‘ಸ್ಟಿಂಗ್​​ ಆಪರೇಷನ್​​ ಮಾಡಿದವನ ಜತೆ ಕೆಲಸ ಮಾಡ್ತಿದ್ದ ಓರ್ವ ಅನುಮಾನಾಸ್ಪದವಾಗಿ ಸಾವು’: ಕುಮಾರಸ್ವಾಮಿಯಿಂದ ಮತ್ತೊಂದು ಗಂಭೀರ ಆರೋಪ

ಸ್ಟಿಂಗ್ ಆಪರೇಷನ್ ಮಾಡಿದ ಪತ್ರಕರ್ತನ ಜೊತೆ ಕೆಲಸ ಮಾಡುತ್ತಿದ್ದ ಓರ್ವ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಪೊಲೀಸರು ಯುಡಿಆರ್ ಮಾಡಿ ಪ್ರಕರಣ ಕ್ಲೋಸ್ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಸ್ಟಿಂಗ್ ಆಪರೇಷನ್​ ಜೆಡಿಎಸ್​ನ ಸಂಚು ಅಂತಾ ಹೇಳ್ತಾರೆ. ಇದು ನಮ್ಮ ಸಂಚಾ, ನಿಮಗೆ ಮಾನ ಮರ್ಯಾದೆ ಇದ್ಯಾ? ಎಂದೂ ಅವರು ಪ್ರಶ್ನಿಸಿದ್ದಾರೆ.

ಸ್ಟಿಂಗ್​​ ಆಪರೇಷನ್​​ ಮಾಡಿದವನ ಜತೆ ಕೆಲಸ ಮಾಡ್ತಿದ್ದ ಓರ್ವ ಅನುಮಾನಾಸ್ಪದವಾಗಿ ಸಾವು: ಕುಮಾರಸ್ವಾಮಿಯಿಂದ ಮತ್ತೊಂದು ಗಂಭೀರ ಆರೋಪ
ಕೇಂದ್ರ ಸಚಿವ ಕುಮಾರಸ್ವಾಮಿ
Edited By:

Updated on: Oct 23, 2026 | 12:33 PM

ಬೆಂಗಳೂರು, ಅಕ್ಟೋಬರ್​​ 23: ಸ್ಟಿಂಗ್​​ ಆಪರೇಷನ್​​ ವಿಚಾರವಾಗಿ ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ ಮತ್ತೊಂದು ಸ್ಫೋಟಕ ಆರೋಪ ಮಾಡಿದ್ದಾರೆ. ಸ್ಟಿಂಗ್​​ ಆಪರೇಷನ್​​ ಮಾಡಿರುವ ಪತ್ರಕರ್ತನ ಜತೆ ಕೆಲಸ ಮಾಡ್ತಿದ್ದ ವಿಕ್ಕಿ ಎಂಬಾತ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಪೊಲೀಸರು ಯುಡಿಆರ್ ಮಾಡಿ ಪ್ರಕರಣ ಕ್ಲೋಸ್ ಮಾಡಿದ್ದಾರೆ. ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ. ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬ ಇದರ ಬಗ್ಗೆ ಹೇಳಿದ್ದಾರೆ ಎಂದವರು ಮಾಹಿತಿ ನೀಡಿದ್ದಾರೆ. ಸ್ಟಿಂಗ್ ಆಪರೇಷನ್​ ಪ್ರಕರಣ ಸಂಬಂಧ ಹಿರಿಯ ಪತ್ರಕರ್ತನ ವಿಚಾರಣೆ ಸಂಬಂಧವೂ ಪ್ರತಿಕ್ರಿಯಿಸಿರುವ ಹೆಚ್​​ಡಿಕೆ, ತೋರಿಕೆಗೆ ಸಮನ್ಸ್ ಕೊಟ್ಟಿದ್ದಾರೆ ಅಷ್ಟೇ. ತನಿಖಾಧಿಕಾರಿ ಅಜಯ್ ಹಿಲೋರಿ ಮೇಲೆಯೇ ಐಎಂಎ ಕೇಸ್ ಇತ್ತು. ಸಿದ್ದರಾಮಯ್ಯ ಹೆಸರು ಹಾಳು ಮಾಡುವುದಕ್ಕೆ ಹೊರಟ್ಟಿದ್ದರು. ಇಂದು ಆ ಪತ್ರಕರ್ತ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದಾರೆ. ಹಿಲೋರಿಗೆ ಇದ್ದ ವಕೀಲರನ್ನೇ ಮಾಧ್ಯಮ ಮುಖ್ಯಸ್ಥರಿಗೆ ನೇಮಿಸಲಾಗಿದೆ ಎಂದೂ ಅವರು ಆರೋಪಿಸಿದ್ದಾರೆ.

