ವರದಕ್ಷಿಣೆ ಕಿರುಕುಳ, ಕದ್ದ ಬಂಗಾರ ಖರೀದಿ ಆರೋಪ; ಅಟ್ಟಿಕಾ ಬಾಬು ಅರೆಸ್ಟ್

ಕಳ್ಳರಿಂದ ಕದ್ದ ಚಿನ್ನ ಪಡೆದುಕೊಳ್ಳುತಿದ್ದ ಆರೋಪದ ಮೇಲೆ ಸಿಸಿಬಿ ಪೊಲೀಸರ ಸಹಯದಿಂದ ಅಟ್ಟಿಕ ಬಾಬುವನ್ನು ಆಂಧ್ರದ ಅನಂತಪುರ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ.

ವರದಕ್ಷಿಣೆ ಕಿರುಕುಳ, ಕದ್ದ ಬಂಗಾರ ಖರೀದಿ ಆರೋಪ; ಅಟ್ಟಿಕಾ ಬಾಬು ಅರೆಸ್ಟ್
ಅಟ್ಟಿಕಾ ಬಾಬು
Updated By: ಆಯೇಷಾ ಬಾನು

Updated on: Dec 16, 2022 | 11:30 AM

ಬೆಂಗಳೂರು: ಆಂಧ್ರ ಪೊಲೀಸರು ಬೆಂಗಳೂರಿನ ಹೈಗ್ರೌಂಡ್ ಠಾಣಾ ವ್ಯಾಪ್ತಿಯಲ್ಲಿರುವ ಮನೆಯಲ್ಲಿ ಅಟ್ಟಿಕಾ ಗೋಲ್ಡ್ ಮಾಲೀಕ ಅಟ್ಟಿಕಾ ಬಾಬು ವಶಕ್ಕೆ ಪಡೆದಿದ್ದಾರೆ. ಕಳ್ಳರಿಂದ ಕದ್ದ ಚಿನ್ನ ಪಡೆದುಕೊಳ್ಳುತಿದ್ದ ಆರೋಪದ ಮೇಲೆ ಸಿಸಿಬಿ ಪೊಲೀಸರ ಸಹಯದಿಂದ ಅಟ್ಟಿಕ ಬಾಬುವನ್ನು ಆಂಧ್ರದ ಅನಂತಪುರ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ.

ಅನಂತಪುರ ಬಳಿಯ ಯಲ್ಲೂರಿನ ಶೇಕ್ ಮೀನಾಜ್ ಎಂಬ ಮಹಿಳೆ ಆಯೂಬ್ ಅಲಿಯಾಸ್ ಅಟ್ಟಿಕಾ ಬಾಬು ತನ್ನನ್ನು ಮದುವೆ ಆಗಿ ಮೋಸ ಮಾಡಿದ್ದಾನೆ. ಡಿಸೆಂಬರ್ 12ರಂದು ಯಲ್ಲೂರಿಗೆ ಬಂದು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿ ಮನೆಯಲ್ಲಿ ಇದ್ದ ವಸ್ತುಗಳನ್ನು ದ್ವಂಸ ಮಾಡಿದ್ದಾರೆ. ಕೊಲೆಗೆ ಯತ್ನ ಮಾಡಲಾಗಿದೆ ಎಂದು ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಪೊಲೀಸರು IPC section 448, 342, 307, 386, 427, 498A, 506 ಮತ್ತು ವರದಕ್ಷಿಣೆ ಕಿರುಕುಳ ಆರೋಪದಡಿ ಕೇಸ್ ದಾಖಲಾಗಿದೆ. ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಬೆಂಗಳೂರಿಗೆ ಆಗಮಿಸಿ ಸ್ಥಳೀಯ ಪೊಲೀಸರ ಸಹಾಯದಿಂದ ಅಟ್ಟಿಕಾ ಬಾಬು ವಶಕ್ಕೆ ಪಡೆದಿದ್ದಾರೆ. ಈ ಹಿಂದೆ ಕದ್ದ ಬಂಗಾರ ಖರೀದಿ ಮಾಡಿದ್ದ ಆರೋಪದಲ್ಲೂ ಹಲವಾರು ಬಾರಿ ಅಟ್ಟಿಕಾ ಬಾಬು ಅರೆಸ್ಟ್ ಆಗಿದ್ದಾರೆ.

Published On - 10:44 am, Fri, 16 December 22