ರಾಜಕೀಯಕ್ಕಾಗಿ ಭಾರತ್ ಅಕ್ಕಿಯನ್ನು ವಿತರಣೆ ಮಾಡುತ್ತಿದ್ದಾರೆ: ಕೇಂದ್ರದ ವಿರುದ್ಧ ಸಚಿವ ಮುನಿಯಪ್ಪ ಕಿಡಿ
ಕೇಂದ್ರ ಸರ್ಕಾರದಿಂದ ಜನರಿಗೆ ಭಾರತ್ ಅಕ್ಕಿ ವಿತರಣೆ ವಿಚಾರವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಮುನಿಯಪ್ಪ, ರಾಜಕೀಯಕ್ಕಾಗಿ ಭಾರತ್ ಅಕ್ಕಿಯನ್ನು ವಿತರಣೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಜನರ ಅಕ್ಕಿಯನ್ನು 39 ರೂ.ಗೆ ಖರೀದಿಸಿ 19 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಒಂದು ಕೆಜಿಗೆ 20 ರೂ. ಲಾಸ್ ಮಾಡುತ್ತಿದ್ದಾರೆ.
ದೇವನಹಳ್ಳಿ, ಫೆಬ್ರವರಿ 24: ದೇಶದಲ್ಲಿ 40 ರೂ.ಗಿಂತ ಕಡಿಮೆ ಅಕ್ಕಿ ಇಲ್ಲ. ಜನರ ಅಕ್ಕಿಯನ್ನು 39 ರೂ.ಗೆ ಖರೀದಿಸಿ 19 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಆ ಮೂಲಕ ಒಂದು ಕೆಜಿಗೆ 20 ರೂ. ಲಾಸ್ ಮಾಡುತ್ತಿದ್ದಾರೆ. ರಾಜಕೀಯಕ್ಕಾಗಿ ಭಾರತ್ ಅಕ್ಕಿಯನ್ನು ವಿತರಣೆ ಮಾಡುತ್ತಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಮುನಿಯಪ್ಪ (KH Muniyappa) ಹೇಳಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಕೇಂದ್ರ ಸರ್ಕಾರದಿಂದ ಜನರಿಗೆ ಭಾರತ್ ಅಕ್ಕಿ ವಿತರಣೆ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದ ಬೊಕ್ಕಸ, ಜನರ ಹಣಕ್ಕೆ ಒಂದು ಇತಿಮಿತಿ ಇರಬೇಕು. ಇವರು ಅಕ್ಕಿಯನ್ನು ಕೊಡಲಿ, ಆದರೆ ಲಾಸ್ ಆಗದಂತೆ ನೀಡಲಿ. ಅಕ್ಕಿ ಕೊಡಿ ಹಣ ಕೊಡುತ್ತೇವೆ ಅಂತಾ ಕೇಳಿದರೂ ಕೊಡಲಿಲ್ಲ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಅಧಿಕಾರಕ್ಕೇರುತ್ತಿದ್ದಂತೆ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ ಸಿದ್ದರಾಮಯ್ಯ ಸರ್ಕಾರ ಅನ್ನಭಾಗ್ಯ ಯೋಜನೆಯನ್ನೂ ಜಾರಿಗೊಳಿಸಿತ್ತು. ಕೇಂದ್ರದ 5 ಕೆಜಿ ಜತೆ ತಾವೂ ಐದು ಕೆಜಿ ಸೇರಿಸಿ ಒಟ್ಟು 10 ಕೆಜಿ ಅಕ್ಕಿ ಕೊಡುತ್ತೇವೆ ಅಂತಾ ಹೇಳಿದ್ದರು. ಆದರೆ ಅಷ್ಟೊಂದು ಪ್ರಮಾಣದಲ್ಲಿ ಅಕ್ಕಿ ಸಿಗದ ಕಾರಣಕ್ಕೆ ಇದುವರೆಗೂ ಅಕ್ಕಿ ಕೊಡಲಾಗಿಲ್ಲ. ಅದರ ಬದಲಿಗೆ ತಲಾ 170 ರೂಪಾಯಿ ಹಣ ನೀಡಲಾಗುತ್ತಿದೆ.
ಇದನ್ನೂ ಓದಿ: ನೀರಿಗಾಗಿ ಹಾಹಾಕಾರ; ಜೀವಜಲಕ್ಕಾಗಿ ಮಹದೇವಪುರ, ವರ್ತೂರು ಜನ ಹೈರಾಣ
6 ತಿಂಗಳಿನಿಂದಲೂ ಹಣವನ್ನೇ ಕೊಡುತ್ತಿರುವ ಸರ್ಕಾರ ಇದನ್ನೇ ಮುಂದುವರಿಸಲು ಸಿದ್ದತೆ ನಡೆಸಿದೆ. ಹೀಗಾಗಿ ಸರ್ವೇ ಕೂಡ ಮಾಡಿಸಿದೆ. ಶೇಕಡಾ 60 ರಷ್ಟು ಜನ ಹಣ ಬೇಡ ಅಕ್ಕಿಯನ್ನೇ ಕೊಡಿ ಅಂತಿದ್ದಾರೆ. 170 ರೂಪಾಯಿಯಲ್ಲಿ ಐದು ಕೆಜಿ ಅಕ್ಕಿ ಖರೀದಿ ಮಾಡಲು ಆಗುತ್ತಿಲ್ಲ. ಹೀಗಾಗಿ ಅಕ್ಕಿಯನ್ನೇ ಕೊಡಿ ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ರಾಜ್ಯವನ್ನು ದಿವಾಳಿ ಎಬ್ಬಿಸಿ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ: ಅರವಿಂದ ಬೆಲ್ಲದ್
ಬಿಪಿಎಲ್ ಕಾರ್ಡ್‌ನ ಪ್ರತಿ ಫಲಾನುಭವಿ ಖಾತೆಗೆ ಪ್ರತಿ ತಿಂಗಳು 170 ರೂಪಾಯಿಯಂತೆ ಹಣ ಹಾಕುತ್ತಿದ್ದಾರೆ. ಕಳೆದ 6 ತಿಂಗಳಲ್ಲಿ ಜನರ ಖಾತೆಗೆ ಬರೋಬ್ಬರಿ 3751 ಕೋಟಿ ರೂ. ಹಣ ವರ್ಗಾವಣೆ ಮಾಡಿದೆ. ಇನ್ನು ಎರಡು ಸರ್ವೇಗಳಲ್ಲಿ ಅಕ್ಕಿ ಬಗ್ಗೆಯೇ ಹೆಚ್ಚಿನ ಜನ ಒಲವು ತೋರಿಸಿದ್ದಾರೆ. ಹೀಗಾಗಿ ಮತ್ತೆ ಅಕ್ಕಿ ಖರೀದಿಗೆ ಸರ್ಕಾರ ಪ್ರಯತ್ನ ಆರಂಭಿಸಿದೆ. ಆಂಧ್ರ, ತೆಲಂಗಾಣ ಸೇರಿದಂತೆ ಹಲವು ಸರ್ಕಾರದ ಜತೆ ಮಾತನಾಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.