ಬೆಂಗಳೂರು: ಎಲ್ಲಾ ಭಾಗ್ಯಗಳು ನಮ್ಮದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅದಕ್ಕಾಗಿ ಇಂದು PFI ಭಾಗ್ಯ ಪೋಸ್ಟರ್ ಬಿಡುಗಡೆ ಮಾಡುತ್ತಿದ್ದೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಟ್ಟಪ್ಪ, ರುದ್ದೇಶ್, ಶರತ್ ಹತ್ಯೆ ಕೇಸ್ ಹಾಕಲು ಹಿಂದೇಟಾಕಿದರು. ಕಾರ್ಯಕರ್ತರ ಹತ್ಯೆಯಾದ ಬಳಿಕ ಕೇಸ್ ಹಾಕಲು ಹಿಂಜರಿದರು. ಇದೆಲ್ಲವನ್ನೂ ನೋಡಿದರೆ ಕಾಂಗ್ರೆಸ್ ಸೂತಕ ಮನೆಯಾಗಿದೆ. ಅದಕ್ಕೆ ಅವರ ಮನೆಯವರನ್ನ ಬ್ಯಾನ್ ಮಾಡಲಾಗಿದೆ. ಕೊಡಗು, ಮೈಸೂರು, ಮಂಗಳೂರಿನಲ್ಲಿ ಟ್ರೈನಿಂಗ್ ನೀಡಲಾಗಿದೆ. ಬೈಕ್ ನಲ್ಲಿ ಹೋಗುವಾಗ ಹೇಗೆ ಕತ್ತು ಕಡಿಯಬೇಕು. ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಹೇಗೆ ಮಾಡಬೇಕು ಅಂತ ತರಬೇತಿ ನೀಡಲಾಗಿದೆ. ಕೇರಳದ ನಿವೃತ್ತ ಪೊಲೀಸರಿಂದ ಟ್ರೈನಿಂಗ್ ನೀಡಿರುವ ಮಾಹಿತಿಯಿದೆ. ನಾವೇ ಹೇಳಿದ್ದು, ಅದಕ್ಕೆ ಬ್ಯಾನ್ ಮಾಡಿದ್ದಾರೆಂದು ಸಿದ್ದರಾಮಯ್ಯ ಹೇಳುತ್ತಾರೆ ಅವರಿಗೆ ನಾಚಿಕೆಯಾಗಬೇಕು. ಅವರು ಕ್ಷಮೆ ಕೇಳಬೇಕು ಎಂದು ಸಚಿವ ಆರ್.ಅಶೋಕ್ ಗುಡುಗಿದರು.
PFI, ಕೆಎಫ್ಡಿ ವಿರುದ್ಧ 1,600 ಕೇಸ್ಗಳನ್ನು ಹಾಕಲಾಗಿತ್ತು. ಪೊಲೀಸರ ಮೇಲೆ, ಜನರ ಮೇಲೆ ಹಲ್ಲೆ ಎಂದು ಕೇಸ್ ದಾಖಲು ಮಾಡಲಾಗಿದೆ. ಸಿದ್ದರಾಮಯ್ಯ ಈ ಎಲ್ಲ 1,600 ಪ್ರಕರಣ ಹಿಂಪಡೆದಿದ್ದಾರೆ. ಪ್ರಕರಣ ವಾಪಸ್ ಪಡೆಯಬಾರದು ಎಂದು ವರದಿ ಕೊಟಿದ್ದರು. ಅಂದಿನ ಡಿಜಿಪಿ ಕೇಸ್ ಹಿಂಪಡೆಯದಂತೆ ವರದಿ ನೀಡಿದ್ದರು. ಆದರೂ ಸಿದ್ದರಾಮಯ್ಯ ಪ್ರಕರಣ ಹಿಂಪಡೆದಿದ್ದಾರೆ ಎಂದು ಹೇಳಿದರು. ಇನ್ನು ಭಾರತ್ ಜೋಡೋ ಸಾಗುವ ಮಾರ್ಗದಲ್ಲಿ ಬಿಜೆಪಿ ಕಾರ್ಯಕರ್ತರು ಪೋಸ್ಟರ್ ಅಂಟಿಸಿದ್ದಾರೆ. ಪಾಂಡವರ ಸುತ್ತಮುತ್ತಲಿನ ರಸ್ತೆಗಳಲ್ಲಿ ಕನ್ನಡ ಬಾವುಟ ಬಳಕೆ, ಸಿದ್ದರಾಮಯ್ಯ ವಿರುದ್ಧ ಪೋಸ್ಟರ್ ಅಂಟಿಸಲಾಗಿದೆ.
