AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hassanambe hundi collection: ಹಾಸನಾಂಬೆ ದೇಗುಲದ ಹುಂಡಿ ಎಣಿಕೆ; ಹೊಳೆನರಸೀಪುರ ಶಾಸಕರ ಬದಲಾಯಿಸು ತಾಯೇ ಎಂದು ಭಕ್ತರಿಂದ ಮೊರೆ

ಅಕ್ಟೋಬರ್ 28 ರಿಂದ ನವೆಂಬರ್ 6 ರ ವರೆಗೆ ನಡೆದಿದ್ದ ಹಾಸನಾಂಬೆ ಉತ್ಸವದಲ್ಲಿ 10 ದಿನಗಳಲ್ಲಿ 4 ಲಕ್ಷ ಭಕ್ತರು ದೇವಿ ದರ್ಶನ ಪಡೆದಿದ್ದರು. ಈ ವೇಳೆ ಭಕ್ತರು ನೀಡಿರುವ ಕಾಣಿಕೆ ಹಣ ಎಣಿಕೆ ಕಾರ್ಯ ಇಂದು (ನವೆಂಬರ್ 8) ಆರಂಭವಾಗಿದೆ.

Hassanambe hundi collection: ಹಾಸನಾಂಬೆ ದೇಗುಲದ ಹುಂಡಿ ಎಣಿಕೆ; ಹೊಳೆನರಸೀಪುರ ಶಾಸಕರ ಬದಲಾಯಿಸು ತಾಯೇ ಎಂದು ಭಕ್ತರಿಂದ ಮೊರೆ
ದೇಗುಲದ ಹುಂಡಿ ಎಣಿಕೆ
TV9 Web
| Edited By: |

Updated on:Nov 08, 2021 | 12:02 PM

Share

ಹಾಸನ: ಹಾಸನಾಂಬೆ ದೇಗುಲದ ಹುಂಡಿ ಎಣಿಕೆ ಕಾರ್ಯ ಆರಂಭವಾಗಿದ್ದು, ಕಂದಾಯ ಇಲಾಖೆಯ 85 ಸಿಬ್ಬಂದಿಗಳು ಹಾಗೂ ಸ್ವಯಂಸೇವಕರು ಹಾಸನಾಂಬೆ ದೇಗುಲದ ಆವರಣದಲ್ಲಿ ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಅಕ್ಟೋಬರ್ 28 ರಿಂದ ನವೆಂಬರ್ 6 ರ ವರೆಗೆ ನಡೆದಿದ್ದ ಹಾಸನಾಂಬೆ ಉತ್ಸವದಲ್ಲಿ 10 ದಿನಗಳಲ್ಲಿ 4 ಲಕ್ಷ ಭಕ್ತರು ದೇವಿ ದರ್ಶನ ಪಡೆದಿದ್ದರು. ಈ ವೇಳೆ ಭಕ್ತರು ನೀಡಿರುವ ಕಾಣಿಕೆ ಹಣ ಎಣಿಕೆ ಕಾರ್ಯ ಇಂದು (ನವೆಂಬರ್ 8) ಆರಂಭವಾಗಿದೆ.

ಹಾಸನಾಂಬೆ ದೇವಿಗೆ ವಿವಿಧ ಬೇಡಿಕೆ ಸಲ್ಲಿಸಿ ಭಕ್ತರಿಂದ ಪತ್ರ ಹೊಳೆನರಸೀಪುರ ಶಾಸಕರನ್ನು ಬದಲಾಯಿಸು ತಾಯೇ ಎಂದು ಭಕ್ತರು ಹಾಸನಾಂಬೆಗೆ ಮೊರೆ ಹೋಗಿದ್ದರೆ. ಇನ್ನು ಕೆಲವರು ರಸ್ತೆ ದುರಸ್ತಿ ಮಾಡಿಸು ತಾಯೇ ಎಂದು ಶಾಸಕ ಪ್ರೀತಂ ಗೌಡಗೆ ಹಾಸನಾಂಬೆ ಮೂಲಕ ಪತ್ರ ಬರೆದಿದ್ದಾರೆ. ಗಂಡು ಮಗು ಕರುಣಿಸು, ನಾನು ಬೇಡಿದ ವರವ ಕೊಟ್ಟರೆ ಐದು ಸಾವಿರ ಕೊಡುತ್ತೇನೆ ಎಂದು ಇನ್ನೂ ಕೆಲವರು ಪತ್ರ ಬರೆದಿದ್ದಾರೆ.

