ಎಎಸ್ಐ ಮತ್ತು ಪುತ್ರನಿಂದ ಹಲ್ಲೆ ಆರೋಪ; ಮಗಳನ್ನು ಕಿಡ್ನಾಪ್ ಮಾಡಲು ಬಂದಿದ್ದಾರೆಂದು ಹಿಗ್ಗಾಮುಗ್ಗಾ ಥಳಿತ

| Updated By: preethi shettigar

Updated on: Oct 19, 2021 | 8:19 AM

ಎಎಸ್ಐ ರಾಜಾಸಾಬ್ ಪುತ್ರ ಅಬ್ದುಲ್ ಮುನಾಫ್ ಜತೆ ಸೇರಿ, ಪತ್ನಿಯ ಅಣ್ಣನ ಮಕ್ಕಳಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಕೆಜಿ ಹಳ್ಳಿ ಠಾಣೆಯಲ್ಲಿ ಅಸಿಸ್ಟೆಂಟ್ ಸಬ್ ಇನ್ಸ್​ಪೆಕ್ಟರ್​ ಆಗಿರುವ ರಾಜಾಸಾಬ್ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಎಎಸ್ಐ ಮತ್ತು ಪುತ್ರನಿಂದ ಹಲ್ಲೆ ಆರೋಪ; ಮಗಳನ್ನು ಕಿಡ್ನಾಪ್ ಮಾಡಲು ಬಂದಿದ್ದಾರೆಂದು ಹಿಗ್ಗಾಮುಗ್ಗಾ ಥಳಿತ
ಎಎಸ್ಐ ರಾಜಾಸಾಬ್ ಕುಟುಂಬ
Follow us on

ಬೆಂಗಳೂರು: ಎಎಸ್ಐ ಮತ್ತು ಅವರ ಪುತ್ರ ಸೇರಿ ಯುವಕರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಡು ರಸ್ತೆಯಲ್ಲಿ ಅಪ್ಪ ಮತ್ತು ಮಗ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಎಎಸ್ಐ ರಾಜಾಸಾಬ್ ಪುತ್ರ ಅಬ್ದುಲ್ ಮುನಾಫ್ ಜತೆ ಸೇರಿ, ಪತ್ನಿಯ ಅಣ್ಣನ ಮಕ್ಕಳಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕೆಜಿ ಹಳ್ಳಿ ಠಾಣೆಯಲ್ಲಿ ಅಸಿಸ್ಟೆಂಟ್ ಸಬ್ ಇನ್ಸ್​ಪೆಕ್ಟರ್​ ಆಗಿರುವ ರಾಜಾಸಾಬ್ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ರೂಪ ಸಿದ್ದಿಯ ಪತಿ ರಾಜಾಸಾಬ್ ಮತ್ತು ಮಗ ಅಬ್ದುಲ್ ಮುನಾಫ್, ಬಾಲಚಂದ್ರ ಸಿದ್ಧಿ ಮತ್ತು ಸಹೋದರ ಲೋಕೇಶ್ ಸಿದ್ಧಿ ಮೇಲೆ ಹಲ್ಲೆ ಮಾಡಿದ್ದಾರೆ. ರೂಪ ಸಿದ್ಧಿ ಮಹಿಳಾ ಆಯೋಗದಲ್ಲಿ ಹೆಡ್ ಕಾನ್ಸ್​ಟೇಬಲ್​ ಆಗಿದ್ದು, ಅವರ ಅಣ್ಣನ ಮಕ್ಕಳಿಗೆ ಮುಖ ಹಾಗೂ ತಲೆಗೆ ರಾಡ್​ನಿಂದ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ.

