ಬೆಂಗಳೂರಿನಲ್ಲಿ ಆಟೋ ಡ್ರೈವರ್‌ಗಳು (auto drivers) ಕಡಿಮೆ ಪ್ರಯಾಣಕ್ಕಾಗಿ (short rides) ಪ್ರಯಾಣಿಕರಿಂದ ಹೆಚ್ಚು ಹೆಚ್ಚು ದರಗಳನ್ನು ಕೇಳಿದಾಗ ಅನ್ಯಮಾರ್ಗ ಕಾಣದೆ ನೀವು ಆಗಾಗ್ಗೆ ಅವರೊಂದಿಗೆ ವಾಗ್ವಾದಕ್ಕೆ (argument) ಇಳಿಯುತ್ತೀರಿ. ಬಹುತೇಕ ವೇಳೆ, ಪ್ರಯಾಣಿಕರು ತಮ್ಮ ಗಮ್ಯಸ್ಥಾನವನ್ನು ತಲುಪುವ ಆತುರದಲ್ಲಿರುವಾಗ ಯಾವುದೇ ಆಯ್ಕೆಯಿಲ್ಲದೆ ಹೆಚ್ಚು ದುಡ್ಡು ತೆತ್ತು ಬಿಟ್ಟು ಬಿಡುತ್ತಾರೆ. ಆದರೆ ಇದನ್ನು ತಪ್ಪಿಸಬಹುದು.ಇದಕ್ಕೆ ಹೌದಾ ಎಂದು ನೀವು ಆಶ್ಚರ್ಯಪಡಬೇಕಾಗಿಲ್ಲ! ಏಕೆಂದರೆ ಅಂತಹ ವ್ಯವಸ್ಥೆಯೊಂದು ಬೆಂಗಳೂರು ಸಂಚಾರಿ ಪೊಲೀಸರು (Bengaluru Police) ಅಂದಿನಿಂದಲೂ ಕೊಡಮಾಡುತ್ತಾ ಬಂದಿದ್ದಾರೆ. ಇಂತಹ ಅಧಿಕ ದರಗಳ ಬಗ್ಗೆ ಅಧಿಕಾರಿಗಳಿಗೆ ತಿಳಿಸಬಹುದು ಎಂದು ಅನೇಕರಿಗೆ ತಿಳಿದಿಲ್ಲ.
ಅಂತಹ ಆಟೋ ಚಾಲಕರ ಬಗ್ಗೆ ತಮಗೆ ವರದಿ ಮಾಡಲು/ ದೂರು ನೀಡಲು (Auto Rickshaw Offences) ಬೆಂಗಳೂರು ಪೊಲೀಸರು ಮಾರ್ಗದರ್ಶಿಯಪೊಂದನ್ನು ಟ್ವೀಟ್ ಮಾಡಿದ್ದಾರೆ. ಅಂತಹ ಪ್ರಕರಣ ವರದಿ ಮಾಡಿದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದೂ ಭರವಸೆ ನೀಡಿದ್ದಾರೆ. ಹೆಚ್ಚಿನ ದರಕ್ಕೆ ಬೇಡಿಕೆಯಿಡುವ ಆಟೋ ಚಾಲಕನ ಬಗ್ಗೆ ಬಳಕೆದಾರರು ದೂರು ನೀಡಬಹುದು ಎಂದು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿನ ಪೋಸ್ಟ್ ಕೆಳಗಿನಂತೆ ಪೋಸ್ಟ್ ಮಾಡಿ, ಪ್ರಯಾಣಿಕರ ನೆರವಿಗೆ ಬಂದಿದ್ದಾರೆ:
ದೂರುಗಳನ್ನು ಸಲ್ಲಿಸಲು ನೀವು ನಮ್ಮ ಸ್ವಯಂಚಾಲಿತ IVRS ಗೆ ಕರೆ ಮಾಡಬಹುದು. ದಯವಿಟ್ಟು 080-2286 8550/ 2286 8444 ಗೆ ಕರೆ ಮಾಡಿ ಮತ್ತು ಆಟೋ ರಿಕ್ಷಾದ ನೋಂದಣಿ ಸಂಖ್ಯೆ, ಸ್ಥಳ, ಸಮಯ ಮತ್ತು ದಿನಾಂಕವನ್ನು ನಮೂದಿಸಿ. ಆಟೋ ಅಪರಾಧಗಳ ವಿರುದ್ಧ ದೂರುಗಳನ್ನು ಬುಕ್ ಮಾಡಲು ದಯವಿಟ್ಟು ನಮ್ಮ IVRS ಅನ್ನು ಬಳಸಿ. ಅಷ್ಟೇ ಅಲ್ಲ ಆಟೋ ಚಾಲಕರು ತಮ್ಮ ಕರ್ತವ್ಯದ ಸಮಯದಲ್ಲಿ ಪ್ರಯಾಣಿಉಕರು ಕೇಳುವ ಸ್ಥಳಕ್ಕೆ ಬರಲು ನಿರಾಕರಿಸಿದರೆ ಸಹ ದೂರು ದಾಖಲಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಆದಾಗ್ಯೂ, IVRS ದೂರುಗಳನ್ನು ದಾಖಲಿಸದೆಯೇ, ಪ್ರಯಾಣಿಕರು ಸುಮ್ಮನೆ ದೂರು ಹೇಳುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಾರೆ. ಆದರೆ ಹಾಗೆ ಮಾಡುವ ಮೊದಲು ಪೊಲೀಸರಿಗೆ ದೂರು ಸಲ್ಲಿಸುವುದು ಸಮಂಜಸವಾದೀತು ಎಂದು ಬೆಂಗಳೂರು ಪೊಲೀಸರು ಹೇಳಿದ್ದಾರೆ.
ನವೆಂಬರ್‌ನಲ್ಲಿ ಕರ್ನಾಟಕ ಸರ್ಕಾರವು ರಾಜ್ಯದ ಆಟೋ ಮೀಟರ್ ದರವನ್ನು ಹೆಚ್ಚಿಸಿತ್ತು. ಮೊದಲ ಎರಡು ಕಿಲೋಮೀಟರ್‌ಗಳಿಗೆ 25 ರೂಪಾಯಿಯಿಂದ 30 ರೂಪಾಯಿಗೆ ಏರಿಕೆಯಾಗಿದೆ. ಮತ್ತು ಪ್ರತಿ ಕಿಲೋಮೀಟರ್‌ಗೆ ಮೂಲ ಬೆಲೆಯನ್ನು ₹ 13 ರಿಂದ 15 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
It is difficult to get autos even at premium rates on mobility apps. Open loot and no one is bothered to fix this. The btp whatsapp is useless. The below conversation was few days back. pic.twitter.com/AM6601I94R
— Abey Zachariah (@abezack) October 1, 2022
you can call our automated IVRS to book complaints
Please call 080-22868550 / 22868444 and mention
1. Registration number of the auto rickshaw
2. Place,time and date
3 Kindly use our IVRS to book complaint against autos Offense (refusal or overcharging)— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) October 2, 2022