ಕು ದಿನ ಕಾರ್ಯಚರಣೆ ನಡೆಸಿ ಕೋಲ್ಕತ್ತಾದ ಅಬು ಸೈಯದ್​ನನ್ನು ಬಂಧಿಸಲಾಗಿದೆ. ಸದ್ಯ ಸಿಸಿಬಿ ವಿಚಾರಣೆ ನಡೆಸುತ್ತಿದ್ದು, ಅದಿಲ್ ಜುಬಾ ಜೊತೆಗೆ ಅಬು ಸೈಯದ್ ಸಂಪರ್ಕ ಇದ್ದು, ಅದಿಲ್ ಜುಬಾಗೆ ಮೊದಲಿನಿಂದ ಪರಿಚಿತ ಆಗಿದ್ದ. ಜೊತೆಗೆ ಅಲ್ ಖೈದಾ ಉಗ್ರರು ಇದ್ದ ಟೆಲಿಗ್ರಾಮ್ ಗ್ರೂಪ್​ನಲ್ಲಿ ಸದಸ್ಯನಾಗಿದ್ದ. ಗ್ರೂಪ್​​ನ ಎಲ್ಲಾ ಏಳು ಅಕೌಂಟ್​ಗಳನ್ನು ಸಿಸಿಬಿ ಪರಿಶೀಲನೆ ನಡೆಸಿದ್ದು, ಏಳರ ಪೈಕಿ ಒಂದು ಜುಬಾ ಇನ್ನೊಂದು ಈ ಅಬು ಸೈಯದ್, ಉಳಿದ ಐದು ಅಕೌಂಟ್​ಗಳು ಅಲ್ ಖೈದಾಗೆ ಸೇರಿದ್ದ ಹ್ಯಾಂಡರ್ಲ್ಸ್​ಗಳದ್ದು ಎಂಬುದು ಪತ್ತೆಯಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ ಕೇಸ್: ಶೀಘ್ರವೇ ಪ್ರಕರಣದ ತನಿಖೆ NIAಗೆ ವರ್ಗಾವಣೆ

ಈ ಹಿನ್ನಲೆ ವಿಚಾರಣೆ ನಡೆಸಿದ್ದ ಸಿಸಿಬಿ, ಈಗಾಗಲೇ ಅಖ್ತರ್ ಹುಸೇನ್‌ ಹಾಗೂ ಜುಭಾ ಇಬ್ಬರು ಆಲ್ ಖೈದ ನೇಮಕಾತಿ ಆಗಿದ್ದರು. ನೇಮಕಾತಿ ಆಗೋ ಗ್ರೂಪ್​​ನ ಲೀಸ್ಟ್​​​ನಲ್ಲಿ ಅಬು ಸಯ್ಯದ್ ಕೂಡ ಇದ್ದ. ಕೋಲ್ಕತ್ತಾ ಮೂಲಕ ಅಬು ಸಯ್ಯದ್​ನ ನೇಮಕಾತಿ ಮಾಡಲು ತಯಾರಿ ನಡೆದಿತ್ತು. ಆದರೆ ಅಬು ಸಯ್ಯದ್​ಗೆ ವಿಧ್ಯಾಭ್ಯಾಸ ಇಲ್ಲದ ಕಾರಣಕ್ಕೆ ಹ್ಯಾಂಡ್ಲರ್ಸ್ ತಡ ಮಾಡಿದ್ರು. ಆದರೂ ಅಬು ಸೈಯದ್​ನ ವಿದ್ಯಾಭ್ಯಾಸ ಇಲ್ಲದಿದರೆ ಟೆಕ್ನಿಕಲ್ ಸ್ಟ್ರಾಂಗ್ ಮಾಡಲು ಮುಂದಾಗಿದ್ರು. ಟೆಲಿಗ್ರಾಂ ಗ್ರೂಪ್ ಮೂಲಕ ಶಂಕಿತರು ಸಂಪರ್ಕದಲ್ಲಿದ್ದರು. ನೇಮಕಾತಿ ವಿಚಾರಗಳನ್ನ ಇದೇ ಗ್ರೂಪ್​​ನಲ್ಲಿ ಚರ್ಚೆ ಮಾಡಿದ್ದರು. ಮುಂದಿನ ದಿನಗಳಲ್ಲಿ ಅಖ್ತರ್ ಹುಸೇನ್ ಹಾಗೂ ಅದಿಲ್ ಜುಬಾ ಬಳಿಕ ಅಬು ಸೈಯದ್​ನನ್ನು ನೇಮಕಾತಿ ಮಾಡು ಪ್ಲಾನ್ ಆಗಿತ್ತು ಎಂದು ತನಿಖೆ ವೇಳೆ ಬಹಿರಂಗವಾಗಿದೆ.

ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದ ಸಿಸಿಬಿ

ಇಬ್ಬರು ಶಂಕಿತ ಉಗ್ರರನ್ನು (Terrorist) ನಿನ್ನೆ (ಜುಲೈ 25) ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಪೈಕಿ ಓರ್ವನನ್ನು ಬೆಂಗಳೂರಿನಲ್ಲಿ, ಮತ್ತೊಬ್ಬನನ್ನು ತಮಿಳುನಾಡಿನ ಸೇಲಂನಲ್ಲಿ ಅರೆಸ್ಟ್ ಮಾಡಲಾಗಿದೆ. ತಮಿಳುನಾಡಿನಲ್ಲಿ ಬಂಧನಕ್ಕೊಳಗಾಗಿರುವ ಶಂಕಿತ ಉಗ್ರ ಜುಬಾ, ಗಾರ್ಮೆಂಟ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಈತನ ಬಗ್ಗೆ ಮಾಹಿತಿ ಪಡೆದಿದ್ದ ಬೆಂಗಳೂರು ಸಿಸಿಬಿ ಪೊಲೀಸರು ಡಿಸಿಪಿ ಶರಣಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ. ಸುಮಾರು 12 ಗಂಟೆಗಳ ಕಾರ್ಯಾಚರಣೆ ನಡೆಸಿ ನಿನ್ನೆ ಮಧ್ಯಾಹ್ನ 3.30ರ ಸುಮಾರಿಗೆ ಶಂಕಿತ ಉಗ್ರನನ್ನು ಬಂಧಿಸಲಾಗಿದೆ.