ನೀರಿನ ಹಾಹಾಕಾರ, ಖಾಸಗಿ ಟ್ಯಾಂಕರ್​ಗಳ ದಂಧೆಗೆ ಕಡಿವಾಣ ಹಾಕಬೇಕು- ಸಂಸದ ತೇಜಸ್ವಿ ಸೂರ್ಯ

ಬಿಸಿಲ ತಾಪ ಹೆಚ್ಚಾಗುತ್ತಿರುವ ಹೊತ್ತಲ್ಲೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ ಶುರುವಾಗಿದೆ. ಕುಡಿಯುವ ನೀರಿನ ಅಭಾವದಿಂದ ನಲ್ಲಿ ನೀರು ಮರೆಯಾಗುತ್ತಿದ್ದರೆ, ಅತ್ತ ದುಪ್ಪಟ್ಟು ಹಣ ಕೊಟ್ಟರು ಟ್ಯಾಂಕರ್ ನೀರು ಕೂಡ ಸಿಗದೇ ಜನ ಹೈರಾಣಾಗ್ತಿದ್ದಾರೆ. ಈ ಕುರಿತು ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ‘ಖಾಸಗಿ ಟ್ಯಾಂಕರ್​ಗಳ ದಂಧೆಗೆ ಕಡಿವಾಣ ಹಾಕಬೇಕು. ಜೊತೆಗೆ ಸಾರ್ವಜನಿಕರಿಗೆ ಉಚಿತವಾಗಿ ನೀರು ಕೊಡಬೇಕು ಎಂದರು.

ನೀರಿನ ಹಾಹಾಕಾರ, ಖಾಸಗಿ ಟ್ಯಾಂಕರ್​ಗಳ ದಂಧೆಗೆ ಕಡಿವಾಣ ಹಾಕಬೇಕು- ಸಂಸದ ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ
Follow us
Shivaraj
| Updated By: ಕಿರಣ್ ಹನುಮಂತ್​ ಮಾದಾರ್

Updated on:Feb 24, 2024 | 3:36 PM

ಬೆಂಗಳೂರು, ಫೆ.24: ಬಿರು ಬಿಸಿಲಿಗೆ ರಾಜ್ಯ ರಾಜಧಾನಿ ಬೆಂಗಳೂರಿ(Bengaluru)ನಲ್ಲಿ ನೀರಿಗಾಗಿ ಹಾಹಾಕಾರ (Drinking Water Crisis) ಶುರುವಾಗಿದೆ. ಈ ಕುರಿತು ಮಾತನಾಡಿದ ಸಂಸದ ತೇಜಸ್ವಿ ಸೂರ್ಯ(Tejasvi Surya) ಅವರು, ‘ನಮ್ಮ ಭಾಗದಲ್ಲಿ ಹೆಚ್ಚು ನೀರಿನ ಸಮಸ್ಯೆ ಇದೆ. ಹೀಗಾಗಿ ಇವತ್ತು ಬಿಬಿಎಂಪಿ ಆಯುಕ್ತರನ್ನು ಬೇಟಿ ಮಾಡಿ ಮನವಿ ಮಾಡಿದ್ದೇನೆ. ನೀರಿನ ವ್ಯವಸ್ಥೆ ಮಾಡಬೇಕು. ಖಾಸಗಿ ಟ್ಯಾಂಕರ್​ಗಳ ದಂಧೆಗೆ ಕಡಿವಾಣ ಹಾಕಬೇಕು. ಜೊತೆಗೆ ಸಾರ್ವಜನಿಕರಿಗೆ ಉಚಿತವಾಗಿ ನೀರು ಕೊಡಬೇಕು ಎಂದರು.

50 ಪರ್ಸೆಂಟ್ ಕಾವೇರಿ ನೀರು ಪೋಲ್ ಆಗ್ತಿದೆ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಬಿಬಿಎಂಪಿ ಸಮನ್ವಯದಿಂದ ಕೆಲಸ ಮಾಡಬೇಕು. ಈಗಾಗಲೇ 50 ಪರ್ಸೆಂಟ್ ಕಾವೇರಿ ನೀರು ಪೋಲ್ ಆಗುತ್ತಿದೆ. ಅದನ್ನು ಕಂಡು ಹಿಡಿಯುವ ಕೆಲಸ ಮಾಡಬೇಕು. ಈ ಮೂಲಕ ನೀರಿನ ಬವಣೆ ನಿಗಿಸಬೇಕು ಎಂದು ಮನವಿ ಮಾಡಿದ್ದೇನೆ ಎಂದರು.

ಇದನ್ನೂ ಓದಿ:ನೀರಿಗಾಗಿ ಹಾಹಾಕಾರ; ಜೀವಜಲಕ್ಕಾಗಿ ಮಹದೇವಪುರ, ವರ್ತೂರು ಜನ ಹೈರಾಣ

ಸಿಲಿಕಾನ್ ಸಿಟಿಯಲ್ಲಿ ನೀರಿಗೆ ಹಾಹಾಕಾರ ಎದ್ದಿದೆ. ಒಂದೆಡೆ ಸುಡುಬಿಸಿಲು ಜನರನ್ನ ಹೈರಾಣಾಗಿಸುತ್ತಿದ್ದರೆ, ಮತ್ತೊಂದೆಡೆ ನೀರಿನ ಅಭಾವದಿಂದ ಜನರು ನಲುಗಿಹೋಗಿದ್ದಾರೆ. ನಿಗಧಿತ ಬೆಲೆಕ್ಕಿಂತ ಹೆಚ್ಚಿಗೆ ಹಣ ಕೊಟ್ಟರೂ ಟ್ಯಾಂಕರ್ ನೀರು ಕೂಡ ಸಿಗದೇ ಜನರು ಕಂಗಾಲಾಗಿದ್ದಾರೆ. ನಮಗೇನು ಬೇಡ ನೀರು ಕೊಡಿ ಎಂದು ಜನರ ಅಂಗಲಾಚುತ್ತಿದ್ದಾರೆ. ಬಿಸಿಲ ತಾಪ ಹೆಚ್ಚಾಗುತ್ತಿರುವ ಹೊತ್ತಲ್ಲೇ ರಾಜ್ಯ ರಾಜಧಾನಿಯಲ್ಲಿ ನೀರಿಗೆ ಹಾಹಾಕಾರ ಶುರುವಾಗಿದ್ದು, ಅತಿಹೆಚ್ಚು ಕೆರೆಗಳಿರುವ ಮಹದೇವಪುರ ವಲಯದಲ್ಲೇ ಜಲಕ್ಷಾಮ ತಾಂಡವವಾಡುತ್ತಿದೆ. ಇತ್ತ ವರ್ತೂರಿನ ಜನರು ಜೀವಜಲವಿಲ್ಲದೇ ಹೈರಾಣಾಗಿದ್ದಾರೆ. ಆದಷ್ಟು ಬೇಗ ರಾಜಧಾನಿ ಜನರಿಗೆ ಕುಡಿಯಲು ನೀರಿನ ವ್ಯವಸ್ಥೆ ಮಾಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:35 pm, Sat, 24 February 24