AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಳವಾದ ಮೊಬೈಲ್ ಫೋನ್ ಪತ್ತೆಹಚ್ಚುವಲ್ಲಿ ಕರ್ನಾಟಕವೇ ಮುಂದೆ! ಅಂಕಿಅಂಶಗಳು ಇಲ್ಲಿವೆ

ಕಳವಾದ ಮೊಬೈಲ್ ಫೋನ್​ಗಳನ್ನು ಪತ್ತೆ ಹಚ್ಚುವಲ್ಲಿ ಕರ್ನಾಟಕ ಪೊಲೀಸರೇ ಮುಂದಿರುವುದು ವರದಿಯೊಂದರಿಂದ ತಿಳಿದುಬಂದಿದೆ. ಆದರೆ, ಪತ್ತೆಹಚ್ಚಿದ ಎಲ್ಲ ಫೋನ್​ಗಳನ್ನು ಮತ್ತೆ ವಶಪಡಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಇದಕ್ಕೆ ಕಾರಣವೇನು? ಪೊಲೀಸರಿಗೆ ಎದುರಾಗುವ ಅಡ್ಡಿಯೇನು? ಇತ್ತೀಚಿನ ದಿನಗಳಲ್ಲಿ ಪೊಲೀಸರು ಎಷ್ಟು ಫೋನ್​ಗಳನ್ನು ವಶಪಡಿಸಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

ಕಳವಾದ ಮೊಬೈಲ್ ಫೋನ್ ಪತ್ತೆಹಚ್ಚುವಲ್ಲಿ ಕರ್ನಾಟಕವೇ ಮುಂದೆ! ಅಂಕಿಅಂಶಗಳು ಇಲ್ಲಿವೆ
ಸಾಂದರ್ಭಿಕ ಚಿತ್ರ
Ganapathi Sharma
|

Updated on: Mar 13, 2024 | 7:37 AM

Share

ಬೆಂಗಳೂರು, ಮಾರ್ಚ್​​ 13: ಕಳೆದುಹೋದ ಮೊಬೈಲ್ ಫೋನ್‌ಗಳನ್ನು (Mobile Phones) ಸೆಂಟ್ರಲ್ ಈಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟ್ರಿ (CEIR) ನೆರವಿನೊಂದಿಗೆ ಪತ್ತೆಹಚ್ಚಿ ಮರು ವಶಪಡಿಸಿಕೊಳ್ಳುವಲ್ಲಿ ಕರ್ನಾಟಕವು (Karnataka) ದೇಶದಲ್ಲೇ ಅಗ್ರಸ್ಥಾನದಲ್ಲಿದೆ ಎಂದು ವರದಿಯಾಗಿದೆ. 2022 ರ ಸೆಪ್ಟೆಂಬರ್​​​ನಿಂದ ಸಿಇಐಆರ್ ಬಳಸಿಕೊಂಡು ರಾಜ್ಯವು 89,546 ಕಳೆದುಹೋದ ಫೋನ್‌ಗಳನ್ನು ಪತ್ತೆಹಚ್ಚಲಾಗಿದೆ. ಈ ಪೈಕಿ ಪೊಲೀಸರು 29,509 ಫೋನ್‌ಗಳನ್ನು ಯಶಸ್ವಿಯಾಗಿ ಮರುವಶಪಡಿಸಿಕೊಂಡಿದ್ದಾರೆ. ದೇಶಾದ್ಯಂತ, 1,00,303 ಫೋನ್‌ಗಳನ್ನು ಮರುವಶಪಡಿಸಿಕೊಳ್ಳಲಾಗಿದ್ದು, ಇದರಲ್ಲಿ ಶೇ 30 ರಷ್ಟು ಕರ್ನಾಟಕದಲ್ಲಿ ವಶಪಡಿಸಿಕೊಳ್ಳಲಾಗಿದೆ.

ಏನಿದು ಸಿಇಐಆರ್?

ಸಿಇಐಆರ್ ಎಂಬುದು ಕಳೆದುಹೋದ ಅಥವಾ ಕದ್ದ ಫೋನ್‌ಗಳನ್ನು ಪತ್ತೆಹಚ್ಚಲು ದೂರಸಂಪರ್ಕ ಇಲಾಖೆಯು ನೀಡುವ ಸೇವಾ ಮಾಡ್ಯೂಲ್ ಆಗಿದೆ. ಇದನ್ನು ಬಳಸಿಕೊಂಡು, ಐಎಂಇಐ (IMEI) ಸಂಖ್ಯೆಯನ್ನು ಒದಗಿಸುವ ಮೂಲಕ ಕಳೆದುಹೋದ ಮೊಬೈಲ್ ಫೋನನ್ನು ತಕ್ಷಣವೇ ಬ್ಲಾಕ್ ಮಾಡಬಹುದಾಗಿದೆ. ಆ ಮೊಬೈಲ್ ಫೋನನ್ನು ಯಾರಾದರೂ ಬಳಸಲು ಪ್ರಯತ್ನಿಸಿದರೆ, ಪೋರ್ಟಲ್ ಬಳಸಿ ಪೊಲೀಸರು ಅವರನ್ನು ಪತ್ತೆಹಚ್ಚಬಹುದಾಗಿದೆ.

