ರಾಜ್ಯೋತ್ಸವದಂದು ಆಟೋ ಚಾಲಕರ ಸಂಘದಿಂದ ಬಿಡುಗಡೆಯಾಗಲಿದೆ ‘ನಮ್ಮ ಯಾತ್ರಿ’ ಆ್ಯಪ್

ಓಲಾ, ಊಬರ್​ಗೆ ಸೆಡ್ಡು ಹೊಡೆಯಲು ಆಟೋ ಚಾಲಕರ ಸಂಘ ನವೆಂಬರ್​ 1 ರಂದು ನಮ್ಮ ಯಾತ್ರಿ ಹೊಸ ಆ್ಯಪ್ ಬಿಡಗಡೆಗೊಳಸಲಿದೆ.

ರಾಜ್ಯೋತ್ಸವದಂದು ಆಟೋ ಚಾಲಕರ ಸಂಘದಿಂದ ಬಿಡುಗಡೆಯಾಗಲಿದೆ ‘ನಮ್ಮ ಯಾತ್ರಿ’ ಆ್ಯಪ್
ನಮ್ಮ ಯಾತ್ರಿ
Edited By: ವಿವೇಕ ಬಿರಾದಾರ

Updated on: Oct 31, 2022 | 2:43 PM

ಬೆಂಗಳೂರು: ಓಲಾ, ಊಬರ್ ಆಟೋಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದು, ಜನರು ಓಲಾ ಮತ್ತು ಊಬರ್​ ಆಟೋಗಳಿಗೆ ಪರ್ಯಾಯ ವ್ಯವಸ್ತೆಯನ್ನು ಹುಡುಕುತ್ತಿದ್ದಾರೆ. ಈ ಮಧ್ಯ ಓಲಾ, ಉಬರ್​​ಗೆ ಸೆಡ್ಡು ಹೊಡೆಯಲು ಆಟೋ ಚಾಲಕರ ಸಂಘದಿಂದ ನಾಳೆ (ನ. 1) ಹೊಸ ಆ್ಯಪ್ ಬಿಡುಗಡೆ ಮಾಡಲು ಮುಂದಾಗಿದೆ. ಈ ಸಂಬಂಧ ‘ನಮ್ಮ ಯಾತ್ರಿ’ ತಯಾರಿಸಿದ್ದು, ಕನ್ನಡ ರಾಜ್ಯೋತ್ಸವದ ದಿನ ಆ್ಯಪ್​​ ಬಿಡುಗಡೆ ಮಾಡಲಾಗುತ್ತದೆ.

ಈ ನಮ್ಮ ಯಾತ್ರಿ ಆ್ಯಪ್​ನ್ನು ಖಾಸಗಿ ಸಂಸ್ಥೆಯಿಂದ ತಾಂತ್ರಿಕ ಸಹಾಯ ಪಡೆದು ರಚನೆ ಮಾಡಲಾಗಿದ್ದು, ಸರ್ಕಾರ ನಿಗದಿ ಮಾಡಿದಂತೆ ಕಿಲೋ ಮೀಟರ್​ಗೆ 30 ರೂ. ನಿಗದಿ ಮಾಡಲಾಗಿದೆ. ಮೊದಲ 1 ಕಿ.ಮೀ ಗೆ 30 ರೂ ನಿಗದಿ ಮಾಡಿ, ನಂತರ ಪ್ರತಿ ಕಿ. ಮೀ 15 ರೂ ನಿಗದಿ ಮಾಡಲಾಗಿದೆ. ಜನರು ಈಗಾಗಲೇ ‘ನಮ್ಮ ಯಾತ್ರಿ’ ಆ್ಯಪ್​ ಡೌನ್​ಲೋಡ್ ಮಾಡಿಕೊಂಡಿದ್ದು, ಲಾಂಚ್​​ಗಾಗಿ ಕಾಯುತ್ತಿದ್ದಾರೆ.

ನೋಟಿಸ್ ಕೊಟ್ಟು ಮೂರು ದಿನವಾದ್ರು ಪ್ರತಿಕ್ರಿಯೆ ನೀಡದ ಕಂಪನಿಗಳು

ಬೆಂಗಳೂರಿನಲ್ಲಿ ಆಟೋ ಸೇವೆಗೆ ಮೀಡಿಯೇಟರ್ ಆಗಿರುವ ಓಲಾ-ಉಬರ್ ಸಂಸ್ಥೆಗಳು ಪ್ಲಾಟ್​ಫಾರ್ಮ್ ಹೆಸರಲ್ಲಿ ಗ್ರಾಹಕರ ಬಳಿ ಸುಲಿಗೆ ಮಾಡುತ್ತಿವೆ. ಸ್ವತಃ ಸಾರಿಗೆ ಇಲಾಖೆಯೇ ಆನ್​ಲೈನ್ ಆಟೋ ಸೇವೆ ಅಕ್ರಮ ಅಂತ ಹೇಳಿದೆ. ತಮ್ಮ ಸೇವೆ ನಿಲ್ಲಿಸುವಂತೆ ತಾಕೀತು ಮಾಡಿ ನೋಟಿಸ್ ನೀಡಿದೆ. ಆದರೆ ಓಲಾ, ಉಬರ್ ಸಂಸ್ಥೆಗಳು ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ ಡೋಂಟ್ ಕೇರ್ ಅಂತಿವೆ. ಓಲಾ, ಉಬರ್, ರಾಪಿಡೋ ವಿರುದ್ಧ ಸಾಲು ಸಾಲು ದೂರುಗಳು ಕೇಳಿ ಬರ್ತಿವೆ. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದೆ. ಇಷ್ಟು ವರ್ಷ ಸುಮ್ಮನೆ ಕುಳಿತಿದ್ದ ಅಧಿಕಾರಿಗಳು ಈಗ, ನಾವು ಕ್ಯಾಬ್ ಸೇವೆಗೆ ಮಾತ್ರ ಅನುಮತಿ ಕೊಟ್ಟಿರೋದು. ಆಟೋ ಸೇವೆ ನಿಲ್ಲಿಸಿ ಅಂತ ಓಲಾ, ಉಬರ್, ರ್ಯಾಪಿಡೋಗೆ ನೋಟಿಸ್ ನೀಡಿ 3 ದಿನ ಗಡುವು ನೀಡಿತ್ತು. ಆದ್ರೆ ಕೊಟ್ಟ ಕಾಲಾವಕಾಶ ಮುಗಿದ್ರೂ ಅಧಿಕಾರಿಗಳು ಯಾವುದೇ ನಿರ್ದಾಕ್ಷೀಣ್ಯ ಕ್ರಮ ಕೈಗೊಂಡಿಲ್ಲ.

