ಬೆಂಗಳೂರು: ನಗರದಲ್ಲಿ ವೈಟ್‌ಬೋರ್ಡ್ ಬೈಕ್ ಟ್ಯಾಕ್ಸಿಗಳನ್ನ ನಿಷೇಧಿಸುವಂತೆ ಬೆಂಗಳೂರು ಆಟೋರಿಕ್ಷಾ ಚಾಲಕರ ಸಂಘಟನೆಗಳ ಒಕ್ಕೂಟ ಸರ್ಕಾರಕ್ಕೆ ಮೂರು ದಿನಗಳ ಗಡುವು ನೀಡಿತ್ತು. ಆದ್ರೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಹೋರಾಟಕ್ಕೆ ಕರೆ ಕೊಟ್ಟಿತ್ತು. ಭಾನುವಾರ ಮಧ್ಯ ರಾತ್ರಿ 12 ಗಂಟೆಯಿಂದ ಸೋಮವಾರ ಮಧ್ಯರಾತ್ರಿ 12 ಗಂಟೆ ವರೆಗೆ ಆಟೋಗಳು ರಸ್ತೆಗೆ ಇಳಿಯಲ್ಲ ಎನ್ನಲಾಗಿತ್ತು. ಆದ್ರೆ ಬೆಂಗಳೂರು ನಗರದಲ್ಲಿ ಆಟೋಗಳು ಯಥಾಸ್ಥಿತಿ ಸಂಚರಿಸುತ್ತಿವೆ. ಮೆಜೆಸ್ಟಿಕ್ ನಿಲ್ದಾಣ ಸೇರಿ ಹಲವೆಡೆ ಆಟೋಗಳ ಸಂಚಾರ ಯಥಾಸ್ಥಿತಿ ಇದೆ. ಆ್ಯಪ್ ಆಧಾರಿತ ಆಟೋಗಳು ಸೇರಿದಂತೆ ಇತರೆ ಆಟೋಗಳು ಲಭ್ಯವಾಗಿವೆ.
ಇನ್ನು ಮುಂಜಾನೆ 4 ಗಂಟೆಯಿಂದಲೇ ಬಿಎಂಟಿಸಿ ಬಸ್ ಸಂಚಾರ ಆರಂಭವಾಗಿದೆ. ಪ್ರಯಾಣಿಕರ ಸಂಖ್ಯೆ ನೋಡಿ ಮತ್ತಷ್ಟು ಬಸ್ ರೋಡಿಗಿಳಿಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಆಟೋರಿಕ್ಷಾ ಚಾಲಕರ ಸಂಘಟನೆಗಳ ಒಕ್ಕೂಟ ಬೆಳಗ್ಗೆ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಸಿಎಂ ಸರ್ಕಾರಿ ನಿವಾಸದವರೆಗೂ ಱಲಿ ನಡೆಸಲಿವೆ. ಬೆಳಗ್ಗೆ 11.30ಕ್ಕೆ ಸಿಎಂ ಮನೆಗೆ ಮುತ್ತಿಗೆ ಹಾಕಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ: Bengaluru: ಆಟೋ ಚಾಲಕರಿಗೆ ಕೌಂಟರ್ ಕೊಟ್ಟ ಬೈಕ್ ಟ್ಯಾಕ್ಸಿ ಚಾಲಕರು
ನಗರದಲ್ಲಿ ಆಟೋಗಳಿಗೆ ಬೈಕ್ ಟ್ಯಾಕ್ಸಿಗಳು ಸೆಡ್ಡು ಹೊಡೆದಿವೆ. ಕಡಿಮೆ ದುಡ್ಡು, ಟ್ರಾಫಿಕ್ ನಿಂದ ಕಿರಿಕಿರಿ ತಪ್ಪಿಸುತ್ತಿರುವ ಬೈಕ್ ಟ್ಯಾಕ್ಸಿಗೆ ಯುವಜನತೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ. ರ್ಯಾಪಿಡೋ, ಓಲಾ, ಉಬರ್ ನಂತಹ ಆ್ಯಪ್ ಆಧಾರಿತ ಬೈಕ್ ಟ್ಯಾಕ್ಸಿ ಸೇವೆಗಳು ಆಟೋಗಳಿಗೆ ನಷ್ಟ ಉಂಟುಮಾಡಿದೆ. ಇದ್ರಿಂದ ಬೈಕ್‌ಟ್ಯಾಕ್ಸಿ ವಿರುದ್ಧ ಸಿಡಿದೆದ್ದಿರೋ ಆಟೋ ಚಾಲಕರು ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಬಂದ್‌ಗೆ 21 ಸಂಘಟನೆಗಳು ಬೆಂಬಲಿಸಿದ್ದು 2 ಲಕ್ಷ ಆಟೋಗಳು ರಸ್ತೆಗೆ ಇಳಿಯಲ್ಲ ಎನ್ನಲಾಗ್ತಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:05 am, Mon, 20 March 23