ಬೆಂಗಳೂರು: ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಹೈದರಾಬಾದ್ ಮೂಲದ ಉದ್ಯಮಿ ಮೇಲೆ ಹಲ್ಲೆ, ಐವರು ಅರೆಸ್ಟ್
ಹೈದರಾಬಾದ್ನಿಂದ ಬೆಂಗಳೂರಿಗೆ ಆಗಮಿಸಿದ್ದ ಉದ್ಯಮಿಯನ್ನು ಬಾಗಲೂರು ಬಳಿಯ ಬೂದಿಗೆರೆಗೆ ಬರುವಂತೆ ಹೇಳಲಾಗಿತ್ತು. ಈ ವೇಳೆ ಕ್ಯಾಬ್ ನಲ್ಲಿ ಬರ್ತಿದ್ದ ಉದ್ಯಮಿಗೆ ಅಡ್ಡಗಟ್ಟಿ ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಲಾಗಿದೆ.
ಬೆಂಗಳೂರು: ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಉದ್ಯಮಿ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಬಾಗಲೂರು ಬಳಿ ನಡೆದಿದೆ. ಉದ್ಯಮಿ ರಾಮೇಶ್ವರ ಮೇಲೆ ಹಲ್ಲೆ ನಡೆದಿದ್ದು ಬಾಗಲೂರು ಠಾಣೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಕುಮಾರ್, ರಂಜಿತ್ ಅಲಿಯಾಸ್ ಸಂಜಯ್ ಕುಮಾರ್, ಆದಿತ್ಯ, ಶ್ರೀಕಾಂತ್ ರೆಡ್ಡಿ, ಮನೋಜ್ ಕುಮಾರ್ ಬಂಧಿತ ಆರೋಪಿಗಳು.
ಹೈದರಾಬಾದ್ ಮೂಲದ ಸಾಫ್ಟ್ ವೇರ್ ಕಂಪನಿ ಮಾಲೀಕ ರಾಮೇಶ್ವರ ಎಂಬುವವರು ಲೋನ್ ಪಡೆಯಲು ತಿರುಗಾಡುತ್ತಿದ್ದರು. ಈ ವೇಳೆ ಮೈಸೂರು ರಾಜವಂಶಸ್ಥನೆಂದು, ಲೋನ್ ಮಾಡಿಸಿಕೊಡುವುದಾಗಿ ಎಂ ಕುಮಾರ್ ಎಂಬುವವರು ಮೋಸದ ಬಲೆ ಬೀಸಿದ್ದಾರೆ. ಬಳಿಕ ಮನೋಜ್ ಕುಮಾರ್ ಅರಸು ಎಂಬಾತನನ್ನ ಪರಿಚಯ ಮಾಡಿಸಿದ್ದಾನೆ. ಯಾವುದೇ ಅನುಮಾನ ಬರದಂತೆ ಮನೋಜ್ ಕುಮಾರ್ ರಾಜನ ವೇಷಭೂಷಣದಲ್ಲೆ ಭೇಟಿ ಮಾಡಿದ್ದಾನೆ. ಮೈ ತುಂಬ ಬಂಗಾರ, ರೇಷ್ಮೆ ಬಟ್ಟಿ, ಕೈಯಲ್ಲಿ ರಾಜರು ಹಿಡಿಯುವ ಕೋಲು ಹಿಡಿದು ಬಿಲ್ಡಪ್ ನೀಡಿದ್ದಾರೆ. ಕೊನೆಗೆ ಲೋನ್ ಕೊಡಿಸುವ ಮೊದಲೆ ಲೋನ್ ಮೊತ್ತದ ಹತ್ತು ಪರ್ಸೆಂಟ್ ಕಮೀಷನ್ ಪಡೆದಿದ್ದ ಆರೋಪಿಗಳು. 10 ಕೋಟಿಗೆ ಎರಡು ಕೋಟಿಯಂತೆ ಕಮೀಷನ್ ಪಡೆದಿದ್ದಾರೆ. ಕೊನೆಗೆ ಲೋನ್ ಕೊಡಿಸದ ಹಿನ್ನೆಲೆ ಹಣ ವಾಪಸ್ ನೀಡುವಂತೆ ರಮೇಶ್ವರ್ ಒತ್ತಡ ಹಾಕಿದ್ದಾರೆ. ಇವತ್ತು ಕೊಡ್ತೇವೆ ನಾಳೆ ಕೊಡ್ತೇವೆ ಅಂತ ಆರೋಪಿಗಳು ಹೈದರಾಬಾದ್ ಬೆಂಗಳೂರು ಕಥೆ ಹೇಳಿದ್ದಾರೆ. ಆರೋಪಿಗಳನ್ನು ನಂಬಿ 10ಕ್ಕೂ ಹೆಚ್ಚು ಬಾರಿ ಫ್ಲೈಟ್ ನಲ್ಲಿ ಬೆಂಗಳೂರಿಗೆ ಬಂದಿದ್ದ ಸಾಫ್ಟ್ ವೇರ್ ಕಂಪನಿ ಮಾಲೀಕ ರಾಮೇಶ್ವರ್, ಕೊನೆಗೆ ಹಣ ವಾಪಸ್ಸು ನೀಡದ ಹಿನ್ನೆಲೆ ಹೈದರಾಬಾದ್ ನಲ್ಲಿ ಕಂಪ್ಲೈಂಟ್ ನೀಡೋದಾಗಿ ಹೇಳಿದ್ದಾರೆ. ಆ ವೇಳೆ ಹಣ ಕೊಡ್ತೇವೆಂದು ಬೆಂಗಳೂರಿಗೆ ಬರಲು ಹೇಳಿದ್ದಾರೆ.
