ನಕಲಿ ಚಹಾ ಪುಡಿ ಮಾರಾಟ ಮಾಡ್ತಿದ್ದ ಆರೋಪಿಗಳು ಅಂದರ್​

|

Updated on: Sep 25, 2019 | 1:05 PM

ಬೆಂಗಳೂರು: ಅಕ್ಕಿ, ಬೇಳೆ, ಉಪ್ಪು, ಮೊಟ್ಟೆ ಬಳಿಕ ಇದೀಗ ನಕಲಿ ಟೀ ಪುಡಿಯೂ ಬೆಂಗಳೂರಿಗೆ ಲಗ್ಗೆಯಿಟ್ಟಿದೆ. ಬೆಂಗಳೂರಿನ ಗಿರಿನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಕಲಿ ಟೀ ಪುಡಿ ತಯಾರಿಸಿ ಮಾರಾಟ ಮಾಡ್ತಿದ್ದ ಗ್ಯಾಂಗನ್ನು ಪೊಲೀಸರು ಬಂಧಿಸಿದ್ದಾರೆ. ರಾಜಸ್ತಾನ ಮೂಲದ ಬವರ್ ಲಾಲ್ ಹಾಗೂ ಜಗರಾಮ್ ಬಂಧಿತ ಆರೋಪಿಗಳು. ಗಿರಿನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಗೋದಾಮು ಮಾಡಿಕೊಂಡಿದ್ದ ಆರೋಪಿಗಳು, ನಕಲಿ ಟೀ ಪುಡಿಯನ್ನು ತಯಾರು ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಅಲ್ಲದೆ ಆರೋಪಿಗಳು ಯಾರಿಗೂ ಅನುಮಾನ ಬಾರದಂತೆ […]

ನಕಲಿ ಚಹಾ ಪುಡಿ ಮಾರಾಟ ಮಾಡ್ತಿದ್ದ ಆರೋಪಿಗಳು ಅಂದರ್​
Follow us on

ಬೆಂಗಳೂರು: ಅಕ್ಕಿ, ಬೇಳೆ, ಉಪ್ಪು, ಮೊಟ್ಟೆ ಬಳಿಕ ಇದೀಗ ನಕಲಿ ಟೀ ಪುಡಿಯೂ ಬೆಂಗಳೂರಿಗೆ ಲಗ್ಗೆಯಿಟ್ಟಿದೆ. ಬೆಂಗಳೂರಿನ ಗಿರಿನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಕಲಿ ಟೀ ಪುಡಿ ತಯಾರಿಸಿ ಮಾರಾಟ ಮಾಡ್ತಿದ್ದ ಗ್ಯಾಂಗನ್ನು ಪೊಲೀಸರು ಬಂಧಿಸಿದ್ದಾರೆ. ರಾಜಸ್ತಾನ ಮೂಲದ ಬವರ್ ಲಾಲ್ ಹಾಗೂ ಜಗರಾಮ್ ಬಂಧಿತ ಆರೋಪಿಗಳು.

ಗಿರಿನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಗೋದಾಮು ಮಾಡಿಕೊಂಡಿದ್ದ ಆರೋಪಿಗಳು, ನಕಲಿ ಟೀ ಪುಡಿಯನ್ನು ತಯಾರು ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಅಲ್ಲದೆ ಆರೋಪಿಗಳು ಯಾರಿಗೂ ಅನುಮಾನ ಬಾರದಂತೆ ಬ್ರೂ ಬಾಂಡ್, ರೆಡ್ ರೋಜ್​, ರೆಡ್ ಲೇಬಲ್ ಕಂಪನಿಯ ಲೇಬಲ್​ಗಳನ್ನು ತಯಾರು ಮಾಡಲು ಮಿಷನ್​ಗಳನ್ನು ಸಹ ಇಟ್ಟುಕೊಂಡಿದ್ದರು. ಸ್ಥಳೀಯ ಅಂಗಡಿಗಳಿಗೆ 280 ರೂ. ಮೌಲ್ಯದ ಟೀ ಪುಡಿಯನ್ನು 150 ರೂಪಾಯಿಗೆ ಮಾರಾಟ ಮಾಡ್ತಿದ್ರು.

ಕಡಿಮೆ ಬೆಲೆಯಿಂದ ಅನುಮಾನಗೊಂಡ ಅಂಗಡಿ ಮಾಲೀಕರು ಬಂಡೆಪಾಳ್ಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಖಚಿತ ಮಾಹಿತಿ ಆಧರಿಸಿ ಟೀ ಪುಡಿ ಮಾರಾಟ ಮಾಡಲು ಬಂದಾಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 30 ಲಕ್ಷ ಮೌಲ್ಯದ 2,497 ಕೆಜಿ ನಕಲಿ ಟೀ ಪುಡಿಯನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಪ್ರಮುಖ ಆರೋಪಿ ರಮೇಶ್​ಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

Published On - 1:00 pm, Wed, 25 September 19