ಪ್ರಯಾಣಿಕರ ಸೋಗಿನಲ್ಲಿ ಚಿನ್ನ ಸಾಗಟ ಮಾಡುತ್ತಿದ್ದ ಸ್ಮಗ್ಲರ್ಸ್ ಅರೆಸ್ಟ್​; 69.74 ಲಕ್ಷ ಮೌಲ್ಯದ ಚಿನ್ನ ಜಪ್ತಿ

ಒಮ್ನಿ ಕಾರು ಸಮೇತ ಹಳ್ಳದ ನೀರಲ್ಲಿ ವೃದ್ಧ ಕೊಚ್ಚಿ ಹೋಗಿರುವಂತಹ ಘಟನೆ ತುರುವೇಕೆರೆ ತಾಲೂಕಿನ ಕೊಂಡಜ್ಜಿ ಕ್ರಾಸ್ ಬಳಿ ನಡೆದಿದೆ.

ಪ್ರಯಾಣಿಕರ ಸೋಗಿನಲ್ಲಿ ಚಿನ್ನ ಸಾಗಟ ಮಾಡುತ್ತಿದ್ದ ಸ್ಮಗ್ಲರ್ಸ್ ಅರೆಸ್ಟ್​; 69.74 ಲಕ್ಷ ಮೌಲ್ಯದ ಚಿನ್ನ ಜಪ್ತಿ
ಸೋಪ್ ರೀತಿಯಲ್ಲಿ ಚಿನ್ನ ಸಾಗಿಸುತ್ತಿದ್ದ ಇಬ್ಬರು ವಶಕ್ಕೆ
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Aug 04, 2022 | 9:56 AM

ಬೆಂಗಳೂರು: ಪ್ರಯಾಣಿಕರ ಸೋಗಿನಲ್ಲಿ ಚಿನ್ನ ಸಾಗಟ ಮಾಡುತ್ತಿದ್ದ ಇಬ್ಬರೂ ಸ್ಮಗ್ಲರ್ಸ್​ (Smugglers) ​ಗಳನ್ನು ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರಿಂದ 69.74 ಲಕ್ಷ ಮೌಲ್ಯದ 1 ಕೆಜಿ 334 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ. ಶ್ರೀಲಂಕಾದಿಂದ ಬೆಂಗಳೂರಿಗೆ ಬಂದಿದ್ದ ಪ್ರಯಾಣಿಕರು, ಸೋಪ್ ರೀತಿಯಲ್ಲಿ ಚಿನ್ನವನ್ನ ಇಬ್ಬರು ಸಾಗಾಟ ಮಾಡುತ್ತಿದ್ದರು. ಈ ವೇಳೆ ಲಗೇಜ್​​ನಲ್ಲಿದ್ದ ಸೋಪ್ ಮಾದರಿಯ ವಸ್ತುಗಳನ್ನ ಪರಿಶೀಲಿಸಿದಾಗ ಚಿನ್ನ ಪತ್ತೆಯಾಗಿದೆ. ಇಬ್ಬರು ಪ್ರಯಾಣಿಕರನ್ನ ವಶಕ್ಕೆ ಪಡೆದು ಕಸ್ಟಮ್ಸ್ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ.

ಎಟಿಎಂ ಕಳುವಿಗೆ ವಿಫಲ ಯತ್ನ: ಪೊಲೀಸರನ್ನ ಕಂಡು ಕಳ್ಳರು ಪರಾರಿ

ದೇವನಹಳ್ಳಿ: ಮಹಿಂದ್ರಾ ಕೋಟಕ್ ಬ್ಯಾಂಕ್​ನ ಎಟಿಎಂ ಕಳುವಿಗೆ ವಿಫಲ ಪ್ರಯತ್ನ ಪಟ್ಟಿದ್ದು, ಪೊಲೀಸರನ್ನ ಕಂಡು ಬೊಲೇರೋ ಕಾರಲ್ಲಿ ಕಳ್ಳರು ಎಸ್ಕೆಪ್ ಆಗಿರುವಂತಹ ಘಟನೆ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಜೂನಿಯರ್ ಕಾಲೇಜು ಮುಂಭಾಗ ಇರೋ ಮಹಿಂದ್ರಾ ಕೊಟಕ್ ಬ್ಯಾಂಕ್ ಎಟಿಎಂನಲ್ಲಿ ಮಧ್ಯರಾತ್ರಿ 12.10 ಕ್ಕೆ ಎಟಿಎಂಗೆ ಕನ್ನ ಹಾಕಲು ಬೊಲೆರೋ ವಾಹನದಲ್ಲಿ ಬಂದಿರೋ ಶಂಕೆ ವ್ಯಕ್ತವಾಗಿದೆ. ಎಟಿಎಂ ಹೊಡೆದು ಕಳ್ಳತನ ಮಾಡುವ ವೇಳೆ ಅಕ್ಕಪಕ್ಕದ ಮನೆಯವರು ಕೂಗಾಡಿದ್ದಾರೆ. ಎಸ್ಕೇಪ್ ಆದ ಕಳ್ಳರಿಗಾಗಿ ಪೊಲೀಸರಿಂದ ಶೋಧ ನಡೆಯುತ್ತಿದ್ದು, ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್ಪಿ ಪುರುಷೋತ್ತಮ್ ಭೇಟಿ ಪರಿಶೀಲನೆ ಮಾಡಿದರು. ವಿಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಒಮ್ನಿ ಕಾರು ಸಮೇತ ಹಳ್ಳದಲ್ಲಿ ಕೊಚ್ಚಿ ಹೋದ ವೃದ್ಧ

ತುಮಕೂರು: ಒಮ್ನಿ ಕಾರು ಸಮೇತ ಹಳ್ಳದ ನೀರಲ್ಲಿ ವೃದ್ಧ ಕೊಚ್ಚಿ ಹೋಗಿರುವಂತಹ ಘಟನೆ ತುರುವೇಕೆರೆ ತಾಲೂಕಿನ ಕೊಂಡಜ್ಜಿ ಕ್ರಾಸ್ ಬಳಿ ನಡೆದಿದೆ. ಪಟೇಲ್​ ಕುಮಾರ್ (70) ಹಳ್ಳದಲ್ಲಿ ಕೊಚ್ಚಿ ಹೋದ ವೃದ್ಧ. ಪಟೇಲ್​ ಕುಮಾರ್​ಗಾಗಿ ಶೋಧ ಕಾರ್ಯ ಮುಂದುವರೆದಿದೆ. ಕಾರಿನಲ್ಲಿದ್ದ ಮತ್ತೋರ್ವ ವ್ಯಕ್ತಿ ಪುಟ್ಟಸಿದ್ದಪ್ಪ ಅಪಾಯದಿಂದ ಪಾರಾಗಿದ್ದಾರೆ. ತಡರಾತ್ರಿ ಸೇತುವೆ ದಾಟುತ್ತಿದ್ದಾಗ ಅವಘಡ ಸಂಭವಿಸಿದೆ. ದಂಡಿನಶಿವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮೆಡಿಕಲ್ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ

ಕೋಲಾರ: ಕುತ್ತಿಗೆ ಕುಯ್ದುಕೊಂಡು ಮೆಡಿಕಲ್ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವಂತಹ ಘಟನೆ ನಗರದ ಟಮಕ ದಲ್ಲಿರುವ ದೇವರಾಜ ಅರಸು ಮೆಡಿಕಲ್ ಕಾಲೇಜುನಲ್ಲಿ ನಡೆದಿದೆ. ಹರಿಯಾಣ ಮೂಲದ ಪ್ರದೀಪ್ ಶರ್ಮ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಗಲ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada