AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿಗೆ ಜಲ ಕಂಟಕ: ಆರ್​​ಆರ್​ ನಗರ ಬಿಡಿಎ ಅಪಾರ್ಟ್ ಮೆಂಟ್​ನಲ್ಲೂ ನೀರಿಲ್ಲ, ಟ್ಯಾಂಕರ್ ಮೊರೆಹೋದ ನಿವಾಸಿಗಳು

ಬೇಸಿಗೆಯ ಬಿಸಿಲತಾಪದ ಜೊತೆಗೆ ಸಿಲಿಕಾನ್ ಸಿಟಿ ಜನರಿಗೆ ಜಲ ಕಂಟಕ ಎದುರಾಗಿದೆ. ಬೆಂಗಳೂರು ನಗರದಲ್ಲಿ ನೀರಿಗೆ ಹಾಹಾಕಾರ ಎದ್ದಿದೆ. ಬೋರ್​ವೆಲ್​ಗಳಲ್ಲಿ ನೀರಿಲ್ಲದೆ ಟ್ಯಾಂಕರ್ ನೀರು ಖರೀದಿಸುತ್ತಿದ್ದಾರೆ. ಟ್ಯಾಂಕರ್ ನೀರಿನ ಬೆಲೆಯಲ್ಲೂ ದುಪ್ಪಟ್ಟಾಗಿದೆ. ಈ ನಡುವೆ, ಆರ್.ಆರ್.ನಗರ ಬಿಡಿಎ ಅಪಾರ್ಟ್​​ಮೆಂಟ್​ನಲ್ಲೂ ಜಲ ದಾಹ ಎದುರಾಗಿದೆ.

ಬೆಂಗಳೂರಿಗೆ ಜಲ ಕಂಟಕ: ಆರ್​​ಆರ್​ ನಗರ ಬಿಡಿಎ ಅಪಾರ್ಟ್ ಮೆಂಟ್​ನಲ್ಲೂ ನೀರಿಲ್ಲ, ಟ್ಯಾಂಕರ್ ಮೊರೆಹೋದ ನಿವಾಸಿಗಳು
ಬೆಂಗಳೂರಿಗೆ ಜಲ ಕಂಟಕ: ಆರ್​​ಆರ್​ ನಗರ ಬಿಡಿಎ ಅಪಾರ್ಟ್ ಮೆಂಟ್​ನಲ್ಲೂ ನೀರಿಲ್ಲ, ಟ್ಯಾಂಕರ್ ಮೊರೆಹೋದ ನಿವಾಸಿಗಳು
TV9 Web
| Edited By: |

Updated on: Feb 25, 2024 | 10:37 AM

Share

ಬೆಂಗಳೂರು, ಫೆ.25: ಬೇಸಿಗೆಯ ಬಿಸಿಲತಾಪದ ಜೊತೆಗೆ ಸಿಲಿಕಾನ್ ಸಿಟಿ ಜನರಿಗೆ ಜಲ ಕಂಟಕ ಎದುರಾಗಿದೆ. ಬೆಂಗಳೂರು (Bengaluru) ನಗರದಲ್ಲಿ ನೀರಿಗೆ ಹಾಹಾಕಾರ (Water Problem) ಎದ್ದಿದೆ. ಬೋರ್​ವೆಲ್​ಗಳಲ್ಲಿ ನೀರಿಲ್ಲದೆ ಟ್ಯಾಂಕರ್ ನೀರು ಖರೀದಿಸುತ್ತಿದ್ದಾರೆ. ಟ್ಯಾಂಕರ್ ನೀರಿನ ಬೆಲೆಯಲ್ಲೂ ದುಪ್ಪಟ್ಟಾಗಿದೆ. ಈ ನಡುವೆ, ಆರ್.ಆರ್.ನಗರ (RR Nagar) ಬಿಡಿಎ ಅಪಾರ್ಟ್​​ಮೆಂಟ್​ನಲ್ಲೂ ಜಲ ದಾಹ ಎದುರಾಗಿದೆ.

