ದೇವನಹಳ್ಳಿ: ದೇವಾಲಯದ ಜಮೀನು ಉಳಿಸಿಕೊಳ್ಳಲು ಗ್ರಾಮಸ್ಥರಿಗೆ ಸಾಥ್ ನೀಡಿದ ದಿ. ಅನಂತ್ ಕುಮಾರ್ ಕುಟುಂಬ
ಜಮೀನು ಕಬಳಿಕೆಯಾಗ್ತಿದ್ದನ್ನ ಕಂಡ ಗ್ರಾಮಸ್ಥರು ದೇವಾಲಯದ ಜಮೀನನ್ನ ಉಳಿಸಲು ಸ್ವಂತ ಹಣವನ್ನ ಹಾಕಿ ದೇವಾಲಯವನ್ನ ಜೀರ್ಣೊದ್ದಾರ ಮಾಡಿದ್ದಾರೆ. ಅಲ್ಲದೆ ದೇವಾಲಯ ಜೀರ್ಣೋದ್ದಾರಕ್ಕೆ ದಿವಂಗತ ಕೇಂದ್ರ ಸಚಿವ ಅನಂತಕುಮಾರ್ ಕುಟುಂಬಸ್ಥರು ಸಹ ಸಾಥ್ ನೀಡಿದ್ದು ಈ ವೇಳೆ ಗ್ರಾಮಸ್ಥರೆಲ್ಲ ಒಟ್ಟಾಗಿ ಕಳಶಗಳನ್ನ ಹೊತ್ತು ಮೆರವಣಿಗೆ ಮೂಲಕ ಸಾಗಿ ಬಂದು ಕುಂಬಾಭಿಷೇಕ ಮಾಡಿ ಭಕ್ತಿ ಭಾವವನ್ನ ಮೆರೆದಿದ್ದಾರೆ.
ದೇವನಹಳ್ಳಿ ಬಳಿ ಕೆಂಪೇಗೌಡ ಏರ್ಪೋಟ್ ಆದ ನಂತರ ಜಮೀನುಗಳ ಬೆಲೆ ಗಗನಕ್ಕೇರಿದ್ದು ದೇವಾಲಯ ಹಾಗೂ ಸರ್ಕಾರಿ ಜಮೀನು ಕಬಳಿಸುವವರ ಸಂಖ್ಯೆ ದಿನೆದಿನೇ ಹೆಚ್ಚಾಗ್ತಿದೆ. ಈ ಮಧ್ಯೆ, ಕಬಳಿಕೆಯಾಗ್ತಿದ್ದ ಗ್ರಾಮದ ಜಮೀನನ್ನ ಗ್ರಾಮಸ್ಥರೇ ಉಳಿಸಿಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಭೋವಿಪಾಳ್ಯದ 120 ವರ್ಷದ ಹಳೆಯ ದೊಡ್ಡಮ್ಮ ಮಾರಮ್ಮ ದೇವಾಲಯ ಹಲವು ವರ್ಷಗಳಿಂದ ಪಾಳು ಬಿದ್ದಿತ್ತು. ಹೀಗಾಗಿ ದೇವಾಲಯದ ಒಂದು ಎಕರೆಗೂ ಅಧಿಕ ಜಮೀನು ಕೋಟಿ ಕೋಟಿ ಬೆಲೆ ಬಾಳುತ್ತೆ ಅಂತ ಕೆಲ ಭೂಗಳ್ಳರು ಜಮೀನು ಕಬಳಿಸುವ ಹುನ್ನಾರ ಮಾಡಿದ್ದರು.
ದೇವಸ್ಥಾನದ ಜೊತೆಗೆ ದೇವಾಲಯದ ಕೋಟ್ಯಂತರ ಬೆಲೆ ಬಾಳುವ ಜಮೀನು ಉಳಿಸಿಕೊಂಡ್ರ ಭೋವಿಪಾಳ್ಯದ ಗ್ರಾಮಸ್ಥರು
ಇನ್ನು ಜಮೀನು ಕಬಳಿಕೆಯಾಗ್ತಿದ್ದನ್ನ ಕಂಡ ಗ್ರಾಮಸ್ಥರು ದೇವಾಲಯದ ಜಮೀನನ್ನ ಉಳಿಸಲು ಸ್ವಂತ ಹಣವನ್ನ ಹಾಕಿ ದೇವಾಲಯವನ್ನ ಜೀರ್ಣೊದ್ದಾರ ಮಾಡಿದ್ದಾರೆ. ಅಲ್ಲದೆ ದೇವಾಲಯ ಜೀರ್ಣೋದ್ದಾರಕ್ಕೆ ದಿವಂಗತ ಕೇಂದ್ರ ಸಚಿವ ಅನಂತಕುಮಾರ್ ಕುಟುಂಬಸ್ಥರು ಸಹ ಸಾಥ್ ನೀಡಿದ್ದು ಈ ವೇಳೆ ಗ್ರಾಮಸ್ಥರೆಲ್ಲ ಒಟ್ಟಾಗಿ ಕಳಶಗಳನ್ನ ಹೊತ್ತು ಮೆರವಣಿಗೆ ಮೂಲಕ ಸಾಗಿ ಬಂದು ಕುಂಬಾಭಿಷೇಕ ಮಾಡಿ ಭಕ್ತಿ ಭಾವವನ್ನ ಮೆರೆದಿದ್ದಾರೆ. ಇನ್ನು ಜೀರ್ಣೋದ್ದಾರದ ನಂತರ ಗ್ರಾಮಸ್ಥರಿಗೆಲ್ಲ ಹೋಳಿಗೆ ಊಟ ಬಡಿಸಿದ್ದಾರೆ ಎಂದು ಟ್ರಸ್ಟಿ ರಮೇಶ್ ಸಂತಸಪಟ್ಟಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