ಆಸ್ಪತ್ರೆ ಕಾಂಪೌಂಡ್ ಒತ್ತುವರಿ ತೆರವಿಗೆ ಹೋಗಿದ್ದ ಪಿಡಿಓ ಮೇಲೆ ಹಲ್ಲೆ; ಬಾಲಚಂದ್ರ ಜಾರಕಿಹೊಳಿ ಆಪ್ತನಿಂದ ಧಮ್ಕಿ

ಆಸ್ಪತ್ರೆ ಕಾಂಪೌಂಡ್ ಒತ್ತುವರಿ ತೆರವಿಗೆ ಹೋಗಿದ್ದ ಪಿಡಿಓ ಮೇಲೆ ಹಲ್ಲೆ; ಬಾಲಚಂದ್ರ ಜಾರಕಿಹೊಳಿ ಆಪ್ತನಿಂದ ಧಮ್ಕಿ
ಆಸ್ಪತ್ರೆ ಕಾಂಪೌಂಡ್ ಒತ್ತುವರಿ ತೆರವಿಗೆ ಹೋಗಿದ್ದ ಪಿಡಿಓ ಮೇಲೆ ಹಲ್ಲೆ; ಬಾಲಚಂದ್ರ ಜಾರಕಿಹೊಳಿ ಆಪ್ತನಿಂದ ಧಮ್ಕಿ

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆಯ ಕಾಂಪೌಂಡ್ ಒತ್ತುವರಿ ತೆರವು ಮಾಡಲು ಹೋಗಿದ್ದ PDO ವೀರಭದ್ರ ಗುಂಡಿ ಅವರ ಮೇಲೆ ಹಲ್ಲೆ ನಡೆದಿದೆ. ಪಿಡಿಓ ವೀರಭದ್ರಗೆ ಬಾಲಚಂದ್ರ ಜಾರಕಿಹೊಳಿ ಆಪ್ತ ಸಿದ್ದಪ್ಪ ಹಮ್ಮನವರ ಎಂಬಾತನಿಂದ ಧಮ್ಕಿ ಕೇಳಿಬಂದಿದೆ. ಮಹಿಳೆಯನ್ನ ಎಳೆದಾಡಿದ್ದೀಯಾ ಎಂದು ಕೇಸ್ ಕೊಡ್ತೇನಿ ಅಂತಾ ಸಿದ್ದಪ್ಪ ಧಮ್ಕಿ ಹಾಕಿದ್ದಾನೆ.

TV9kannada Web Team

| Edited By: sadhu srinath

Oct 16, 2021 | 1:26 PM


ಬೆಳಗಾವಿ: ಜಿಲ್ಲೆಯ ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆಯ ಕಾಂಪೌಂಡ್ ಒತ್ತುವರಿ ತೆರವು ಮಾಡಲು ಹೋಗಿದ್ದ PDO ವೀರಭದ್ರ ಗುಂಡಿ ಅವರ ಮೇಲೆ ಹಲ್ಲೆ ನಡೆದಿದೆ. ಸಿದ್ದಪ್ಪ, ಯಮನಪ್ಪ, ವೆಂಕಪ್ಪ ವಿರುದ್ಧ ಹಲ್ಲೆ ಆರೋಪ ಮಾಡಲಾಗಿದೆ. ಹಲ್ಲೆ ಮಾಡಿ ಧಮ್ಕಿ ಹಾಕಿರುವುದಾಗಿಯೂ PDO ಘಟಪ್ರಭಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹಲ್ಲೆ ಮಾಡುತ್ತಿರುವ ವಿಡಿಯೋ ಮೊಬೈಲ್ ನಲ್ಲಿ ಸೆರೆ ಹಿಡಿಯಲು ಮುಂದಾಗುತ್ತಿದ್ದಂತೆ ಮಹಿಳೆಯಿಂದ ಹೈಡ್ರಾಮಾ ನಡೆದಿದೆ. ತಾನೇ ಸೀರೆ ಹರಿದುಕೊಂಡು ನನ್ನನ್ನ ಪಿಡಿಓ ಎಳೆದಾಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಬಾಳವ್ವಾ ಹುಲಕುಂದ ಎಂಬ ಮಹಿಳೆ ಈ ಆರೋಪ ಮಾಡಿದ್ದಾರೆ.