ಆರ್.ಆರ್.ನಗರ ಬಿಡಿಎ ಅಪಾರ್ಟ್ ಮೆಂಟ್​ನಲ್ಲಿ ಜಲ ದಾಹ ಶುರುವಾಗಿದ್ದು, 192 ಮನೆಗಳ ನಿವಾಸಿಗಳು ನೀರಿಲ್ಲದೇ ಹೈರಾಣಾಗಿದ್ದಾರೆ. 10 ವರ್ಷಗಳಿಂದ ಅಪಾರ್ಟ್​ಮೆಂಟ್ ದಾಹ ತಣಿಸುತ್ತಿದ್ದ ಏಕೈಕ ಬೋರ್​ವೆಲ್​ನಲ್ಲಿ ನೀರು ಬತ್ತಿದೆ. ವಿಧಿ ಇಲ್ಲದೆ ನಿವಾಸಿಗಳು ಟ್ಯಾಂಕರ್ ನೀರು ಮೊರೆಹೋಗಿದ್ದಾರೆ.

ಇದನ್ನೂ ಓದಿ: ನೀರಿನ ಹಾಹಾಕಾರ, ಖಾಸಗಿ ಟ್ಯಾಂಕರ್​ಗಳ ದಂಧೆಗೆ ಕಡಿವಾಣ ಹಾಕಬೇಕು- ಸಂಸದ ತೇಜಸ್ವಿ ಸೂರ್ಯ

ಮನೆ ಬಾಡಿಗೆ ಜೊತೆ ನೀರಿನ ಹಣ ಹೆಚ್ಚುವರಿ ಹೊರೆ

ಬೇಸಿಗೆಗೂ ಮೊದಲೇ ಕಳೆದ 3 ತಿಂಗಳಿನಿಂದ ನಗರದ ಕೆಲವೆಡೆ ನೀರಿನ ಬರ ಎದುರಾಗಿದ್ದು, ಅಂತಹ ಪ್ರದೇಶದಲ್ಲಿನ ನಿವಾಸಿಗಳು ಟ್ಯಾಂಕರ್ ನೀರಿನ ಮೊರೆ ಹೋಗುತ್ತಿದ್ದಾರೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಟ್ಯಾಂಕರ್ ಮಾಲೀಕರು ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ. ಇದರಿಂದಾಗಿ ಬಾಡಿಗೆ ಜೊತೆಗೆ ನೀರಿಗೂ ಹಣ ಕಟ್ಟಿ ಜನರು ಹೈರಾಣಾಗಿದ್ದಾರೆ.

ಅಪಾರ್ಟ್​ಮೆಂಟ್ ತೊರೆದ ಜನರು

ಪ್ರತಿ ತಿಂಗಳು 3 ರಿಂದ 4 ಲಕ್ಷ ಹಣ ನೀರಿಗಾಗಿ ಕಟ್ಟಬೇಕು ಎಂದು ನೀರು ಕೊಡದ ಬಿಡಿಎ, ಜಲಮಂಡಳಿ ವಿರುದ್ಧ ನಿವಾಸಿಗಳು ಕಿಡಿಕಾರಿದ್ದಾರೆ. ಅಲ್ಲದೆ, ನೀರಿಲ್ಲ ಎಂದು ಒಂದಷ್ಟು ಬಾಡಿಗೆದಾರರು ಫ್ಲಾಟ್ ಖಾಲಿ ಮಾಡಿದ್ದಾರೆ. ನಮಗೆ ಏನು ಬೇಡ ನೀರು ಕೊಡಿ ಅಂತ ಜನರು ಒತ್ತಾಯಿಸುತ್ತಿದ್ದಾರೆ.

ವರದಿ; ಶಾಂತಮೂರ್ತಿ, ಟಿವಿ9 ಬೆಂಗಳೂರು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್