AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನರ್ಸಿಂಗ್ ಕ್ಷೇತ್ರದಲ್ಲಿ ಅಗಾದ ಸೇವೆ: ಡಾ ಟಿ ದಿಲೀಪ್‌ಕುಮಾರ್​​ಗೆ ‘ಶ್ರೀನಗರೀಂದ್ರ ಪ್ರಶಸ್ತಿ’

ನರ್ಸಿಂಗ್ ವೈದ್ಯಕೀಯ‌ ಕ್ಷೇತ್ರದಲ್ಲಿ ಅಗಾದವಾದ ಸೇವೆ ಸಲ್ಲಿಸಿ ಅನುಪಮ ಸೇವೆಗೆ ಮೀಸಲಿರುವ ‘ಶ್ರೀನಗರೀಂದ್ರ ಅಂತರರಾಷ್ಟ್ರೀಯ ಪುರಸ್ಕಾರ’ಕ್ಕೆ ಇಂಡಿಯನ್‌ ನರ್ಸಿಂಗ್‌ ಕೌನ್ಸಿಲ್‌ ಅಧ್ಯಕ್ಷ ಡಾ.ಟಿ.ದಿಲೀಪ್‌ಕುಮಾರ್​ ಅವರು ಭಾಜನರಾಗಿದ್ದಾರೆ. ನಾಗರಿಕ ಅಭಿನಂದನಾ ಸಮಿತಿಯಿಂದ ಹಾಗೂ ತರಬೇತಿ ನರ್ಸಿಂಗ್ ಆಪ್ ಇಂಡಿಯಾ ಕರ್ನಾಟಕ ಸಂಸ್ಥೆಯಿಂದ ಖಾಸಗಿ ಹೋಟೆಲ್​ನಲ್ಲಿ ಅಭಿನಂದನಾ ಕಾರ್ಯಕ್ರಮ ಏರ್ಪಿಡಿಸಲಾಗಿತ್ತು.

ನರ್ಸಿಂಗ್ ಕ್ಷೇತ್ರದಲ್ಲಿ ಅಗಾದ ಸೇವೆ: ಡಾ ಟಿ ದಿಲೀಪ್‌ಕುಮಾರ್​​ಗೆ ‘ಶ್ರೀನಗರೀಂದ್ರ ಪ್ರಶಸ್ತಿ’
ಡಾ.ಟಿ.ದಿಲೀಪ್‌ಕುಮಾರ್‌
Vinay Kashappanavar
| Edited By: |

Updated on: Feb 24, 2024 | 7:21 PM

Share

ಬೆಂಗಳೂರು, ಫೆಬ್ರವರಿ 24: ನರ್ಸಿಂಗ್ ಕ್ಷೇತ್ರದಲ್ಲಿ ಅಗಾದವಾದ ಸೇವೆ ಸಲ್ಲಿಸಿ ಅನುಪಮ ಸೇವೆಗೆ ಮೀಸಲಿರುವ ‘ಶ್ರೀನಗರೀಂದ್ರ ಅಂತರರಾಷ್ಟ್ರೀಯ ಪುರಸ್ಕಾರ’ಕ್ಕೆ ಇಂಡಿಯನ್‌ ನರ್ಸಿಂಗ್‌ ಕೌನ್ಸಿಲ್‌ ಅಧ್ಯಕ್ಷ ಡಾ.ಟಿ.ದಿಲೀಪ್‌ಕುಮಾರ್ (Dr T DilipKumar) ಅವರು ಭಾಜನರಾಗಿದ್ದಾರೆ. ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ಕಳೆದ ವರ್ಷದ ನಡೆದ ಸಮಾರಂಭದಲ್ಲಿ ರಾಣಿ ಮಹಾ ಚಕ್ರಿ ಸಿರಿಂದೋರ್ನ್‌ 2023ನೇ ಸಾಲಿನ ಪುರಸ್ಕಾರವನ್ನು ಡಾ ದಿಲೀಪ್‌ಕುಮಾರ್‌ ಅವರಿಗೆ ಪ್ರದಾನ ಮಾಡಿದ್ದಾರೆ. ನರ್ಸಿಂಗ್ ಕ್ಷೇತ್ರದ ಸಾಧನೆ ಹಾಗೂ ಸಿಕ್ಕ ಗೌರವ ಪ್ರಶಸ್ತಿ ಹಿನ್ನೆಲೆ ಡಾ. ದಿಲೀಪ್ ಕುಮಾರ್ ನಾಗರಿಕ ಅಭಿನಂದನಾ ಸಮಿತಿಯಿಂದ ಹಾಗೂ ತರಬೇತಿ ನರ್ಸಿಂಗ್ ಆಪ್ ಇಂಡಿಯಾ ಕರ್ನಾಟಕ ಸಂಸ್ಥೆಯಿಂದ ಖಾಸಗಿ ಹೋಟೆಲ್​ನಲ್ಲಿ ಅಭಿನಂದನಾ ಕಾರ್ಯಕ್ರಮ ಏರ್ಪಿಡಿಸಲಾಗಿತ್ತು.

