ಪ್ರಯಾಣಿಕರಿಗೆ ಶಾಕ್! ಬೆಂಗಳೂರು ನಗರದಲ್ಲಿ ಆಟೋ ಪ್ರಯಾಣ ದರ ಹೆಚ್ಚಳ

| Updated By: sandhya thejappa

Updated on: Nov 08, 2021 | 2:44 PM

ಬೆಂಗಳೂರು: ನಗರದಲ್ಲಿ ಆಟೋ ಪ್ರಯಾಣ ದರ ಹೆಚ್ಚಳವಾಗಿದ್ದು, ಆಟೋ ಪ್ರಯಾಣಿಕರಿಗೆ ಶಾಕ್ ಎದುರಾಗಿದೆ. ಕನಿಷ್ಠ ದರ 25 ರೂಪಾಯಿಂದ 30 ರೂ.ಗೆ ಏರಿಕೆಯಾಗಿದೆ. ನಂತರ ಪ್ರತಿ ಕಿಲೋಮೀಟರ್​ಗೆ 15 ರೂ.ಗೆ ಹೆಚ್ಚಳವಾಗಿದೆ. ಈ ಮೊದಲು ಪ್ರತಿ ಕಿಲೋಮೀಟರ್​ಗೆ 13 ರುಪಾಯಿ ಇತ್ತು. ಇದನ್ನು 15 ರುಪಾಯಿಗೆ ಏರಿಕೆ ಮಾಡಲಾಗಿದೆ. ಡಿಸೆಂಬರ್ 1 ರಿಂದಲೇ ಹೊಸ ದರ ಅನ್ವಯವಾಗುತ್ತದೆ ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ತಿಳಿಸಿದೆ. 20 ಕೆಜಿ ಮೇಲ್ಪಟ್ಟ ಲಗೇಜ್‌ಗೆ 5 ರೂಪಾಯಿ ಬಾಡಿಗೆ ಹಣ ನಿಗದಿಪಡಿಸಲಾಗಿದ್ದು, […]

ಪ್ರಯಾಣಿಕರಿಗೆ ಶಾಕ್! ಬೆಂಗಳೂರು ನಗರದಲ್ಲಿ ಆಟೋ ಪ್ರಯಾಣ ದರ ಹೆಚ್ಚಳ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ನಗರದಲ್ಲಿ ಆಟೋ ಪ್ರಯಾಣ ದರ ಹೆಚ್ಚಳವಾಗಿದ್ದು, ಆಟೋ ಪ್ರಯಾಣಿಕರಿಗೆ ಶಾಕ್ ಎದುರಾಗಿದೆ. ಕನಿಷ್ಠ ದರ 25 ರೂಪಾಯಿಂದ 30 ರೂ.ಗೆ ಏರಿಕೆಯಾಗಿದೆ. ನಂತರ ಪ್ರತಿ ಕಿಲೋಮೀಟರ್​ಗೆ 15 ರೂ.ಗೆ ಹೆಚ್ಚಳವಾಗಿದೆ. ಈ ಮೊದಲು ಪ್ರತಿ ಕಿಲೋಮೀಟರ್​ಗೆ 13 ರುಪಾಯಿ ಇತ್ತು. ಇದನ್ನು 15 ರುಪಾಯಿಗೆ ಏರಿಕೆ ಮಾಡಲಾಗಿದೆ. ಡಿಸೆಂಬರ್ 1 ರಿಂದಲೇ ಹೊಸ ದರ ಅನ್ವಯವಾಗುತ್ತದೆ ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ತಿಳಿಸಿದೆ.

20 ಕೆಜಿ ಮೇಲ್ಪಟ್ಟ ಲಗೇಜ್‌ಗೆ 5 ರೂಪಾಯಿ ಬಾಡಿಗೆ ಹಣ ನಿಗದಿಪಡಿಸಲಾಗಿದ್ದು, 50 ಕೆಜಿವರೆಗೆ ಮಾತ್ರ ಆಟೋದಲ್ಲಿ ಲಗೇಜ್ ಸಾಗಿಸಲು ಅವಕಾಶವಿರುತ್ತದೆ. ಪರಿಷ್ಕೃತ ದರ ಹೆಚ್ಚಳದ ಕುರಿತು ಮೀಟರ್​ನಲ್ಲಿ ಪ್ರದರ್ಶಿಸಬೇಕು. ಆಟೋ ಮೀಟರ್​ಗಳನ್ನ ದರಪರಿಷ್ಕರಣೆಗೆ 90 ದಿನ ಅವಕಾಶ ಇರುತ್ತದೆ. ಅಷ್ಟರೊಳಗೆ ಮೀಟರ್ ಬದಲಾವಣೆ ಮಾಡಬೇಕು ಅಂತ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಆದೇಶ ಹೊರಡಿಸಿದೆ.