ಬಳಿಕ ಫೋರ್ ಸೆಂಟಮ್ ಹೋಟೆಲ್ ನಲ್ಲಿ ತಂಗಿದ್ದ ರಮೇಶ್ವರನ್ನು ಬೂದಿಗೆರೆಗೆ ಬರಲು ಹೇಳಿದ್ದು ಮಾರ್ಗಮಧ್ಯೆ ಗೊಲ್ಲಹಳ್ಳಿ ಎಂಬಲ್ಲ ಕಾರು ತಡೆದು ಆರೋಪಿಗಳು ರಾಮೇಶ್ವರ್ ಮೇಲೆ ಹಲ್ಲೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದ ಬಾಗಲೂರು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ದಲ್ಲಾಳಿ ಕುಮಾರ್, ರಾಜವಂಶಸ್ಥನೆಂದು ಹೇಳಿಕೊಂಡಿದ್ದ ಮನೋಜ್ ಸೇರಿದಂತೆ ನಾಲ್ವರ ಬಂಧನವಾಗಿದೆ. ಬಾಗಲೂರು ಪೊಲೀಸರಿಂದ ತನಿಖೆ ಮುಂದುವರೆದಿದೆ.
ಇದನ್ನೂ ಓದಿ: ಕಲಬುರಗಿಯಲ್ಲಿ ಅಪರಾಧ ಕೃತ್ಯಗಳ ತಡೆಗೆ ಗೂಂಡಾ ಕಾಯ್ದೆ ಅಸ್ತ್ರ ಪ್ರಯೋಗ, ಕುಖ್ಯಾತ ರೌಡಿ ಬಂಧಿಸಿ ಜೈಲಿಗೆ ಕಳಿಸಿದ ಖಾಕಿ
ಜಮೀನಿನಲ್ಲಿ ನೇಣಿಗೆ ಶರಣಾದ ರೈತ
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಅಸಗೋಡ ಬಳಿಯ ವಡ್ಡರಹಳ್ಳಿ ಗ್ರಾಮದಲ್ಲಿ ತಿಮ್ಮಣ್ಣ (55) ಎಂಬ ರೈತ ಸಾಲ ಬಾದೆಗೆ ನೇಣಿಗೆ ಶರಣಾಗಿದ್ದಾರೆ. ನಾಲ್ಕು ಜನ ಹೆಣ್ಣು ಮಕ್ಕಳು, ಮೂರು ಎಕರೆ ಜಮೀನು ಹೊಂದಿದ್ದ ತಿಮ್ಮಣ್ಣ, ಮಗಳ ಮದ್ವೆಗೆ ಐದು ಲಕ್ಷ ರೂಪಾಯಿ ಸಾಲ ಮಾಡಿದ್ದ. ಸಾಲಗಾರರ ಕಾಟ, ಜಮೀನಿನಲ್ಲಿದ್ದ ಬೆಳೆ ಅತಿ ಮಳೆ ಹಾನಿಯಿಂದ ಬೇಸತ್ತು ಗ್ರಾಮದ ಹೊರವಲಯದ ಜಮೀನಿನಲ್ಲಿ ನೇಣಿಗೆ ಶರಣಾಗಿದ್ದಾರೆ. ಬಿಳಿಚೋಡು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:41 am, Fri, 16 December 22