ಪಿಡಿಓ ವೀರಭದ್ರಗೆ ಬಾಲಚಂದ್ರ ಜಾರಕಿಹೊಳಿ ಆಪ್ತ ಸಿದ್ದಪ್ಪ ಹಮ್ಮನವರ ಎಂಬಾತನಿಂದ ಧಮ್ಕಿ ಕೇಳಿಬಂದಿದೆ. ಮಹಿಳೆಯನ್ನ ಎಳೆದಾಡಿದ್ದೀಯಾ ಎಂದು ಕೇಸ್ ಕೊಡ್ತೇನಿ ಅಂತಾ ಸಿದ್ದಪ್ಪ ಧಮ್ಕಿ ಹಾಕಿದ್ದಾನೆ.

ಕರ್ತವ್ಯನಿರತ ಮೆಸ್ಕಾಂ ಸಿಬ್ಬಂದಿ ಮೇಲೆ ದೊಣ್ಣೆಯಿಂದ ಹಲ್ಲೆ:
ಮಂಗಳೂರು: ಮೇಕೆಯೊಂದು ಹೂವಿನ ಗಿಡ ತಿಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಕರ್ತವ್ಯನಿರತ ಮೆಸ್ಕಾಂ ಸಿಬ್ಬಂದಿ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಮೆಸ್ಕಾಂ ಕಚೇರಿ ಬಳಿ ಘಟನೆ ನಡೆದಿದೆ. ಉಪ್ಪಿನಂಗಡಿಯ ಪರಾರಿ ನಿವಾಸಿ ಇಸುಬು ಎಂಬುವನಿಂದ ಹಲ್ಲೆ ನಡೆದಿದೆ. ಮೆಸ್ಕಾಂ ಸಿಬ್ಬಂದಿ ವಿತೇಶ್ ಮತ್ತು ಸತೀಶ್ ಮೇಲೆ ಹಲ್ಲೆ ಮಾಡಲಾಗಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಇಸುಬು ಸಾಕಿದ್ದ ಆಡುಗಳು ಮೆಸ್ಕಾಂ ಕಚೇರಿಗೆ ನುಗ್ಗಿ ಹೂವಿನ ಗಿಡಗಳನ್ನು ತಿಂದಿದ್ದವು. ಪ್ರತೀ ನಿತ್ಯ ಮೆಸ್ಕಾಂ ಕಚೇರಿಗೆ ನುಗ್ಗಿ ಆಡುಗಳಿಂದ ಉಪಟಳವಾಗುತ್ತಿತ್ತು. ಹೀಗಾಗಿ ಆಡುಗಳನ್ನು ಓಡಿಸಿ, ಇಸುಬುಗೆ ಮೆಸ್ಕಾಂ ಸಿಬ್ಬಂದಿ ಎಚ್ಚರಿಕೆ ನೀಡಿದ್ದರು. ಇದಕ್ಕೆ ಪ್ರತೀಕಾರವಾಗಿ ದೊಣ್ಣೆ ಹಿಡಿದುಕೊಂಡು ಬಂದು ಆತ ಕಚೇರಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಹಲ್ಲೆಯ ದೃಶ್ಯಗಳನ್ನು ಮೆಸ್ಕಾಂ ಸಿಬ್ಬಂದಿ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

ಗುಲಾಬಿ ಬಣ್ಣಕ್ಕೆ ಮಾರುಹೋದ ಬಾಲಿವುಡ್ ನಟಿಯರು|Navaratri Festival Style|TV9 FASHION SHOWCASE

(hospital encroachment pdo attacked allegedly by balachandra jarkiholi supporter)

Follow us on

Related Stories

Most Read Stories

Click on your DTH Provider to Add TV9 Kannada