ತಾನು ಇಷ್ಟಪಟ್ಟ ಹುಡುಗನ ಜೊತೆ ಮದುವೆ ಮಾಡು ಎಂದು ರಕ್ತದಲ್ಲಿ ಪತ್ರ ಬರೆದ ಯುವತಿ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಪಾಸು ಮಾಡು ತಾಯಿ ಎಂದು, ಪಿಯುಸಿಯಲ್ಲಿ ಶೇ.90 ಅಂಕ ಬರಬೇಕೆಂದು ವಿದ್ಯಾರ್ಥಿಗಳು ಬೇಡಿಕೆ ಇಟ್ಟಿದ್ದಾರೆ. ಇನ್ನು ಯುವತಿಯೊರ್ವಳು ತಾನು ಇಷ್ಟಪಟ್ಟ ಹುಡುಗನ ಜೊತೆ ಮದುವೆ ಮಾಡು ಎಂದು ರಕ್ತದಲ್ಲಿ ಪತ್ರ ಬರೆದಿದ್ದಾಳೆ. ಇನ್ನು ಪ್ರಮೋಷನ್ ಸಿಗಲಿ, ಮಗನಿಗೆ ಮದುವೆಯಾಗಲಿ ಎಂದು ಪತ್ರ ಬರೆದಿದ್ದು, ಮತ್ತೆ ಕೆಲವರು ಗಂಡನ ಕುಡಿತದ ಚಟ ಬಿಡಿಸು ತಾಯಿ ಎಂದು ಹೀಗೆ ನಾನಾ ರೀತಿಯ ಪತ್ರ ಬರೆದು ಹಾಸನಾಂಬೆಗೆ ಮೊರೆಯಿಟ್ಟಿದ್ದಾರೆ.

letter

ರಕ್ತದಲ್ಲಿ ಪತ್ರ ಬರೆದ ಯುವತಿ

ಇದನ್ನೂ ಓದಿ: ಹಾಸನದ ಹಾಸನಾಂಬೆ ದೇವಸ್ಥಾನ ಹತ್ತು ದಿನಗಳ ಉತ್ಸವದ ನಂತರ ಶನಿವಾರ ಮುಚ್ಚಲಾಯಿತು, ದೇವಿ ದರ್ಶನ ಇನ್ನು ಮುಂದಿನ ವರ್ಷವೇ!

ಹಾಸನ: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹಾಸನಾಂಬೆ ದೇವಿಯ ದರ್ಶನಕ್ಕೆ ತೆರೆ

