ಹುಟ್ಟೂರಿಗೆ ಆಗಮಿಸಿದ ಯೋಧನ ಪಾರ್ಥಿವ ಶರೀರ; ಕುಟುಂಬಸ್ಥರು ಸೇರಿದಂತೆ ಸಾವಿರಾರು ಜನರಿಂದ ಮೆರವಣಿಗೆ
ಮ್ಮುವಿನಲ್ಲಿ ಕರ್ತವ್ಯದಲ್ಲಿದ್ದಾಗ ಬಿ.ಕೆ ಶೇಷಪ್ಪ ಎಂಬ ಯೋಧ ವಾಹನ ರಿಪೇರಿ ಮಾಡುವಾಗ ತಲೆಗೆ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದರು. ಈಗ ಜಮ್ಮುವಿನಿಂದ ಹುಟ್ಟೂರಿಗೆ ಯೋಧನ ಪಾರ್ಥಿವ ಶರೀರ ತರಲಾಗಿದೆ.
ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಬಿಳವಾಲ ಗ್ರಾಮಕ್ಕೆ ಯೋಧನ ಪಾರ್ಥಿವ ಶರೀರ ಆಗಮಿಸಿದೆ. ಜಮ್ಮುವಿನಲ್ಲಿ ಕರ್ತವ್ಯದಲ್ಲಿದ್ದಾಗ ಬಿ.ಕೆ ಶೇಷಪ್ಪ ಎಂಬ ಯೋಧ ವಾಹನ ರಿಪೇರಿ ಮಾಡುವಾಗ ತಲೆಗೆ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದರು. ಈಗ ಜಮ್ಮುವಿನಿಂದ ಹುಟ್ಟೂರಿಗೆ ಯೋಧನ ಪಾರ್ಥಿವ ಶರೀರ ತರಲಾಗಿದೆ.
ಸದ್ಯ ಕಡೂರು ಪಟ್ಟಣದಲ್ಲಿ ಯೋಧನ ಮೃತದೇಹ ಮೆರವಣಿಗೆ ಮಾಡಲಾಗುತ್ತಿದೆ. ಮೆರವಣಿಗೆಯಲ್ಲಿ ಮೃತ ಯೋಧನ ಕುಟುಂಬಸ್ಥರು ಸೇರಿದಂತೆ ಸಾವಿರಾರು ಜನರು ಭಾಗಿಯಾಗಿದ್ದಾರೆ. ಬಿಳವಾಲ ಗ್ರಾಮದಲ್ಲಿ ಇಂದು ಅಂತ್ಯಕ್ರಿಯೆ ನೆರವೇರಲಿದೆ.
ಕಡೂರು ಕ್ಷೇತ್ರದ ಬಿಳುವಾಲ ಗ್ರಾಮದ ಶೇಷಪ್ಪನವರು BSFನಲ್ಲಿ ಯೋಧನಾಗಿ ಕೆಲಸ ಮಾಡುತ್ತಿದ್ದರು. ನಾಲ್ಕು ದಿನಗಳ ಹಿಂದೆ ಜಮ್ಮುವಿನಲ್ಲಿ ಕರ್ತವ್ಯ ನಿರತನಾಗಿದ್ದಾಗ ಅವಘಡದಿಂದ ಗಾಯಗೊಂಡಿದ್ದರು. ಜಮ್ಮುವಿನ ಆಸ್ಪತ್ರೆಯಲ್ಲಿ ನೆನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಸೇವಾನಿರತನಾಗಿದ್ದಾಗ ಮರಣಹೊಂದಿದ ಈ ವೀರಯೋಧನ ಅಂತ್ಯಸಂಸ್ಕಾರ ಮಿಲಿಟರಿ ಸರ್ಕಾರಿ ಗೌರವಗಳೊಂದಿಗೆ ನಡೆಯಲು ಎಲ್ಲ ರೀತಿಯ ಸಿದ್ಧತೆಗಳನ್ನು ಗ್ರಾಮದಲ್ಲಿ ಮಾಡಿಕೊಳ್ಳಲಾಗಿದೆ.
ಭಾನುವಾರ ರಾತ್ರಿ ಪಾರ್ಥಿವ ಶರೀರ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು ಅಲ್ಲಿಂದ ಯಲಹಂಕದ BSF ಕಚೇರಿಗೆ ಪಾರ್ಥಿವ ಶರೀರ ತರಲಾಯಿತು. ಅಲ್ಲಿ ಮಿಲಿಟರಿ ರೀತಿನೀತಿಗಳ ಪಾಲನೆ ನಂತರ ಎಲ್ಲ ಮಿಲ್ಟ್ರಿ ಗೌರವಗಳೊಂದಿಗೆ ಕಡೂರಿನ ಬಿಳುವಾಲ ಗ್ರಾಮಕ್ಕೆ ಕರೆತರಲಾಗಿದೆ. ಬಿಳುವಾಲ ಗ್ರಾಮದ ಸರ್ಕಾರಿ ಗೋಮಾಳ ಸರ್ವೆ ನಂಬರ್ 25 ರಲ್ಲಿ ಅಂತ್ಯಕ್ರಿಯೆ ಆಗಬೇಕೆಂಬುದು ಜನರ ಒತ್ತಾಯವಾಗಿದೆ.
ಇದನ್ನೂ ಓದಿ: Chhattisgarh News ಛತ್ತೀಸ್‌ಗಡದಲ್ಲಿ ಸಿಆರ್‌ಪಿಎಫ್ ಸಹೋದ್ಯೋಗಿಯಿಂದ ಗುಂಡಿನ ದಾಳಿ: 4 ಯೋಧರು ಸಾವು, ಮೂವರಿಗೆ ಗಾಯ
Published On - 12:05 pm, Mon, 8 November 21