ಸಂವಿಧಾನ ರಕ್ಷಣೆಯಾದರೆ ಉಳಿಯುತ್ತೇವೆ, ಧಕ್ಕೆಯಾದರೆ ಅಪಾಯಕ್ಕೆ ಸಿಲುಕುತ್ತೇವೆ: ಸಿದ್ದರಾಮಯ್ಯ
ಸಂವಿಂಧಾನಕ್ಕೆ ಅಪಾಯ ಆಗುವ ಸಂದರ್ಭವನ್ನು ಯಾರೂ ಸಹಿಸಬಾರದು. ನಮ್ಮ ದೇಶದಲ್ಲಿ ಅನೇಕ ಜಾತಿ, ಧರ್ಮ, ಸಂಸ್ಕೃತಿ ಇವೆ. ಜಾತಿ ವ್ಯವಸ್ಥೆಯಲ್ಲಿ ಆರ್ಥಿಕ ಅಸಮಾನತೆ, ಸಮಾಜಿಕ ಅಸಮಾನತೆ ಇದೆ. ಇವೆಲ್ಲ ಅಸಮಾನತೆ ತೊಲಗಬೇಕು. ಸಾಮಾಜಿಕ ಅಸಮಾನತೆಯನ್ನು ತೊಡೆದು ಹಾಕುವುದು ಪ್ರತಿ ಸರ್ಕಾರದ ಜವಾಬ್ದಾರಿಯಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಬೆಂಗಳೂರು, ಫೆಬ್ರವರಿ 24: ನಾವು ಸಂವಿಧಾನ (Indian Constitution) ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇವೆ. ಸಂವಿಧಾನ ರಕ್ಷಣೆಯಾದರೆ ನಾವೆಲ್ಲ ಉಳಿಯುತ್ತೇವೆ. ಸಂವಿಧಾನಕ್ಕೆ ಧಕ್ಕೆಯಾದರೆ ನಾವು ಅಪಾಯಕ್ಕೆ ಸಿಲುಕುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು. ಭಾರತದ ಸಂವಿಧಾನ ಜಾರಿಗೆ ಬಂದು 75 ವರ್ಷಗಳು ಕಳೆದ ಹಿನ್ನೆಲೆಯಲ್ಲಿ ಬೆಂಗಳೂರಿನ (Bengaluru) ಅರಮನೆ ಮೈದಾನದ ಕೃಷ್ಣ ವಿಹಾರ್‌ನಲ್ಲಿ ನಡೆದ ಸಂವಿಧಾನ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಂವಿಧಾನ ಪೂರ್ವ ಪೀಠಿಕೆಯನ್ನ ಜನರು ತಿಳಿದುಕೊಳ್ಳಬೇಕು. ಸಂವಿಧಾನ ರಚನೆ ಆಗಿರುವುದು ದಲಿತರ ಉದ್ಧಾರಕ್ಕಾಗಿ. 1950 ರಿಂದ ಸಂವಿಧಾನ ಬಗ್ಗೆ ಅಪ್ರಪ್ರಚಾರ ಮಾಡಲಾಗುತ್ತಿದೆ. ಅಸಮಾಧಾನ ತೋಗಲಿಸಬೇಕು. ಇನ್ನೂ ಅಸಮಾನತೆಯ ಕಡಿಮೆ ಆಗಿಲ್ಲ. ಅಸಮಾನತೆ ತೆಗೆದುಹಾಕುವುದು ಸರ್ಕಾರಗಳ ಕರ್ತವ್ಯ ಎಂದು ಕಿವಿ ಮಾತು ಹೇಳಿದರು.
ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳ ಮೂಲಕ ಜನರಿಗೆ ಸಂವಿಧಾನದ ಬಗ್ಗೆ ಜಾಗೃತಿ, ಮತ್ತು ಸಂವಿಧಾನದ ಅಗತ್ಯತೆ ಹಾಗೂ ಅನಿವಾರ್ಯತೆ ತಿಳಿಸುವ ಕೆಲಸ ಮಾಡಿದ್ದೇವೆ. ಇಂದು ಮತ್ತು ನಾಳೆ (ಫೆ.24 ಮತ್ತು 25) ಎರಡು ದಿನ ರಾಷ್ಟ್ರಿಯ ಏಕತಾ ದಿನ ಸಮಾವೇಶ ಹಮ್ಮಿಕೊಂಡಿದ್ದೇವೆ. ಈ ಸಮಾವೇಶದಲ್ಲಿ ಅನೇಕ ವಿಚಾರ ತಿಳಿಸುವ ಕೆಲಸ ಆಗುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ: ತಪ್ಪಿಲ್ಲದೆ ಸಂವಿಧಾನ ಪೀಠಿಕೆ ಬೋಧಿಸಿದ 4 ವರ್ಷದ ಬಾಲಕ, ಎಲ್ಲೆಡೆ ಭಾರೀ ಮೆಚ್ಚುಗೆ
ಈ ವರ್ಷ ಸಂವಿಧಾನ ಅಮೃತ ಮಹೋತ್ಸವ ಆಚರಣೆ ಮಾಡುತ್ತಿದ್ದೇವೆ. ಜನವರಿ 24 ರಿಂದ ಸಂವಿಧಾನ ಜಾಥಾ ಕಾರ್ಯಕ್ರಮ ನಡೆಸಿದೇವು. ರಾಜ್ಯದ 31 ಜಿಲ್ಲೆಗಳಲ್ಲಿ ಸಂವಿಧಾನದ ಅಗತ್ಯೆಗಳನ್ನು ತಿಳಿಸಲಾಗಿದೆ. ಫೆ.23 ರಂದು ಜಾಥಾ ಮುಕ್ತಾಯಗೊಂಡಿದೆ. ಅಂಬೇಡ್ಕರ್ ಸಂವಿಧಾನ ರಚನಾ ಸಮಿತಿ ಅಧ್ಯಕ್ಷರಾಗಿದ್ದರು. ಎಲ್ಲ ಸಮಸ್ಯೆಗಳಿಗೆ ಅಂಬೇಡ್ಕರ್ ಅವರು ಪರಿಹಾರ ಸೂಚಿಸುವ ಕೆಲಸ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಸಂವಿಂಧಾನಕ್ಕೆ ಅಪಾಯ ಆಗುವ ಸಂದರ್ಭವನ್ನು ಯಾರೂ ಸಹಿಸಬಾರದು. ನಮ್ಮ ದೇಶದಲ್ಲಿ ಅನೇಕ ಜಾತಿ, ಧರ್ಮ, ಸಂಸ್ಕೃತಿ ಇವೆ. ಜಾತಿ ವ್ಯವಸ್ಥೆಯಲ್ಲಿ ಆರ್ಥಿಕ ಅಸಮಾನತೆ, ಸಮಾಜಿಕ ಅಸಮಾನತೆ ಇದೆ. ಇವೆಲ್ಲ ಅಸಮಾನತೆ ತೊಲಗಬೇಕು. ಸಾಮಾಜಿಕ ಅಸಮಾನತೆಯನ್ನು ತೊಡೆದು ಹಾಕುವುದು ಪ್ರತಿ ಸರ್ಕಾರದ ಜವಾಬ್ದಾರಿಯಾಗಬೇಕು ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