ಬೆಂಗಳೂರು, ಮಾ.27: ರೌಡಿಶೀಟರ್ ಹಾಗೂ ಸುಪಾರಿ ಕಿಲ್ಲರ್ನನ್ನು ಬೆಂಗಳೂರಿನ ಕಮ್ಮನಹಳ್ಳಿಯ(Kammanahalli) ಓಯೋ ಹೋಟೆಲ್‌ನಲ್ಲಿ ಇಂದು(ಮಾ.27) ಮೂರು ಗಂಟೆ ಸುಮಾರಿಗೆ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ದಿನೇಶ್ ಮೃತ ರೌಡಿಶೀಟರ್, ಏಳು ಜನ ದುಷ್ಕರ್ಮಿಗಳು ಸೇರಿ ಕೊಲೆ ಮಾಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಕೊಲೆಗೆ ಸಂಬಂಧಪಟ್ಟಂತೆ ಹೋಟೆಲ್ ರಿಸಪ್ಷನಿಸ್ಟ್ ಮುರುಳೀಧರ್ ಮಾತನಾಡಿ, ‘ಸರ್ವೀಸ್ ಅಪಾರ್ಟ್ಮೆಂಟ್ನಲ್ಲಿ ಈ ಘಟನೆ ನಡೆದಿದೆ. ಮೊದಲು ಏಳು ಜನ ರೂಂ ಕೇಳಿಕೊಂಡು ಬಂದಿದ್ದಾರೆ. ಏನೋ ಮಾತನಾಡಬೇಕು ಎಂದು ರೂಂ ಕೇಳಿದರು, ಅದಾದ ಬಳಿಕ ಅಮೌಂಟ್ ಕೇಳಿದಾಗ ಫೋನ್ ಪೇ ಮಾಡುವುದಾಗಿ ಹೇಳಿದರು. ಆದರೆ, ಫೋನ್ ಪೇ ಇಲ್ಲ, ಕ್ಯಾಶ್ ಕೊಡಿ ನಾನು ಎಂದು ಹೇಳಿದೆ. ತಕ್ಷಣ ಹಣ ತರೋದಕ್ಕೆ ಇಬ್ಬರು ಆಚೆ ತೆರಳಿದರು. ನಂತರ ಮತ್ತೆ ಐದು ಜನ ಬಂದು ಬ್ಯಾಗ್ನಲ್ಲಿದ್ದ ಮಚ್ಚನ್ನ ತೆಗೆದುಕೊಂಡು ದಿನೇಶ್ ಮೇಲೆ ಅಟ್ಯಾಕ್ ಮಾಡಿದ್ದಾರೆ ಎಂದು ಹೇಳಿದರು.
ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ನೆಲಮಂಗಲ ತಾಲೂಕಿನ ದೊಡ್ಡಕರೇನಹಳ್ಳಿಯಲ್ಲಿ ನೀಲಗಿರಿ ತೋಪಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ನಡೆದಿದೆ. ಇದರಿಂದ ಅಕ್ಕಪಕ್ಕದ ರೈತರ ದನದ ಶೆಡ್ಗಳಿಗೂ ಬೆಂಕಿ ಆವರಿಸಿದ್ದು, ಉಮೇಶ್ ಹಾಗೂ ವೆಂಕಟರಮಣಪ್ಪ ಎಂಬುವವರ ಮನೆಗೂ ವ್ಯಾಪಿಸಿದೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಈ ಕುರಿತು ನೆಲಮಂಗಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ:ಯಾದಗಿರಿ: ಕುಡಿದ ಮತ್ತಿನಲ್ಲಿ ಕೊಡಲಿಯಿಂದ ಕೊಚ್ಚಿ ಪತ್ನಿಯ ಭೀಕರ ಕೊಲೆ; ತಪ್ಪಿಸಲು ಹೋದ ಮಗನ ಮೇಲೂ ಹಲ್ಲೆ
ಬೆಂಗಳೂರು: ಎಣ್ಣೆ ಪಾರ್ಟಿ ಮಧ್ಯೆ ಶುರುವಾದ ಜಗಳದಲ್ಲಿ ವ್ಯಕ್ತಿಯೊಬ್ಬನನ್ನ ಕೊಂದ ಗೆಳೆಯರು, ಪೊಲೀಸ್ ಠಾಣೆಗೆ ಬಂದು ಯಾರೋ ಕೊಲೆ ಮಾಡಿದ್ದಾರೆಂದು ದೂರು ನೀಡಿದ ಘಟನೆ ನಾಗವಾರದ ಮನೆಯಲ್ಲಿ ನಿನ್ನೆ(ಮಾ.26) ಸಂಜೆ ನಡೆದಿದೆ. ಇನ್ನು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ವೇಳೆ ಗೆಳೆಯರ ನಾಟಕ ಬಯಲಾಗಿದೆ. ರಾಜ್ ಕುಮಾರ್ (36) ಮೃತ ರ್ದುದೈವಿ.
ನಿನ್ನೆ ರಾಜ್ ಕುಮಾರ್ ತನ್ನ ಇಬ್ಬರು ಗೆಳೆಯರ ಜೊತೆ ಪಾರ್ಟಿ ಮಾಡಿದ್ದ. ಸಂಜೆವರೆಗೂ ಪಾರ್ಟಿ ಮಾಡಿದವರ ನಡುವೆ ಗಲಾಟೆ ನಡೆದಿದ್ದು, ಗಲಾಟೆ ನಡುವೆ ರಾಡ್ ಹಾಗೂ ದೊಣ್ಣೆಯಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಕೊಲೆ ಮಾಡಿ ಆರೋಪಿಗಳು ರಾತ್ರಿ 11ರವರೆಗೂ ಶವದ ಜೊತೆ ಕುಳಿತಿದ್ದು, ಬಳಿಕ ಠಾಣೆಗೆ ತೆರಳಿ ಯಾರೋ ಕೊಲೆ ಮಾಡಿದ್ದಾರೆಂದು ದೂರು ನೀಡಿದ್ದಾರೆ. ಇದೀಗ ಕೊಲೆ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಗೊವಿಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