ಆನ್​ಲೈನ್​ನಲ್ಲಿ ಲ್ಯಾಪ್​ಟಾಪ್ ಮಾರಾಟ ಮಾಡುವುದಾಗಿ ಜಾಹೀರಾತು ನೀಡಿದ್ದ ಆರೋಪಿ ಅರೆಸ್ಟ್! ಆನೆ ದಂತ ಬಚ್ಚಿಟ್ಟಿದ ಕೇರಳದ ವ್ಯಕ್ತಿ ಬಂಧನ

ಪ್ಯಾಕಿಂಗ್ ಚಾರ್ಜ್, ಶಿಪ್ಪಿಂಗ್ ಚಾರ್ಜ್ ಅಂತಾ ಆರೋಪಿ ಸುಮಾರು 72 ಸಾವಿರ ರೂ. ಪಡೆದಿದ್ದ. ಬಳಿಕ ಲ್ಯಾಪ್​ಟಾಪ್​​ ಬದಲು ಖಾಲಿ ಪಾರ್ಸೆಲ್ ಕಳುಹಿಸಿದ್ದ. ಈ ಬಗ್ಗೆ ದೂರುದಾರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.

ಆನ್​ಲೈನ್​ನಲ್ಲಿ ಲ್ಯಾಪ್​ಟಾಪ್ ಮಾರಾಟ ಮಾಡುವುದಾಗಿ ಜಾಹೀರಾತು ನೀಡಿದ್ದ ಆರೋಪಿ ಅರೆಸ್ಟ್! ಆನೆ ದಂತ ಬಚ್ಚಿಟ್ಟಿದ ಕೇರಳದ ವ್ಯಕ್ತಿ ಬಂಧನ
ಆನೆ ದಂತ ಬಚ್ಚಿಟ್ಟಿದ್ದ ಆರೋಪಿ
Follow us
TV9 Web
| Updated By: sandhya thejappa

Updated on:Jun 11, 2022 | 9:22 AM

ಬೆಂಗಳೂರು: ಆನ್​ಲೈನ್​ನಲ್ಲಿ (Online) ಲ್ಯಾಪ್​ಟಾಪ್​ ಮಾರಾಟ ಮಾಡುವುದಾಗಿ ನಂಬಿಸಿ ವಂಚಿಸಿದ್ದ ನವದೆಹಲಿ ಮೂಲದ ಆರೋಪಿಯನ್ನು ಬೆಂಗಳೂರಿನ ಈಶಾನ್ಯ ವಿಭಾಗದ ಸಿಇಎನ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಮನ್ ಕುಮಾರ್(20) ಬಂಧನಕ್ಕೆ ಒಳಗಾದ ಆರೋಪಿ. ಈತ ಒಎಲ್ಎಕ್ಸ್​ನಲ್ಲಿ (OLX) 1.50 ಲಕ್ಷ ರೂ. ಮೌಲ್ಯದ ಲ್ಯಾಪ್​ಟಾಪ್​ ಜಾಹೀರಾತು ನೀಡಿದ್ದ. ಇದನ್ನು ಗಮನಿಸಿದ ದೂರುದಾರ ಅಮನ್ ಕುಮಾರ್​ನ ಸಂಪರ್ಕಿಸಿದ್ದರು. ಈ ವೇಳೆ ಪ್ಯಾಕಿಂಗ್ ಚಾರ್ಜ್, ಶಿಪ್ಪಿಂಗ್ ಚಾರ್ಜ್ ಅಂತಾ ಆರೋಪಿ ಸುಮಾರು 72 ಸಾವಿರ ರೂ. ಪಡೆದಿದ್ದ. ಬಳಿಕ ಲ್ಯಾಪ್​ಟಾಪ್​​ ಬದಲು ಖಾಲಿ ಪಾರ್ಸೆಲ್ ಕಳುಹಿಸಿದ್ದ. ಈ ಬಗ್ಗೆ ದೂರುದಾರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.

