ಮೇಕೆದಾಟು ಯೋಜನೆ ರಾಜ್ಯದ ಪ್ರತಿಯೊಬ್ಬರ ಅಪೇಕ್ಷೆ, ಕಾಂಗ್ರೆಸ್ಗೆ ಈಗೇಕೆ ಮೇಕೆದಾಟು ನೆನಪಿಗೆ ಬಂತು? – ಸಚಿವ ಈಶ್ವರಪ್ಪ ಪ್ರಶ್ನೆ
mekedatu project: ಕಾಂಗ್ರೆಸ್ ಪಕ್ಷದವರಿಗೆ ಈಗೇಕೆ ಮೇಕೆದಾಟು ನೆನಪಿಗೆ ಬಂತು. ಅವರ ಸರ್ಕಾರಗಳು ಇದ್ದಾಗ ಈ ಬಗ್ಗೆ ಯಾಕೆ ಮಾಡಲಿಲ್ಲ? ಇವರು ಸುಮ್ಮನೆ ರಾಜಕೀಯ ಮಾಡಬೇಕು ಅಂತಾ ಮಾಡ್ತಿದ್ದಾರೆ ಅಷ್ಟೆ - ಸಚಿವ ಕೆ.ಎಸ್.ಈಶ್ವರಪ್ಪ
ಬೆಂಗಳೂರು: ಮೇಕೆದಾಟು ಯೋಜನೆ ರಾಜ್ಯದ ಪ್ರತಿಯೊಬ್ಬರ ಅಪೇಕ್ಷೆ. ಕಾನೂನುಬದ್ಧವಾಗಿ ಜಾರಿಗೆ ತೀರ್ಮಾನಿಸಿದ್ದೇವೆ, ಮಾಡ್ತೇವೆ. ಕಾಂಗ್ರೆಸ್ ಪಕ್ಷದವರಿಗೆ ಈಗೇಕೆ ಮೇಕೆದಾಟು ನೆನಪಿಗೆ ಬಂತು. ಅವರ ಸರ್ಕಾರಗಳು ಇದ್ದಾಗ ಈ ಬಗ್ಗೆ ಯಾಕೆ ಮಾಡಲಿಲ್ಲ? ಇವರು ಸುಮ್ಮನೆ ರಾಜಕೀಯ ಮಾಡಬೇಕು ಅಂತಾ ಮಾಡ್ತಿದ್ದಾರೆ ಅಷ್ಟೆ. ನಾವೇನೂ ಮೇಕೆದಾಟು ಯೋಜನೆ ಮಾಡಲ್ಲ ಅಂತಾ ಹೇಳಿಲ್ಲ. ಪಾದಯಾತ್ರೆ ಮಾಡ್ಲಿ ಬಿಡ್ಲಿ ನಾವಂತೂ ಯೋಜನೆ ಮಾಡ್ತೇವೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಗಮನಾರ್ಹವೆಂದರೆ ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ, ಮೇಕೆದಾಟುವಿನಿಂದ ವಿಧಾನಸೌಧಕ್ಕೆ ಪಾದಯಾತ್ರೆ ಹಮ್ಮಿಕೊಳ್ಳುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಘೋಷಿಸಿದ್ದಾರೆ.
ಇನ್ನು, ಬಿಟ್ ಕಾಯಿನ್ ದಂಧೆಯ ಬಗ್ಗೆ ನಾನು ಮಾತಾಡಲ್ಲ. ಪ್ರಭಾವಿಗಳಿದ್ದಾರೆಂದು ವಿಪಕ್ಷಗಳು ಆರೋಪಿಸುತ್ತಿವೆ. ತನಿಖೆಯ ಬಳಿಕ ಯಾರಿದ್ದಾರೆಂದು ಬಹಿರಂಗವಾಗಲಿದೆ. ದಂಧೆಯಲ್ಲಿ ಸಿಎಂ ಮಗನಿದ್ದಾರಾ? ಸಚಿವರ ಮಗನಿದ್ದಾರಾ? ಇದೆಲ್ಲಾ ಸಾರ್ವಜನಿಕ ಚರ್ಚೆಯಾದ್ರೆ ನಾನ್ಯಾಕೆ ಉತ್ತರಿಸಲಿ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
Also Read: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ನಿಂದ ಪಾದಯಾತ್ರೆ: ಸಿದ್ದರಾಮಯ್ಯ ಮಾಹಿತಿ
Fans Visit Appu Samadhi: ಅಪ್ಪು ಪುಣ್ಯಸ್ಮರಣೆ ಕಾರ್ಯಕ್ರಮ ಡ್ರೋಣ್ ಕಣ್ಣಲ್ಲಿ ಸೆರೆ | Tv9 kannada
(why congress demanding mekedatu project when karnataka government is ready to implement it says minister ks eshwarappa)
Published On - 11:28 am, Mon, 8 November 21