ಮೋದಿ ವಿರುದ್ಧ ಹೋರಾಡುವ ಧಮ್ ಇವರಿಗಿಲ್ಲ: ಸಚಿವ ಆರ್.ಅಶೋಕ್
ಭಾರತ್ ಜೋಡೋ ಯಾತ್ರೆಗೆ ಆರ್.ಅಶೋಕ್ ಲೇವಡಿ ಮಾಡಿದ್ದು, ಇದು ಪ್ರಾಯಶ್ಚಿತ್ತದ ಯಾತ್ರೆ ಎಂದು ಹೇಳಿದರು. ಭಾರತ ದೇಶವನ್ನು ಒಡೆದು ಪಾಕಿಸ್ತಾನ ಮಾಡಿದ್ದು ನೆಹರು. ನೆಹರು ಪ್ರಧಾನಿಯಾಗಬೇಕೆಂದು ದೇಶವನ್ನು ಒಡೆದರು ಎಂದು ಬೆಂಗಳೂರಿನಲ್ಲಿ ಆರ್.ಅಶೋಕ್ ಹೇಳಿಕೆ ನೀಡಿದರು. ಮೋದಿ ವಿರುದ್ಧ ಹೋರಾಡುವ ಧಮ್ ಇವರಿಗಿಲ್ಲ. ದೇಶದಲ್ಲಿ ರಾಹುಲ್ ಗಾಂಧಿ ವಾಯುವಿಹಾರ ಮಾಡುತ್ತಿದ್ದಾರೆ. ನ್ಯಾಷನಲ್ ಹೆರಾಲ್ಡ್ ಹೆಸರಲ್ಲಿ ಕೋಟಿಗಟ್ಟಲೇ ಹಣ ಮಾಡಿ, ಕಟಕಟೆಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.
ಗಾಂಧೀಜಿ ಹೇಳಿದ ರಾಷ್ಟ್ರೀಯ ಕಾಂಗ್ರೆಸ್ ಮುಚ್ಚಲಾಗಿದೆ. ಈಗ ಇರುವುದು ಭ್ರಷ್ಟಾಚಾರದ ಕಾಂಗ್ರೆಸ್. ರಾಜಸ್ಥಾನ ಮತ್ತು ಛತ್ತೀಸ್ಗಢ ಮಾತ್ರ ಇರುವ ಕಾಂಗ್ರೆಸ್ ಅಲ್ಲೂ ಈಗ ಅಲ್ಲಾಡುತ್ತಿದೆ. ಇಲ್ಲಿ ಎಟಿಎಂ ಮಾಡಿಕೊಳ್ಳಲು ಕರ್ನಾಟಕಕ್ಕೆ ಬರುತ್ತಿದ್ದಾರೆ. ಸ್ಟೀಲ್ ಬ್ರಿಡ್ಜ್‌ನಲ್ಲಿ ಕೋಟ್ಯಾಂತರ ಅವ್ಯವಹಾರ ಆಗಿದೆ ಅಂತ ಜನ ಹೋರಾಟ ಮಾಡಿದ್ದರು ಎಂದು ಹೇಳಿದರು.
ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಪ್ರಕರಣ ವರ್ಗಾವಣೆ
Published On - 4:16 pm, Mon, 3 October 22