‘ಸಿಎಂ ಡಿಕೆಶಿ ಈ ಘಟನೆಯನ್ನು ಹಗುರವಾಗಿ ಪರಿಗಣಿಸಿದ್ದಾರೆ’

🔴LIVE | Central Minister HD Kumaraswamy Press Meet: ಕೇಂದ್ರ ಸಚಿವ HD ಕುಮಾರಸ್ವಾಮಿ ಸುದ್ದಿಗೋಷ್ಠಿ | #tv9d

ಸ್ಟಿಂಗ್ ಆಪರೇಷನ್​ ಸಂಬಂಧ ರಾಜ್ಯದಲ್ಲಿ ಬೆಳವಣಿಗೆಗಳು ಆಗ್ತಿರುವ ಹಿನ್ನೆಲೆ ಸಿಎಂ ಡಿಕೆಶಿ ಮತ್ತು ಗೃಹ ಸಚಿವ ಪ್ರಿಯಾಂಕ್​​ ಖರ್ಗೆ ಇಬ್ಬರೂ ವೇಣುಗೋಪಾಲ್​ರನ್ನು ಭೇಟಿಯಾಗಿದ್ದಾರೆಂಬ ವರದಿ ನೋಡಿದ್ದೇನೆ. ಇದು ಜೆಡಿಎಸ್​​ನವರು ರಾಜಕೀಯಕ್ಕಾಗಿ ಪ್ರಸ್ತಾಪಿಸಿದ್ದಾರೆ ಎಂಬ ಬಗ್ಗೆ ಮಾಧ್ಯಮಗಳಲ್ಲಿ ಹೇಳಿದ್ದನ್ನೂ ನೋಡಿದ್ದೇನೆ. JDS ರಾಜಕೀಯವಾಗಿ ಬಳಸಿಕೊಂಡಿದೆ ಅನ್ನೋದು ಮುಖ್ಯವಲ್ಲ. ಆದರೆ ಸಿದ್ದರಾಮಯ್ಯ ಎರಡು ಬಾರಿ ಸಿಎಂ ಆಗಿ ಕೆಲಸ ಮಾಡಿದವರು. ಮಾಧ್ಯಮದ ವ್ಯವಸ್ಥಾಪಕರಿಂದ ಈ ಸ್ಟಿಂಗ್​ ಪ್ರಕರಣ ಆಗಿದ್ದು, ಸಿಎಂ ಡಿಕೆಶಿ ಈ ಘಟನೆಯನ್ನು ಹಗುರವಾಗಿ ಪರಿಗಣಿಸಿದ್ದಾರೆ ಎಂದು ಹೆಚ್​​ಡಿಕೆ ದೂರಿದ್ದಾರೆ.

ಇದನ್ನೂ ಓದಿ:  ಕರ್ನಾಟಕ ಸ್ಟಿಂಗ್ ಸಮರ ಹೈಕಮಾಂಡ್ ಅಂಗಳಕ್ಕೆ: ವೇಣುಗೋಪಾಲ್​ಗೆ ಮಾಹಿತಿ ನೀಡಿದ್ದೇನೆ ಎಂದ ಪ್ರಿಯಾಂಕ್ ಖರ್ಗೆ

‘ಸಿದ್ದರಾಮಯ್ಯರಿಂದ ರಾಜ್ಯದಲ್ಲಿ ಕಾಂಗ್ರೆಸ್​​​​​​ ಅಸ್ತಿತ್ವ ಉಳಿದುಕೊಂಡಿದೆ’

