AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಈ ಪ್ರದೇಶಗಳಲ್ಲಿ ಫೆಬ್ರವರಿ 27-28 ರಂದು ನೀರಿನ ಪೂರೈಕೆ ಸಂಪೂರ್ಣ ಸ್ಥಗಿತ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ತುರ್ತು ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವ ಕಾರಣ ಬೆಂಗಳೂರು ನಗರದ ಹಲವೆಡೆ ಫೆಬ್ರವರಿ 27ರ ಬೆಳಗ್ಗಿನಿಂದ 28ರ ಬೆಳಗ್ಗೆ ವರೆಗೆ ನೀರಿನ ಪೂರೈಕೆ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಹಾಗಾದರೆ, ಯಾವೆಲ್ಲ ಪ್ರದೇಶಗಳಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ? ಇಲ್ಲಿದೆ ಮಾಹಿತಿ.

ಬೆಂಗಳೂರಿನ ಈ ಪ್ರದೇಶಗಳಲ್ಲಿ ಫೆಬ್ರವರಿ 27-28 ರಂದು ನೀರಿನ ಪೂರೈಕೆ ಸಂಪೂರ್ಣ ಸ್ಥಗಿತ
ಬೆಂಗಳೂರಿನ ಈ ಪ್ರದೇಶಗಳಲ್ಲಿ ಫೆಬ್ರವರಿ 27-28 ರಂದು ನೀರಿನ ಪೂರೈಕೆ ಸಂಪೂರ್ಣ ಸ್ಥಗಿತ (ಸಾಂದರ್ಭಿಕ ಚಿತ್ರ)
TV9 Web
| Updated By: Rakesh Nayak Manchi|

Updated on: Feb 24, 2024 | 9:26 PM

Share

ಬೆಂಗಳೂರು, ಫೆ.24: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (BWSSB) ತುರ್ತು ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವ ಕಾರಣ ಬೆಂಗಳೂರು (Bengaluru) ನಗರದ ಹಲವೆಡೆ ಫೆಬ್ರವರಿ 27 ಮತ್ತು 28 ರಂದು ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. 27 ರ ಬೆಳಿಗ್ಗೆ 6 ರಿಂದ 28 ರ ಬೆಳಿಗ್ಗೆ 6 ರವರೆಗೆ ಹಲವೆಡೆ ನೀರಿನ ಪೂರೈಕೆ ಸಂಪೂರ್ಣ ಸ್ಥಗಿತಗೊಳ್ಳಲಿದೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ನೀರಿನ ಬಲ್ಕ್ ಫ್ಲೋ ಮೀಟರ್‌ಗಳನ್ನು ಅಳವಡಿಸುವ ಕೆಲಸ ಕಾರ್ಯಗಳನ್ನು ಕೈಗೆತ್ತಿಕೊಳ್ಳಳಿದೆ. ಹೀಗಾಗಿ ಮಂಡಳಿಯು ಕಾಮಗಾರಿ ನಡೆಯುವ ಪ್ರದೇಶಗಳಲ್ಲಿ ನೀರಿನ ಪೂರೈಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಿದೆ.

ಇದನ್ನೂ ಓದಿ: ನೀರಿಗಾಗಿ ಹಾಹಾಕಾರ; ಜೀವಜಲಕ್ಕಾಗಿ ಮಹದೇವಪುರ, ವರ್ತೂರು ಜನ ಹೈರಾಣ

ನೀರಿನ ಪೂರೈಕೆ ಸ್ಥಗಿತಗೊಳ್ಳುವ ಪ್ರದೇಶಗಳು

ನಂದಿನಿ ಲೇಔಟ್, ಬಿಎಚ್‌ಇಎಲ್ ಲೇಔಟ್, ಮಲ್ಲತ್ತಹಳ್ಳಿ, ಎನ್‌ಜಿಇಎಫ್ ಲೇಔಟ್, ಮೈಸೂರು ರಸ್ತೆ, ಶಿರ್ಕೆ, ಶಿವಣ್ಣ ಲೇಔಟ್, ಪ್ರಶಾಂತನಗರ, ತಿಮ್ಮೇನಹಳ್ಳಿ, ಗೋವಿಂದರಾಜನಗರ, ಕೆಎಚ್‌ಬಿ ಕಾಲೋನಿ, ದಾಸರಹಳ್ಳಿ, ಜಿಕೆಡಬ್ಲ್ಯು ಲೇಔಟ್, ಬಸವೇಶ್ವರ ಲೇಔಟ್, ಬಸವೇಶ್ವರ ಲಾಯೌಟ್, ಲಾನಜರಸಯ್ಯಔಟ್, ಈ ಕೆಳಗಿನ ಪ್ರದೇಶಗಳಲ್ಲಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಸಿಂಗಾಪುರ, ಎಂಎಸ್ ಪಾಳ್ಯ, ರಾಮಚಂದ್ರಾಪುರ, ಡಿಫೆನ್ಸ್ ಲೇಔಟ್, ಬಿಇಎಲ್ ರಸ್ತೆ, ಡಾಲರ್ಸ್ ಕಾಲೋನಿ, ಚಾಮುಂಡಿನಗರ, ಭುವನೇಶ್ವರಿ ನಗರ, ಈಜಿಪುರ, ಮುನೇಶ್ವರ ದೇವಸ್ಥಾನ ರಸ್ತೆ, ಅಕ್ಕಮ್ಮ ರಸ್ತೆ, ಮುನಿಯಪ್ಪ ರಸ್ತೆ, ಸಂಜಯನಗರ, ರಾಮಾಂಜನೇಯ ಲೇಔಟ್, ಶಾನಭಾಗ್ ಲೇಔಟ್, ವೀರಪ್ಪ ರೆಡ್ಡಿ ಲೇಔಟ್, ರೇನ್‌ಬೋ ಲೇಔಟ್, ರೇನ್‌ಬೋ ಲೇಔಟ್ , ಮಂಜುನಾಥ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