ಓಲಾ, ಉಬರ್​ ಕಂಪನಿಗಳು ಕ್ಯಾಬ್ ಅಗ್ರಿಗೇಟರ್ ಪರವಾನಗಿ ಮಾತ್ರ ಹೊಂದಿವೆ. ಆದ್ರೆ ನಿಯಮ ಗಾಳಿಗೆ ತೂರಿ ಟ್ಯಾಕ್ಸಿ ಜೊತೆ ಆಟೋ ಸೇವೆ ನೀಡ್ತಿದೆ. ಸರ್ಕಾರ ಆಟೋ ಪ್ರಯಾಣಕ್ಕೆ ದರ ನಿಗದಿ ಮಾಡಿದೆ. ಆಟೋರಿಕ್ಷಾಗಳಿಗೆ ಮೊದಲ 2 ಕಿ.ಮೀ.ಗಳಿಗೆ 30 ರೂಪಾಯಿ, 2 ಕಿಲೋ ಮೀಟರ್ ಬಳಿಕ ಪ್ರತಿ ಕಿಲೋ ಮೀಟರ್​ಗೆ 15 ರೂಪಾಯಿ ನಿಗದಿ ಮಾಡಿದೆ. ರಾತ್ರಿ 10 ಗಂಟೆ ಬಳಿಕ ಬೆಳಗ್ಗೆ 5 ಗಂಟೆವರೆಗೂ ಬಾಡಿಗೆ ಶೇ.50ರಷ್ಟು ಹೆಚ್ಚಿಸಬಹುದು ಎಂದು ಹೇಳಿತ್ತು. ಆದರೆ ಈ ನಿಯಮ ಅಗ್ರಿಗೇಟರ್ ಟ್ಯಾಕ್ಸಿ ಕಂಪನಿಗಳಿಗೆ ಅನ್ವಯಿಸಲ್ಲ. ಯಾಕಂದ್ರೆ ಓಲಾ, ಉಬರ್ ಬಳಿ ಇರೋದು ಟ್ಯಾಕ್ಸಿ ಸೇವೆಯ ಲೈಸನ್ಸ್. ಹೀಗಾಗಿ ಗ್ರಾಹಕರ ಬಳಿ ಓಲಾ, ಉಬರ್, ರಾಪಿಡೋ ಸುಲಿಗೆ ಮಾಡ್ತಿವೆ. 2 ಕಿ.ಮೀಟರ್​ಗೆ 100 ರೂಪಾಯಿ ಪಡೆದು, ಆಟೋ ಚಾಲಕರಿಗೆ 60 ರೂಪಾಯಿ ನೀಡಿ 40 ರೂಪಾಯಿ ಜೇಬಿಗೆ ಇಳಿಸ್ತಿವೆ.

ಇನ್ನು ಈ ಆ್ಯಪ್​ಗಳ ಆಟಾಟೋಪ ಆಟೋ ಚಾಲಕರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಪ್ರಯಾಣಿಕರು ಆಟೋ ಹತ್ತಲು ಹಿಂದೇಟು ಹಾಕ್ತಿದ್ದಾರೆ ಅಂತ ಆಟೋ ಚಾಲಕರು ಸಹ ಅಳಲು ತೋಡಿಕೊಂಡಿದ್ದರು. ಈ ಬ್ಲೇಡ್ ಕಂಪನಿಗಳ ಕಳ್ಳಾಟ ಸಾರಿಗೆ ಇಲಾಖೆಯ ಗಮನಕ್ಕೂ ಬಂದಿದೆ. ಅಕ್ರಮ ನಡೀತಿದೆ, ಕಾನೂನು ಉಲ್ಲಂಘನೆ ಆಗ್ತಿದೆ ಎಂದು ತಿಳಿದಿದ್ದರೂ ಸಾರಿಗೆ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ಸಾರ್ವಜನಿಕರು ಈ ಬಗ್ಗೆ ಆಕ್ರೋಶ ಹೊರ ಹಾಕುತ್ತಿದ್ದಂತೆ ಓಲಾ, ಉಬರ್, ರಾಪಿಡೋ ಆಟೋ ಸೇವೆಯೇ ಅಕ್ರಮ. ನಿಮ್ಮ ಸೇವೆ ನಿಲ್ಲಿಸಿ ಅಂತ ನೋಟಿಸ್ ನೀಡಿದೆ. ಸಾರಿಗೆ ಅಧಿಕಾರಿಗಳು ಕೊಟ್ಟ 3 ದಿನಗಳ ಗಡುವು ನೀಡಿದ್ರೂ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:38 pm, Mon, 31 October 22

TV9 Web

TV9 Kannada

Read More
Loading...
Unable to load recommendations.
Follow Us