ದಿಲೀಪ್‌ಕುಮಾರ್‌ ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ದುಮ್ಮಿ ಗ್ರಾಮದವರು. ನರ್ಸಿಂಗ್‌ ಶಿಕ್ಷಣ ಪಡೆದ ಚಿತ್ರದುರ್ಗ, ಬೆಂಗಳೂರು, ಬಳ್ಳಾರಿ ಸೇರಿ ರಾಜ್ಯದ ಹಲವೆಡೆ ಸೇವೆ ಸಲ್ಲಿಸಿದ್ದಾರೆ. ಕೇಂದ್ರೀಯ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ನರ್ಸಿಂಗ್‌ ಉಪ ಸಲಗೆಗಾರರಾಗಿ ದೆಹಲಿಯಲ್ಲಿ ಸೇವೆಗೆ ಸೇರಿದ್ದಾರೆ. ಕೆಲ ವರ್ಷಗಳಿಂದ ಇಂಡಿಯನ್‌ ನರ್ಸಿಂಗ್ ಕೌನ್ಸಿಲ್‌ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.

ನರ್ಸಿಂಗ್ ಲೋಕದಲ್ಲಿ ಸಾಕಷ್ಟು ಬದಲಾವಣೆ ಅವಶ್ಯಕತೆ ಇದೆ: ಡಾ.ಟಿ.ದಿಲೀಪ್‌ಕುಮಾರ್

ನರ್ಸಿಂಗ್ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧ್ಯನೆ, ಬದ್ಧತೆ ಮತ್ತು ತಮ್ಮನ್ನು ತಾವು ಶುಶ್ರೂಷೆಗೆ ಕೆಲಸಕ್ಕೆ ಅಪರ್ಣೆ ಮಾಡಿಕೊಂಡು ಕಳೆದ 49 ವರ್ಷಗಳಿಂದ ಭಾರತೀಯ ನರ್ಸಿಂಗ್ ಕೌನ್ಸಿಲ್‌ನಲ್ಲಿ ಸೇವೆ ಸಲ್ಲಿಸಿರುವ ದಿಲೀಪ್ ಕುಮಾರ್ ಮಾತನಾಡಿದ್ದು, ಸಿಕ್ಕ ಗೌರವ ಹಾಗೂ ಪ್ರಶಸ್ತಿಯ ಅಭಿನಂಧನೆಗೆ ಸಂತಸ ವ್ಯಕ್ತಪಡಿಸಿದರು. ಈ ವೇಳೆ ನರ್ಸಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಅಭಿವೃದ್ಧಿಯ ಅವಶ್ಯಕತೆ ಇದೆ. ಜೊತೆಗೆ ನರ್ಸಿಂಗ್ ಸಿಬ್ಬಂದಿಗಳಿಲ್ಲದೆ ಆಸ್ಪತ್ರೆಗಳೆ ಇರಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಿಎಂಟಿಸಿಯಲ್ಲಿ ಕ್ಯೂಆರ್‌ ಕೋಡ್‌ ಸೌಲಭ್ಯ; ಡಿಜಿಟಲ್ ಪೇಮೆಂಟ್​ಗೆ ಭರ್ಜರಿ ರೆಸ್ಪಾನ್ಸ್

ಕಾರ್ಯಕ್ರಮದಲ್ಲಿ ರಾಜೀವ ಗಾಂಧೀ ಆರೋಗ್ಯ ವಿವಿ ಕುಲಪತಿ ರಮೇಶ್ ಕುಮಾರ್, ಭಾರತೀಯ ಹೋಮಿಯೋಪತಿ ಕೌನ್ಸಿಲ್ ಅಧ್ಯಕ್ಷ ರುದ್ರಮೂರ್ತಿ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು. ಡಾ. ದಿಲೀಪ್ ಕುಮಾರ್ ಸಾಧನೆ ಬಗ್ಗೆ ಸಾಕಷ್ಟು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಕಳೆದ 50 ವರ್ಷಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ಡಾ. ದಿಲೀಪ್ ಕುಮಾರ್ ಸಲ್ಲಿಸಿರುವ ಸೇವೆಗೆ ಎಲ್ಲಡೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