ತಂದೆಯ ಜೊತೆ ಸೇರಿ ರೌಡಿಯಂತೆ ವರ್ತಿಸಿದ ಮಗ ಅಬ್ದುಲ್ ಮುನಾಫ್?
ಸುರೇಶ್ ರಾಮಚಂದ್ರ ಸಿದ್ದಿ ತಂಗಿಯಾಗಿರುವ ರೂಪ ಸಿದ್ದಿಯ ಪತಿ ರಾಜಾಸಾಬ್, ಸುರೇಶ್ ರಾಮಚಂದ್ರ ಸಿದ್ದಿ ಪುತ್ರ ಬಾಲಚಂದ್ರ ಸಿದ್ದಿ ಮೇಲೆ ಹಲ್ಲೆ ಮಾಡಿದ್ದಾರೆ. ಅಕ್ಟೋಬರ್ 15 ರಂದು ಅತ್ತಿಬೆಲೆಯ ಸಾಗರ್ ಹೋಟೆಲ್ ಬಳಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಮಂಚಿಕೇರಿ ಮೂಲದ ಸಿದ್ದಿ ಕುಟುಂಬದ ಮೇಲೆ ಹಲ್ಲೆ ಮಾಡಲಾಗಿದೆ.

ಎಎಸ್ಐ ಕುಟುಂಬ ಹಲ್ಲೆ ಮಾಡಲು ಕಾರಣ ಏನು ಗೊತ್ತಾ?
ರಾಜಾಸಾಬ್ ಹಾಗೂ ರೂಪ ಸಿದ್ಧಿ ಮಗಳನ್ನು ಬಾಲಚಂದ್ರ ಸಿದ್ದಿ ಪ್ರೀತಿಸುತ್ತಿದ್ದ. ಇಬ್ಬರು 2 ವರ್ಷದಿಂದ ಪರಸ್ಪರ ಪ್ರೀತಿ ಮಾಡುತ್ತಾ ಇದ್ದರು. ಆದರೆ ಇತ್ತೀಚೆಗೆ ಕುಟುಂಬದಿಂದ ವಿರೋಧ ವ್ಯಕ್ತವಾಗಿತ್ತು. ಹಾಗಾಗಿ ಪ್ರೀತಿ ಸಹವಾಸವೇ ಬೇಡ ಎಂದು ನಿರ್ಧರಿಸಿದ್ದ ಬಾಲಚಂದ್ರ ಸಿದ್ದಿ. ಈ ಮಧ್ಯೆ ಕಳೆದ 10 ದಿನಗಳ ಹಿಂದೆ ಕೆಲಸ ಅರಸಿ ಬೆಂಗಳೂರಿಗೆ ಬಾಲಚಂದ್ರ ಮತ್ತು ಲೋಕೇಶ್ ಬಂದಿದ್ದಾರೆ. ಇದೇ ದಿನ ರಾಜಾಸಾಬ್ ಮತ್ತು ರೂಪ ಸಿದ್ದಿ ಮಗಳು ಮನೆಯಲ್ಲಿ ಕಾಣಿಸಲಿಲ್ಲ. ಹೀಗಾಗಿ ಬಾಲಚಂದ್ರ ಸಿದ್ದಿ ಮತ್ತು ಲೋಕೇಶ್ ಸಿದ್ದಿ ಕಿಡ್ನಾಪ್ ಮಾಡಿದ್ದಾರೆಂದು ಅನುಮಾನ ಮೂಡಿದ್ದು, ಹಲ್ಲೆ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ:
ವಿಜಯಪುರ: ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯನಟ ರಾಜು ತಾಳಿಕೋಟೆ ವಿರುದ್ಧ ಹಲ್ಲೆ ಆರೋಪ

ಆಸ್ಪತ್ರೆ ಕಾಂಪೌಂಡ್ ಒತ್ತುವರಿ ತೆರವಿಗೆ ಹೋಗಿದ್ದ ಪಿಡಿಓ ಮೇಲೆ ಹಲ್ಲೆ; ಬಾಲಚಂದ್ರ ಜಾರಕಿಹೊಳಿ ಆಪ್ತನಿಂದ ಧಮ್ಕಿ

Published On - 8:14 am, Tue, 19 October 21