Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಪೊಲೀಸರ ಸೋಗಿನಲ್ಲಿ ವ್ಯಾಪಾರಿ ಕಿಡ್ನಾಪ್ ಮಾಡಿದ ರೌಡಿಶೀಟರ್ ಅ್ಯಂಡ್ ಗ್ಯಾಂಗ್​; ಮೂವರು ಅರೆಸ್ಟ್

ಪೊಲೀಸರ ಸೋಗಿನಲ್ಲಿ ವ್ಯಕ್ತಿ ಕಿಡ್ನಾಪ್ ಮಾಡಿದ್ದ ರೌಡಿಶೀಟರ್ ಅ್ಯಂಡ್ ಗ್ಯಾಂಗ್​ನನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಮೂವರು ಅರೆಸ್ಟ್ ಆಗಿದ್ದಾರೆ. ಗುಜರಿ ವ್ಯಾಪಾರಿ ಹಫ್ತಾ ನೀಡಲಿಲ್ಲ ಎಂದು ರೌಡಿಶೀಟರ್ ಗ್ಯಾಂಗ್ ಪೊಲೀಸರ ಸೂಗಿನಲ್ಲಿ ಕಿಡ್ನಾಪ್ ಮಾಡಿತ್ತು. ಕಾರಿನಲ್ಲಿ ಕರೆದುಕೊಂಡು ಹೋಗುವಾಗ ವ್ಯಾಪಾರಿ ಎಸ್ಕೇಪ್ ಆಗಿದ್ದು ವ್ಯಾಪಾರಿ ಹುಡುಕಲು ಓಡುವಾಗ ನಕಲಿ ಪೊಲೀಸರು ಅಸಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಬೆಂಗಳೂರು: ಪೊಲೀಸರ ಸೋಗಿನಲ್ಲಿ ವ್ಯಾಪಾರಿ ಕಿಡ್ನಾಪ್ ಮಾಡಿದ ರೌಡಿಶೀಟರ್ ಅ್ಯಂಡ್ ಗ್ಯಾಂಗ್​; ಮೂವರು ಅರೆಸ್ಟ್
ಪ್ರಾತಿನಿಧಿಕ ಚಿತ್ರ
Follow us
Jagadisha B
| Updated By: ಆಯೇಷಾ ಬಾನು

Updated on:Mar 13, 2024 | 7:53 AM

ಬೆಂಗಳೂರು, ಮಾರ್ಚ್​.13: ಪೊಲೀಸರಂತೆ ವೇಶ ಧರಿಸಿ ಬಂದ ನಕಲಿ ಪೊಲೀಸ್ ಅಧಿಕಾರಿಗಳಿಂದ (Fake Police) ವ್ಯಾಪಾರಿಯ ಕಿಡ್ನಾಪ್ ಆಗಿದೆ. ಕಿಡ್ನಾಪ್ (Kidnap) ಬಳಿಕ ತಪ್ಪಿಸಿಕೊಂಡ ವ್ಯಾಪಾರಿಯ ಹಿಡಿಯಲು ಓಡಿದ ನಕಲಿ ಪೊಲೀಸರು ಸದ್ಯ ಅಸಲಿ ಪೊಲೀಸರ ಕೈಗೆ ಸಿಕ್ಕಿದ್ದಾರೆ. ಪೊಲೀಸರ ಸೋಗಿನಲ್ಲಿ ವ್ಯಕ್ತಿ ಕಿಡ್ನಾಪ್ ಮಾಡಿದ್ದ ರೌಡಿಶೀಟರ್ ಅ್ಯಂಡ್ ಗ್ಯಾಂಗ್​ನನ್ನು ಬಂಧಿಸಲಾಗಿದೆ. ಮುಜಾಮಿಲ್ @ ಮುಜ್ಜು, ಸೈಯದ್ ಶಿಫಾಸ್, ಯೂಸುಫ್ ಬಂಧಿತ ಆರೋಪಿಗಳು.

ಬಾಗಲೂರಿನ ಮೆಟ್ಟಗಾನಹಳ್ಳಿ ಡಂಪಿಂಗ್ ಯಾರ್ಡ್ ನಲ್ಲಿ ಹವಾ ಇಡಲು ಮುಂದಾಗಿದ್ದ ರೌಡಿ ಮುಜಾಮಿಲ್ ಅಲಿಯಾಸ್ ಮುಜ್ಜು, ಹಫ್ತಾ ವಸೂಲಿಗೆ ಮುಂದಾಗಿದ್ದ. ಇಲ್ಲಿ ಚಿಂದಿ ಆಯುವುದಕ್ಕೂ ಪ್ರತಿ ತಿಂಗಳು ರೌಡಿಶೀಟರ್​ಗೆ ಹಫ್ತಾ ಕೊಡಬೇಕಿತ್ತು. ಯಲಹಂಕ ರೌಡಿಶೀಟರ್ ಆಗಿರುವ ಮುಜಾಮಿಲ್ @ ಮುಜ್ಜು, ಪ್ರತಿ ತಿಂಗಳು ಇಂತಿಷ್ಟು ಹಣ ಕೊಡುವಂತೆ ಡಿಮ್ಯಾಂಡ್ ಮಾಡಿದ್ದ. ಹಣ ಕೊಡಲು ನಿರಾಕರಿಸಿದ್ದ ಗುಜರಿ ವ್ಯಾಪಾರಿಯನ್ನೇ ಕಿಡ್ನಾಪ್ ಮಾಡಿದ್ದ. ಮಧ್ಯರಾತ್ರಿ ಕಾರ್ ನಲ್ಲಿ ಬಂದು ಕ್ರೈಂ ಪೊಲೀಸರೆಂದು ಹೇಳಿ ಕಿಡ್ನಾಪ್ ಮಾಡಿದ್ದ. ಕೊಂಚ ದೂರ ಹೋದ ಕಾರ್ ನಿಂದ ತಪ್ಪಿಸಿಕೊಂಡ ಗುಜರಿ ವ್ಯಾಪಾರಿ ಓಡಲು ಶುರು ಮಾಡಿದ್ದ. ಆಗ ಕಿಡ್ನಾಪರ್ಸ್​ಗಳು ಆತನ ಹಿಡಿಯಲು ಹಿಂದೆ ಓಡಿದ್ದರು.

ಇನ್ನು ಮತ್ತೊಂದೆಡೆ ಮಿಡ್ ನೈಟ್ ನಲ್ಲಿ ಇಬ್ಬರ ಓಟ ಕಂಡು ಅನುಮಾನಗೊಂಡ ಅಸಲಿ ಪೊಲೀಸರು‌, ಓಡುತಿದ್ದ ಇಬ್ಬರನ್ನು ಹಿಡಿದು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ನಕಲಿ ಪೊಲೀಸ್​ನ ಅಸಲಿ ಕಿಡ್ನಾಪ್ ಸಂಗತಿ ರಿವಿಲ್ ಆಗಿದೆ. ಘಟನೆ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕಳವಾದ ಮೊಬೈಲ್ ಫೋನ್ ಪತ್ತೆಹಚ್ಚುವಲ್ಲಿ ಕರ್ನಾಟಕವೇ ಮುಂದೆ! ಅಂಕಿಅಂಶಗಳು ಇಲ್ಲಿವೆ

ಕೊಳೆತ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ

ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಯುವತಿ ಶವ ಪತ್ತೆತಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಆನೇಕಲ್​ ವ್ಯಾಪ್ತಿಯ ಚಂದಾಪುರ ಹೆಡ್ ಮಾಸ್ಟರ್ ಬಡಾವಣೆಯಲ್ಲಿ ಘಟನೆ ನಡೆದಿದ್ದು, ಮನೆಯೊಂದರ ನಾಲ್ಕನೇ ಪ್ಲೋರ್ನ ಕೊಠಡಿಯಲ್ಲಿ ಶವ ಪತ್ತೆಯಾಗಿದೆ. ಯುವತಿಯ ಶವ ನಗ್ನ ಸ್ಥಿತಿಯಲ್ಲಿದ್ದು, ಕಳೆದ ಐದಾರು ದಿನಗಳ ಹಿಂದೆ ಕೊಲೆಗೈದಿರುವ ಶಂಕೆ ಹಿದೆ. ಆಕೆಯ ಜೊತೆಗಿದ್ದ ಸಪನ್​ ಕುಮಾರ್​ ಫೋನ್​ ಬಂದ್​ ಮಾಡಿ ನಾಪತ್ತೆಯಾಗಿದ್ದಾನೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:53 am, Wed, 13 March 24

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ರಾಜಸ್ಥಾನದ ಬಿಜೆಪಿ ಅಧ್ಯಕ್ಷರೆದುರೇ ಇಬ್ಬರು ನಾಯಕರ ಹೊಡೆದಾಟ; ವಿಡಿಯೋ ವೈರಲ್
ರಾಜಸ್ಥಾನದ ಬಿಜೆಪಿ ಅಧ್ಯಕ್ಷರೆದುರೇ ಇಬ್ಬರು ನಾಯಕರ ಹೊಡೆದಾಟ; ವಿಡಿಯೋ ವೈರಲ್
ಚಾಮುಂಡೇಶ್ವರಿ ದೇವಾಲಯಕ್ಕೆ ಬಂದ ದರ್ಶನ್ ಪುತ್ರ ವಿನೀಶ್
ಚಾಮುಂಡೇಶ್ವರಿ ದೇವಾಲಯಕ್ಕೆ ಬಂದ ದರ್ಶನ್ ಪುತ್ರ ವಿನೀಶ್