ಸ್ಟಿಂಗ್ ಆಪರೇಷನ್​ ಜೆಡಿಎಸ್​ನ ಸಂಚು ಅಂತಾ ಹೇಳ್ತಾರೆ. ಇದು ನಮ್ಮ ಸಂಚಾ, ನಿಮಗೆ ಮಾನ ಮರ್ಯಾದೆ ಇದ್ಯಾ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯರನ್ನು ಮನೆಯಲ್ಲಿ ಕೂರಿಸಿದ್ದೀರಿ. ಅವರನ್ನು ಬಿಟ್ಟರೆ ನಿಮ್ಮಲ್ಲಿ ಯಾವ ನಾಯಕರಿದ್ದಾರೆ? ಸಿದ್ದರಾಮಯ್ಯರಿಂದ ರಾಜ್ಯದಲ್ಲಿ ಕಾಂಗ್ರೆಸ್​​​​​​ ಅಸ್ತಿತ್ವ ಉಳಿದುಕೊಂಡಿದೆ. ಅವರು ಇಲ್ಲದಿದ್ದರೆ ನಿಮ್ಮ ಪಕ್ಷ ಎಲ್ಲಿರುತ್ತಿತ್ತೋ? ಅಂತಹ ನಾಯಕನ ವರ್ಚಸ್ಸನ್ನು ಕಾಂಗ್ರೆಸ್​​​​ನವರು ಹಾಳು ಮಾಡಿದ್ದಾರೆ ಎಂದವರು ಆರೋಪಿಸಿದ್ದಾರೆ. ಯಾಕೆ ಸಿದ್ದರಾಮಯ್ಯ ಹೆಸರು ತಂದ್ರು, ನಿಮಗೆ ಗೊತ್ತಿಲ್ವಾ? 2023ರಲ್ಲಿ ಯಾಕೆ ಮಹಿಳೆ ಕೂರಿಸಿ ವೀಡಿಯೋ ಮಾಡಿದ್ರಿ? ಎಂದು ಪ್ರಶ್ನಿಸಿರುವ ಕೇಂದ್ರ ಸಚಿವ ಆ ಪತ್ರಕರ್ತ ಡಿಕೆಶಿ ಬಲಗೈ ಭಂಟ ಎಂದೂ ದೂರಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರಿಗೆ ನೋಟಿಸ್ ಕೊಡುವ ಇವರು, ಆ ಹೆಣ್ಣು ಮಗಳನ್ನು ಅರೆಸ್ಟ್ ಮಾಡಿದ್ರಾ? ಹೇಳ್ತೀಯಾ. ಹೇಳ್ತೀಯಾ ಅಂತಾ ಮಹಿಳೆಗೆ ಒತ್ತಡ ಹಾಕಿದ್ದಾರೆ. ಇದಕ್ಕಿಂತ ಯಾವ ಸಾಕ್ಷಿ ಬೇಕು, ಗೃಹ ಸಚಿವರೇ ಉತ್ತರ ಕೊಡಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 12:32 pm, Fri, 23 October 26

ಅನಿಲ್​ ಕಲ್ಕೆರೆ

ಅನಿಲ್ ಕಲ್ಕೆರೆ ಮೂಲತಃ ಬೆಂಗಳೂರಿನವರಾಗಿದ್ದು, ಕಳೆದ 11 ವರ್ಷಗಳಿಂದ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಬೆಂಗಳೂರು ರಾಜಕೀಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೆ.ಆರ್. ಪುರಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪೂರೈಸಿದ ಬಳಿಕ ಬೆಂಗಳೂರು ವಿಶ್ವವಿದ್ಯಾಲಯ (ಸೆಂಟ್ರಲ್ ಕಾಲೇಜು) ದಲ್ಲಿ Msc (ಮಾಸ್ ಕಮ್ಯುನಿಕೇಷನ್) ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. ಸೃಜನಶೀಲ ಬರವಣಿಗೆ ಜೊತೆಗೆ ವಿಧಾನಸೌಧದ ಆಡಳಿತಾತ್ಮಕ ಸುದ್ದಿಗಳೂ ಸೇರಿದಂತೆ, ರಾಜಕೀಯ ಪಕ್ಷಗಳು ಹಾಗೂ ರಾಜಕೀಯದ ಪ್ರಸಕ್ತ ವಿದ್ಯಮಾನಗಳನ್ನ ಒಳಗೊಂಡಂತಹ ಸುದ್ದಿಗಳತ್ತ ಗಮನ ಹರಿಸುತ್ತಿದ್ದಾರೆ. ಜೊತೆಗೆ ಪ್ರಜಾಪ್ರಭುತ್ವ ನಾಲ್ಕನೇ ಆಧಾರ ಸ್ತಂಭವಾಗಿ ಸಾಮಾನ್ಯಜನರ ಪರ ಧ್ವನಿಯಾಗಿ ಸರ್ಕಾರಕ್ಕೆ ಸಮಸ್ಯೆ ಮುಟ್ಟಿಸುವ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಮುಂದಿನ ದಿನಗಳಲ್ಲೂ ನಾಗರಿಕರ ಸೇವೆಯನ್ನೂ ಮುಂದುವರೆಸುವ ಗುರಿಯೊಂದಿಗೆ ಉತ್ತಮ ಸಮಾಜಕ್ಕಾಗಿ ಬದ್ಧನಾಗಿದ್ದಾರೆ.

Read More
Loading...
Unable to load recommendations.
Follow Us