ಬಿಎಂಟಿಸಿಯಲ್ಲಿ ಕ್ಯೂಆರ್ ಕೋಡ್ ಸೌಲಭ್ಯ; ಡಿಜಿಟಲ್ ಪೇಮೆಂಟ್ಗೆ ಭರ್ಜರಿ ರೆಸ್ಪಾನ್ಸ್
ಬಿಎಂಟಿಸಿಯಲ್ಲಿ ಹಣ ಕೊಟ್ಟು ಟಿಕೆಟ್ ಪಡೆಯೋದ್ರೊಳಗೆ ಜನರು ಸುಸ್ತಾಗಿ ಹೋಗ್ತಿದ್ರು. ಚಿಲ್ಲರೆ ಕೊಟ್ಟು ಕೊಟ್ಟು ಕಂಡೆಕ್ಟರ್ ಕೀಸೆ ಕೂಡ ಖಾಲಿಯಾಗ್ತಿತ್ತು. 5-10 ರೂಪಾಯಿ ಚಿಲ್ಲರೆಯಿಲ್ಲದೇ ಜನ ನಿತ್ಯ ಪರದಾಡಬೇಕಿತ್ತು. ಆದರೆ ಈಗ ಬಿಎಂಟಿಸಿಯಲ್ಲಿ ಈ ಸಮಸ್ಯೆ ಅಂತ್ಯವಾಗೋ ಲಕ್ಷಣ ಕಾಣಿಸ್ತಿದೆ. ಇದಕ್ಕೆಲ್ಲಾ ಕಾರಣ ಕ್ಯೂಆರ್ ಕೋಡ್ ನ ಚಮತ್ಕಾರ. ಡಿಜಿಟಲ್ ದುನಿಯಾದ ಕರಾಮತ್ತು.
ಬೆಂಗಳೂರು, ಫೆ.24: ಪ್ರತಿ ನಿತ್ಯ ಬಿಎಂಟಿಸಿ (BMTC) ಪ್ರಯಾಣಿಕರು ಟಿಕೆಟ್ ಖರೀದಿಸುವಾಗ ಚಿಲ್ಲರೆಗಾಗಿ ಪರದಾಡುತ್ತಿದ್ದರು. ಸದ್ಯ ಈಗ ಬಿಎಂಟಿಸಿಯಲ್ಲಿ ಕ್ಯೂಆರ್ (QR Code) ಸರ್ವಿಸ್ ಇದ್ದು ಪ್ರಯಾಣಿಕರು ಸ್ಕ್ಯಾನ್ ಮಾಡಿ ಹಣ ಪಾವತಿಸುತ್ತಿದ್ದಾರೆ. ಇದರಿಂದಾಗೊ ಚಿಲ್ಲರೆ ಸಮಸ್ಯೆ ನಿವಾರಣೆಯಾಗಿದೆ. ಯುಪಿಐ ಪೇಮೆಂಟ್ಗೆ (UPI Payment) ಉತ್ತಮ ಸ್ಪಂದನೆ ಸಿಗುತ್ತಿದೆ. ಬಿಎಂಟಿಸಿ ಬಸ್‌ನಲ್ಲಿ ನಿತ್ಯ 35 ಲಕ್ಷಕ್ಕೂ ಅಧಿಕ ಜನ ಸಂಚರಿಸ್ತಿದ್ದಾರೆ. ಈ ಫೈಕಿ 20 ಲಕ್ಷ ಮಹಿಳೆಯರು ನಿತ್ಯ ಉಚಿತವಾಗಿ ಸಂಚರಿಸಿದ್ರೆ. ಉಳಿದ 15 ಲಕ್ಷ ಜನ ಹಣ ಕೊಟ್ಟು ಟಿಕೆಟ್ ಪಡೆದು ಓಡಾಡ್ತಿದ್ದಾರೆ. ಇದರಲ್ಲಿ ಒಂದು ಲಕ್ಷ ಜನ ಟಿಕೆಟ್ ಪಡೆಯಲು ಯುಪಿಐ ಮೊರೆ ಹೋಗಿದ್ದಾರೆ. ಇದರಿಂದ ಚಿಲ್ಲರೆ ಸಮಸ್ಯೆಯಿಲ್ಲದೆ ಟಿಕೆಟ್ ಪಡೆಯಬಹುದು ಎಂದು ಪ್ರಯಾಣಿಕರು ಸಂತಸ ಹಂಚಿಕೊಂಡಿದ್ದಾರೆ.