ಈ ಹಿಂದೆ, ಕಳೆದುಹೋದ ಫೋನ್‌ಗಳನ್ನು ಪತ್ತೆಹಚ್ಚಲು ಪೊಲೀಸರಿಗೆ ಯಾವುದೇ ಮಾರ್ಗಗಳಿರಲಿಲ್ಲ. ಈ ಕಾರಣದಿಂದ ಕಳೆದು ಹೋದ ಫೋನ್​ಗಳ ಪತ್ತೆ ಹಾಗೂ ಮರು ವಶಪಡಿಸಿಕೊಳ್ಳುವಿಕೆ ಸಾಧ್ಯವಾಗಿರಲಿಲ್ಲ.

ಪ್ರತಿ ಬಾರಿ ಮೊಬೈಲ್ ಕಳೆದುಹೋದ ದೂರು ಬಂದಾಗ, ಸಿಇಐಆರ್​​ ಬಳಸಿಕೊಂಡು ಫೋನ್ ಬ್ಲಾಕ್ ಮಾಡಲು ನಾವು ಮಾಲೀಕರನ್ನು ಕೇಳುತ್ತೇವೆ. ಅದರಿಂದ, ಆ ಫೋನ್ ಮರುಬಳಕೆ ಮಾಡಿದಾಗ ನಮಗೆ ಟ್ರೇಸ್ ಅಲರ್ಟ್ ಬರುತ್ತದೆ. ಅದನ್ನು ಬಳಸಿಕೊಂಡು ನಾವು ಫೋನ್ ಮರುಪಡೆಯಲು ಪ್ರಯತ್ನಿಸಬಹುದು ಎಂದು ಹೆಚ್ಚುವರಿ ಪೂರ್ವ ವಲಯದ ಪೊಲೀಸ್ ಕಮಿಷನರ್ ರಮಣ್ ಗುಪ್ತಾ ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಇವರು ಸಿಇಐಆರ್ ವ್ಯವಸ್ಥೆಯನ್ನು ಕರ್ನಾಟಕದಲ್ಲಿ ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಲು ಕಾರಣಕರ್ತರಾದ ಅಧಿಕಾರಿಯೂ ಹೌದು.

ಮೊಬೈಲ್ ಪತ್ತೆಯಾದರೂ ಕೆಲವೊಮ್ಮೆ ಮರುವಶ ಕಷ್ಟ

ಆದಾಗ್ಯೂ, ಕಳವಾದ ಮೊಬೈಲ್ ಫೋನ್​ಗಳು ಪತ್ತೆಯಾದರೂ ಕೆಲವೊಮ್ಮೆ ಮರುವಶ ಕಷ್ಟವಾಗುತ್ತಿದೆ. ಈವರೆಗೆ ಪತ್ತೆಯಾದ ಫೋನ್‌ಗಳಲ್ಲಿ ಸುಮಾರು ಶೇ 32 ರಷ್ಟನ್ನು ಮಾತ್ರವೇ ವಶಕ್ಕೆ ಪಡೆಯಲು ಪೊಲೀಸರಿಂದ ಸಾಧ್ಯವಾಗಿದೆ. ಪೊಲೀಸ್ ಕಾರ್ಯಾಚರಣೆಗೆ ಇರುವ ಇತಿಮಿತಿಗಳು, ನಿರ್ಬಂಧಗಳೇ ಇದಕ್ಕೆ ಕಾರಣ ಎಂದು ಅವರು ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.

ಪೊಲೀಸರಿಗೆ ಇರುವ ತೊಡಕುಗಳೇನು?

ಸಾಮಾನ್ಯವಾಗಿ ಕದ್ದ ಫೋನ್‌ಗಳನ್ನು ಕಳ್ಳರು ದೂರದ ಊರುಗಳಿಗೆ ಕಳುಹಿಸುತ್ತಾರೆ. ಉದಾಹರಣೆಗೆ, ಕಳವಾದ ಫೋನ್ ಛತ್ತೀಸ್‌ಗಢದಲ್ಲಿ ಪತ್ತೆಯಾದರೆ ಅದನ್ನು ಮರುಪಡೆಯಲು ನಾವು ಇಲ್ಲಿಂದ ತಂಡವನ್ನು ಕಳುಹಿಸಲು ಸಾಧ್ಯವಿಲ್ಲ. ಪತ್ತೆಯಾದ ಪ್ರತಿ ಫೋನ್ ಅನ್ನು ಮರುಪಡೆಯಲು ತಂಡವನ್ನು ಕಳುಹಿಸುವುದು ಆರ್ಥಿಕ ಹೊರೆ. ಅಲ್ಲದೆ, ಕಳೆದುಹೋದ ಪ್ರತಿಯೊಂದು ಫೋನ್ ಅನ್ನು ಪತ್ತೆಹಚ್ಚಲು ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಸಿಬ್ಬಂದಿ ಇಲ್ಲ. ಅಲ್ಲದೆ, ಫೋನ್‌ನ ಮೌಲ್ಯವನ್ನು ಪರಿಗಣಿಸಿದಾಗ ಇದು ಪೊಲೀಸರಿಗೆ ಆದ್ಯತೆಯಾಗುವುದಿಲ್ಲ ಎಂದು ಮತ್ತೊಬ್ಬ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ಬೇಸಿಗೆಯ ಬಿಸಿಲಿನಲ್ಲಿ ಬಾಂಬ್​ನಂತೆ ಸಿಡಿಯುತ್ತೆ ಮೊಬೈಲ್​ಗಳು: ನಿರ್ಲಕ್ಷಿಸದಿರಿ

ಆದಾಗ್ಯೂ, ಹೆಚ್ಚಿನ ಫೋನ್‌ಗಳನ್ನು ಮರುಪಡೆಯಲು ಪೊಲೀಸರು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ರಮಣ್ ಗುಪ್ತಾ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್