Published On - 11:00 am, Mon, 8 November 21

Follow Us
‘ಚಾನ್ಸ್ ಕೊಡಿ ಅಂತ ಕೇಳಿಕೊಂಡ್ರಲ್ಲ’; ಕೃಷ್ಣ ವಿರುದ್ಧ ಕಿಡಿಕಾರಿದ ಗುರು
‘ಚಾನ್ಸ್ ಕೊಡಿ ಅಂತ ಕೇಳಿಕೊಂಡ್ರಲ್ಲ’; ಕೃಷ್ಣ ವಿರುದ್ಧ ಕಿಡಿಕಾರಿದ ಗುರು
ಆಲಿಕಲ್ಲು ಮಳೆಗೆ ಕಾಶ್ಮೀರದಂತಾದ ಬಿಸಿಲನಾಡು ಕಲಬುರಗಿ
ಆಲಿಕಲ್ಲು ಮಳೆಗೆ ಕಾಶ್ಮೀರದಂತಾದ ಬಿಸಿಲನಾಡು ಕಲಬುರಗಿ
ಅಬ್ಬಬ್ಬಾ ಒಂದೆರಡಲ್ಲ... ಒಟ್ಟಿಗೆ ರಸ್ತೆ ದಾಟಿದ್ದು ಬರೋಬ್ಬರಿ 15 ಆನೆಗಳು!
ಅಬ್ಬಬ್ಬಾ ಒಂದೆರಡಲ್ಲ... ಒಟ್ಟಿಗೆ ರಸ್ತೆ ದಾಟಿದ್ದು ಬರೋಬ್ಬರಿ 15 ಆನೆಗಳು!
ಕ್ಯಾಮರಾ ಹಿಡಿದ ಮಹಿಳೆ ಮೇಲೆ ಕೋಪಗೊಂಡ ದೈವ!
ಕ್ಯಾಮರಾ ಹಿಡಿದ ಮಹಿಳೆ ಮೇಲೆ ಕೋಪಗೊಂಡ ದೈವ!
ಬಾಂಗ್ಲಾದೇಶದಲ್ಲಿ ಬಸ್ ನದಿಗೆ ಬಿದ್ದಿದ್ದು ಹೇಗೆ? ಇಲ್ಲಿದೆ ವಿಡಿಯೋ
ಬಾಂಗ್ಲಾದೇಶದಲ್ಲಿ ಬಸ್ ನದಿಗೆ ಬಿದ್ದಿದ್ದು ಹೇಗೆ? ಇಲ್ಲಿದೆ ವಿಡಿಯೋ
ಮಡಿಕೇರಿಯಲ್ಲಿ ಹುಲಿ ಕಾಟ: ಥರ್ಮಲ್ ಡ್ರೋನ್ ಕಣ್ಗಾವಲು
ಮಡಿಕೇರಿಯಲ್ಲಿ ಹುಲಿ ಕಾಟ: ಥರ್ಮಲ್ ಡ್ರೋನ್ ಕಣ್ಗಾವಲು
ಅಮೆರಿಕದ ಯುದ್ಧವಿಮಾನವನ್ನು ಹೊಡೆದುರುಳಿಸಿದ ವಿಡಿಯೋ ಬಿಡುಗಡೆ ಮಾಡಿದ ಇರಾನ್
ಅಮೆರಿಕದ ಯುದ್ಧವಿಮಾನವನ್ನು ಹೊಡೆದುರುಳಿಸಿದ ವಿಡಿಯೋ ಬಿಡುಗಡೆ ಮಾಡಿದ ಇರಾನ್
‘ಕೃಷ್ಣ ಮೊದಲು ಹೀಗಿರಲಿಲ್ಲ, ಸಕ್ಸಸ್ ಸಿಕ್ಕಮೇಲೆ ಬದಲಾಗಿದ್ದಾರೆ’; ಗುರು
‘ಕೃಷ್ಣ ಮೊದಲು ಹೀಗಿರಲಿಲ್ಲ, ಸಕ್ಸಸ್ ಸಿಕ್ಕಮೇಲೆ ಬದಲಾಗಿದ್ದಾರೆ’; ಗುರು
ಹುಬ್ಬಳ್ಳಿಯಲ್ಲಿ ಯುದ್ಧ ವಿಮಾನಗಳ ಭೀಕರ ಘರ್ಜನೆ! ವಿಡಿಯೋ ನೋಡಿ
ಹುಬ್ಬಳ್ಳಿಯಲ್ಲಿ ಯುದ್ಧ ವಿಮಾನಗಳ ಭೀಕರ ಘರ್ಜನೆ! ವಿಡಿಯೋ ನೋಡಿ
7 ವರ್ಷಗಳ ಬಳಿಕ ಇರಾನ್​ನಿಂದ ಗ್ಯಾಸ್ ಖರೀದಿ: ಮಂಗಳೂರಿಗೆ ಬರಲಿದೆ LPG ಹಡಗು!
7 ವರ್ಷಗಳ ಬಳಿಕ ಇರಾನ್​ನಿಂದ ಗ್ಯಾಸ್ ಖರೀದಿ: ಮಂಗಳೂರಿಗೆ ಬರಲಿದೆ LPG ಹಡಗು!