ಆನೆ ದಂತ ಬಚ್ಚಿಟ್ಟಿದ ಆರೋಪಿ ಬಂಧನ: ಚಾಮರಾಜನಗರ: ಆನೆ ದಂತ ಬಚ್ಚಿಟ್ಟಿದ ಕೇರಳ ಮೂಲದ ಆರೋಪಿಯನ್ನು ಬಂಧಿಸಲಾಗಿದೆ. 56 ವರ್ಷದ  ಬಾಲನ್ ಬಂಧಿತ ಆರೋಪಿ. ಈತ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಕಣಿಯನಪುರ ಕಾಲೋನಿ ಬಳಿ ಬಚ್ಚಿಟ್ಟಿದ್ದ. ಚಾಮರಾಜನಗರ ಅರಣ್ಯ ಸಂಚಾರಿ ದಳ ಪೊಲೀಸರು ಕಾರ್ಯಾಚರಣೆ ನಡೆಸಿ 3 ದಂತವನ್ನು ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ: Rajya Sabha Election Result: ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಭರ್ಜರಿ ಜಯ; ತಲಾ 1 ಸ್ಥಾನ ಪಡೆದ ಮೈತ್ರಿಕೂಟ

ಇದನ್ನೂ ಓದಿ
Image
545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಭ್ರಷ್ಟಾಚಾರ ಪ್ರಕರಣ; ದಿವ್ಯಾ ಹಾಗರಗಿ ಸೇರಿ 8 ಆರೋಪಿಗಳ ಜಾಮೀನು ಅರ್ಜಿ ತಿರಸ್ಕೃತ
Image
Baramulla: ಜಮ್ಮು ಕಾಶ್ಮೀರದ ಬರಾಮುಲ್ಲಾದಲ್ಲಿ ಇಬ್ಬರು ಎಲ್​ಇಟಿ ಉಗ್ರರ ಬಂಧನ
Image
ಮೊಡವೆ ಕಲೆಗಳಿಗೆ ನಿಮ್ಮ ಮನೆಯಲ್ಲೇ ಇದೆ ಪರಿಹಾರ
Image
LPL 2022: ಆರ್ಥಿಕ ಬಿಕ್ಕಟ್ಟಿನ ನಡುವೆ ಲಂಕಾ ಪ್ರೀಮಿಯರ್ ಲೀಗ್ ಘೋಷಣೆ: ಜುಲೈ 31 ರಿಂದ ಆರಂಭ

ಹಣ ಕಳವಿಗೆ ಯತ್ನಿಸಿದ ಆರೋಪಿ ಅಂದರ್:

ನೆಲಮಂಗಲ: ಬೆಂಗಳೂರಿನ ಹೆಸರಘಟ್ಟ ರಸ್ತೆಯ ಚಿಕ್ಕಸಂದ್ರದಲ್ಲಿ ಎಟಿಎಂ ಮಷೀನ್​ನಲ್ಲಿ ಹಣ ಕಳವಿಗೆ ಯತ್ನಿಸಿದ ಅರೋಪಿಯನ್ನು ಬಂಧಿಸಲಾಗಿದೆ. ಪಂಜಾಬ್ ಮೂಲದ ಸಮರೋಜಿತ್ ಸಿಂಗ್ ಬಂಧನಕ್ಕೆ ಒಳಗಾದ ಆರೋಪಿ. ಕೆನರಾ ಬ್ಯಾಂಕ್ ಬಳಿ ಹಣ ಕಳವಿಗೆ ಯತ್ನಿಸುವಾಗಲೇ ಬಲೆಗೆ ಬಿದ್ದಿದ್ದಾನೆ. ಚಾಕು, ರಾಡ್,ಗ್ಯಾಸ್ ಸಿಲಿಂಡರ್, ಕಟರ್ ಸೇರಿದಂತೆ ಹಲವು ಸಾಧನಗಳನ್ನ ಜಪ್ತಿ ಮಾಡಲಾಗಿದೆ. ಅರೋಪಿ ಹಿಂದೆಯೂ ಹಲವು ಪ್ರಕರಣಗಳಲ್ಲಿ ಜೈಲುವಾಸ ಅನುಭವಿಸಿ ಬಂದಿದ್ದ. ಸದ್ಯ ಈ ಪ್ರಕರಣ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:18 am, Sat, 11 June 22

ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು