ಯಾದಗಿರಿ: ಕುಡಿದ ಮತ್ತಿನಲ್ಲಿ ಕೊಡಲಿಯಿಂದ ಕೊಚ್ಚಿ ಪತ್ನಿಯ ಭೀಕರ ಕೊಲೆ; ತಪ್ಪಿಸಲು ಹೋದ ಮಗನ ಮೇಲೂ ಹಲ್ಲೆ

ಆ ವ್ಯಕ್ತಿ ಕುಡಿತದ ಚಟಕ್ಕೆ ಒಳಗಾಗಿದ್ದ ನಿತ್ಯ ಮದ್ಯದ ನಶೆಯಲ್ಲಿ ಮನೆಗೆ ಬರುತ್ತಿದ್ದ. ಆದ್ರೆ, ನಿನ್ನೆ(ಮಾ.11) ರಾತ್ರಿ ಕುಡಿದ ನಶೆಯಲ್ಲಿ ಬಂದವನೇ ಪತ್ನಿಯನ್ನ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ತಾಯಿಯನ್ನ ಉಳಿಸಲು ಹೋಗಿದ್ದ ಮಗನಿಗೂ ತಂದೆ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ. ಬಳಿಕ ತಾನೂ ನೇಣಿಗೆ ಶರಣಾಗಲು ಮುಂದಾಗಿ ಆಸ್ಪತ್ರೆಗೆ ಸೇರಿದ್ದಾನೆ. ಅಷ್ಟಕ್ಕೂ ಆತ ಕೊಲೆ ಮಾಡಲು ಕಾರಣವಾದ್ರು ಏನು ಅಂತೀರಾ? ಈ ಸ್ಟೋರಿ ಓದಿ.

ಯಾದಗಿರಿ: ಕುಡಿದ ಮತ್ತಿನಲ್ಲಿ ಕೊಡಲಿಯಿಂದ ಕೊಚ್ಚಿ ಪತ್ನಿಯ ಭೀಕರ ಕೊಲೆ; ತಪ್ಪಿಸಲು ಹೋದ ಮಗನ ಮೇಲೂ ಹಲ್ಲೆ
ಆರೋಪಿ ಪತಿ, ಮೃತ ಪತ್ನಿ
Follow us
ಅಮೀನ್​ ಸಾಬ್​
| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 12, 2024 | 7:40 PM

ಯಾದಗಿರಿ, ಮಾ.12: ತಾಲೂಕಿನ ಮಲ್ಹಾರ್ ತಾಂಡ(Malhar Tanda)ದಲ್ಲಿ ಮಾರ್ಚ್ 10 ರ ರಾತ್ರಿ 11 ಗಂಟೆ ಸುಮಾರಿಗೆ ಸೋನಿಬಾಯಿ (48) ಎಂಬಾಕೆಯ ಬರ್ಬರ ಕೊಲೆಯಾಗಿತ್ತು. ಇನ್ನೊಂದು ಕಡೆ ರಕ್ತದ ಮಡುವಿನಲ್ಲಿ ಬಿದ್ದು ಸೋನಿಬಾಯಿ ಮಗ ಅರ್ಜುನ್(17) ಒದ್ದಾಡುತ್ತಿದ್ದ. ಇದನ್ನು ನೋಡಿದ ಇಡೀ ತಾಂಡದ ನಿವಾಸಿಗಳು ಅಕ್ಷರಶ ಬೆಚ್ಚಿ ಬಿದ್ದಿದ್ದಾರೆ. ಇನ್ನು ಇದೆ ಸೋನಿಬಾಯಿ ಪತಿ ಮಲ್ಯಾ ರಾಠೋಡ್ ಕೂಡ ಮನೆ ಮುಂದೆ ಇರುವ ಬೇವಿನ ಮರಕ್ಕೆ ಕೊರಳೊಡ್ಡಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಲು ಮುಂದಾಗಿದ್ದ. ಇದನ್ನು ನೋಡಿದ ವ್ಯಕ್ತಯೋರ್ವ ಕೂಡಲೇ ಮಲ್ಯಾನನ್ನ ನೇಣು ಕುಣಿಕೆಯಿಂದ ಕೆಳಗೆ ಇಳಿಸುತ್ತಾನೆ. ತಕ್ಷಣ ಗ್ರಾಮಸ್ಥರು ವಿಷಯ ತಿಳಿದು ಮಲ್ಯಾನನ್ನ ಆಸ್ಪತ್ರೆಗೆ ದಾಖಲಿಸುತ್ತಾರೆ.

ಇನ್ನು ಸೋನಿಬಾಯಿ ಪುತ್ರ ಅರ್ಜುನ್ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದನ್ನ ಕಂಡ ಗ್ರಾಮಸ್ಥರು ಕೂಡಲೇ ಅರ್ಜುನ್ ಬಳಿ ಘಟನೆ ಬಗ್ಗೆ ಕೇಳುತ್ತಾರೆ. ಆಗ ಅರ್ಜುನ್ ‘ತಂದೆ ಮಲ್ಯಾನೇ, ತಾಯಿಗೆ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿ ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂದು ಹೇಳುತ್ತಾನೆ. ತಾಯಿಯನ್ನ ರಕ್ಷಣೆ ಮಾಡಲು ಹೋಗಿದ್ದ ನನಗೂ ಕೊಡಲಿಯಿಂದ ಹೊಡೆದು ಗಾಯಗೊಳಿಸಿದ್ದಾನೆ. ಆದ್ರೆ, ತಾಯಿ ಸೋನಿಬಾಯಿಗೆ ಎದೆ ಮತ್ತು ತಲೆ ಭಾಗಕ್ಕೆ ಬಲವಾಗಿ ಪೆಟ್ಟು ಬಿದ್ದ ಕಾರಣಕ್ಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ನಾನು ಮಾತ್ರ ಪ್ರಾಣ ಉಳಿಸಿಕೊಳ್ಳಲು ಹೊರಗಡೆ ಓಡಿ ಬಂದಿದ್ದೆನೆ ಎಂದು ಹೇಳುತ್ತಾನೆ. ತಕ್ಷಣ ಅರ್ಜುನನನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರ್ಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.

ಇದನ್ನೂ ಓದಿ:ಕೌಟುಂಬಿಕ ಕಲಹ: ಶಿವರಾತ್ರಿಯಂದೆ ಪತ್ನಿಯ ಬರ್ಬರ ಕೊಲೆ

ಇನ್ನು ಘಟನೆ ಬಗ್ಗೆ ನಿನ್ನೆ ಬೆಳಗ್ಗೆ ಯಾದಗಿರಿ ಗ್ರಾಮಾಂತರ ಠಾಣೆಯ ಪೊಲೀಸರಿಗೆ ಮಾಹಿತಿ ತಿಳಿಯುತ್ತದೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸುತ್ತಾರೆ. ಅಷ್ಟಕ್ಕೂ ಮಲ್ಯಾ, ಪತ್ನಿ ಮತ್ತು ಮಗನಿಗೆ ಕೊಲೆ ಮಾಡಲು ಯಾಕೆ ಮುಂದಾಗಿದ್ದ ಎಂದು ತಿಳಿಯಲು ಮುಂದಾಗುತ್ತಾರೆ. ಆದ್ರೆ ಸರಿಯಾದ ಮಾಹಿತಿ ಯಾರಿಂದಲೂ ದೊರೆಯುದಿಲ್ಲ. ಇತ್ತ ತಂದೆಯಿಂದ ಗಂಭೀರವಾಗಿ ಗಾಯಗೊಂಡಿರುವ ಅರ್ಜುನ್ ಕೂಡ ತಂದೆ ದಾಖಲಾಗಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇತ್ತ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದರಿಂದ ಮಲ್ಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಂದ ಕೂಡಲೇ ಬಂಧನ ಮಾಡಲು ಕಾಯುತ್ತಿದ್ದಾರೆ.

ಇನ್ನು ಪೊಲೀಸರ ಪ್ರಕಾರ ಕೊಲೆಗೆ ಪ್ರಮುಖ ಕಾರಣ ಎಂದರೆ, ರಾತ್ರಿ ವೇಳೆ ಮದ್ಯೆ ಸೇವನೆ ಮಾಡಲು ಪತ್ನಿ ಬಳಿ ದುಡ್ಡು ಕೇಳಿದ್ದ. ಪತ್ನಿ ದುಡ್ಡ ಕೊಡದ ಕಾರಣಕ್ಕೆ ಜಗಳ ಮಾಡಿಕೊಂಡು ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಇತ್ತ ಪತ್ನಿಯನ್ನ ಕೊಲೆ ಮಾಡೋದ್ದನ್ನ ತಡೆಯೋಕೆ ಹೋಗಿದ್ದ ಮಗನ ಮೇಲೂ ಹಲ್ಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಕಳೆದ ಹಲವು ವರ್ಷಗಳಿಂದ ಮಲ್ಯಾ ಕುಡಿತದ ಚಟಕ್ಕೆ ಒಳಗಾಗಿ ನಿತ್ಯ ಮನೆಗೆ ಕುಡಿದುಕೊಂಡೆ ಬರುತ್ತಿದ್ದ. ಜೊತೆಗೆ ಕುಡಿದ ನಶೆಯಲ್ಲಿ ಆಗಾಗ ಜಗಳ ಮಾಡಿಕೊಳ್ಳುತ್ತಿದ್ದ ಎಂದು ಹೇಳಲಾಗುತ್ತಿದೆ.

ಒಟ್ಟಿನಲ್ಲಿ ಪತಿ, ಕುಡಿದ ಮತ್ತಿನಲ್ಲಿ ಪತ್ನಿಯನ್ನ ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾನೆ. ಅಡ್ಡ ಬಂದಿದ್ದ ಮಗನಿಗೆ ಚಟ್ಟ ಕಟ್ಟಬೇಕು ಎಂದು ಅಂದುಕೊಂಡಿದ್ದ. ಆದ್ರೆ, ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇದೀಗ ಪತ್ನಿಯನ್ನ ಕೊಂದ ಪತಿ ಜೈಲಿಗೆ ಹೋಗುವುದು ಮಾತ್ರ ಗ್ಯಾರಂಟಿ. ಆದ್ರೆ, ಸೋನಿಬಾಯಿ ಹಾಗೂ ಮಲ್ಯಾನ ನಾಲ್ಕು ಜನ ಮಕ್ಕಳು ಅನಾಥರಾಗಿದ್ದಾರೆ.

ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್