ಗೇಮ್ ಚೇಂಜರ್ ಟ್ರೇಲರ್; ರಾಮ್ ಚರಣ್ ಅಭಿಮಾನಿಗಳಿಗೆ ಸಿಕ್ತು ಕಥೆ ಸುಳಿವು
‘ಆರ್ಆರ್ಆರ್’ ಸಿನಿಮಾದ ಯಶಸ್ಸಿನ ಬಳಿಕ ರಾಮ್ ಚರಣ್ ನಟಿಸಿದ ‘ಗೇಮ್ ಚೇಂಜರ್’ ಸಿನಿಮಾ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಶಂಕರ್ ನಿರ್ದೇಶನದ, ದಿಲ್ ರಾಜು ನಿರ್ಮಾಣದ ಈ ಸಿನಿಮಾದ ಟ್ರೇಲರ್ ಇಂದು (ಜ.2) ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ರಾಮ್ ಚರಣ್ ಜೊತೆ ಕಿಯಾರಾ ಅಡ್ವಾಣಿ, ಎಸ್ಜೆ ಸೂರ್ಯ ಮುಂತಾದವರು ನಟಿಸಿದ್ದಾರೆ.
‘ಗ್ಲೋಬಲ್ ಸ್ಟಾರ್’ ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾದ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಜನವರಿ 10ರಂದು ಈ ಸಿನಿಮಾ ಅದ್ದೂರಿಯಾಗಿ ಬಿಡುಗಡೆ ಆಗಲಿದೆ. ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ಇರುವ ನಿರೀಕ್ಷೆ ಅಪಾರ. ಫ್ಯಾನ್ಸ್ ಹೊಂದಿರುವ ನಿರೀಕ್ಷೆಯನ್ನು ಡಬಲ್ ಮಾಡಲು ಟ್ರೇಲರ್ ಅನಾವರಣ ಮಾಡಲಾಗಿದೆ. ಇಂದು (ಜನವರಿ 2) ‘ಗೇಮ್ ಚೇಂಜರ್’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಎಸ್.ಎಸ್. ರಾಜಮೌಳಿ ಅವರು ಟ್ರೇಲರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ರಾಮ್ ಚರಣ್ ಅಭಿಮಾನಿಗಳಿಗೆ ಈ ಟ್ರೇಲರ್ ಸಖತ್ ಇಷ್ಟ ಆಗಿದೆ. ಸಿನಿಮಾ ನೋಡಲು ಕಾತರ ಹೆಚ್ಚಾಗಿದೆ.
ಖ್ಯಾತ ನಿರ್ದೇಶಕ ಶಂಕರ್ ಅವರು ‘ಗೇಮ್ ಚೇಂಜರ್’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ರಾಮ್ ಚರಣ್ ಅವರು ಈ ಸಿನಿಮಾದಲ್ಲಿ ಐಎಎಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ರಾಜಕೀಯದ ಕಹಾನಿ ಇರುವ ಈ ಸಿನಿಮಾದ ಟ್ರೇಲರ್ ಸಖತ್ ಥ್ರಿಲ್ಲಿಂಗ್ ಆಗಿದೆ. ಭರ್ಜರಿ ಆ್ಯಕ್ಷನ್ ಸನ್ನಿವೇಶಗಳು ಸಿನಿಮಾದಲ್ಲಿ ಇವೆ ಎಂಬುದಕ್ಕೆ ಟ್ರೇಲರ್ ಸಾಕ್ಷಿಯಾಗಿದೆ.
‘ಗೇಮ್ ಚೇಂಜರ್’ ಸಿನಿಮಾದಲ್ಲಿ ರಾಮ್ ಚರಣ್ ಅವರಿಗೆ ಜೋಡಿಯಾಗಿ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾನಿ ಕಾಣಿಸಿಕೊಂಡಿದ್ದಾರೆ. ಪೊಲಿಟಿಕಲ್ ಥ್ರಿಲ್ಲರ್ ಜೊತೆಗೆ ಫ್ಯಾಮಿಲಿ ಇಷ್ಟಪಡುವಂತಹ ಸೆಂಟಿಮೆಂಟಲ್ ಕಹಾನಿ ಕೂಡ ಈ ಸಿನಿಮಾದಲ್ಲಿ ಇದೆ ಎಂಬ ಸುಳಿವು ಕೂಡ ಟ್ರೇಲರ್ನಲ್ಲಿ ಸಿಕ್ಕಿದೆ. ಒಟ್ಟಾರೆ ಈ ಸಿನಿಮಾ ಮನರಂಜನೆಯ ಪ್ಯಾಕೇಜ್ ಆಗಿರಲಿದೆ.
ಗೇಮ್ ಚೇಂಜರ್ ಟ್ರೇಲರ್:
ತೆಲುಗಿನ ಈ ಸಿನಿಮಾಗೆ ಕರ್ನಾಟದಲ್ಲೂ ಶೂಟಿಂಗ್ ಮಾಡಲಾಗಿದೆ. ಆ ಕಾರಣದಿಂದ ಕರುನಾಡಿನಲ್ಲಿ ಇರುವ ರಾಮ್ ಚರಣ್ ಅವರ ಅಭಿಮಾನಿಗಳಿಗೆ ನಿರೀಕ್ಷೆ ಜಾಸ್ತಿ ಇದೆ. ಅಂಜಲಿ, ಎಸ್.ಜೆ. ಸೂರ್ಯ, ಸಮುದ್ರಕನಿ. ಶ್ರೀಕಾಂತ್, ನವೀನ್ ಚಂದ್ರ ಮುಂತಾದವರು ‘ಗೇಮ್ ಚೇಂಜರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಶಂಕರ್ ನಿರ್ದೇಶನದ ಸಿನಿಮಾ ಎಂಬ ಕಾರಣದಿಂದಲೂ ಈ ಚಿತ್ರ ಹೈಪ್ ಸೃಷ್ಟಿ ಮಾಡಿದೆ.
ಗೇಮ್ ಚೇಂಜರ್: 256 ಅಡಿ ಎತ್ತರದ ಕಟೌಟ್ ನಿಲ್ಲಿಸಿ ದಾಖಲೆ ಮಾಡಿದ ರಾಮ್ ಚರಣ್ ಫ್ಯಾನ್ಸ್
ಥಮನ್ ಅವರು ‘ಗೇಮ್ ಚೇಂಜರ್’ ಸಿನಿಮಾಗೆ ಸಂಗೀತ ನೀಡಿದ್ದಾರೆ. ಖ್ಯಾತ ನಿರ್ಮಾಪಕ ದಿಲ್ ರಾಜ್ ಅವರು ಬಂಡವಾಳ ಹೂಡಿದ್ದಾರೆ. ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ 50ನೇ ಸಿನಿಮಾ ಎಂಬುದು ಕೂಡ ವಿಶೇಷ. ಟ್ರೇಲರ್ ನೋಡಿದ ಸಿನಿಪ್ರಿಯರಿಂದ ಪಾಸಿಟಿವ್ ಪ್ರತಿಕ್ರಿಯೆ ಸಿಗುತ್ತಿದೆ. ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:54 pm, Thu, 2 January 25