ಟಿಕೆಟ್ ಖರೀದಿಯ ಜೊತೆ ದಿನದ ಹಾಗೂ ತಿಂಗಳ ಪಾಸ್ ಖರೀದಿಯ ವೇಳೆಯೂ ಪ್ರಯಾಣಿಕರು ಹೆಚ್ಚಾಗಿ ಡಿಜಿಟಲ್ ಪೇಮೆಂಟ್ ಮಾಡ್ತಿದ್ದಾರೆ. ಪ್ರತಿ ತಿಂಗಳು ಒಂದು ಲಕ್ಷ ತಿಂಗಳ ಪಾಸ್ ನೀಡಲಾಗುತ್ತೆ. ಈ ವೇಳೆ 50 ಸಾವಿರ ಜನ ಯುಪಿಐ ಪೇಮೆಂಟ್ ಮಾಡ್ತಿದ್ದು, ಚಿಲ್ಲರೆ ಸಮಸ್ಯೆಗೆ ಫುಲ್ ಸ್ಟಾಪ್ ಬಿದ್ದಿದೆ. ವೋಲ್ವೊ ಬಸ್ ನಲ್ಲಿಯೂ ನಿತ್ಯ ಶೇಕಡಾ 32ರಷ್ಟು ಪ್ರಯಾಣಿಕರು ಡಿಜಿಟಲ್ ಪೆಮೇಂಟ್ ಮೊರೆ ಹೋಗಿದ್ದಾರೆ. ನಾವು ಯುಪಿಐ ಪೆಮೇಂಟ್ ಶುರು ಮಾಡಿದಾಗ ಆರಂಭದಲ್ಲಿ ಹೆಚ್ಚಿನ ಜನ ಬಳಕೆ ಮಾಡ್ತಿರಲಿಲ್ಲ. ಆದರೆ ಈಗ ಜನರಿಂದ ಅದ್ಬುತ ರೆಸ್ಪಾನ್ಸ್ ವ್ಯಕ್ತವಾಗ್ತಿದೆ ಎಂದು ಬಿಎಂಟಿಸಿಯ ಚೀಫ್ ಟ್ರಾಫಿಕ್ ಮ್ಯಾನೇಜರ್ ಜಿ.ಟಿ. ಪ್ರಭಾಕರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಭ್ರಷ್ಟಾಚಾರ ನಿಗ್ರಹ: ವಚನ ಭ್ರಷ್ಟರಾದರೇ ಸಿದ್ದರಾಮಯ್ಯ?
ಡಿಜಿಟಲ್ ಪೇಮೆಂಟ್ ಗೆ ಭರ್ಜರಿ ರೆಸ್ಪಾನ್
- ನವೆಂಬರ್: ಕ್ಯೂಆರ್ ಟಿಕೆಟ್ ಆದಾಯ ₹5.54 ಕೋಟಿ
- ಡಿಸೆಂಬರ್: ಕ್ಯೂಆರ್ ಟಿಕೆಟ್ ಆದಾಯ ₹5.91ಕೋಟಿ
- ಜನವರಿ: ಕ್ಯೂಆರ್ ಟಿಕೆಟ್ ಆದಾಯ ₹5.96ಕೋಟಿ
ಒಟ್ಟಾರೆ ಬಿಎಂಟಿಸಿಗೆ ತಿಂಗಳಿಗೆ 85 ಕೋಟಿಗೂ ಅಧಿಕ ಆದಾಯ ಬರ್ತಿದ್ದು, ಇದರಲ್ಲಿ 6 ರಿಂದ 7 ಪರ್ಸೆಂಟ್ ಡಿಜಿಟಲ್ ಪೆಮೇಂಟ್ ಮೂಲಕ ಸಂಗ್ರಹವಾಗ್ತಿದೆ. ಈಗ ಸದ್ಯ ಕಂಡೆಕ್ಟರ್ ಕೈಯಲ್ಲಿ ಕ್ಯೂಆರ್ ಕೂಡ ನೀಡಿದ್ದು, ಜನರ ಅದರಲ್ಲಿ ಸ್ಕ್ಯಾನ್ ಮಾಡಿ ಹಣ ಪಾವತಿ ಮಾಡಿ ಟಿಕೆಟ್ ಪಡೆಯುತ್ತಿದ್ದಾರೆ. ಆದರೆ ಕೆಲವು ಸಲ ಹಣ ಪಾವತಿಯಾಗದೇ ಕಂಡೆಕ್ಟರ್ ಹಾಗೂ ಪ್ರಯಾಣಿಕರು ಪರದಾಡಬೇಕಿದೆ. ಇದಕ್ಕೆ ಮುಕ್ತಿ ಹಾಡಲು ಶೀಘ್ರದಲ್ಲಿಯೇ ಇಟಿಎಂ ಮೆಷಿನ್ ನಲ್ಲಿ ಕ್ಯೂಆರ್ ಕೋಡ್ ಜನರೇಟ್ ಮಾಡಲು ಬಿಎಂಟಿಸಿ ತಯಾರಿ ನಡೆಸ್ತಿದೆ. ಇದರಿಂದ ಜನರಿಗೆ ಹಾಗೂ ಕಂಡೆಕ್ಟರ್ ಗೆ ಮತ್ತಷ್ಟು ಅನುಕೂಲವಾಗಲಿದ್ದು, ಇನ್ನೂ ಹೆಚ್ಚಿನ ಜನ ಡಿಜಿಟಲ್ ಪೇಮೆಂಟ್ ಮೊರೆ ಹೋಗೋ ಸಾಧ್ಯತೆಯಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