ಬೆಂಗಳೂರು: ಕರೆಂಟ್​ ಬಿಲ್​ ಜಾಸ್ತಿ ಬಂತೆಂದು ಮೀಟರ್​​​ ರೀಡರ್​ ಮೇಲೆ ಹಲ್ಲೆ

|

Updated on: Aug 08, 2023 | 12:00 PM

ಕರೆಂಟ್​ ಬಿಲ್​ ಜಾಸ್ತಿ ಬಂತೆಂದು ಮೀಟರ್​​​ ರೀಡರ್​​ನನ್ನು ಥಳಿಸಿರುವ ಘಟನೆ ಬೆಂಗಳೂರಿನ ಗೋವಿಂದಪುರದಲ್ಲಿ ನಡೆದಿದೆ.

ಬೆಂಗಳೂರು: ಕರೆಂಟ್​ ಬಿಲ್​ ಜಾಸ್ತಿ ಬಂತೆಂದು ಮೀಟರ್​​​ ರೀಡರ್​ ಮೇಲೆ ಹಲ್ಲೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಕರೆಂಟ್​ ಬಿಲ್ (Current Bill)​ ಜಾಸ್ತಿ ಬಂತೆಂದು ಬೆಸ್ಕಾಂನ (BESCOM) ಮೀಟರ್​​​ (Meter) ರೀಡರ್​​ನನ್ನು ಥಳಿಸಿರುವ ಘಟನೆ ಬೆಂಗಳೂರಿನ (Bengaluru) ಗೋವಿಂದಪುರದಲ್ಲಿ ನಡೆದಿದೆ. ಮೀಟರ್​ ರೀಡರ್​​ ನಾಗರಾಜ್​​ ನಾಯ್ಕ್​​ ಹಲ್ಲೆಗೊಳಗಾದ ವ್ಯಕ್ತಿ. ಶಂಶಾದ್​ ಖಾನ್​ (35) ಹಲ್ಲೆ ಮಾಡಿದ ವ್ಯಕ್ತಿ. ಘಟನೆಯಲ್ಲಿ ನಾಗರಾಜ್​​ ನಾಯ್ಕ್​ ಅವರ ಹಲ್ಲು ಮುರಿದಿದೆ. ಗೋವಿದಪುರದ 16ನೇ ಕ್ರಾಸ್​​ನಲ್ಲಿರುವ ಶಂಶಾದ್​ ಖಾನ್​ ಮನೆಯ ವಿದ್ಯುತ್​ ಮೀಟರ್​​​ನ್ನು ಇತ್ತೀಚಿಗೆ ಬದಲಾಯಿಸಲಾಗಿದ್ದು, ಹಳೆ ಮೀಟರ್​ ತೆಗೆದು ಹೊಸ ಮೀಟರ್​ ಅಳವಡಿಸಲಾಗಿದೆ.

ನಾಗರಾಜ್​​ ನಾಯ್ಕ್​ ಅವರು ಆ.4 ರಂದು ಬೆಳಿಗ್ಗೆ 11:30ರ ಸುಮಾರಿಗೆ ಶಂಶಾದ್​ ಖಾನ್​ ಅವರ ಮನೆಯ ಮೀಟರ್​ ರೀಡ್​ ಮಾಡಿ 458 ರೂ. ಬಾಕಿ ಬಿಲ್​ ಸೇರಿದಂತೆ ಒಟ್ಟು 4,026 ರೂ. ಬಿಲ್​ ನೀಡಿದ್ದಾರೆ. ಇದನ್ನು ಕಂಡ ಶಂಶಾದ್​ ಖಾನ್​​ ಕಳೆದ ಬಾರಿಗಿಂತ ಈ ಬಾರಿ ಮೂರರಿಂದ ನಾಲ್ಕು ಪಟ್ಟು ಹೆಚ್ಚು ಬಿಲ್ ಬಂದಿದೆ. ಇದು ಹೇಗೆ ಸಾಧ್ಯ ಎಂದು ನಾಗರಾಜ್ ಅವರ​ ಜೊತೆ ವಾಗ್ವಾದಕ್ಕಿಳಿದ್ದಿದ್ದಾರೆ.