ರಾತ್ರಿ ವೇಳೆ ಸಾಮಾನ್ಯ ದರದ ಜೊತೆಗೆ ಅದರ ಅರ್ಧ ಪಟ್ಟು ದರ ಹೆಚ್ಚಳವಾಗಿದೆ. ಈ ದರ ರಾತ್ರಿ 10ರಿಂದ ಬೆಳಿಗ್ಗೆ 5 ಗಂಟೆವರೆಗೆ ಅನ್ವಯವಾಗುತ್ತದೆ. ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ತಿಳಿಸಿರುವ ನಿಗದಿತ ದರದ ಪಟ್ಟಿಯನ್ನು ಎಲ್ಲಾ ಆಟೋ ಚಾಲಕರು ಆಟೋದ ಪ್ರಮುಖ ಸ್ಥಳದಲ್ಲಿ ಅಂಟಿಸಬೇಕು ಅಂತ ತಿಳಿಸಿದೆ.

ಕಳೆದ ಮೂರು ತಿಂಗಳಿನಿಂದ ದರ ಪರಿಷ್ಕರಣೆಗೆ ಹೋರಾಟ ಮಾಡಿದ್ದೆವು. ಆಟೋ ರಿಕ್ಷಾ ಬಿಡಿ ಭಾಗ, ಗ್ಯಾಸ್, ಇನ್ಶುರೆನ್ಸ್ ದರ ಹೆಚ್ಚಳವಾಗಿತ್ತು. ಅಗತ್ಯ ವಸ್ತುಗಳ ಬೆಲೆ, ದಿನ ಬಳಕೆ ವಸ್ತುಗಳ ಬೆಲೆ ಹೆಚ್ಚಾಗಿತ್ತು. ಈ ಹಿನ್ನೆಲೆ ಆಟೊ ದರ ಪರಿಷ್ಕರಣೆ ಒತ್ತಾಯಿಸಿದ್ದೆವು. ಆಟೊ ಗ್ಯಾಸ್ ದರ ಕೂಡ ಪದೇ ಪದೇ ಹೆಚ್ಚಾಗಿದೆ. ಹೀಗಾಗಿ ಎಲ್ಲಾ ಆಟೋ ಸಂಘಟನೆಗಳು ದರ ಪರಿಷ್ಕರಣೆ ಮಾಡಲು ಮನವಿ ಮಾಡಿದ್ದೆವು. ಡಿಸೆಂಬರ್ 1ರಿಂದ ಅನ್ವಯವಾಗುವಂತೆ ದರ ಪರಿಷ್ಕರಣೆ ಮಾಡಿದ್ದಾರೆ. ಕನಿಷ್ಠ ದರ 25 ರಿಂದ 30 ಕ್ಕೆ ಏರಿಕೆ ಮಾಡಿದ್ದಾರೆ. ಪ್ರತಿ ಕಿ.ಮೀ ದರ 13 ರಿಂದ 15 ರೂ.ಗೆ ಹೆಚ್ಚಳ ಮಾಡಿದ್ದಾರೆ. ಮೂರು ತಿಂಗಳ ತನಕ ಆಟೋ ಮೀಟರ್​ಗಳ ಬದಲಾವಣೆಗೆ ಕಾಲಾವಕಾಶ ನೀಡಿದ್ದಾರೆ. ಸರ್ಕಾರ ನಿರ್ಧಾರಕ್ಕೆ ಸ್ವಾಗತಿಸುತ್ತೇವೆ. ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೂ ಅಭಿನಂದನೆ ಸಲ್ಲಿಸುತ್ತೇವೆ ಅಂತ ಆದರ್ಶ ಆಟೋ ಯೂನಿಯನ್ ಅಧ್ಯಕ್ಷ ಮಂಜುನಾಥ್ ಅಭಿಪ್ರಾಯಪಟ್ಟರು.

 

ಇದನ್ನೂ ಓದಿ

ಮಕ್ಕಳ ಬಿಸಿಯೂಟಕ್ಕೂ ತಟ್ಟಿದ ಬೆಲೆ ಏರಿಕೆ ಬಿಸಿ!

ಬಳ್ಳಾರಿಯಲ್ಲಿ ಪುನೀತ್ ಹೆಸರಿನಲ್ಲಿ ಉಚಿತ ವಸತಿ ಶಾಲೆ ನಿರ್ಮಾಣ ಆಸೆ: ಮಾಜಿ ಸಚಿವ ಜನಾರ್ದನ ರೆಡ್ಡಿ

Published On - 2:05 pm, Mon, 8 November 21