ಆಸ್ಟ್ರೇಲಿಯಾ ಪ್ರಜೆಯ ಅಪಹರಣ: ಸಿನಿಮೀಯ ಶೈಲಿಯಲ್ಲಿ ಆರೋಪಿಗಳನ್ನು ಬಂಧಿಸಿದ ಬೊಮ್ಮನಹಳ್ಳಿ ಪೊಲೀಸರು

| Updated By: Rakesh Nayak Manchi

Updated on: Feb 25, 2024 | 9:30 AM

ಆಸ್ಟ್ರೇಲಿಯಾ ಪ್ರಜೆ ಅಲೋಕ್ ರಾಣಾ ಎಂಬವರನ್ನು ದುಷ್ಕರ್ಮಿಗಳ ಅಪಹರಿಸಿದ್ದರು. ಮನೆಯೊಂದರಲ್ಲಿ ಕೂಡಿಹಾಕಿ ಹಲ್ಲೆ ನಡೆಸಿ ಅಲೋಕ್ ರಾಣಾ ಬ್ಯಾಂಕ್ ಖಾತೆಯಿಂದ 78 ಸಾವಿರ ಹಣ ವರ್ಗಾವಣೆ ಮಾಡಿದ್ದರು. ಬಳಿಕ ಅಲೋಕ್ ಅಣ್ಣನ ಖಾತೆಯಿಂದ 40 ಸಾವಿರ ವಸೂಲಿ ಮಾಡಿದ್ದರು. ಈ ಪ್ರಕರಣ ಸಂಬಂಧ ಬೆಂಗಳೂರಿನ ಬೊಮ್ಮನಹಳ್ಳಿ ಠಾಣಾ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಚೇಸ್ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.

ಆಸ್ಟ್ರೇಲಿಯಾ ಪ್ರಜೆಯ ಅಪಹರಣ: ಸಿನಿಮೀಯ ಶೈಲಿಯಲ್ಲಿ ಆರೋಪಿಗಳನ್ನು ಬಂಧಿಸಿದ ಬೊಮ್ಮನಹಳ್ಳಿ ಪೊಲೀಸರು
ಆಸ್ಟ್ರೇಲಿಯಾ ಪ್ರಜೆಯ ಅಪಹರಣ: ಸಿನಿಮೀಯ ಶೈಲಿಯಲ್ಲಿ ಆರೋಪಿಗಳನ್ನು ಬಂಧಿಸಿದ ಬೊಮ್ಮನಹಳ್ಳಿ ಪೊಲೀಸರು (ಸಾಂದರ್ಭಿಕ ಚಿತ್ರ)
Follow us on

ಬೆಂಗಳೂರು, ಫೆ.25: ಆಸ್ಟ್ರೇಲಿಯಾ ಪ್ರಜೆಯನ್ನು ಅಪಹರಣ (Kidnap) ಮಾಡಿ ಹಲ್ಲೆ ನಡೆಸಿ ಡಕಾಯಿತಿ ಮಾಡಿದ್ದ ಪ್ರಕರಣ ಸಂಬಂಧ ಬೆಂಗಳೂರು (Bengaluru) ನಗರದ ಬೊಮ್ಮನಹಳ್ಳಿ ಠಾಣಾ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಚೇಸ್ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಕಿಡ್ನಾಪ್ ಪ್ರಕರಣದ ಮಾಸ್ಟರ್ ಮೈಂಡ್ ಮೋನಿಶ್​​​, ಲೋಕೇಶ್​​​, ಕಿಶೋರ್​​, ರವಿ, ದಿಲೀಪ್​​​​​​​​, ಸತೀಶ್​​​​ ಬಂಧತ ಆರೋಪಿಗಳಾಗಿದ್ದಾರೆ. ಮೋನಿಶ್ ಟ್ಯಾಟೋ ಹಾಕೋ ಕೆಲಸ ಮಾಡುತ್ತಿದ್ದರು. ಇತರ ಆರೋಪಿಗಳು ಬಟ್ಟೆ ವ್ಯಾಪಾರ, ತಳ್ಳುವ ಗಾಡಿಯಲ್ಲಿ ವ್ಯಾಪಾರ ಮಾಡುತ್ತಿದ್ದರು.

ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿರುವ ತನ್ನ ಅಣ್ಣ ಅಮಿತ್​​ ರಾಣಾನನ್ನು ನೋಡಲು ಆಸ್ಟ್ರೇಲಿಯಾ ಪ್ರಜೆಯಾಗಿರುವ ಅಲೋಕ್ ರಾಣಾ ಬೆಂಗಳೂರಿಗೆ ಆಗಮಿಸಿದ್ದ. ಡ್ರಗ್ಸ್​​ಗೆ ಅಡಿಕ್ಟ್ ಆಗಿದ್ದ ಅಲೋಕ್​ ಆರೋಪಿ ಮೊನೀಶ್ ಜೊತೆ​ ಸಂಪರ್ಕ ಹೊಂದಿದ್ದನು. ಡಾರ್ಕ್​ ವೆಬ್​ ಮೂಲಕ ಮೊನೀಶ್ ಬಳಿ ಡಗ್ಸ್​​ ಖರೀದಿಸುತ್ತಿದ್ದನು. ಮೋನಿಶ್​ನಿಂದ ಐದು ಬಾರಿ ಗಾಂಜಾ ಖರೀದಿಸಿದ್ದ.

ಇದನ್ನೂ ಓದಿ: Kidnapping TV Anchor: ಮದುವೆಯಾಗಲು ಖ್ಯಾತ ನಿರೂಪಕನನ್ನೇ ಕಿಡ್ನಾಪ್​ ಮಾಡಿದ ಯುವತಿ

ಇದರಿಂದ ಅಲೋಕ್ ಬಳಿ ಹೆಚ್ಚು ಹಣ ಇರಬಹುದೆಂದು ಭಾವಿಸಿದ ಮೋಹನ್ ತನ್ನ ಸಹಚರರೊಂದಿಗೆ ಸೇರಿಕೊಂಡು ಅಲೋಕ್​ನನ್ನು ಕಿಡ್ನಾಪ್ ಮಾಡಿ ಮನೆಯೊಂದರಲ್ಲಿ ಕೂಡಿಹಾಕಿ ಹಲ್ಲೆ ನಡೆಸಿ ಅಲೋಕ್ ರಾಣಾ ಬ್ಯಾಂಕ್ ಖಾತೆಯಿಂದ 78 ಸಾವಿರ ಹಣ ವರ್ಗಾವಣೆ ಮಾಡಿದ್ದರು. ಬಳಿಕ ಅಲೋಕ್ ಅಣ್ಣ ಅಮಿತ್ ಖಾತೆಯಿಂದ 40 ಸಾವಿರ ವಸೂಲಿ ಮಾಡಿದ್ದರು.

ಬಳಿಕ ಆರೋಪಿಗಳ ಕೈಯಿಂದ ತಪ್ಪಿಸಿಕೊಂಡು ಬಂದು ಅಲೋಕ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಡ್ರಗ್ಸ್​ ವಿಷಯ ಬಹಿರಂಗವಾಗುತ್ತದೆ ಎಂದು ಯಾರಿಗೂ ಹೇಳದೆ ಸುಮ್ಮನಿದ್ದ ಅಲೋಕ್, ಪ್ರಕರಣ ನಡೆದು 15 ದಿನಗಳಾದ ನಂತರ ಪೊಲೀಸ್ ಅಧಿಕಾರಿಯೊಬ್ಬರಿಗೆ ಮಾಹಿತಿ ನೀಡಿದ್ದು, ಈ ಬಗ್ಗೆ ಬೆಂಗಳೂರು ಆಗ್ನೇಯ ಡಿಸಿಪಿ ಬಾಬಾಗೆ ಮಾಹಿತಿ ನೀಡಲಾಗಿದೆ. ಬಳಿಕ ಬೊಮ್ಮನಹಳ್ಳಿ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