ಇದಕ್ಕೆ ನಾಗರಾಜ್​ ನಾಯ್ಕ್​​ ನಾನು ಮೀಟರ್​ ರೀಡಿಂಗ್​ ಆಧರಿಸಿಯೇ ಬಿಲ್​ ನೀಡಿದ್ದೇನೆ ಎಂದು ಹೇಳಿದ್ದಾರೆ. ಆದರೆ ಶಂಶಾದ್​ ಖಾನ್​, ನಾಗರಾಜ್​ ನಾಯ್ಕ್​ ಅವರ ಜಗಳಕ್ಕೆ ಇಳಿದಿದ್ದಾನೆ. ಈ ವೇಳೆ ನಾಗರಾಜ್​​, ಶಂಶಾದ್​ ಖಾನ್ ಜೊತೆ ಮಾತು ಆಲಿಸದೆ ಅಕ್ಕಪಕ್ಕದ ಮನೆಗಳ ಮೀಟಿರ್​ ರೀಡ್​​ ಮಾಡಲು ಹೋದರು. ನಾಗರಾಜ್​ ನಾಯ್ಕ್​​ ಮೂರ್ನಾಲ್ಕು ಮನೆ ದಾಟಿ ಮುಂದೆ ಹೋಗುತ್ತಿದ್ದಂತೆ ಹಿಂದೆಯೇ ಬಂದ ಶಂಶಾದ್​ ಖಾನ್, ನಾಗರಾಜ್​ ನಾಯ್ಕ್​​ ಅವರ ಬಳಿಗೆ ಹೋಗಿ ಮತ್ತೆ ಜಗಳ ತೆಗೆದಿದ್ದಾರೆ.

ಇದನ್ನೂ ಓದಿ: ಹನಿಟ್ರ್ಯಾಪ್​ ಜಾಲದಲ್ಲಿ ಸಿಲುಕಿ ಲಕ್ಷ ಲಕ್ಷ ಹಣ ಕಳೆದುಕೊಂಡ ಕರ್ನಾಟಕದ ಮಾಜಿ ಸಿಎಂ ವಿಶೇಷ ಅಧಿಕಾರಿ

ಆಗ ನಾಗರಾಜ್​ ನಾಯ್ಕ್​ ಬೆಸ್ಕಾಂ ಕಚೇರಿಗೆ ಭೇಟಿ ನೀಡುವಂತೆ ಸಲಹೆ ನೀಡಿದ್ದಾರೆ. ಈ ವೇಳೆ ಶಂಶಾದ್​​ ಖಾನ್​​, ನಾಗರಾಜ್​ ನಾಯ್ಕ್​ ಅವರ ಮುಖಕ್ಕೆ ಮೂರ್ನಾಲ್ಕು ಬಾರಿ ಗುದ್ದಿದ್ದಾನೆ. ಇದರಿಂದ ನಾಗರಾಜ್​ ಅವರ ಒಂದು ಹಲ್ಲು ಮುರಿದಿದೆ. ಇದರಿಂದ ತೀವ್ರ ರಕ್ತಸ್ರಾವಗಿತ್ತಿದ್ದಂತೆ ನಾಗರಾಜ್​​ ಅಲ್ಲಿಂದ ಕಾಲ್ಕಿತ್ತು ಪಕ್ಕದ ಬೀದಿಯ ಮನೆಯೊಂದರ ಬಳಿ ಹೋಗಿ ನಿಂತರು. ಅಲ್ಲಿಗೂ ಶಂಶದ್​ ಖಾನ್​ ಹಿಂಬಾಲಿಸಿಕೊಂಡು ಬಂದು ಜಗಳ ತೆಗೆದಿದ್ದಾನೆ.

ಈ ವೇಳೆ ನಾಗರಾಜ್​ ನಾಯಕ್ ತಮ್ಮ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಕೂಡಲೆ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಜಗಳ ಬಿಡಿಸಿ ನಾಗರಾಜ್​ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ನಂತರ ನಾಗರಾಜ್​ ನಾಯ್ಕ ಗೋವಿಂದಪುರ ಪೊಲೀಸ್​ ಠಾಣೆಗೆ ದೂರು ನೀಡಿದರು. ಸದ್ಯ ಪೊಲೀಸರು ಶಂಶಾದ್​ ಖಾನ್​ನನ್ನು ಬಂಧಿಸಿ ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಶಂಶಾದ್​ ಖಾನ್ 300 ಕ್ಕೂ ಹೆಚ್ಚು ಯೂನಿಟ್‌ ವಿದ್ಯುತ್​ ಬಳಸಿದ್ದರಿಂದ ಅವರು ಗೃಹ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್‌ಗೆ ಅರ್ಹರಲ್ಲ ಎಂದು ನಾಗರಾಜ್​ ನಾಯಕ್ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